Tuesday, 24th April 2018

Recent News

3 weeks ago

48 ಗಂಟೆಯ ಬಳಿಕ ಸಂಪರ್ಕ ಕಳೆದುಕೊಂಡ ಜಿಸ್ಯಾಟ್-6ಎ ಉಪಗ್ರಹ

ನವದೆಹಲಿ: ಉಡಾವಣೆಗೊಂಡ 48 ಘಂಟೆ ಬಳಿಕ ಜಿಸ್ಯಾಟ್-6ಎ ಉಪಗ್ರಹ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಇಸ್ರೋ ದೃಢಪಡಿಸಿದೆ. ಮಾರ್ಚ್ 29 ಗುರುವಾರದಂದು ಸಂವಹನ ಉಪಗ್ರಹ ಉಡಾವಣೆಯಾಗಿತ್ತು. ದೇಶದ ಸಂವಹನ ಕ್ಷೇತ್ರದ ಸುಧಾರಣೆಗಾಗಿ ಉಪಗ್ರಹವನ್ನು  ಉಡಾವಣೆ ಮಾಡಲಾಗಿತ್ತು. ಸಂಪೂರ್ಣ ಭೂ ಭಾಗದ ಸಂಪರ್ಕವನ್ನು ಈ ಭೂಸ್ಥಿರ ಉಪಗ್ರಹದಿಂದ ನಿರೀಕ್ಷೆ ಮಾಡಲಾಗಿತ್ತು. ಶುಕ್ರವಾರ ಉಪಗ್ರಹವನ್ನು ಎರಡನೇ ಕಕ್ಷೆಗೆ ಏರಿಸುವಾಗ ಸಂಪರ್ಕ ಕಳೆದುಕೊಂಡಿದೆ. ಈ ಉಪಗ್ರಹ ಸುಮಾರು 2 ಟನ್ ತೂಕವಿದ್ದು, ಇದರ ನಿರ್ಮಾಣಕ್ಕಾಗಿ ಇಸ್ರೋ 270 ಕೋಟಿ ರೂ. ವೆಚ್ಚ ಮಾಡಿದೆ. […]

4 weeks ago

ಜಿಸ್ಯಾಟ್ 6ಎ ಉಪಗ್ರಹ ಉಡಾವಣೆ ಯಶಸ್ವಿ: ಏನಿದರ ವಿಶೇಷತೆ? ಸೈನಿಕರಿಗೆ ಹೇಗೆ ಸಹಾಯ ಆಗುತ್ತೆ? ಇಲ್ಲಿದೆ ಮಾಹಿತಿ

ಶ್ರೀಹರಿಕೋಟಾ: ಇಸ್ರೋದ ಜಿಸ್ಯಾಟ್-6ಎ ಉಪಗ್ರಹ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ  ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಸ್ಪೇಸ್ ಸೆಂಟರ್ ನಲ್ಲಿರುವ ಎರಡನೇ ಲಾಂಚ್ ಪ್ಯಾಡ್‍ನಿಂದ ಉಪಗ್ರಹವನ್ನು ಹೊತ್ತ ಜಿಎಸ್‍ಎಲ್‍ವಿ ಎಫ್8 ರಾಕೆಟ್ ಇಂದು ಸಂಜೆ 4.56ಕ್ಕೆ ನಭಕ್ಕೆ ಚಿಮ್ಮಿತು. ಉಡಾವಣೆಯಾದ 17 ನಿಮಿಷಕ್ಕೆ ಸರಿಯಾಗಿ ಉಪಗ್ರಹ 36,000 ಕಿ.ಮೀ ಎತ್ತರದಲ್ಲಿರುವ ನಿಗದಿತ ಕಕ್ಷೆಯನ್ನು ತಲುಪಿತು. ಈ ವರ್ಷ...

ರೈಲ್ವೇಗೆ ಇಸ್ರೋ ನೆರವು: ಮಾನವರಹಿತ ಲೆವೆಲ್ ಕ್ರಾಸಿಂಗ್‍ನಲ್ಲಿ ಅಪಘಾತ ತಪ್ಪಿಸಲು ಬಂದಿದೆ ವಿಶೇಷ ಚಿಪ್!

10 months ago

ನವದೆಹಲಿ: ಮಾನವರಹಿತ ಲೆವೆಲ್ ಕ್ರಾಸಿಂಗ್ ನಿಂದಾಗಿ ರೈಲಿಗೆ ಸಿಕ್ಕಿ ಅಪಘಾತವಾಗುವುದನ್ನು ತಡೆಯಲು ರೈಲ್ವೇ ಸಚಿವಾಲಯ ಈಗ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ನೆರವನ್ನು ಪಡೆದುಕೊಂಡಿದೆ. ಹೌದು. ಉಪಗ್ರಹ ಆಧಾರಿತ ಚಿಪ್ ವ್ಯವಸ್ಥೆಯನ್ನು ಇಸ್ರೋ ಅಭಿವೃದ್ಧಿಪಡಿಸಿದ್ದು ಪರೀಕ್ಷಾರ್ಥ ಪ್ರಯೋಗವಾಗಿ ಮುಂಬೈ ಮತ್ತು ಅಸ್ಸಾಂ...

ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋದಿಂದ ಮತ್ತೊಂದು ಇತಿಹಾಸ: ದಕ್ಷಿಣ ಏಷ್ಯಾ ಉಪಗ್ರಹ ಉಡಾವಣೆ ಯಶಸ್ವಿ

12 months ago

ಶ್ರೀಹರಿಕೋಟಾ: ಕಡಿಮೆ ವೆಚ್ಚದಲ್ಲಿ ಏಕಕಾಲದಲ್ಲಿ 104 ಉಪಗ್ರಹಗಳನ್ನು ಉಡಾಯಿಸಿದ್ದ ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಇತಿಹಾಸ ನಿರ್ಮಿಸಿದೆ. ಸಾರ್ಕ್ ರಾಷ್ಟ್ರಗಳ ಬಾಂಧವ್ಯವೃದ್ಧಿಗೆ ಎರಡು ವರ್ಷಗಳ ಹಿಂದೆ ಪ್ರಧಾನಿ ಮೋದಿ ಕೊಟ್ಟಿದ್ದ ‘ಸೌತ್ ಏಷ್ಯಾ ಸ್ಯಾಟಲೈಟ್’ ಅನ್ನು  ಜಿಎಸ್‍ಎಲ್‍ವಿ ರಾಕೆಟ್ ಯಶಸ್ವಿಯಾಗಿ ಕಕ್ಷೆಗೆ...

ಇಸ್ರೋ ಮೈಲಿಗಲ್ಲು- ಒಂದೇ ನೆಗೆತಕ್ಕೆ 104 ಉಪಗ್ರಹಗಳ ಉಡಾವಣೆ ಯಶಸ್ವಿ

1 year ago

ಶ್ರೀಹರಿಕೋಟಾ: ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡಾವಣಾ ನೆಲೆಯಿಂದ ಭಾರತದ ಬಹ್ಯಾಕಾಶ ಸಂಸ್ಥೆ ಏಕಕಾಲಕ್ಕೆ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಬಾಹ್ಯಾಕಾಶ ಇತಿಹಾಸದಲ್ಲಿ ಮೊದಲ ಬಾರಿಗೆ ದೇಶವೊಂದು ಉಡಾವಣೆಯಲ್ಲಿ ಶತಕದ ಸಾಧನೆಯನ್ನು ಮಾಡಿದೆ. ಪ್ರತಿ ಉಪಗ್ರಹವೂ 4.7 ಕೆ.ಜಿ. ತೂಕ ಹೊಂದಿದ್ದು, ಗಂಟೆಗೆ...