Friday, 21st July 2017

Recent News

1 day ago

ಶಿಕ್ಷಣ ಕ್ಷೇತ್ರದ ಮಹಾನ್ ಸುಧಾರಕ- ನಿರುದ್ಯೋಗಿಗಳು, ಅನಾಥರಿಗೆ ರಕ್ಷಕರಾಗಿರೋ ಬೆಳಗಾವಿಯ ಬಿಇಓ ಅಜಿತ್

ಬೆಳಗಾವಿ: ಇಂದಿನ ನಮ್ಮ ಪಬ್ಲಿಕ್ ಹೀರೋ ವೃತ್ತಿಯಲ್ಲಿ ಬಿಇಓ. ಆದರೆ ಪ್ರವೃತ್ತಿಯಲ್ಲಿ ಸಮಾಜ ಸೇವಕ ಹಾಗೂ ಶಿಕ್ಷಣ ಪ್ರೇಮಿ. ಪ್ರತಿಭಾವಂತ ಅನಾಥ ಮಕ್ಕಳನ್ನು ಗುರುತಿಸಿ ಅವರ ಶಿಕ್ಷಣಕ್ಕೆ ಸದ್ದಿಲ್ಲದೆ ಸಹಾಯ ಮಾಡ್ತಿದ್ದಾರೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಮೂಡಲಗಿಯ ಬಿಇಓ ಅಜಿತ್ ಮನ್ನಿಕೇರಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಇವರ ಪರಿಶ್ರಮದಿಂದ ಶಿಕ್ಷಣ ಕ್ಷೇತ್ರದಲ್ಲಿ ಮೂಡಲಗಿ ವಲಯ ಹಲವಾರು ವಿಷಯಗಳಲ್ಲಿ ರಾಜ್ಯದಲ್ಲಿಯೇ ಹೆಸರಾಗಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶದಲ್ಲಿ ಸತತವಾಗಿ ಮೂರು ವರ್ಷ ಪ್ರಥಮ ಸ್ಥಾನದಲ್ಲಿದೆ. ಶಾಲಾ ಹೆಣ್ಣು […]

2 days ago

ಹೊಸಕಾಡಿನಲ್ಲಿ ಹೊನ್ನಿನಂಥ ಬೆಳೆ ಬೆಳೆದ ಕೊಡಗಿನ ಗಿರಿಜನ ಕುಟುಂಬದ ರೈತ ಮಹೇಶ್

ಮಡಿಕೇರಿ: ಗಿರಿಜನರು ಎಂದಾಕ್ಷಣ ಸಾಮಾನ್ಯವಾಗಿ ನೆನಪಾಗೋದು ಸಂಕಷ್ಟದ ಬದುಕು. ಮುರುಕಲು ಗುಡಿಸಲು, ಕೂಲಿ ಮಾಡಿಕೊಂಡು ಒಪ್ಪತ್ತಿನ ಊಟಕ್ಕೂ ಪರದಾಡುವ ಅವರ ಸ್ಥಿತಿಗತಿ. ಆದ್ರೆ, ಮಡಿಕೇರಿಯ ಇವತ್ತಿನ ಪಬ್ಲಿಕ್ ಹೀರೋ ಆಗಿರೋ ಮಹೇಶ್ ಅನ್ನೋವ್ರು ಸ್ವಾವಲಂಬಿ ಬದುಕು ಕಟ್ಟಿಕೊಂಡು ಮಾದರಿ ರೈತರಾಗಿದ್ದಾರೆ. ಹೌದು. ಮಡಿಕೇರಿಯ ಕುಶಾಲನಗರದ ಬಳಿಯ ಹೊಸಕಾಡು ಗ್ರಾಮದ ಮಹೇಶ್ ಕುಟುಂಬ ಗಿರಿಜನರಿಗೆ ಪುನರ್ವಸತಿಗಾಗಿ ಮೂರು...

ಖಾಕಿ ತೊಟ್ಟರೂ ಮಕ್ಕಳಿಗೆ ಪಾಠ- ಸಾಮಾಜಿಕ ಅನಿಷ್ಠಗಳ ಬಗ್ಗೆ ಜಾಗೃತಿ

1 week ago

ಹಾವೇರಿ: ಇವತ್ತಿನ ದಿನಗಳಲ್ಲಿ ಮಕ್ಕಳಿಗೆ ಕಾನೂನು ಸುವ್ಯವಸ್ಥೆ, ಮೂಢನಂಬಿಕೆಗಳ ಬಗ್ಗೆ ತಿಳಿ ಹೇಳುವವರೇ ಕಡಿಮೆ. ಆದ್ರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಪೊಲೀಸ್ ಪೇದೆ ಅಶೋಕ್ ಎಂಬವರು ತಮ್ಮ ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ಕಾನೂನು ಜಾಗೃತಿ ಪಾಠ ಮಾಡುತ್ತಿದ್ದಾರೆ. ಹೌದು, ಅಶೋಕ್...

ನರ್ಸರಿಯಿಂದ ಉಚಿತ ಸಸಿ ಹಂಚಿಕೆ- ಸ್ವಗ್ರಾಮದ ಶಾಲೆಗೆ ಸ್ವಂತ ಹಣದಿಂದ ಕಾಯಕಲ್ಪ

2 weeks ago

ಹಾಸನ: ಜಿಲ್ಲೆಯ ಬೇಲೂರು ತಾಲೂಕಿನ ಯಮಸಂಧಿ ಎಂಬ ಗ್ರಾಮದ ಯುವಕ ಸುಪ್ರೀತ್ ಕುಮಾರ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಸುಪ್ರೀತ್ ಕುಮಾರ್ ಪರಿಸರದ ಮೇಲೆ ಅಪಾರ ಕಾಳಜಿ ಹೊಂದಿದ್ದು 50 ಸಾವಿರಕ್ಕೂ ಹೆಚ್ಚಿನ ಗಿಡಗಳನ್ನ ನೆಟ್ಟು ಸಂರಕ್ಷಣೆ ಮಾಡ್ತಿದ್ದಾರೆ. ತಮ್ಮ ಜಾಗದಲ್ಲಿಯೇ...

ಓದಿಸಿದ್ರೆ ಮಾತ್ರ ಮದುವೆಯಾಗ್ತೀನೆಂದು ಷರತ್ತಿಟ್ಟು ಎಂಜಿನಿಯರ್ ಆದ ಶಿವಮೊಗ್ಗದ ಕುಮುದಾ

2 weeks ago

ಶಿವಮೊಗ್ಗ: ಮನಸಿದ್ದರೆ ಮಾರ್ಗ ಅಂತ ಸಾಧನೆ ಮಾಡಿದವರ ಬಗ್ಗೆ ಇದೇ ಪಬ್ಲಿಕ್ ಹೀರೋನಲ್ಲಿ ಹಲವು ಬಾರಿ ತೋರಿಸಿದ್ದೇವೆ. ಇವತ್ತು ಅಂಥದ್ದೇ ಸ್ಫೂರ್ತಿದಾಯಕ ಸ್ಟೋರಿ ಶಿವಮೊಗ್ಗದಿಂದ ಬಂದಿದೆ. ಹಕ್ಕಿಪಿಕ್ಕಿ ಜನಾಂಗದಲ್ಲಿ ಜನಿಸಿದ ಇವರು ತಮ್ಮ ಓದಿಗಾಗಿ ಮದುವೆಗೆ ಷರತ್ತು ಇಟ್ಟು ಎಂಜಿನಿಯರ್ ಆಗಿದ್ದಾರೆ....

ಪತ್ನಿಗಾದ ಸಮಸ್ಯೆ ಯಾರಿಗೂ ಆಗಬಾರದೆಂದು ಗರ್ಭಿಣಿಯರಿಗೆ ಉಚಿತ ಆಟೋ ಸೇವೆ ನೀಡ್ತಿರೋ ಬೆಳಗಾವಿಯ ಮಲ್ಲಯ್ಯ

2 weeks ago

-ದಿನದ 24 ಗಂಟೆಯೂ ಸಿಗ್ತಾರೆ ಜೀವರಕ್ಷಕ ಬೆಳಗಾವಿ: ಎಲ್ಲದರಲ್ಲೂ ಹಣ ಗಳಿಕೆಯನ್ನು ನೋಡೋ ಜನರೇ ಹೆಚ್ಚು. ಇಂತಹವರ ನಡುವೆ ತಮ್ಮ ಶಕ್ತಿಗೆ ಅನುಸಾರ ಸಮಾಜ ಸೇವೆ ಮಾಡೋವ್ರು ಇದ್ದಾರೆ. ಇವತ್ತಿನ ನಮ್ಮ ಪಬ್ಲಿಕ್ ಹೀರೋ ಗರ್ಭಿಣಿಯರಿಗೆ ಉಚಿತವಾಗಿ ಆಟೋಸೇವೆ ಒದಗಿಸ್ತಿದ್ದಾರೆ. ಬೆಳಗಾವಿಯ...

ಹಾಡಿನ ಮೂಲಕ ವಿಜ್ಞಾನದ ಕಲಿಕೆ- ಜಾಗೃತಿ ಜೊತೆ ಪಠ್ಯ ಬೋಧನೆ ಮಾಡುವ ವೀರೇಂದ್ರ ಪಾಟೀಲ್ ಮೇಷ್ಟ್ರು

2 weeks ago

ರಾಯಚೂರು: ಶಾಲೆಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸರ್ಕಾರ ಹಾಕಿಕೊಳ್ಳೋ ಎಷ್ಟೋ ಯೋಜನೆಗಳು ಹಳ್ಳ ಹಿಡಿದಿವೆ. ಆದರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಹಾಡಿನ ಮೂಲಕ ಮಕ್ಕಳಿಗೆ ಶಿಕ್ಷಣ ಕೊಡಿಸೋ ಜೊತೆಗೆ ಪರಿಸರ ಜಾಗೃತಿ ಮೂಡಿಸ್ತಿದ್ದಾರೆ.   ನಗರದ ಗಾಜಗಾರಪೇಟೆ ಪ್ರೌಢಶಾಲೆ ವಿಜ್ಞಾನ...

ಕೈ, ಕಾಲು ಇಲ್ಲದಿದ್ರೂ ಸೂಪರ್ ಸ್ವಿಮ್ಮರ್- ರಷ್ಯಾದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ತಿಪ್ಪಣ್ಣ

3 weeks ago

ಬಳ್ಳಾರಿ: ದೇಹದ ಎಲ್ಲಾ ಅಂಗಗಳು ಸರಿಯಾಗಿದ್ರೂ ಕೂಡ ಕೆಲವರಿಗೆ ಹತ್ತು ನಿಮಿಷ ಈಜಾಡೋದು ಕಷ್ಟ. ಆದ್ರೆ ಇಲ್ಲೊಬ್ಬರು ಕೈ ಕಾಲು ಇಲ್ಲದಿದ್ರೂ ಒಂದು ಗಂಟೆಗೂ ಹೆಚ್ಚು ಕಾಲ ಈಜಾಡ್ತಾರೆ. ಈ ವಿಕಲಚೇತನ ಈಜುಪಟು ರಷ್ಯಾದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ ಕೀರ್ತಿ ಪತಾಕೆ...