Thursday, 20th July 2017

Recent News

3 days ago

ಹಿರಿಯ ನಟಿ ಲೀಲಾವತಿ ಬಡವರಿಗಾಗಿ ನಿರ್ಮಿಸಿದ್ದ ಆಸ್ಪತ್ರೆ ದುಷ್ಕರ್ಮಿಗಳಿಂದ ಧ್ವಂಸ

ಬೆಂಗಳೂರು: ಬಡವರ ಅನುಕೂಲಕ್ಕಾಗಿ ಹಿರಿಯ ನಟಿ ಡಾ.ಲೀಲಾವತಿ ಅವರು ನಿರ್ಮಿಸಿದ್ದ ಆಸ್ಪತ್ರೆಯನ್ನು ಭಾನುವಾರ ರಾತ್ರಿ ಕಿಡಿಗೇಡಿಗಳು ದಾಂಧಲೆ ನಡೆಸಿ ಧ್ವಂಸಗೊಳಿಸಿದ್ದಾರೆ.     ಸ್ಯಾಂಡಲ್‍ವುಡ್ ನ ಹಿರಿಯ ನಟಿ ಲೀಲಾವತಿ ನಗರದ ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಡಾ.ಎಂ.ಲೀಲಾವತಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಿಸಿದ್ರು. ಐದು ವರ್ಷದ ಹಿಂದೆ ಗ್ರಾಮಾಂತರ ಪ್ರದೇಶದ ಹಳ್ಳಿಗಾಡಿನ ಬಡವರಿಗಾಗಿ ಲೀಲಾವತಿಯವರು, ಸ್ವಂತ ಖರ್ಚಿನಲ್ಲಿ ಆಸ್ಪತ್ರೆಯನ್ನ ನಿರ್ಮಿಸಿ ಸರ್ಕಾರದ ಸುಪರ್ದಿಗೆ ನೀಡಿದ್ದರು. ಭಾನುವಾರ ರಾತ್ರಿ ಯಾರು ಇಲ್ಲದ ವೇಳೆಯಲ್ಲಿ ಕಿಡಿಗೇಡಿಗಳು ದಾಂಧಲೆ ನಡೆಸಿ […]

2 weeks ago

ಆನ್‍ಲೋಡ್ ಮಾಡಲು ನಿಂತಿದ್ದ ರೈಲಿನಿಂದ ಮೂಟೆ-ಮೂಟೆ ಈರುಳ್ಳಿ ಹೊತ್ತೊಯ್ದರು!

ಬೆಂಗಳೂರು: ಉಚಿತವಾಗಿ ಯಾವುದೇ ಒಂದು ವಸ್ತು ಸಿಗುತ್ತೆ ಅಂದ್ರೆ ಆ ವಸ್ತು ಯಾವ ಸ್ಥಿತಿಯಲ್ಲಿದೆ ಎಂಬುದನ್ನ ನೋಡದೆ ಮನೆಮಂದಿಗೆಲ್ಲ ಸಾಕಾಗುವಷ್ಟು ಶೇಖರಣೆ ಮಾಡುತ್ತಾರೆ ಜನ. ಇಂತಹುದೇ ಒಂದು ದೃಶ್ಯ ಬೆಂಗಳೂರು ಹೊರವಲಯ ನೆಲಮಂಗಲದ ಬಸವನಹಳ್ಳಿ ಬಳಿ ಶುಕ್ರವಾರ ಕಂಡುಬಂದಿದೆ. ಬಿಹಾರದಿಂದ ಬೆಂಗಳೂರಿಗೆ 46 ಬೋಗಿಗಳಲ್ಲಿ ಈರುಳ್ಳಿ ಹೊತ್ತು ತಂದಿದ್ದ ಗೂಡ್ಸ್ ರೈಲಿಗೆ ಜನ ಮುತ್ತಿಗೆ ಹಾಕಿದ್ರು....

ಕುಡಿದ ಮತ್ತಿನಲ್ಲಿ ಬಸ್ ಚಾಲನೆ: ಆಟೋಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿಯಾಗಿ ಓರ್ವ ಮಹಿಳೆ ಸಾವು

3 weeks ago

ಬೆಂಗಳೂರು: ಕುಡಿದ ಮತ್ತಿನಲ್ಲಿ ಬಸ್ ಚಾಲನೆ ಮಾಡಿದ ಪರಿಣಾಮ ಕೆಎಸ್‍ಆರ್‍ಟಿಸಿ ಬಸ್ ಆಟೋಗೆ ಡಿಕ್ಕಿ ಹೊಡೆದಿದ್ದು, ಆಟೋದಲ್ಲಿದ್ದ ಮಹಿಳೆ ಸಾವನ್ನಪ್ಪಿರೋ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಬಳಿ ನಡೆದಿದೆ. ಬಿಲ್ಲಿನಕೋಟೆ ಮೂಲದ 29 ವರ್ಷದ ದೇವಿಕಾ ಮೃತ ಮಹಿಳೆ. ನೆಲಮಂಗಲ ತಾಲೂಕಿನ...

ಹೆದ್ದಾರಿಯಲ್ಲಿ 150ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಲ್ಲಿ ಯುವಕರ ಮೋಜು-ಮಸ್ತಿ, ವ್ಹೀಲಿಂಗ್: 70ಕ್ಕೂ ಹೆಚ್ಚು ಬೈಕ್ ವಶ

4 weeks ago

ಬೆಂಗಳೂರು: ರಾತ್ರಿ ವೇಳೆಯಲ್ಲಿ ರಸ್ತೆಯಲ್ಲಿ ಮೋಜು ಮಸ್ತಿ ಮಾಡುವ ಬೈಕ್ ಹಾಗೂ ಕಾರು ಸವಾರರಿಗೆ ಬೆಂಗಳೂರು ಪೀಣ್ಯ ಸಂಚಾರಿ ಪೊಲೀಸರು ಶಾಕ್ ನೀಡಿದ್ದಾರೆ. ಗುರುವಾರ ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ 150ಕ್ಕೂ ಹೆಚ್ಚು ದ್ವಿಚಕ್ರವಾಹನಗಳಲ್ಲಿ ಜಾಲಿ ರೈಡ್ ಹೋಗುತ್ತಿದ್ದ ಯುವಕರನ್ನು ತಡೆದು...

ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು- ನಾಲ್ವರು ಪ್ರಯಾಣಿಕರು ಪಾರು

4 weeks ago

ಬೆಂಗಳೂರು: ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಹಳ್ಳಕ್ಕೆ ಬಿದ್ದ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ಬಳಿ ನಡೆದಿದೆ. ಚಿತ್ರದುರ್ಗದಿಂದ ಬೆಂಗಳೂರಿಗೆ ಬರುತ್ತಿದ್ದ ಕಾರು ನೆಲಮಂಗಲ ತಾಲೂಕಿನ ಬೊಮ್ಮನಹಳ್ಳಿ ಬಳಿ ಹಳ್ಳಕ್ಕೆ ಬಿದ್ದಿದೆ. ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದವರಿಗೆ ಸಣ್ಣ...

ಆರೋಗ್ಯ ಇಲಾಖೆಯಲ್ಲಿ ಗೋಲ್ಮಾಲ್: ಪ್ರಶ್ನಿಸಿದ್ದಕ್ಕೆ ಹಿರಿಯ ವೈದ್ಯರಿಗೆ ಹಿಂಭಡ್ತಿ!

1 month ago

ನೆಲಮಂಗಲ: ಆರೋಗ್ಯ ಇಲಾಖೆಯಿಂದ ಸರ್ಕಾರಿ ಆಸ್ಪತ್ರೆಗಳಿಗೆ ವಿತರಣೆ ಆಗುತ್ತಿರುವ ಔಷಧಿಗಳು, ಮಾತ್ರೆ, ಯಂತ್ರೋಪಕರಣಗಳು ಸೇರಿದಂತೆ ಇನ್ನಿತರ ವಸ್ತುಗಳ ವಿತರಣೆಯಲ್ಲಿ ಭಾರೀ ಗೋಲ್ಮಾಲ್ ನಡೆಯುತ್ತಿರುವ ಬಗ್ಗೆ, ಸ್ವತಃ ಹಿರಿಯ ವೈದ್ಯರೇ ಈಗ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕು ಸರ್ಕಾರಿ...

ಗ್ರಾಮೀಣ ರಂಗಕಲೆ ಉಳಿಸಲು ಪಣ- ಉಚಿತವಾಗಿ ಹಾರ್ಮೋನಿಯಂ ಕಲಿಸ್ತಿರೋ ನೆಲಮಂಗಲದ ಗಂಗರಾಜು

1 month ago

ಬೆಂಗಳೂರು: ಪಾಶ್ಚಾತ್ಯ, ಅಬ್ಬರದ ಸಂಗೀತದ ಸಾಧನಗಳ ಮಧ್ಯೆ ನಶಿಸಿ ಹೋಗಿರುವ ಗ್ರಾಮೀಣ ರಂಗಕಲೆಯ ಸಾಧನಗಳಲ್ಲಿ ಹಾರ್ಮೋನಿಯಂ ಸಹ ಒಂದು. ಆದ್ರೆ ನೆಲಮಂಗಲದ ಇವತ್ತಿನ ಪಬ್ಲಿಕ್ ಹೀರೋ ಗಂಗರಾಜು ದೃಷ್ಟಿ ಸಮಸ್ಯೆ ಹೊಂದಿದ್ರೂ ಹಾರ್ಮೋನಿಯಂ ಮೂಲಕ ಗಮನ ಸೆಳೆದಿದ್ದಾರೆ. ರಾಗಬದ್ಧವಾಗಿ ಹಾರ್ಮೋನಿಯಂ ನುಡಿಸೋ...

ಪ್ಲೀಸ್ ಅಳ್ಬೇಡಿ ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಪತ್ನಿ ಕೊನೆಗೂ ಪ್ರತ್ಯಕ್ಷ!

1 month ago

ಬೆಂಗಳೂರು: ಗಂಡನಿಗೆ ಪ್ಲೀಸ್ ಅಳ್ಬೇಡಿ, ನಾನು ಮನೆ ಬಿಟ್ಟು ಹೋಗ್ತಾಯಿದ್ದೀನಿ ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಪತ್ನಿ ಇಂದು ಡಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷ ಆಗಿದ್ದಾಳೆ. ಪಬ್ಲಿಕ್ ಟಿವಿಯಲ್ಲಿ ಸುದ್ದಿ ಪ್ರಸಾರದ ಬಳಿಕ ಶ್ರೀನಿವಾಸ ಅವರ ಪತ್ನಿ ಜ್ಯೋತಿ ಇಂದು...