Wednesday, 21st March 2018

Recent News

6 hours ago

ಕಲ್ಲಂಗಡಿ ಹಣ್ಣಿನಂತೆ ಹುಡುಗಿಯರ ಎದೆ: ಪ್ರೊಫೆಸರ್ ವಿರುದ್ಧ ಯುವತಿಯರಿಂದ ಟಾಪ್‍ಲೆಸ್ ಪ್ರತಿಭಟನೆ

ತಿರುವನಂತಪುರಂ: ಕಾಲೇಜಿನಲ್ಲಿ ಪ್ರೊಫೆಸರ್ ಒಬ್ಬರು ಮಹಿಳೆಯರ ಸ್ತನವನ್ನು ಕಲ್ಲಂಗಡಿಗೆ ಹೊಲಿಸಿದ್ದಕ್ಕೆ ಯುವತಿಯರು ಫೇಸ್‍ಬುಕ್‍ನಲ್ಲಿ ಟಾಪ್‍ಲೆಸ್ ಪ್ರತಿಭಟನೆ ಮಾಡಿದ್ದಾರೆ. ಕ್ಯಾಲಿಕಟ್‍ನಲ್ಲಿರುವ ಫಾರೂಕ್ ಕಾಲೇಜಿನ ಅಸಿಸ್ಟೆಂಟ್ ಪ್ರೊಫೆಸರ್ ಭಾಷಣ ಮಾಡುವಾಗ ಕಾಲೇಜಿನ ಯುವತಿಯರ ಸ್ತನ ಕಲ್ಲಂಗಡಿ ಹಣ್ಣಿನ ರೀತಿ ಇರುತ್ತದೆ ಎಂದು ಹೇಳಿದ್ದರು. ಪ್ರೊಫೆಸರ್ ಭಾಷಣದಲ್ಲಿ, “ನಾನು ಒಬ್ಬ ಶಿಕ್ಷಕನಾಗಿದ್ದು, ನನ್ನ ಕಾಲೇಜಿನಲ್ಲಿ 80% ವಿದ್ಯಾರ್ಥಿಗಳು ಯುವತಿಯರೇ. ಅದರಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಜಾಸ್ತಿ. ಇವರು ಸಂಪ್ರದಾಯಕ್ಕೆ ತಕ್ಕಂತೆ ಉಡುಪು ಧರಿಸುತ್ತಿಲ್ಲ. ಅವರು ತಮ್ಮ ಸ್ತನವನ್ನು ಹಿಜಾಬ್ ನಲ್ಲಿ ಸರಿಯಾಗಿ ಮುಚ್ಚಿಕೊಳ್ಳುವುದಿಲ್ಲ. […]

2 days ago

ಪ್ರತ್ಯೇಕ ಧರ್ಮಕ್ಕೆ ಒಪ್ಪಿಗೆ – ವೀರಶೈವ, ಲಿಂಗಾಯತ ಕಾರ್ಯಕರ್ತರ ನಡುವೆ ಮಾರಾಮಾರಿ

ಕಲಬುರಗಿ: ರಾಜ್ಯ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮ ವರದಿಯನ್ನು ಒಪ್ಪಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವ ನಿರ್ಧಾರ ಕೈಗೊಂಡಿದ್ದಕ್ಕೆ ಪರ, ವಿರೋಧ ವ್ಯಕ್ತವಾಗಿದೆ. ನಗರದ ಪಟೇಲ್ ವೃತ್ತದಲ್ಲಿ ವೀರಶೈವರು ತೀರ್ಮಾನವನ್ನು ವಿರೋಧಿಸಿದ್ದರೆ, ಲಿಂಗಾಯತರು ಸ್ವಾಗತಿಸಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾರ ಶಿಫಾರಸ್ಸು ಕೈಗೊಳ್ಳಲು ತೀರ್ಮಾನಿಸಿದ ಹಿನ್ನೆಲೆಯಲ್ಲಿ ಸಂಭ್ರಮಾಚಣೆಯಲ್ಲಿ ತೊಡಗಿದ್ದ ಲಿಂಗಾಯತರು ಹಾಗೂ ವೀರಶೈವರ ನಡುವೆ ಮಾತಿನ ಚಕಮಕಿ...

ಸಿಎಂ ತವರು ಕ್ಷೇತ್ರದಲ್ಲಿ ಶೌಚಾಲಯಕ್ಕಾಗಿ ವಿದ್ಯಾರ್ಥಿಗಳ ಪ್ರತಿಭಟನೆ

2 weeks ago

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ಕ್ಷೇತ್ರದಲ್ಲಿ ಶಾಲಾ ವಿದ್ಯಾರ್ಥಿಗಳು ಶೌಚಾಲಯಕ್ಕಾಗಿ ಪ್ರತಿಭಟನೆಗೆ ಕುಳಿತಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕಾರ್ಯ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶಾಲೆಯಲ್ಲಿ ತರಗತಿ ಬಹಿಷ್ಕರಿಸಿ ಬಿರು ಬಿಸಿಲಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಶಾಲೆಯಲ್ಲಿ ಶೌಚಾಲಯ ಹಾಗೂ...

ಜಾರ್ಖಂಡ್ ನಲ್ಲಿ ಪಿಎಫ್‍ಐ ಸಂಘಟನೆ ನಿಷೇಧ ವಿರೋಧಿಸಿ ಮಂಗ್ಳೂರಲ್ಲಿ ಪ್ರತಿಭಟನೆ

4 weeks ago

ಮಂಗಳೂರು: ಜಾರ್ಖಂಡ್ ಸರ್ಕಾರ ಪಿಎಫ್‍ಐ ಸಂಘಟನೆಯನ್ನು ನಿಷೇಧಿಸಿದ ಕ್ರಮವನ್ನು ಖಂಡಿಸಿ ದಕ್ಷಿಣ ಕನ್ನಡ ಪಿಎಫ್‍ಐ ಜಿಲ್ಲಾ ಸಮಿತಿ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದೆ. ಪ್ರತಿಭಟನೆ ವೇಳೆ ಕೇಂದ್ರ ಮತ್ತು ಜಾರ್ಖಂಡ್ ಸರ್ಕಾರದ ವಿರುದ್ಧ ಹರಿಹಾಯ್ದ ಪ್ರತಿಭಟನಕಾರರು ಸರ್ಕಾರದ ಕ್ರಮದ...

ನೇಣು ಬಿಗಿದುಕೊಂಡು 1ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ!

1 month ago

ವಿಜಯಪುರ: ಒಂದನೇ ತರಗತಿಯ ವಿದ್ಯಾರ್ಥಿ ನೇಣಿಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿಪಟ್ಟಣದಲ್ಲಿ ನಡೆದಿದೆ. ಪ್ರಕಾಶಸಿಂಗ ಸಿದ್ದರಾಮಸಿಂಗ ಜಮಾದಾರ(6) ನೇಣಿಗೆ ಶರಣಾದ ವಿದ್ಯಾರ್ಥಿ. ಸಿಂದಗಿ ಪಟ್ಟಣದಲ್ಲಿರುವ ಶಣ್ಮುಖೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲಾ ಆವರಣದಲ್ಲಿರುವ ಮರಕ್ಕೆ ನೇಣು...

ರಾಹುಲ್ ಗಾಂಧಿ ಸಮಾವೇಶಕ್ಕೆ ಬರೋರಿಗೆ ಸಿಗುತ್ತೆ ಸಮೋಸಾ, ಬನ್!

1 month ago

ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿ ಸಮಾವೇಶವೊಂದರಲ್ಲಿ ಪಕೋಡಾ ಮಾರಾಟ ಮಾಡಿದ ಬೆನ್ನಲ್ಲೇ ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಸಮೋಸಾ ಬಂದಿದೆ. ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಸಮೋಸಾ ಮಾರಾಟ ಮಾಡೋ ಪ್ರತಿಭಟನೆ ಮಾಡುತ್ತಿಲ್ಲ. ಬದಲಾಗಿ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಬರೋ ಕಾರ್ಯಕರ್ತರು ಹಾಗೂ ಜನರಿಗೆ...

ನೀರಿಗಾಗಿ ಎರಡು ಗ್ರಾಮಗಳ ನಡುವೆ ಗಲಾಟೆ-ಉದ್ರಿಕ್ತರ ಮೇಲೆ ಲಾಠಿ ಚಾರ್ಜ್

1 month ago

ಚಿಕ್ಕಮಗಳೂರು: ಕೆರೆ ನೀರಿಗಾಗಿ ಎರಡು ಗ್ರಾಮಗಳ ನಡುವೆ ಮಾರಾಮಾರಿ ನಡೆದಿದ್ದು, ಪ್ರತಿಭಟನಾನಿರತರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದಿದೆ. ಸಖರಾಯಪಟ್ಟಣದ ಅಯ್ಯನಕೆರೆ ನೀರನ್ನು ಜಿಗಣೆಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬ್ರಹ್ಮಸಮುದ್ರ ಕೆರೆಗೆ ಹರಿಸಬಾರದೆಂದು...

4ನೇ ದಿನಕ್ಕೆ ಕಾಲಿಟ್ಟ ಬಿಸಿಯೂಟ ಸಿಬ್ಬಂದಿ ಪ್ರತಿಭಟನೆ- ಹೆಚ್‍ಡಿಕೆ ಜೊತೆ ಚರ್ಚಿಸುತ್ತೇನೆ ಅಂದ್ರು ಶಾಸಕ ಕೋನರೆಡ್ಡಿ

1 month ago

ಬೆಂಗಳೂರು: ಕನಿಷ್ಟ ವೇತನ ಮತ್ತು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಸಿಯೂಟ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ 4ನೇ ದಿನಕ್ಕೆ ಕಾಲಿಟ್ಟಿದೆ. ಇದನ್ನೂ ಓದಿ: ಹೆಣ್ಮಕ್ಕಳ ವಿಷಯ ಬಂದ್ರೆ ನಾನು ಜೈಲಿಗೆ ಹೋಗಲು ಸಿದ್ಧ: ಬಿಸಿಯೂಟ ಕಾರ್ಯಕರ್ತೆಯರ ಬೆಂಬಲಕ್ಕೆ ನಿಂತ ಹುಚ್ಚ ವೆಂಕಟ್ ಇಂದು...