Monday, 22nd January 2018

Recent News

53 mins ago

ಮಂಡ್ಯದಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ

ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ಕಂಬದಹಳ್ಳಿ ಗ್ರಾಮದಲ್ಲಿ ಮೊರಾರ್ಜಿದೇಸಾಯಿ ವಸತಿ ಶಾಲೆಯ 10 ನೇ ತರಗತಿ ವಿದ್ಯಾರ್ಥಿನಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ. 15 ವರ್ಷದ ವಿನುತಾ ನೇಣಿಗೆ ಶರಣಾದ ವಿದ್ಯಾರ್ಥಿನಿ. ಮೂಲತಃ ಹಾಸನ ಜಿಲ್ಲೆ, ಚನ್ನರಾಯ ಪಟ್ಟಣ ತಾಲೂಕಿನವಳಾದ ವಿನುತಾ ಕಂಬದಹಳ್ಳಿಯಲ್ಲಿರುವ ಮೊರಾರ್ಜಿದೇಸಾಯಿ ವಸತಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿದ್ದಳು. ಎಂದಿನಂತೆ ನಿನ್ನೆಯೂ ರಾತ್ರಿ ಸ್ನೇಹಿತೆಯರ ಜೊತೆ ಊಟ ಮಾಡಿ ರೂಮಿನಲ್ಲಿ ಮಲಗಿದ್ದ ವಿನುತ, ತನ್ನ ಚೂಡಿದಾರದ ಶಾಲನ್ನೇ ಹಗ್ಗದ ರೀತಿ ಬಳಸಿ ನೇಣಿಗೆ ಶರಣಾಗಿದ್ದಾಳೆ. […]

16 hours ago

ಒಣ ಹುಲ್ಲಿನಿಂದಾಗಿ ಕಾರಿಗೆ ಹತ್ತಿಕೊಳ್ತು ಬೆಂಕಿ-ಬೈಕ್ ಸವಾರನ ಸಮಯ ಪ್ರಜ್ಞೆಯಿಂದ ಕಾರಿನಲ್ಲಿದ್ದ ಐವರು ಬದುಕುಳಿದ್ರು

ಮಂಡ್ಯ: ರಸ್ತೆಯಲ್ಲಿ ರಾಗಿ ಒಕ್ಕಣೆಗೆ ಹಾಕಿದ್ದ ಹುಲ್ಲಿನಿಂದ ಕಾರು ಹೊತ್ತಿ ಉರಿದು, ಐವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ರಾಜೇನಹಳ್ಳಿ ಗ್ರಾಮದ ಬಳಿ ನಡೆದಿದೆ. ಬೆಂಗಳೂರು ಮೂಲದ ಐವರು ಭೂವರಹನಾಥಸ್ವಾಮಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ಬೂಕನಕೆರೆ ಹೋಬಳಿ ರಾಜೇನಹಳ್ಳಿ ಬಳಿ ರೈತರು ರಾಗಿಯನ್ನು ಒಕ್ಕಣೆ ಮಾಡಲು ರಸ್ತೆಯಲ್ಲಿ ಹಾಕಿದ್ದ ಹುಲ್ಲು...

ಕೇಂದ್ರದ ಕವರ್ ಚೇಂಜ್ ಮಾಡಿ, ರಮ್ಯಾ ಕೈಯಲ್ಲಿ ಬಲ್ಬ್ ಹಿಡಿಸಿದ್ರು: ಸಿಟಿ ರವಿ ಕಿಡಿ

2 days ago

ಮಂಡ್ಯ: ಭಾರತ ಸರ್ಕಾರದ ಬಲ್ಬನ್ನು ರಮ್ಯಾ ಕೈಯಲ್ಲಿ ಹಿಡಿಸಿ ಪಕ್ಕದಲ್ಲಿ ಡಿಕೆ ಶಿವಕುಮಾರಣ್ಣ ನಿಂತುಕೊಂಡು ಹೊಸಬೆಳಕು ಯೋಜನೆ ನಮ್ಮದು ಅಂತಾರೆ ಎಂದು ಬಿಜೆಪಿ ಶಾಸಕ ಸಿಟಿ ರವಿ ವ್ಯಂಗ್ಯವಾಡಿದ್ದಾರೆ. ಮಂಡ್ಯ ಜಿಲ್ಲೆಯ, ನಾಗಮಂಗಲದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು,...

ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಪ್ರಪ್ರಥಮ ಬಾರಿಗೆ ಎಸ್‍.ಎಂ.ಕೃಷ್ಣ ಭಾಗಿ

3 days ago

ಮಂಡ್ಯ: ಬಿಜೆಪಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ನವ ಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿ ಪ್ರಪ್ರಥಮ ಬಾರಿಗೆ ಮಾಜಿ ಮುಖ್ಯಮಂತ್ರಿ ಎಸ್‍ಎಂ.ಕೃಷ್ಣ ಭಾಗವಹಿಸಲಿದ್ದಾರೆ. ಜೆಡಿಎಸ್ ಭದ್ರಕೋಟೆ ಎಂದೇ ಹೆಸರಾದ ಮಂಡ್ಯ ಜಿಲ್ಲೆಯಲ್ಲಿ ಇಂದಿನಿಂದ ಎರಡು ದಿನಗಳ ಕಾಲ ಬಿಜೆಪಿಯ ಪರಿವರ್ತನಾ ಯಾತ್ರೆ ನಡೆಯಲಿದೆ. ಮದ್ದೂರು, ಮಂಡ್ಯ,...

ವ್ಯಕ್ತಿಯ ಕೊಲೆ- ಸೊಂಟದಿಂದ ಕೆಳಗಿನ ದೇಹದ ಅರ್ಧಭಾಗವನ್ನು ಚೀಲದಲ್ಲಿ ತುಂಬಿ ಹೆದ್ದಾರಿ ಪಕ್ಕ ಬಿಸಾಡಿದ್ರು!

3 days ago

ಮಂಡ್ಯ: ವ್ಯಕ್ತಿಯೊಬ್ಬರನ್ನ ಬರ್ಬರವಾಗಿ ಕೊಲೆ ಮಾಡಿ ಸೊಂಟದಿಂದ ಕೆಳಗಿನ ದೇಹದ ಭಾಗವನ್ನು ಚೀಲದಲ್ಲಿ ತುಂಬಿ ಹೆದ್ದಾರಿ ಪಕ್ಕದಲ್ಲಿ ಎಸೆದು ಹೋಗಿರುವ ಭೀಕರ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಕಾಳಿಂಗನಹಳ್ಳಿ ಜಂಕ್ಷನ್ ಬಳಿ ನಡೆದಿದೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲೇ ಪ್ಲಾಸ್ಟಿಕ್...

ಬೈಕಿಗೆ ಗುದ್ದಿ ಕಾರು ಚಾಲಕ ಪರಾರಿ – ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಬೈಕ್ ಸವಾರ ಸಾವು

7 days ago

ಮಂಡ್ಯ: ಕಾರು ಮತ್ತು ಬೈಕ್ ನಡುವೆ ಅಪಘಾತವಾಗಿ ಬೈಕ್ ಸವಾರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೆಆರ್ ಪೇಟೆ ಪಟ್ಟಣದಲ್ಲಿ ನಡೆದಿದೆ. ಹೊಸಹೊಳಲು ಗ್ರಾಮದ 33 ವರ್ಷದ ಕುಮಾರ್ ಮೃತ ದುರ್ದೈವಿ. ಕೆಆರ್ ಪೇಟೆ ಪಟ್ಟಣದ ಎಂ.ಬೊಮ್ಮೇಗೌಡ...

ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ಕಾಲೇಜ್ ಬಸ್, ಕ್ಯಾಂಟರ್, ಕಾರ್ ನಡುವೆ ಸರಣಿ ಅಪಘಾತ

1 week ago

ಮಂಡ್ಯ: ಮುಂದೆ ಚಲಿಸುತ್ತಿದ್ದ ಲಾರಿ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ ಪರಿಣಾಮ ಕಾಲೇಜ್ ಬಸ್, ಕ್ಯಾಂಟರ್, ಕಾರ್ ನಡುವೆ ಸರಣಿ ಅಪಘಾತ ಸಂಭವಿಸಿರುವ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ. ನಗರದ ಜ್ಯೋತಿ ಇಂಟರ್ ನ್ಯಾಷನಲ್ ಹೋಟೆಲ್ ಮುಂಭಾಗ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ...

ಕುಟುಂಬದೊಂದಿಗೆ ದೇವಾಲಯಕ್ಕೆ ಬಂದಿದ್ದ ಪೇದೆ ನೀರಿನಲ್ಲಿ ಮುಳುಗಿ ಸಾವು

2 weeks ago

ಮಂಡ್ಯ: ಕುಟುಂಬದವರೊಂದಿಗೆ ದೇವಾಲಯಕ್ಕೆ ಬಂದಿದ್ದ ಪೊಲೀಸ್ ಪೇದೆಯೊಬ್ಬರು ಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಂದೇಗಾಲ ಸಮೀಪ ಮತ್ತಿತಾಳೇಶ್ವರ ದೇವಾಲಯದ ಬಳಿ ನಡೆದಿದೆ. ಬೇಗೂರು ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದ 39 ವರ್ಷದ ಚಂದ್ರಶೇಖರ್ ಮೃತ...