Monday, 25th September 2017

Recent News

1 week ago

KSRTC ಬಸ್ ಡಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು

ಬೆಂಗಳೂರು: ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಕೆಂಗೇರಿಯ ಮೈಲಸಂದ್ರದ ದುಬಾಸಿಪಾಳ್ಯಾದ ಬಳಿ ನಡೆದಿದೆ. ಶುಕ್ರವಾರ ರಾತ್ರಿ ಪಾದಚಾರಿ ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಬಸ್ ಏಕಾಏಕಿ ಪಾದಾಚಾರಿಗೆ ಗುದ್ದಿದೆ. ಬಸ್ ಗುದ್ದಿದ ರಭಸದಿಂದ ಪಾದಾಚಾರಿಯ ತಲೆಯ ಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದ ಕಾರಣ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಕೆಂಗೇರಿ ಸಂಚಾರಿ ಪೊಲೀಸರು ಭೇಟಿ ನೀಡಿದ್ದು, ಪಾದಚಾರಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಜರಾಜೇಶ್ವರಿ ಆಸ್ಪತ್ರೆಗೆ […]

2 weeks ago

ಕ್ರೂಸರ್-ಬಸ್ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 6 ಮಂದಿ ಸಾವು

ಬಾಗಲಕೋಟೆ: ಕ್ರೂಸರ್ ಹಾಗೂ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಆರು ಮಂದಿ ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೊರ್ತಿ ಕ್ರಾಸ್ ನಲ್ಲಿ ನಡೆದಿದೆ. ಅಪಘಾತದಲ್ಲಿ ಇಬ್ಬರಿಗೆ ಗಾಯವಾಗಿದ್ದು ಅವರಿನ್ನ ಬೀಳಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಾರಾಷ್ಟ್ರ ಪಾಸಿಂಗ್ ಇರುವ ಕ್ರೂಸರ್ ಹಾಗೂ ವಿಜಯಪುರದಿಂದ ಹುಬ್ಬಳಿ ಮಾರ್ಗವಾಗಿ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಮುಖಾಮುಖಿ...

ಕಾರವಾರ ಬಸ್ ನಿಲ್ದಾಣದಲ್ಲಿ ಓವರ್‍ ಟೇಕ್ ಗಲಾಟೆ: KSRTC ಚಾಲಕನಿಗೆ ಖಾಸಗಿ ಬಸ್ ಸಿಬ್ಬಂದಿಯಿಂದ ಥಳಿತ

2 months ago

ಕಾರವಾರ: ಓವರ್‍ಟೇಕ್ ಮಾಡಿದ್ದನ್ನ ಪ್ರಶ್ನಿಸಿದ್ದ ಕೆಎಸ್‍ಆರ್‍ಟಿಸಿ ಬಸ್ ಚಾಲಕರಿಗೆ ಖಾಸಗಿ ಬಸ್ ಚಾಲಕ ಹಾಗೂ ಏಜೆಂಟ್ ಥಳಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ. ಚಂದ್ರಹಾಸ್ ಬೀಸನಳ್ಳಿ ಹಾಗೂ ಏಕನಾಥ್ ಎಂಬವರು ಹಲ್ಲೆಗೊಳಗಾದ ಬಸ್...

ಬಸ್, ಟ್ರ್ಯಾಕ್ಟರ್ ನಡುವೆ ಡಿಕ್ಕಿ- ಕೆರೆಗೆ ಉರುಳಿದ ಬಸ್

2 months ago

ಕೋಲಾರ: ಜಿಲ್ಲೆಯ ಮುಳಬಾಗಿಲು ರಾಷ್ಟ್ರೀಯ ಹೆದ್ದಾರಿ 75ರ ನರಸಿಂಹ ತೀರ್ಥ ಬಳಿ ಬಸ್ ಮತ್ತು ಟ್ರ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿದ್ದು, ಆಯ ತಪ್ಪಿದ ಬಸ್ ರಸ್ತೆ ಪಕ್ಕದ ಕೆರೆಗೆ ಉರುಳಿದೆ. ಬಸ್‍ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟ್ರ್ಯಾಕ್ಟರನಲ್ಲಿದ್ದ ಚಂದ್ರಪ್ಪ ಹಾಗೂ ಭೂಲಕ್ಷ್ಮಮ್ಮ...

ವರ್ಗಾವಣೆಯಾದ್ರೂ ವಸತಿ ಗೃಹ ಖಾಲಿ ಮಾಡ್ತಿಲ್ಲ ಐಎಎಸ್ ಅಧಿಕಾರಿ ಕಠಾರಿಯಾ

2 months ago

– 5 ಬಾರಿ ನೊಟೀಸ್ ಕೊಟ್ರೂ ಡೋಂಟ್‍ಕೇರ್ ಬೆಂಗಳೂರು: ಐಎಎಸ್ ಅಧಿಕಾರಿಯೊಬ್ಬರು ಬೇರೆ ಇಲಾಖೆಗೆ ವರ್ಗಾವಣೆ ಆದ್ರು. ಇಲಾಖೆ ನೀಡಿದ್ದ ಪದಾಂಕಿತ ವಸತಿ ಗೃಹವನ್ನು ಖಾಲಿ ಮಾಡಿಲ್ಲ. ವಸತಿ ಗೃಹವನ್ನು ಖಾಲಿ ಮಾಡುವಂತೆ ಇಲಾಖೆಯಿಂದ ಐದು ಬಾರಿ ನೋಟಿಸ್ ನೀಡಿದ್ರೂ ಅಧಿಕಾರಿ...

KSRTC ಬಸ್ಸಿಗೆ ಕಾರ್ ಡಿಕ್ಕಿ: ಸ್ಥಳದಲ್ಲೇ ಇಬ್ಬರ ಸಾವು

2 months ago

ಕಾರವಾರ: ಕಾರಿನ ಟೈರ್ ಸ್ಫೋಟಗೊಂಡು ಎದುರಿನಿಂದ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರೋ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ದಿವಗಿ ಬಳಿ ನಡೆದಿದೆ. ಕಾರಿನ ಚಾಲಕ ಪ್ರಸನ್ನ(45) ಕಾರಿನಲ್ಲಿದ್ದ...

ಕರ್ನಾಟಕ ಬಂದ್‍ಗೆ ನೀರಸ ಪ್ರತಿಕ್ರಿಯೆ: ಬೆಂಗ್ಳೂರಲ್ಲಿ ಎಂದಿನಂತೆ ಬಿಎಂಟಿಸಿ ಬಸ್‍ಗಳ ಓಡಾಟ

4 months ago

– ಆಟೋ, ಟ್ಯಾಕ್ಸಿ ಸಂಚಾರ ಮಾಮೂಲು – ಬೆಂಗಳೂರಲ್ಲಿಂದು ಸಿನಿಮಾ ಪ್ರದರ್ಶನ ಅನುಮಾನ ಬೆಂಗಳೂರು: ಬಯಲು ಸೀಮೆಗೆ ಶಾಶ್ವತ ನೀರಾವರಿ, ಮಹದಾಯಿ-ಕಳಸಾ ಬಂಡೂರಿ ಯೋಜನೆಯ ತ್ವರಿತ ಜಾರಿ, ಮೇಕೆದಾಟು ಯೋಜನೆ ಜಾರಿ, ರೈತರ ಸಾಲ ಮನ್ನಾ ಸೇರಿದಂತೆ ಹತ್ತಾರು ವಿಷಯಗಳನ್ನು ಮುಂದಿಟ್ಟುಕೊಂಡು...

ಕರ್ನಾಟಕ ಬಂದ್: ಸೋಮವಾರ ಏನಿರುತ್ತೆ? ಏನ್ ಇರಲ್ಲ ಇಲ್ಲಿದೆ ಪೂರ್ಣ ಮಾಹಿತಿ

4 months ago

ಬೆಂಗಳೂರು: ಕೋಲಾರ, ಚಿಕ್ಕಬಳ್ಳಾಪುರಕ್ಕೆ ಶಾಶ್ವತ ನೀರಾವರಿ ಮತ್ತು ಕಳಸ ಬಂಡೂರಿ ಯೋಜನೆಗೆ ಆಗ್ರಹಿಸಿ ಕೆಲ ಕನ್ನಡ ಸಂಘಟನೆಗಳು ಸೋಮವಾರ ಕರ್ನಾಟಕ ಬಂದ್‍ಗೆ ಕರೆ ನೀಡಿವೆ. ಆದರೆ ಕೆಲ ಸಂಘಟನೆಗಳು ಬಂದ್‍ನಿಂದಾಗಿ ನಷ್ಟ ಉಂಟಾಗುತ್ತದೆ ಎಂದು ಹೇಳಿ ಬೆಂಬಲ ನೀಡದೇ ಇರಲು ನಿರ್ಧರಿಸಿದೆ....