Tuesday, 26th September 2017

Recent News

4 days ago

ಕೋತಿ ಕೊಂದು ಉರುಳಾಡಿ, ನುಂಗಲು ಆಗದೇ ಪರದಾಡಿದ ಹೆಬ್ಬಾವು – ವಿಡಿಯೋ ನೋಡಿ

ಉಡುಪಿ: ಹೆಬ್ಬಾವೊಂದು ಮಂಗನನ್ನು ಕೊಂದು ತಿನ್ನಲು ಪ್ರಯತ್ನಿಸಿದ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳದ ತೋಟವೊಂದರಲ್ಲಿ ನಡೆದಿದೆ. ಹಸಿದ ಹೆಬ್ಬಾವು ಮಾಮೂಲಿಯಾಗಿ ನಾಯಿ, ಕೋಳಿಯನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಿತ್ತು. ಆದರೆ ವಿಚಿತ್ರವೆಂಬಂತೆ ಹೆಬ್ಬಾವು ಕೋತಿಯನ್ನು ಕೊಂದು ನಂತರ ನುಂಗಲು ಯತ್ನಿಸಿದೆ. ಆದರೆ ದೊಡ್ಡ ಮಂಗ ಹೆಬ್ಬಾವಿನ ಹೊಟ್ಟೆ ಸೇರಲಿಲ್ಲ. ಹೀಗಾಗಿ ಉರುಳಾಡಿ ಸುಸ್ತಾದ ಹೆಬ್ಬಾವು ಮಂಗನನ್ನು ಬಿಟ್ಟು ಪೊದೆಸೇರಿಕೊಂಡಿದೆ. ಹಸಿದ ಹೆಬ್ಬಾವುಗಳು ಸಿಕ್ಕ ಪ್ರಾಣಿಗಳನ್ನು ಕಬಳಿಸಿಬಿಡುವುದು ಸಾಮಾನ್ಯ. ಆದರೆ ಮಂಗನನ್ನು ನುಂಗಲು ಪ್ರಯತ್ನಿಸಿರುವುದು ವಿಶೇಷ ಎಂದು ಸ್ಥಳೀಯ […]

2 weeks ago

ಹುಲಿಯ ಘರ್ಜನೆಯಿಂದ ಹೃದಯಾಘಾತವಾಗಿ 12 ಕೋತಿಗಳು ಒಮ್ಮೆಲೆ ಸಾವು

ಲಕ್ನೋ: ಹುಲಿಯ ಘರ್ಜನೆ ಕೇಳಿ ಹೃದಯಾಘಾತಕ್ಕೊಳಗಾಗಿ 12 ಕೋತಿಗಳು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. 12 ಕೋತಿಗಳು ಸತ್ತು ಬಿದ್ದಿರುವುದನ್ನ ಸ್ಥಳೀಯರು ನೋಡಿದ್ದರು. ಕೋತಿಗಳ ಸಾಮೂಹಿಕ ಸಾವು ನೋಡಿ ಗಾಬರಿಯಾಗಿದ್ರು. ಕೋತಿಗಳಿಗೆ ವಿಷ ಹಾಕಿ ಕೊಲ್ಲಲಾಗಿದೆ ಎಂಬ ಅನುಮಾನದ ಮೇಲೆ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಾವನ್ನಪ್ಪಿರುವ ಎಲ್ಲಾ ಕೋತಿಗಳಿಗೂ ಒಂದೇ ಸಲಕ್ಕೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ....

ಹೆಸರಿಗೆ ಖಾಸಗಿ ಬಸ್ ಚಾಲಕ- ಬೀದಿನಾಯಿ, ಕೋತಿಗಳ ಪಾಲಿನ ಅನ್ನದಾತ ಕೋಲಾರದ ಮನೋಹರ್ ಲಾಲ್

1 month ago

ಕೋಲಾರ: ಬರದ ನಾಡು ಕೋಲಾರ ಜಿಲ್ಲೆಯಲ್ಲಿ ಹನಿ ನೀರಿಗೂ ಪ್ರಾಣಿ, ಪಕ್ಷಿಗಳು ಪರದಾಡುವ ಪರಿಸ್ಥಿತಿ. ಇಂತದ್ರಲ್ಲಿ ಇಲ್ಲೊಬ್ರು ಪ್ರತಿದಿನ ಮುಂಜಾನೆ ನೂರಾರು ನಾಯಿ-ಕೋತಿಗಳಿಗೆ ಹಾಲು, ಬ್ರೆಡ್, ಬಾಳೆ ಹಣ್ಣುಗಳನ್ನ ನೀಡುತ್ತಾ ಪ್ರಾಣಿಗಳ ಆರೈಕೆಯಲ್ಲಿ ತೊಡಗಿದ್ದಾರೆ. ಹೌದು. ಕೋಲಾರದ ಕೆಜಿಎಫ್‍ನ ರಾಬರ್ಟ್ ಸನ್...

ವಿಡಿಯೋ: ಸ್ವಾತಂತ್ರ್ಯ ದಿನಾಚರಣೆಯಂದು ಕೋತಿಗಳಿಂದ ಧ್ವಜಾರೋಹಣ!

1 month ago

ಚಂಡೀಗಢ್: ಮಂಗಳವಾರ ದೇಶದಾದ್ಯಂತ 71 ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿಯೇ ಆಚರಿಸಲಾಗಿತ್ತು. ಅಂತೆಯೇ ಹರ್ಯಾಣದ ಶಾಲೆಯೊಂದರಲ್ಲಿ ಧ್ವಜಾರೋಹಣಕ್ಕೆ ಸಿದ್ಧಗೊಳಿಸಿದ್ದ ಬಾವುಟವನ್ನು ಕೋತಿಗಳು ಹಾರಿಸುವ ಮೂಲಕ ಅಚ್ಚರಿ ಮೂಡಿಸಿವೆ. ಹೌದು. ಹರ್ಯಾಣದ ಅಂಬಲ ಎಂಬಲ್ಲಿರೋ ಶಾಲೆಯಲ್ಲಿ ರಾಷ್ಟ್ರಧ್ವಜವನ್ನು ಕಟ್ಟು ಕಂಬದ ತುದಿಗೇರಿಸಿ ಧ್ವಜಾರೋಹಣಕ್ಕೆ ಸಿದ್ಧತೆ...

ನೇಗಿಲಯೋಗಿಯ ನಿದ್ದೆ ಕೆಡಿಸಿರೋ ಮಂಗಗಳ ಉಪಟಳ- ರೈತರ ಕಷ್ಟ ಕೇಳುವವರ್ಯಾರು?

1 month ago

ಗದಗ: ಅದ್ಯಾಕೋ ರೈತರ ಕಷ್ಟಗಳು ಮುಗಿಯುವಂತೆ ಕಾಣುತ್ತಿಲ್ಲ. ಒಂದಲ್ಲಾ ಒಂದು ಸಂಕಷ್ಟದ ಸುಳಿಗೆ ಸಿಲುಕಿ ರೈತ ನಲುಗುತ್ತಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ಭೀಕರ ಬರಗಾಲ. ಮತ್ತೊಂದೆಡೆ ಅಲ್ಪಸ್ವಲ್ಪ ಮಳೆಗೆ ಬೆಳೆದ ಬೆಳೆ ಮಂಗಗಳ ಹಾವಳಿಯಿಂದ ಹಾಳಾಗುತ್ತಿದೆ. ಬರಗಾಲದಲ್ಲಿ ಕೈಗೆ ಬಂದ ತುತ್ತು...

ವಿಡಿಯೋ: ಚಾಮುಂಡಿಬೆಟ್ಟದಲ್ಲಿ ಭಕ್ತೆಯ ಮೇಲೆ ಏಕಾಏಕಿ ಎರಗಿದ ಮಂಗಗಳು

2 months ago

ಮೈಸೂರು: ನಾಡ ಅಧಿದೇವತೆ ಚಾಮುಂಡಿಬೆಟ್ಟದಲ್ಲಿ ಬೆಟ್ಟಕ್ಕೆ ಬಂದಿದ್ದ ಭಕ್ತೆಯ ಮೇಲೆ ಮಂಗಗಳು ಏಕಾಏಕಿ ಎರಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಎರಡು ಮಂಗಗಳು ಮಹಿಳೆ ಮೇಲೆ ಹಲವಾರು ಬಾರಿ ಎರಗಿ ಮೈ ಪರಚಿವೆ. ಹೀಗಾಗಿ ಎಷ್ಟೇ ಕಿರುಚಿಕೊಂಡರು ಮಂಗಗಳು ಎರಗುವುದನ್ನು ಬಿಡಲಿಲ್ಲ. ಕಂಗಾಲಾಗಿ...

ರಸ್ತೆ ಅಫಘಾತದಲ್ಲಿ ಮೃತಪಟ್ಟ ಕೋತಿಗೆ ನ್ಯಾಯವಾದಿಗಳಿಂದ ಅಂತ್ಯಸಂಸ್ಕಾರ

2 months ago

ಬೆಳಗಾವಿ: ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಕೋತಿಗೆ ವಿಧಿ ವಿಧಾನಗಳೊಂದಿಗೆ ನ್ಯಾಯವಾದಿಗಳು ಅಂತ್ಯಸಂಸ್ಕಾರ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ನಡೆದಿದೆ. ಚಿಕ್ಕೋಡಿ ಬೆಳಗಾವಿ ರಸ್ತೆ ನ್ಯಾಯಾಲಯದ ಎದುರು ಶುಕ್ರವಾರ ಸಂಜೆ ಕೋತಿಯೊಂದು ಮೃತಪಟ್ಟಿತ್ತು. ಇದನ್ನು ಗಮನಿಸಿದ ನ್ಯಾಯವಾದಿಗಳು ಹಾಗೂ ಸಾರ್ವಜನಿಕರು...

ಕೋತಿ ಓಡಿಸಿ ಬೆಳೆ ಕಾಯುತ್ತಿದ್ದಾರೆ ಧಾರವಾಡ ರೈತರು!

2 months ago

ಧಾರವಾಡ: ಧಾರವಾಡ ತಾಲೂಕಿನ ಯಾಡವಾಡ, ಯರಿಕೊಪ್ಪ, ಲಕಮಾಪೂರ, ಬೇಟಗೇರಿ ಗ್ರಾಮಗಳಲ್ಲಿ ರೈತರು ಬೆಳೆದ ಬೆಳೆಗಳನ್ನು ಕೋತಿಗಳು ತಿಂದು ಹಾಳು ಮಾಡುತ್ತಿವೆ. ಬರಗಾಲದಿಂದ ಬೇಸತ್ತಿರುವ ರೈತರು ಬೆಳೆದಿದ್ದ ಅಲ್ಪ ಸ್ವಲ್ಪ ಬೆಳೆಯೂ ಕೈಗೆ ಸಿಗದಂತಾಗಿದೆ. ಹಿಂಡು ಹಿಂಡಾಗಿ ಬರುವ ಮಂಗಗಳು ಬೆಳೆಯನ್ನು ನಾಶಪಡಿಸುತ್ತಿವೆ....