Thursday, 26th April 2018

Recent News

7 months ago

ಸಿಎಂ ಸಿದ್ದರಾಮಯ್ಯ ಹಿರಿಯ ಸಹೋದರಿ ನಿಧನ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿರಿಯ ಸಹೋದರಿ ಇಂದು ನಿಧನರಾಗಿದ್ದಾರೆ. 90 ವರ್ಷ ವಯಸ್ಸಿನ ಚಿಕ್ಕಮ್ಮ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಮೃತರ ಪಾರ್ಥೀವ ಶರೀರದ ಅಂತ್ಯಕ್ರಿಯೆ ದೇವೇಗೌಡನಹುಂಡಿಯಲ್ಲಿ ನೆರವೇರಲಿದೆ. ಅಂತ್ಯಕ್ರಿಯೆ ವೇಳೆ ಸಿಎಂ ಸಿದ್ದರಾಮಯ್ಯ ಉಪಸ್ಥಿತಿ ಇರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಇಂದಿನ ಅಧಿಕೃತ ಕಾರ್ಯಕ್ರಮಗಳು ರದ್ದಾಗಿವೆ.  

11 months ago

ಬಾಲಿವುಡ್ ಹಿರಿಯ ನಟಿ ರೀಮಾ ಲಗೂ ನಿಧನ

ಮುಂಬೈ: ಬಾಲಿವುಡ್ ನ ಹಿರಿಯ ನಟಿ ರೀಮಾ ಲಗೂ ನಿಧನ ಹೊಂದಿದ್ದಾರೆ. 59 ವಯಸ್ಸಿನ ರೀಮಾ ಅವರು ಇಂದು ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಬುಧವಾರ ರಾತ್ರಿ ಏಕಾಏಕಿಯಾಗಿ ಎದೆನೋವು ಕಾಣಿಸಿಕೊಂಡಿದ್ದು ಕೂಡಲೇ ಅವರನ್ನು ಕೋಕಿಲಾಬೆನ್ ಧೀರೂಬಾಯ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಂತಾ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ರಾಮ್ ನಾರಾಯಣ್ ಹೇಳಿದ್ದಾರೆ. ರೀಮಾ ಅವರ ಅಳಿಯ ರಾಷ್ಟ್ರೀಯ ಪತ್ರಿಯೊಂದರ ಜೊತೆ...