Monday, 25th September 2017

Recent News

2 weeks ago

ಹುಲಿಯ ಘರ್ಜನೆಯಿಂದ ಹೃದಯಾಘಾತವಾಗಿ 12 ಕೋತಿಗಳು ಒಮ್ಮೆಲೆ ಸಾವು

ಲಕ್ನೋ: ಹುಲಿಯ ಘರ್ಜನೆ ಕೇಳಿ ಹೃದಯಾಘಾತಕ್ಕೊಳಗಾಗಿ 12 ಕೋತಿಗಳು ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. 12 ಕೋತಿಗಳು ಸತ್ತು ಬಿದ್ದಿರುವುದನ್ನ ಸ್ಥಳೀಯರು ನೋಡಿದ್ದರು. ಕೋತಿಗಳ ಸಾಮೂಹಿಕ ಸಾವು ನೋಡಿ ಗಾಬರಿಯಾಗಿದ್ರು. ಕೋತಿಗಳಿಗೆ ವಿಷ ಹಾಕಿ ಕೊಲ್ಲಲಾಗಿದೆ ಎಂಬ ಅನುಮಾನದ ಮೇಲೆ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಾವನ್ನಪ್ಪಿರುವ ಎಲ್ಲಾ ಕೋತಿಗಳಿಗೂ ಒಂದೇ ಸಲಕ್ಕೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ. ಕೋಟ್ವಾಲಿ ಮೊಹಮ್ಮದ್ ಪ್ರದೇಶದ ಪಶುವೈದ್ಯರು ಈ ಬಗ್ಗೆ ತನಿಖೆ ನಡೆಸಿದ್ದಾರೆ. ಹೃದಯಾಘಾತದಿಂದ ಕೋತಿಗಳು ಸಾವನ್ನಪ್ಪಿರುವುದು ಮರಣೋತ್ತರ ಪರೀಕ್ಷೆಯಿಂದ ಗೊತ್ತಾಗಿದೆ. ಈ […]

2 weeks ago

ಆತ್ಮಹತ್ಯೆ ಮಾಡಿಕೊಂಡ ರೈತನಿಗೆ ಪರಿಹಾರ ಕೊಡದೇ ಸತಾಯಿಸ್ತಿದ್ದಾರೆ ಅಧಿಕಾರಿಗಳು!

ನೆಲಮಂಗಲ: ಆತ್ಮಹತ್ಯೆ ಮಾಡಿಕೊಂಡಿದ್ದ ರೈತನ ಕುಟುಂಬಕ್ಕೆ ಪರಿಹಾರದ ಭರವಸೆ ನೀಡಿದ್ದ ಅಧಿಕಾರಿಗಳು ಈಗ ಕುಂಟು ನೆಪ ಹೇಳಿ ಕಚೇರಿಯಿಂದ ಮನೆಗೆ, ಮನೆಯಿಂದ ಕಚೇರಿಗೆ ಅಲೆದಾಡಿಸುತ್ತಿರುವ ಪ್ರಸಂಗ ಬೆಳಕಿಗೆ ಬಂದಿದೆ. ನೆಲಮಂಗಲ ತಾಲೂಕಿನ ಅರಳೇದಿಬ್ಬದ ನಿವಾಸಿ ಹನುಮಯ್ಯ ಎಂಬುವವರು ಸಹಕಾರಿ ಬ್ಯಾಂಕ್‍ನಲ್ಲಿ ಕೃಷಿಗಾಗಿ 25 ಸಾವಿರ ರೂಪಾಯಿ ಸಾಲ ಮಾಡಿದ್ದರು. ತೀವ್ರ ಬರಗಾಲವಿದ್ದ ಹಿನ್ನೆಲೆಯಲ್ಲಿ ಬೆಳೆ ನಷ್ಟದಿಂದ...

ತಂಡ ಗೆಲ್ಲಿಸಿದ ಖುಷಿಗೆ ಹಾರ್ಟ್ ಆಟ್ಯಾಕ್: ಮೈದಾನದಲ್ಲೇ ಸಾವನ್ನಪ್ಪಿದ ಯುವ ಕ್ರಿಕೆಟಿಗ

2 months ago

ವಿಜಯಪುರ: ಕ್ರಿಕೆಟ್ ಮ್ಯಾಚ್ ಗೆದ್ದ ಖುಷಿಯಲ್ಲಿ ಯುವಕನೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಧಾರುಣ ಘಟನೆ ನಗರದ ಹರಣಶಿಕಾರಿ ಕಾಲೋನಿಯಲ್ಲಿ ನಡೆದಿದೆ.     25 ವರ್ಷದ ರಾಹುಲ್ ಚವ್ಹಾಣ್ ಮೃತ ಯುವಕ. ನಗರದಲ್ಲಿ ದುರ್ಗಾದೇವಿ ಜಾತ್ರೆ ಅಂಗವಾಗಿ ಕ್ರಿಕೆಟ್ ಪಂದ್ಯಾಟ ಹಮ್ಮಿಕೊಳ್ಳಲಾಗಿತ್ತು. ಟೂರ್ನಿಯಲ್ಲಿ...

ಯಾದಗಿರಿ ಪಂಚಾಯ್ತಿ ಉಪಚುನಾವಣೆ ಕರ್ತವ್ಯದಲ್ಲಿದ್ದ ಚುನಾವಣಾಧಿಕಾರಿ ಹೃದಯಘಾತದಿಂದ ಸಾವು

3 months ago

ಯಾದಗಿರಿ: ಯಾದಗಿರಿ ಪಂಚಾಯ್ತಿ ಉಪಚುನಾವಣೆಯ ಕರ್ತವ್ಯದಲ್ಲಿದ್ದ ಚುನಾವಣಾ ಅಧಿಕಾರಿ ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ಸುರಪೂರ ತಹಶೀಲ್ದಾರ್ ಕಚೇರಿಯಲ್ಲಿ ನಡೆದಿದೆ. ಆರ್.ಆನಂದ(58) ಎಂಬವರನ್ನ ಕೆಂಭಾವಿ ಉಪತಹಶೀಲ್ದಾರ್ ಉಪಚುನಾವಣೆಯ ಚುನಾವಣಾ ಅಧಿಕಾರಿಯಾಗಿ ನಿಯೋಜಿಸಲಾಗಿತ್ತು. ಇಂದು ಸುರಪುರ ತಹಶೀಲ್ದಾರ್ ಕಚೇರಿಯಲ್ಲಿ ಹದನೂರ ಗ್ರಾಮದ ವಾಡ್9 ನಂ....

ಆಹಾರವಿಲ್ಲದೆ, ಭಯದಿಂದ ಹೃದಯಘಾತವಾಗಿ ಸಾವನ್ನಪ್ಪಿದ ಚಿರತೆ

4 months ago

ಉಡುಪಿ: ಹಲವು ದಿನಗಳಿಂದ ಉಡುಪಿಯ ಕಾರ್ಕಳದಲ್ಲಿ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಚಿರತೆ ಹೃದಯಾಘಾತದಿಂದ. ಹಸಿದು, ಹೊಟ್ಟೆ ಖಾಲಿಯಾಗಿದ್ದ ಚಿರತೆ ಜೀವಭಯದಿಂದ ಸಾವನ್ನಪ್ಪಿರಬಹುದು ಎಂದು ಅರಣ್ಯಾಧಿಕಾರಿಗಳು ಮತ್ತು ಪಶುವೈದ್ಯರು ಮಾಹಿತಿ ನೀಡಿದ್ದಾರೆ. ಉಡುಪಿಯ ಕಾರ್ಕಳ ತಾಲೂಕಿನ ನಿಂಜೂರು ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಅಪ್ಪಿ...

ರಜೆ ಮೇಲೆ ಸ್ವಗ್ರಾಮಕ್ಕೆ ಅಗಮಿಸಿದ್ದ ಯೋಧ ಹೃದಯಾಘಾತದಿಂದ ಸಾವು

4 months ago

ಬಳ್ಳಾರಿ: ರಜೆ ಮೇಲೆ ಸ್ವಗ್ರಾಮಕ್ಕೆ ಆಗಮಿಸಿದ್ದ ಯೋಧರೊಬ್ಬರು ಹೃದಯಾಘಾತದಿಂದ ಇಂದು ಸಾವನ್ನಪ್ಪಿದ್ದಾರೆ. ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಹೊಳಲು ಗ್ರಾಮದ ನಿವಾಸಿ ಹಾಲಪ್ಪ ಮೃತ ಯೋಧ ರಜೆ ತೆಗೆದುಕೊಂಡು ಸೋಮವಾರ ಗ್ರಾಮಕ್ಕೆ ಆಗಮಿಸಿದ್ದ ಹಾಲಪ್ಪ ಇಂದು ಬೆಳಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇಂದು...

ಬಾಲಿವುಡ್ ಹಿರಿಯ ನಟಿ ರೀಮಾ ಲಗೂ ನಿಧನ

4 months ago

ಮುಂಬೈ: ಬಾಲಿವುಡ್ ನ ಹಿರಿಯ ನಟಿ ರೀಮಾ ಲಗೂ ನಿಧನ ಹೊಂದಿದ್ದಾರೆ. 59 ವಯಸ್ಸಿನ ರೀಮಾ ಅವರು ಇಂದು ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಬುಧವಾರ ರಾತ್ರಿ ಏಕಾಏಕಿಯಾಗಿ ಎದೆನೋವು ಕಾಣಿಸಿಕೊಂಡಿದ್ದು ಕೂಡಲೇ ಅವರನ್ನು ಕೋಕಿಲಾಬೆನ್ ಧೀರೂಬಾಯ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಅಂತಾ ಆಸ್ಪತ್ರೆಯ ಕಾರ್ಯನಿರ್ವಾಹಕ...

ಕೇಂದ್ರ ಸಚಿವ ಅನಿಲ್ ಮಾಧವ್ ದವೆ ನಿಧನ- ಪ್ರಧಾನಿ ಮೋದಿ ಸಂತಾಪ

4 months ago

ನವದೆಹಲಿ: ಕೇಂದ್ರ ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಅನಿಲ್ ಮಾಧವ್ ದವೆ ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ. 61 ವರ್ಷ ವಯಸ್ಸಿನ ಸಚಿವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಹೃದಯಾಘಾತವಾಗಿ, ಇಂದು...