Tuesday, 19th June 2018

Recent News

4 days ago

ಮೋದಿ ಅಲೆ ಎದುರಿಸಲು ರಾಹುಲ್ ಬಿಗ್ ಪ್ಲಾನ್ – ಕೊನೆಗೂ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧೆ ಅನ್ನೋದು ನಿರ್ಧಾರವಾಯ್ತು!

ನವದೆಹಲಿ: ಮುಂಬರುವ 2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯನ್ನು ತಡೆಯಲು ಸಿದ್ಧತೆ ನಡೆಸಿರುವ ಕಾಂಗ್ರೆಸ್ 250 ಸ್ಥಾನಗಳಲ್ಲಿ ಮಾತ್ರ ಸ್ಪರ್ಧೆ ನಡೆಸಲು ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿದೆ. ಕಾಂಗ್ರೆಸ್ ಒಂದೊಮ್ಮೆ ಕೇವಲ 250 ಸ್ಥಾನಗಳಲ್ಲಿ ಮಾತ್ರ ಸ್ಪರ್ಧೆ ಮಾಡಿದರೆ, ಸ್ವಾತಂತ್ರ್ಯ ನಂತರ ಅತೀ ಕಡಿಮೆ ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದಂತಾಗುತ್ತದೆ. ಎರಡನೇ ಬಾರಿಗೆ ಕೇಂದ್ರದಲ್ಲಿ ಮೋದಿ ಸರ್ಕಾರ ರಚನೆ ಮಾಡದಂತೆ ತಡೆಯುವ ಮೂಲಕ ಸಮಾನ ಮನಸ್ಸಿನ ಇತರೇ ಪಕ್ಷಗಳೊಂದಿಗೆ `ಮಹಾಮೈತ್ರಿ’ ಮಾಡಲು ಕಾಂಗ್ರೆಸ್ ಈ ತಂತ್ರ […]

6 days ago

ರಾಹುಲ್ ಗಾಂಧಿ ಆಯೋಜನೆಯ ಇಫ್ತಾರ ಕೂಟದಲ್ಲಿ ಭಾಗಿಯಾದ ಪ್ರಣಬ್ ಮುಖರ್ಜಿ

ನವದೆಹಲಿ: ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ಬಳಿಕ ಆಯೋಜಿಸಿದ್ದ ಮೊದಲ ಇಫ್ತಾರ್ ಕೂಡದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಪ್ರಣಬ್ ಮುಖರ್ಜಿ ಅವರಿಗೆ ಆಹ್ವಾನ ನೀಡಿಲ್ಲ ಎಂಬ ಸುದ್ದಿಗಳು ಕೇಳಿ ಬಂದಿದ್ದವು. ಈ ಕುರಿತು ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ಪಕ್ಷ ವಕ್ತಾರರಾದ ರಣ್‍ದೀಪ್ ಸಿಂಗ್ ಸೂರಜ್‍ವಾಲಾ...

ಹಾವು ಬಂದೈತಿ ಅಂದ್ರ ಪಕ್ಕದ ಮನಿ ಗಂಡಸರನ್ನ ಕರಿ ಅಂದ್ರಂತ, ಹಂಗಾಯ್ತು ಕಾಂಗ್ರೆಸ್ ಪರಿಸ್ಥಿತಿ: ಪ್ರಹ್ಲಾದ ಜೋಶಿ

2 weeks ago

ಧಾರವಾಡ: ಮನೆಯಲ್ಲಿ ಹಾವು ಬಂದರೆ, ಹೊಡೆಯಲು ಪಕ್ಕದ ಮನೆಯ ಗಂಡಸರನ್ನು ಕರೆಯಲು ಪತ್ನಿಗೆ ಗಂಡ ಹೇಳಿದ ಹಾಗೆ ಇಂದಿನ ಕಾಂಗ್ರೆಸ್ ಪರಿಸ್ಥಿತಿ ಆಗಿದೆ ಎಂದು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದ್ದಾರೆ. ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದರು, ಬಿಜೆಪಿಯನ್ನು...

ಬಿಜೆಪಿ ನೇತೃತ್ವದ ಒಕ್ಕೂಟದಿಂದ ಶಿವಸೇನೆ ಹೊರ ನಡೆಯುತ್ತಾ? ಉದ್ಧವ್ ಠಾಕ್ರೆ ಹೇಳಿದ್ದೇನು?

3 weeks ago

ಮುಂಬೈ: ಲೋಕಾಸಭಾ ಉಪಚುನಾವಣೆಯ ಸೋಲಿನ ಬಳಿಕ ಬಹುಕಾಲದ ಮಿತ್ರ ಪಕ್ಷ ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಯಿಂದ ಶಿವಸೇನೆ ಹೊರಬರಲು ನಿರ್ಧರಿಸಿದೆ ಎನ್ನುವ ಸುದ್ದಿ ಪ್ರಕಟವಾಗಿತ್ತು. ಆದರೆ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಯಾವುದೇ ಸ್ಪಷ್ಟನೆ ನೀಡದೇ ಶಿವಸೇನೆ ನಾಯಕ ಉದ್ಧವ್ ಠಾಕ್ರೆ ಜಾರಿಕೊಂಡಿದ್ದಾರೆ....

2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಯನ್ನ ಸೋಲಿಸಲು ‘ತ್ರಿಶೂಲ ವ್ಯೂಹ’ ರಚನೆ

4 weeks ago

ಬೆಂಗಳೂರು: ದೊಡ್ಡ ಮಟ್ಟದ ರಾಜಕೀಯ ಮನ್ವಂತರಕ್ಕೆ ಕರ್ನಾಟಕ ಭೂಮಿಕೆಯಾಗಲಿದೆ ಅಂತ ಕಳೆದ ವಾರದವರೆಗೂ ಯಾರೊಬ್ಬರೂ ಊಹಿಸಿರಲಿಲ್ಲ. ಹೌದು, ರಾಷ್ಟ್ರ ರಾಜಕಾರಣದ ಸಂಭಾವ್ಯ ಬದಲಾವಣೆಗೆ ಮುನ್ನುಡಿ ಬರೆಯಲು ಕರ್ನಾಟಕ ಹೊರಟಿದೆ. ಕರ್ನಾಟಕದ ವರ್ತಮಾನದ ರಾಜಕೀಯ ವಿದ್ಯಮಾನವನ್ನೇ ಆಧಾರವಾಗಿಟ್ಟುಕೊಂಡು, ಮೋದಿ ವಿರುದ್ಧ ಮುನ್ನುಗ್ಗಲೇಬೇಕು ಎಂಬ...

ಮೋದಿ ವಿರುದ್ಧ ಲೋಕಸಭಾ ಚುನಾವಣೆ ಮುಗಿಯೋವರೆಗೆ ಪ್ರಾರ್ಥನೆ ಮಾಡಲಿದ್ದಾರೆ ದೆಹಲಿ ಕ್ರೈಸ್ತರು!

4 weeks ago

ನವದೆಹಲಿ: 2019ರ ಲೋಕಸಭಾ ಚುನಾವಣೆಗೆ ವಿರೋಧ ಪಕ್ಷಗಳು ಮೋದಿ ಸೋಲಿಸಲು ಮೈತ್ರಿ ಮಾತುಕತೆಗೆ ಒಲವು ತೋರಿಸುತ್ತಿದ್ದರೆ ದೆಹಲಿಯ ಕ್ರೈಸ್ತರು ಎನ್‍ಡಿಎ ಸರ್ಕಾರದ ವಿರುದ್ಧ ಪರೋಕ್ಷವಾಗಿ ಪ್ರಚಾರ ಆರಂಭಿಸಿದ್ದಾರೆ. ಪ್ರಜಾಪ್ರಭುತ್ವ ಹಾಗೂ ಜಾತ್ಯಾತೀತತೆಗೆ ಸವಾಲು ಹಾಕುವ ಅಸ್ಥಿರ ರಾಜಕೀಯವನ್ನು ದೇಶ ಎದುರಿಸುತ್ತಿದೆ. ದೇಶದ...

ಎನ್‍ಡಿಎ ಒಕ್ಕೂಟದಿಂದ ಹೊರಬಂದ ಶಿವಸೇನೆ

5 months ago

ಮುಂಬೈ: ಮಹತ್ವದ ಬೆಳವಣಿಗೆಯೊಂದರಲ್ಲಿ ಶಿವಸೇನೆ ಎನ್‍ಡಿಎ ಒಕ್ಕೂಟದಿಂದ ಹೊರ ಬಂದಿದ್ದು, 2019ರ ಲೋಕಸಭಾ ಮತ್ತು ಮುಂದಿನ ವಿಧಾನಸಭಾ ಚುನಾವಣೆ ವೇಳೆ ಮೈತ್ರಿ ಮಾಡದೇ ಇರುವ ತೀರ್ಮಾನವನ್ನು ತೆಗೆದುಕೊಂಡಿದೆ. ಶಿವಸೇನೆಯ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಪಕ್ಷದ ಹಿರಿಯ ನಾಯಕ ಸಂಜಯ್ ರಾವತ್ ಎನ್‍ಡಿಎ ಒಕ್ಕೂಟದಿಂದ...

2014 ರಲ್ಲಿ ಬಿಜೆಪಿ ಗೆಲ್ಲೋ ಮೂಲಕ ಭಾರತದಲ್ಲಿ ವಂಶ ರಾಜಕಾರಣದ ಅಂತ್ಯವಾಗಿದೆ: ರಾಹುಲ್‍ಗೆ ಇರಾನಿ ತಿರುಗೇಟು

9 months ago

ನವದೆಹಲಿ: ಅಮೆರಿಕಾದ ಕ್ಯಾಲಿಫೊರ್ನಿಯಾದಲ್ಲಿ ಬರ್ಕ್‍ಲೇ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿಫಲ ರಾಜಕಾರಣಿ ಎಂದು ಕರೆಯುವ ಮೂಲಕ ಕೇಂದ್ರ ಪ್ರಸಾರ ಖಾತೆಯ ಸಚಿವೆ  ಸ್ಮೃತಿ ಇರಾನಿ ಟೀಕಿಸಿದ್ದಾರೆ. 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೇ ಮೋದಿ...