Wednesday, 22nd November 2017

Recent News

2 hours ago

ಕರ್ನಾಟಕದ ರಾಜಕಾರಣಕ್ಕೆ ಪ್ರಿಯಾಂಕ ಗಾಂಧಿ ಎಂಟ್ರಿ!

ನವದೆಹಲಿ: ಕಾಂಗ್ರೆಸ್ ಪಕ್ಷದ ಪಟ್ಟವನ್ನು ಡಿಸೆಂಬರ್ ನಲ್ಲಿ ರಾಹುಲ್ ಗಾಂಧಿ ಅಲಂಕರಿಸಲು ಸಿದ್ಧತೆ ನಡೆಯುತ್ತಿರುವ ಬೆನ್ನಲ್ಲೇ, ಪ್ರಿಯಾಂಕ ಗಾಂಧಿ ಅವರಿಗೂ ಪಕ್ಷದ ಪ್ರಮುಖ ಸ್ಥಾನವನ್ನು ನೀಡಲು ಎಐಸಿಸಿ ಮುಂದಾಗಿದೆ. ಮುಂದಿನ ವರ್ಷ ಕರ್ನಾಟಕ, ರಾಜಸ್ಥಾನದಲ್ಲಿ ಚುನಾವಣೆ ನಡೆಯಲಿದ್ದು, ಈ ಎರಡು ರಾಜ್ಯಗಳ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಮಹತ್ವವಾಗಿದೆ. ಚುನಾವಣೆಯಲ್ಲಿ ಗೆಲುವು ಪಡೆಯುವ ದೃಷ್ಟಿಯಿಂದ ರಾಜಸ್ಥಾನ ಅಥವಾ ಕರ್ನಾಟಕ ಚುನಾವಣಾ ಜವಾಬ್ದಾರಿಯನ್ನು ಪ್ರಿಯಾಂಕ ಗಾಂಧಿ ಅವರಿಗೆ ವಹಿಸಲು ಪಕ್ಷದ ಹಿರಿಯ ನಾಯಕರು ಸಲಹೆ ನೀಡಿದ್ದಾರೆ ಎಂಬುದಾಗಿ ಮಾಧ್ಯಮವೊಂದು ವರದಿ […]

22 hours ago

ಕೆಪಿಎಂಇ ಮಸೂದೆ ಮಂಡನೆ: ಮೂಲ ಮಸೂದೆಯಲ್ಲಿ ಏನಿತ್ತು? ಈಗ ಬದಲಾಗಿದ್ದು ಏನು?

ಬೆಳಗಾವಿ: ವೈದ್ಯರ ಟೀಕೆಗೆ ಗುರಿಯಾಗಿದ್ದ ಕರ್ನಾಟಕ ಖಾಸಗಿ ಆಸ್ಪತ್ರೆಗಳ ತಿದ್ದುಪಡಿ ಮಸೂದೆ(ಕೆಪಿಎಂಇ) ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಖಾಸಗಿ ವೈದ್ಯರ ಮುಷ್ಕರದಿಂದ 60ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ ಕೆಪಿಎಂಇ ತಿದ್ದುಪಡಿ ಮಸೂದೆಯನ್ನು ವಿಧಾನಸಭೆಯಲ್ಲಿ ಆರೋಗ್ಯ ಸಚಿವ ರಮೇಶ್ ಕುಮಾರ್ ಹಠ ಸಾಧಿಸಿ ಕೊನೆಗೂ ಮಂಡಿಸಿದ್ದಾರೆ. ಮಸೂದೆಯಲ್ಲಿರುವ ಪ್ರಮುಖ ಅಂಶಗಳು: ಮೂಲ ಮಸೂದೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ರೋಗಿ ಮೃತಪಟ್ಟರೆ...

ಬುದ್ಧಿವಂತರಾದ ನಿಮಗೆ ಸಾಮಾನ್ಯ ಜ್ಞಾನ ಇಲ್ಲವೇ? ಹೈಕೋರ್ಟ್ ಖಾಸಗಿ ವೈದ್ಯರಿಗೆ ಚಾಟಿ ಬೀಸಿದ್ದು ಹೀಗೆ

5 days ago

ಬೆಂಗಳೂರು: ಖಾಸಗಿ ಆಸ್ಪತ್ರೆಗಳ ವೈದ್ಯರು ತಕ್ಷಣವೇ ಮುಷ್ಕರವನ್ನು ಕೈಬಿಟ್ಟು ಸೇವೆಗೆ ಹಾಜರಾಗುವಂತೆ ಹೈಕೋರ್ಟ್ ಮಧ್ಯಂತರ ಆದೇಶ ಪ್ರಕಟಿಸಿದೆ. ವೈದ್ಯರ ಮುಷ್ಕರ ಪ್ರಶ್ನಿಸಿ ಹೈಕೋರ್ಟ್ ವಕೀಲರಾದ ಎನ್.ಪಿ.ಅಮೃತೇಶ್, ಜಿ.ಆರ್.ಮೋಹನ್ ಹಾಗೂ ಆದಿನಾರಾಯಣ ಎಂಬುವರು ಸಲ್ಲಿಸಿದ್ದ ಮೂರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಶುಕ್ರವಾರ...

ಖಾಸಗಿ ವೈದ್ಯರ ಜೊತೆಗಿನ ಸಿಎಂ ಸಂಧಾನ ಸಭೆ ಯಶಸ್ವಿಯಾಗಿದ್ದು ಹೇಗೆ?

5 days ago

ಬೆಳಗಾವಿ: ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಕಾಯ್ದೆಗೆ ಸಂಬಂಧಪಟ್ಟಂತೆ ಸಿಎಂ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು, ವೈದ್ಯರು ಮುಷ್ಕರವನ್ನು ಹಿಂದಕ್ಕೆ ಪಡೆದಿದ್ದಾರೆ. ಕನ್ನಡ ಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಕೆಪಿಎಂಇ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಷ್ಕರ ನಡೆಸುತ್ತಿರುವ ಖಾಸಗಿ ವೈದ್ಯರ ಮುಖಂಡರೊಂದಿಗೆ ಮಾತುಕತೆ...

69 ದಿನಗಳಲ್ಲಿ ಬರೋಬ್ಬರಿ 10 ಲಕ್ಷ ಕಾಂಡೋಮ್ ಮಾರಾಟ-ಕರ್ನಾಟಕ ರಾಜ್ಯದ್ದು ಸಿಂಹಪಾಲು

1 week ago

ಬೆಂಗಳೂರು: ಭಾರತದಲ್ಲಿ ಕಾಂಡೋಮ್ ಬಳಕೆಯ ಮೇಲಿನ ವೆಚ್ಚ ಕಡಿಮೆ ಇದ್ದರೂ, ಆದರೆ ಕೇವಲ ಶೇಕಡಾ 5ರಷ್ಟು ಜನರು ಮಾತ್ರ ಜನನ ಪ್ರಮಾಣ ತಗ್ಗಿಸಲು ನಿರೋಧ ಬಳಕೆ ಮಾಡುತ್ತಾರೆ. ಹೀಗಾಗಿ ಆನ್‍ಲೈನ್ ನಲ್ಲಿ ಕಾಂಡೋಮ್ ಉಚಿತ ಮಾರಾಟ ಮಳಿಗೆಯನ್ನು ಆರಂಭಿಸಲಾಗಿತ್ತು. ಏಪ್ರಿಲ್ 28ರಂದು...

ಬೆಂಗಳೂರಿನ ಪರಿವರ್ತನಾ ಯಾತ್ರೆ ಫೇಲ್ಯೂರ್: 1 ವಾರದ ಒಳಗಡೆ ವರದಿ ನೀಡುವಂತೆ ಶಾ ತಾಕೀತು

2 weeks ago

ಬೆಂಗಳೂರು: ಬೆಂಗಳೂರಿನ ಪರಿವರ್ತನಾ ಯಾತ್ರೆ ಪ್ಲ್ಯಾನ್ ಫೇಲ್ಯೂರ್ ಆಗಿದ್ದು ಯಾಕೆ? ಇದರ ಬಗ್ಗೆ ಸಮಗ್ರ ವಿವರ ನೀಡುವಂತೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚಿಸಿದ್ದಾರೆ. ಫೇಲ್ಯೂರ್ ಗೆ ನಾಯಕರು ಕಾರಣವೇ? ಎಡವಟ್ಟು ಪ್ಲ್ಯಾನ್ ಮಾಡಿದ್ದೇ ಕಾರಣವೇ? ಎಲ್ಲಿ ತಪ್ಪಾಗಿದೆ? ಯಾರಿಂದ ತಪ್ಪಾಗಿದೆ...

ಬಿಜೆಪಿ ಹೆಸರಲ್ಲಿ ಕನ್ನಡ ವಿರೋಧಿ ಟ್ವೀಟ್!

2 weeks ago

ಬೆಂಗಳೂರು: ಬಿಜೆಪಿ ಹೆಸರಲ್ಲಿ ಕನ್ನಡ ವಿರೋಧಿ ಟ್ವೀಟ್ ಒಂದು ಸಾಮಾಜಿಕ ಜಾಲತಾಣದದಲ್ಲಿ ವೈರಲ್ ಆಗುತ್ತಿದೆ. ಕರ್ನಾಟಕ, ಕೇರಳ ನಡುವೆ ತುಳುನಾಡು ಹಂಚಿ ಹೋಗಿದ್ದು, ಕರ್ನಾಟಕ ರಾಜ್ಯೋತ್ಸವ ತುಳುನಾಡಿನ ಪಾಲಿಗೆ ಕರಾಳ ದಿನಾಚರಣೆ ಎಂದು `@Bjp4Tulunad ಹೆಸರಿನ ಟ್ವಿಟ್ಟರ್ ಖಾತೆಯೊಂದು ಟ್ವೀಟ್ ಮಾಡಿತ್ತು....

ವಿಧಾನಸಭೆ ಚುನಾವಣೆ ಗೆಲ್ಲಲು ಸರ್ಕಾರದಿಂದ ಖಾಕಿ ಅಧಿಕಾರ ದುರ್ಬಳಕೆ?

2 weeks ago

ಬೆಂಗಳೂರು: ಬಿಜೆಪಿಯ ಪರಿವರ್ತನಾ ಯಾತ್ರೆಗೆ ಬ್ರೇಕ್ ಹಾಕಲು ಮೊದಲ ದಿನವೇ ಐಪಿಎಸ್ ಅಧಿಕಾರಿಗಳ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಇದೀಗ ಪೊಲೀಸರಿಗೆ ಮತ್ತೊಂದು ಕೆಲಸ ನೀಡಿದ್ದಾರೆ ಎನ್ನುವ ವಿಚಾರ ಲಭ್ಯವಾಗಿದೆ. ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಲೀಡರ್‍ಗಳನ್ನು ಫಾಲೋ ಮಾಡಿ ಡೀಟೈಲ್ಸ್ ಕೊಡಿ...