Sunday, 22nd April 2018

Recent News

3 days ago

ಲಾರಿ, ಬುಲೆರೋ, ಟಾಟಾ ಏಸ್ ನಡುವೆ ಸರಣಿ ಅಪಘಾತ – ಮೂವರ ದುರ್ಮರಣ

ರಾಯಚೂರು: ಲಾರಿ, ಬುಲೆರೋ ಹಾಗೂ ಟಾಟಾ ಏಸ್ ನಡುವೆ ಸರಣಿ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಸ್ಕಿಯಲ್ಲಿ ನಡೆದಿದೆ. ಟಾಟಾ ಏಸ್ ಚಾಲಕ ಲಕ್ಷ್ಮಣ್ ಕಾಟಗಿಹಳ್ಳಿ(40), ಬಸವರಾಜ್ (30) ಮತ್ತು ಶಿವಲಿಂಗಪ್ಪ ಮೃತ ದುರ್ದೈವಿಗಳು. ಅಪಘಾತದಲ್ಲಿ ಮಾಬುಸಾಬ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಮಸ್ಕಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಸ್ಕಿಯ ಬೀದರ್ ಚಾಮರಾಜನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಿನ ಈ ಜಾವ ಅಪಘಾತ ಸಂಭವಿಸಿದ್ದು, ಚಾಲಕರ ಅತೀ ವೇಗ ಹಾಗೂ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ […]

5 days ago

ಡಿವೈಡರ್ ಗೆ ಡಿಕ್ಕಿ ಹೊಡೆದು ಬಸ್ ಪಲ್ಟಿ – 20ಕ್ಕೂ ಅಧಿಕ ಮಂದಿ ಗಂಭೀರ

ಶ್ರೀನಗರ: ಬಸ್ ಪಲ್ಟಿಯಾದ ಪರಿಣಾಮ 20ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ಈ ಘಟನೆ ಬರಾಮುಲ್ಲಾದ ಉರಿಯಲ್ಲಿರುವ ಶ್ರೀನಗರ-ಮುಜಫರಾಬಾದ್ ಹೆದ್ದಾರಿಯಲ್ಲಿ ಸಂಭವಿಸಿದೆ. ಎಸ್‍ಆರ್ ಟಿಸಿ ಬಸ್ ಇಂದು ಸಲಾಮಾಬಾದ್ ನಿಂದ ಉರಿಗೆ ಹೋಗುತ್ತಿತ್ತು. ಈ ವೇಳೆ ಶ್ರೀನಗರ-ಮುಜಫರಾಬಾದ್ ಹೆದ್ದಾರಿಯಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿದ್ದ ರಸ್ತೆಯ ಕಬ್ಬಿಣದ ಡಿವೈಡರ್...

ಫ್ಲೈ ಓವರ್ ಮೇಲೆ ನಿಂತಿದ್ದ ಟಾಟಾ ಏಸ್‍ಗೆ ಓಮ್ನಿ ಕಾರು ಡಿಕ್ಕಿಯಾಗಿ ಪಲ್ಟಿ – ನಾಲ್ವರು ಗಂಭೀರ

7 days ago

ಬೆಂಗಳೂರು: ಫ್ಲೈ ಓವರ್ ಮೇಲೆ ನಿಂತಿದ್ದ ಟಾಟಾ ಏಸ್‍ಗೆ ಓಮ್ನಿ ಕಾರು ಡಿಕ್ಕಿ ಹೊಡೆದು ಬಳಿಕ ಪಲ್ಟಿಯಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗದಲ್ಲಿ ನಡೆದಿದೆ. ಈ ಘಟನೆ ನೆಲಮಂಗಲದ ಸೊಂಡೆಕೊಪ್ಪ ಬೈಪಾಸ್ ಫ್ಲೈ ಓವರ್ ಮೇಲೆ ಸಂಭವಿಸಿದ್ದು, ಫ್ಲೈ ಓವರ್ ಮೇಲೆ...

ಮದ್ವೆಗೆ ಹೋಗುತ್ತಿದ್ದ ಐಷರಾಮಿ ಬಸ್, ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ – 9 ಮಂದಿ ದುರ್ಮರಣ

7 days ago

ಗಾಂಧಿನಗರ: ಐಷರಾಮಿ ಬಸ್ ಮತ್ತು ಟ್ರ್ಯಾಕ್ಟರ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ 9 ಮಂದಿ ಮೃತಪಟ್ಟಿದ್ದು, 15ಕ್ಕೂ ಅಧಿಕ ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್ ನ ಕುಚ್ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಕಂಕುಬೆನ್ ಅನವಾಡಿಯಾ (60), ಪಮಿಬೆನ್ ಅನವಾಡಿಯಾ...

ಎರಡು ಕುಟುಂಬಗಳ ನಡುವೆ ಕಲ್ಲು ಹಾಗೂ ದೊಣ್ಣೆಗಳಿಂದ ಮಾರಾಮಾರಿ – ವಿಡಿಯೋ

1 week ago

ಬೆಳಗಾವಿ: ಜಮೀನಿಗಾಗಿ ಎರಡು ಕುಟುಂಬಗಳ ಸದಸ್ಯರು ಕಲ್ಲು ಹಾಗೂ ದೊಣ್ಣೆಗಳಿಂದ ಹೊಡೆದಾಡಿಕೊಂಡ ಘಟನೆ ರಾಯಬಾಗ ತಾಲ್ಲೂಕಿನ ಬೆಕ್ಕೇರಿ ಗ್ರಾಮದಲ್ಲಿ ನಡೆದಿದೆ. ಮಾಯಪ್ಪ ಪಾಯಪ್ಪಗೋಳ ಹಾಗೂ ರಾಮ ಪಾಯಪ್ಪಗೋಳ ಕುಟುಂಬದ ಸುಮಾರು 15ಕ್ಕೂ ಹೆಚ್ಚು ಮಂದಿ ಹೊಡೆದಾಡಿಕೊಂಡಿದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, 6...

ಮಹಾರಾಷ್ಟ್ರದಲ್ಲಿ ಬ್ಯಾರಿಕೇಡ್‍ಗೆ ಡಿಕ್ಕಿ ಹೊಡೆದು ಟ್ರಕ್ ಪಲ್ಟಿ- ಮಹಿಳೆಯರು ಸೇರಿ ವಿಜಯಪುರದ 17 ಮಂದಿ ದುರ್ಮರಣ

2 weeks ago

ಮುಂಬೈ: ಮಹಾರಾಷ್ಟ್ರದಲ್ಲಿ ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸ ಮೆರೆದಿದ್ದು, ಟ್ರಕ್ ಹೆದ್ದಾರಿಯ ಬ್ಯಾರ್‍ಕೇಡ್ ಗೆ ಡಿಕ್ಕಿ ಹೊಡೆದು ನಂತರ ಪಲ್ಟಿಯಾದ ಪರಿಣಾಮ 17 ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಖಂಡಾಲಾದ ಬಳಿ ನಡೆದಿದೆ. ಘಟನೆಯಲ್ಲಿ ಹಲವು ಮಹಿಳೆಯರು ಸೇರಿ 17...

ಕಾರು, ಬೈಕ್ ಮುಖಾಮುಖಿ ಡಿಕ್ಕಿ- ಅಯ್ಯೋ ಕಾಪಾಡಿ ಎಂದು ಗಾಯಾಳು ಅಂಗಲಾಚಿದ್ದರು ಸುಮ್ಮನೇ ನಿಂತ ಜನ!

2 weeks ago

ಹಾಸನ: ಕಾರು-ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಕಾಲು ಮುರಿದುಕೊಂಡು ಗಂಟೆಗಟ್ಟಲೆ ನರಳಾಡಿದರೂ ಯಾರೊಬ್ಬರು ನೆರವಿಗೆ ಬಾರದೆ ಅಮಾನವೀಯತೆ ತೋರಿದ ಘಟನೆ ಹಾಸನ ಜಿಲ್ಲೆ ಆಲೂರು ಬಳಿ ನಡೆದಿದೆ. ಪ್ರಸನ್ನ ಅಪಘಾತದಲ್ಲಿ ಕಾಲು ಮುರಿದುಕೊಂಡ ಬೈಕ್ ಸವಾರ. ಬೇಲೂರು ತಾಲೂಕು...

ವೇಗವಾಗಿ ಬಂದು ತಪಾಸಣಾ ಗೇಟ್ ಗೆ ಡಿಕ್ಕಿ ಹೊಡೆಯಿತು ಲಾರಿ – ಪಾಲಕನಿಗೆ ಗೇಟ್ ಬಡಿಯೋದನ್ನು ನೋಡಿ

2 weeks ago

ಮಡಿಕೇರಿ: ರಭಸದಿಂದ ಬಂದ ಲಾರಿಯೊಂದು ಅರಣ್ಯ ತಪಾಸಣಾ ಗೇಟ್ ಗೆ ಡಿಕ್ಕಿ ಹೊಡೆದು ಆ ಗೇಟ್ ಪಾಲಕನಿಗೆ ಬಡಿದ ಘಟನೆ ಕೊಡಗು ಜಿಲ್ಲೆಯ ಸಂಪಾಜೆಯಲ್ಲಿ ನಡೆದಿದೆ. ರಾಜಪ್ಪ ಗಂಭೀರವಾಗಿ ಗಾಯಗೊಂಡಿದ್ದ ಗೇಟ್ ಪಾಲಕ. ರಾಜಪ್ಪ ಅರಣ್ಯ ಇಲಾಖೆಯ ಹಂಗಾಮಿ ನೌಕರನಾಗಿದ್ದು ಗೇಟ್...