Saturday, 19th August 2017

Recent News

1 day ago

ಮಹದಾಯಿ ವಿಚಾರದಲ್ಲಿ ಕೇಂದ್ರದಿಂದ ಮಹಾಮೋಸ- ಸುಳ್ಳು ವರದಿ ಆಧರಿಸಿ ಕರ್ನಾಟಕಕ್ಕೆ ಸುಪ್ರೀಂ ಎಚ್ಚರಿಕೆ

ಬೆಂಗಳೂರು: 2003ರಿಂದ ಏಳು ಜನ ಮುಖ್ಯಮಂತ್ರಿಗಳು ಬಂದ್ರೂ ಮಹದಾಯಿ ಯೋಜನೆಗೆ ಮುಕ್ತಿ ಸಿಕ್ಕಿಲ್ಲ. ಕೇಂದ್ರ ಸರ್ಕಾರದ ಸುಳ್ಳು ಅಫಿಡೇವಿಟ್ ಆಧರಿಸಿ ಗುರುವಾರದಂದು ಸುಪ್ರೀಂಕೋರ್ಟ್, ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಅನುಮತಿ ಪಡೆದು ಕಾಮಗಾರಿ ಪ್ರಾರಂಭಿಸಬೇಕು ಅಂತ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಅರಣ್ಯ ಪ್ರದೇಶದಲ್ಲಿ ಕಾಮಗಾರಿ ನಡೆಸುವುದಾದ್ರೆ ಪರವಾನಿಗೆ ಮುಖ್ಯ. ಜೊತೆಗೆ ನ್ಯಾಯಾಧೀಕರಣದ ಅಂತಿಮ ಆದೇಶ ಬರೋವರೆಗೂ ಯೋಜನೆ ಆರಂಭಿಸಬಾರದು ಎಂದು ಸುಪ್ರೀಂಕೋರ್ಟ್ ಎಚ್ಚರಿಸಿದೆ. ಆದ್ರೆ 2003ರಲ್ಲೇ ಕೇಂದ್ರ ಸರ್ಕಾರ ಮಹದಾಯಿ ಯೋಜನೆಗೆ ಅನುಮತಿ ನೀಡಿತ್ತು. […]

5 months ago

ಸಾಲಿಸಿಟರ್ ಆಗಿದ್ದು ಗೋವಾ ಪರ ವಾದ ಮಾಡುವುದು ಎಷ್ಟು ಸರಿ: ಕೇಂದ್ರದ ವಿರುದ್ಧ ಕೋನರೆಡ್ಡಿ ಅಸಮಾಧಾನ

ಬೆಂಗಳೂರು: ಮಹದಾಯಿ ಯೋಜನೆ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಗೋವಾ ಪರ ಆತ್ಮಾರಾಮ ನಾಡಕರ್ಣಿ ವಾದಮಾಡಲು ಕೇಂದ್ರದ ಅನುಮತಿ ಹಿನ್ನೆಲೆಯಲ್ಲಿ ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ, ಶಾಸಕ ಕೋನರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೇಕಿದ್ದರೆ ಸಾಲಿಸಿಟರ್ ಹುದ್ದೆಯಿಂದ ಆತ್ಮಾರಾಮ ನಾಡಕರ್ಣಿಗೆ ವಿಮುಕ್ತಿಕೊಡಿ. ಆ ಬಳಿಕ ಬೇಕಾದರೆ ಅವರು ಗೋವಾ ಪರ ವಾದಮಾಡಲಿ. ಆದರೆ ಸಾಲಿಸಿಟರ್ ಆಗಿದ್ದು ವಾದ ಮಾಡುವುದು...