Friday, 21st July 2017

Recent News

2 months ago

ಊಟದ ಸಾಲಗಾರರ ಪಟ್ಟಿಯ ಕರಪತ್ರ ಹಂಚಿಕೆ: ಡಾಬಾ ಮಾಲೀಕನಿಗೆ ಥಳಿತ

ರಾಯಚೂರು: ಮಿನಿಡಾಬಾದಲ್ಲಿ ಊಟಮಾಡಿ ಉದ್ರಿ ಲೆಕ್ಕ ಬರೆಸಿ ಹಣಕೊಡದೆ ಸತಾಯಿಸುತ್ತಿದ್ದವರು ಡಾಬಾ ಮಾಲೀಕನಿಗೆ ಥಳಿಸಿರುವ ಘಟನೆ ರಾಯಚೂರಿನ ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ನಡೆದಿದೆ. ಮಿನಿಡಾಬಾ ಮಾಲೀಕ ಯಮನೂರಪ್ಪ ಬೇವೂರ್ ಹೆಸರಿನಲ್ಲಿ ಕಿಡಿಗೇಡಿಗಳು ಊಟ ಮಾಡಿ ದುಡ್ಡು ಕೊಡದವರ 54 ಮಂದಿ ಹೆಸರು ಇರುವ ಕರಪತ್ರ ಹಂಚಿದ್ದಾರೆ. ಯಮನೂರಪ್ಪನೇ ಕರಪತ್ರ ಹಂಚಿದ್ದಾನೆ ಅಂತ ತಿಳಿದು ಪಟ್ಟಿಯಲ್ಲಿ ಹೆಸರಿದ್ದವರು ಯಮನೂರಪ್ಪ ಹಾಗೂ ಆತನ ಸಹೋದರ ಗಿಡ್ಡಪ್ಪನನ್ನ ಥಳಿಸಿದ್ದಾರೆ. ಕನಿಷ್ಠ ಓದಲು ಬಾರದ ಯಮನೂರಪ್ಪ ಹಾಗೂ ಆತನ ಸಹೋದರ ಗಿಡ್ಡಪ್ಪ […]

2 months ago

ವಿಡಿಯೋ: ಬಿಲ್ ಕೇಳಿದ್ದಕ್ಕೆ ಬಾರ್ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ

ಬೆಂಗಳೂರು: ಬಾರ್‍ನಲ್ಲಿ ಚೆನ್ನಾಗಿ ಕುಡಿದ ಪುಂಡರು ಬಿಲ್ ಕೇಳಿದ್ದಕ್ಕೆ ಬಾರ್ ಮಾಲೀಕನ ಮೇಲೆಯೇ ಹಲ್ಲೆ ಮಾಡಿದ್ದಾರೆ. ಬೆಂಗಳೂರಿನ ಪಿಣ್ಯ 2ನೇ ಹಂತದ ಜೆಎಂಆರ್ ಬಾರ್ & ರೆಸ್ಟೋರೆಂಟ್‍ನಲ್ಲಿ ಈ ಘಟನೆ ನಡೆದಿದೆ. ಮಚ್ಚು ಲಾಂಗ್‍ಗಳನ್ನು ಹಿಡಿದಿದ್ದ ಮೂವರು ಪುಂಡರು ದಾಂಧಲೆ ನಡೆಸಿದ್ದಾರೆ. ಬಾರ್ ಮಾಲೀಕರ ಮೇಲೆ ಮಚ್ಚು ಬೀಸಿದ್ದು ಮಾತ್ರವಲ್ಲದೇ ಬಾರ್‍ನಲ್ಲಿದ್ದ ಗ್ರಾಹಕರಿಗೂ ತೊಂದರೆ ನೀಡಿದ್ದಾರೆ....