Tuesday, 17th October 2017

Recent News

1 day ago

ಮತದಾರರಿಗೆ ಆಮಿಷ ಒಡ್ಡಿದ್ರಾ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಗೋವಿಂದ ರಾಜು?

ತುಮಕೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಗೂ ಮುನ್ನವೇ ಮತದಾರರನ್ನು ಒಲೈಸಲು ರಾಜಕೀಯ ನಾಯಕರು ಮುಂದಾಗಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ತುಮಕೂರಿನಲ್ಲಿ ಚುನಾವಣೆಗೆ ಮುನ್ನವೇ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಗೋವಿಂದರಾಜು ಮತದಾರರಿಗೆ ಆಮಿಷ ಒಡ್ಡುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ತಮ್ಮ ಕ್ಷೇತ್ರದ ಮಹಿಳೆಯರಿಗೆ ಸೀರೆ ಹಾಗೂ ಹಣವನ್ನು ಕೊಡುವುದಲ್ಲದೇ ಮತದಾರರನ್ನು ಗುಬ್ಬಿ ದೇವರಾಯನ ದುರ್ಗ ದೇವಾಲಯಕ್ಕೆ ಕರೆದುಕೊಂಡು ಹೋಗಿ ಆಣೆ ಪ್ರಮಾಣಗಳನ್ನು ಮಾಡಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದೇ ರೀತಿ ತುಮಕೂರು ನಗರದ ಕುರಿಪಾಳ್ಯದ ಮಹಿಳೆಯರನ್ನು ಕರೆದುಕೊಂಡು […]

2 days ago

ಜೆಡಿಎಸ್ ನಲ್ಲಿ ಟಿಕೆಟ್‍ಗಾಗಿ ರೇವಣ್ಣಗೂ ಅರ್ಜಿ ಹಾಕುವ ದುರ್ಗತಿ – ಜಮೀರ್ ಹೇಳಿಕೆ ವಿರುದ್ಧದ ಟೀಕೆಗಳು ವೈರಲ್

ಕೋಲಾರ: ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡರು ಇರೋವರೆಗೆ ಮಾತ್ರ ಜನತಾದಳ ಪಕ್ಷ ಇರುತ್ತೆ. ಆಮೇಲೆ ಜ್ಯಾತ್ಯಾತೀತ ಜನತಾದಳ ಉಳಿಯಲು ಸಾಧ್ಯವಿಲ್ಲ ಅಂತಾ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್ ಮತ್ತೆ ಹೇಳಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, ಜೆಡಿಎಸ್‍ನಲ್ಲಿ ಹೆಚ್.ಡಿ. ರೇವಣ್ಣನವರೇ ಟಿಕೆಟ್‍ಗಾಗಿ ಅರ್ಜಿ ಹಾಕಿಕೊಳ್ಳುವ ಪರಿಸ್ಥಿತಿ ಇದೆ. ಇತ್ತೀಚಿಗಿನ ರೇವಣ್ಣ ಮಾತು ಕುಮಾರಸ್ವಾಮಿಯವರನ್ನೇ ಟಾರ್ಗೆಟ್ ಮಾಡಿದಂತಿದೆ...

ಪ್ರತಿಭಟನೆ ವೇಳೆ ದೇವೇಗೌಡ್ರ ಎದುರೇ ಕೈಕೈ ಮಿಲಾಯಿಸಿದ ಜೆಡಿಎಸ್ ಕಾರ್ಯಕರ್ತರು

1 week ago

ಹಾಸನ: ನೀರಾವರಿ ಹೋರಾಟದ ಸ್ಥಳಕ್ಕೆ ಮಾಜಿ ಪ್ರಧಾನಿ ದೇವೇಗೌಡರು ಭೇಟಿ ನೀಡಿದ್ದ ವೇಳೆ ಜೆಡಿಎಸ್ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದಿರುವ ಘಟನೆ ಹಾಸನದಲ್ಲಿ ನಡೆದಿದೆ. ಬೇಲೂರು ತಾಲೂಕಿನ ರಣಘಟ್ಟ ಒಡ್ಡು ಬಳಿ ಈ ಘಟನೆ ನಡೆದಿದೆ. ಜೆಡಿಎಸ್ ಹಿರಿಯ ನಾಯಕರಾದ ದೇವೇಗೌಡರು...

ಜಮೀರ್ ಅಹಮದ್ ಸಾಹೇಬ್ರು ಭವಿಷ್ಯದ ಒಬ್ಬ ಮುಸ್ಲಿಂ ನಾಯಕ: ಜಿ.ಪರಮೇಶ್ವರ್

2 weeks ago

ತುಮಕೂರು: ಜಮೀರ್ ಅಹಮದ್ ಸಾಹೇಬರು ಭವಿಷ್ಯದ ಒಬ್ಬ ಮುಸ್ಲಿಂ ನಾಯಕ. ಮುಂದೆ ಈ ರಾಜ್ಯದಲ್ಲಿ ಮುಸ್ಲಿಮರ ಕಷ್ಟ-ದುಃಖಗಳಿಗೆ ಸ್ಪಂದಿಸುವ ಏಕೈಕ ನಾಯಕರಾಗಿ ಹೊರಹೊಮ್ಮುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊರಟಗೆರೆ ತಾಲೂಕಿನ ಅಕ್ಕಿರಾಂಪುರದಲ್ಲಿ ನಡೆದ ಉರುಸ್ ಕಾರ್ಯಕ್ರಮದಲ್ಲಿ ಪರಮೇಶ್ವರ್...

2018ರ ಚುನಾವಣೆಯೇ ಕೊನೆ, ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧೆ: ಸಿಎಂ

2 weeks ago

ಮೈಸೂರು: 2018ನೇ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಇದು ನನ್ನ ಕೊನೆಯ ಚುನಾವಣೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನ ಹೂಟಗಳ್ಳಿಯ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ಬಾರಿಯೇ ನಾನು ಚುನಾವಣೆಯಿಂದ ದೂರ ಇರಬೇಕು ಅಂದುಕೊಂಡಿದ್ದೆ. ಆದರೆ ಹೈಕಮಾಂಡ್ ಒತ್ತಾಯದ...

ಸಿಎಂ ಗಾದಿಗಾಗಿ ಚಾಮುಂಡೇಶ್ವರಿ ಜಪ ಮಾಡತೊಡಗಿದ ನಾಯಕರು

2 weeks ago

ಬೆಂಗಳೂರು: ಚುನಾವಣೆ ನಡೆಯುವ ಮೊದಲೇ ಕರ್ನಾಟಕದಲ್ಲಿ ಮೂರು ಪಕ್ಷದ ನಾಯಕರು ಮಾತ್ರ 2018ರಲ್ಲಿ ರಾಜ್ಯದ ಮುಖ್ಯಮಂತ್ರಿ ನಾನೇ ಆಗುತ್ತೇನೆ ಎಂದು ಹೇಳಿ ಚಾಮುಂಡಿ ಮಾತೆಯ ಜಪ ಮಾಡಲು ಮುಂದಾಗಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆ ಮುಂದಿನ ದಸರೆಗೆ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ ಎಂದು ಹೇಳಿದ್ದರೆ, ಸಿಎಂ...

ಭಾಷಣದುದ್ದಕ್ಕೂ ಜೆಡಿಎಸ್ ಶಾಸಕ ತಿಮ್ಮರಾಯಪ್ಪರಿಗೆ ಕಾಮಿಡಿ ಪಂಚ್ ಕೊಟ್ಟ ಸಿಎಂ

3 weeks ago

ತುಮಕೂರು: ಪಾವಗಡದ ತಿರುಮಣಿ ಸೋಲಾರ್ ಪಾರ್ಕ್ ವೀಕ್ಷಣೆ ಸಂದರ್ಭದ ಕಾರ್ಯಕ್ರಮದಲ್ಲಿ ತಮ್ಮ ಭಾಷಣದುದ್ದಕ್ಕೂ ಸಿಎಂ ಸಿದ್ದರಾಮಯ್ಯ ಅವರು ಜೆಡಿಎಸ್ ಶಾಸಕ ತಿಮ್ಮರಾಯಪ್ಪರನ್ನು ಕಿಚಾಯಿಸಿದ್ದಾರೆ. ಪದೇ ಪದೇ ತಿಮ್ಮರಾಯಪ್ಪರ ಹೆಸರನ್ನು ಪ್ರಸ್ತಾಪಿಸಿ ಕಾಮಿಡಿ ಪಂಚ್ ನೀಡಿದ್ದಾರೆ. ತುಂಗಭದ್ರಾ ನೀದಿಯ ಯೋಜನೆ ಕುರಿತಂತೆ ಪ್ರಸ್ತಾಪಿಸಿದ...

ದೇವೇಗೌಡರ ಆತ್ಮಚರಿತ್ರೆ ಬಿಡುಗಡೆಯಾದ್ರೆ ರಾಷ್ಟ್ರೀಯ ಪಕ್ಷಗಳ ಬಣ್ಣ ಬಯಲಾಗುತ್ತೆ: ವೈಎಸ್‍ವಿ ದತ್ತಾ

3 weeks ago

ರಾಯಚೂರು: ಇದೇ ನವೆಂಬರ್ ತಿಂಗಳಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಆತ್ಮಚರಿತ್ರೆ ಬಿಡುಗಡೆಯಾಗಲಿದ್ದು, ಸಾಕಷ್ಟು ಸ್ಫೋಟಕ ಮಾಹಿತಿಗಳು ಬೆಳಕಿಗೆ ಬರಲಿವೆ ಎಂದು ಜೆಡಿಎಸ್ ವಕ್ತಾರ ವೈಎಸ್‍ವಿ ದತ್ತಾ ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ದತ್ತಾ, ಗೌಡರ ಆತ್ಮಚರಿತ್ರೆ ತಾವೇ ಬರೆಯುತ್ತಿದ್ದು ಅನೇಕ ರಾಜಕಾರಣಿಗಳ ವಾಸ್ತವ...