Tuesday, 24th April 2018

Recent News

1 week ago

ಗಣಿತ ಸಮಸ್ಯೆ ಬಿಡಿಸಲಿಲ್ಲವೆಂದು 8 ವರ್ಷದ ಬಾಲಕನ ಗಂಟಲಿಗೆ ಕೋಲಿನಿಂದ ಚುಚ್ಚಿದ ಶಿಕ್ಷಕಿ

ಅಹ್ಮದ್‍ನಗರ: ಗಣಿತ ಸಮಸ್ಯೆ ಬಿಡಿಸಲಿಲ್ಲ ಎಂದು ಕೋಪಗೊಂಡ ಶಿಕ್ಷಕಿಯೋರ್ವಳು 8 ವರ್ಷದ ಬಾಲಕನ ಗಂಟಲಿಗೆ ಮರದ ಕೋಲಿನಿಂದ ಚುಚ್ಚಿದ ಆಘಾತಕಾರಿ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ. ಮಹಾರಾಷ್ಟ್ರದ ಪಿಂಪಲ್ಗಾಂವ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಈ ಘೋರ ಕೃತ್ಯ ನಡೆದಿದ್ದು, ಬಾಲಕ ರೋಹನ್ ಡಿ ಜಂಜೀರ್ ಹಲ್ಲೆಗೊಳಗಾದ ಬಾಲಕ. ಘಟನೆಯಿಂದ ರೋಹನ್ ನ ಅನ್ನನಾಳ ಮತ್ತು ವಾಯುನಾಳಗಳಿಗೆ ತೀವ್ರ ಏಟಾಗಿದ್ದು, ಸದ್ಯ ಮಾತನಾಡಲು ಸಾಧ್ಯವಾಗುತ್ತಿಲ್ಲ. ಶಿಕ್ಷಕಿ ಹಲ್ಲೆ ನಡೆಸಿದ ತಕ್ಷಣ ರೋಹನ್ ಗಂಟಲಿನಿಂದ ರಕ್ತಸ್ರಾವವಾಗಿದೆ. ಘಟನೆಯನ್ನು ಕಣ್ಣಾರೆ ಕಂಡ […]

2 months ago

ಪ್ರಾರ್ಥನಾ ಮಂದಿರವಾಯ್ತಾ ಶಿವಾಜಿನಗರ ಸರ್ಕಾರಿ ಶಾಲೆ?- ಶಾಲೆಯಲ್ಲಿ ಪ್ರತಿದಿನ ನಡೆಯುತ್ತೆ ಸಾಮೂಹಿಕ ಪ್ರಾರ್ಥನೆ

ಬೆಂಗಳೂರು: ನಗರದ ಶಿವಾಜಿನಗರ ಸರ್ಕಾರಿ ಶಾಲೆಯನ್ನು ಧಾರ್ಮಿಕ ಪ್ರಾರ್ಥನಾ ಮಂದಿರದಂತೆ ಬದಲಾವಣೆ ಮಾಡಿರುವ ಆರೋಪ ಕೇಳಿಬಂದಿದೆ. ಸರ್ಕಾರಿ ಶಾಲೆಯಲ್ಲಿ ನಿಯಮದಂತೆ ಪಾಠ, ಪ್ರವಚನ ಹಾಗೂ ಶೈಕ್ಷಣಿಕ ಚಟುವಟಿಕೆ ನಡೆಯಬೇಕು. ಆದರೆ ಶಿವಾಜಿನಗರದ ಸರ್ಕಾರಿ ಶಾಲೆಯನ್ನು ಅಲ್ಪಸಂಖ್ಯಾತ ಪ್ರಾರ್ಥನಾ ಮಂದಿರದಂತೆ ಮಾಡಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಪ್ರಸ್ತುತ ಶಿವಾಜಿನಗರದ ಸರ್ಕಾರಿ ಶಾಲೆಯನ್ನು ಸಂಸ್ಥೆಯೊಂದು ದತ್ತು ಪಡೆದುಕೊಂಡಿದೆ. ದತ್ತು ಪಡೆದುಕೊಂಡ...

ಮಕ್ಕಳ ದಿನಾಚರಣೆ ಅಂಗವಾಗಿ ವಿಜಯಪುರ ಸರ್ಕಾರಿ ಶಾಲೆಯ ಮಕ್ಕಳಿಗೆ ಬಂಪರ್ ಗಿಫ್ಟ್

5 months ago

ವಿಜಯಪುರ: ಖಾಸಗಿ ಶಾಲೆಗಳ ಭರಾಟೆಯಲ್ಲಿ ಸರ್ಕಾರಿ ಶಾಲೆಗಳು ವಿಮುಕ ಆಗಿ ಹೊರಟಿವೆ. ಸರ್ಕಾರಿ ಶಾಲೆಗಳಿಗೆ ಜನರು ತಮ್ಮ ಮಕ್ಕಳನ್ನು ಸೇರಿಸಲು ಹಿಂದೇಟು ಹಾಕುತ್ತಾರೆ. ಆದರೆ ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಸಚಿವ ಎಂ.ಬಿ.ಪಾಟೀಲ್ ಪ್ಲಾನ್ ಮಾಡಿದ್ದಾರೆ. ಸಾಮಾನ್ಯವಾಗಿ ಮಕ್ಕಳ ದಿನಾಚರಣೆ ಬಂದಾಗ...

2 ಕೊಠಡಿಗಳಿರುವ ಶಾಲೆಯಲ್ಲಿ 1-5 ತರಗತಿವರೆಗೆ ಶಿಕ್ಷಣ: ಜೀವಭಯದಲ್ಲೇ ಪಾಠ ಕೇಳ್ತಿದ್ದಾರೆ ಮಕ್ಕಳು

6 months ago

ಬೆಂಗಳೂರು: ಸರ್ಕಾರಿ ಶಾಲೆಯಲ್ಲಿ ಮಕ್ಕಳಿಲ್ಲದೇ ಶಾಲೆಗಳು ಮುಚ್ಚಲ್ಪಡುತ್ತಿವೆ. ಆದರೆ ಆನೇಕಲ್ ತಾಲೂಕಿನ ಹೊನ್ನಕಳಸಾಪುರ ಗ್ರಾಮದಲ್ಲಿ ಮಕ್ಕಳಿದ್ದರೂ ಶಾಲೆಯೇ ಸರಿಯಾಗಿಲ್ಲ. ಹೌದು. ಎರಡು ಕೊಠಡಿಗಳಿರುವ ಈ ಶಾಲೆಯಲ್ಲಿ 1 ರಿಂದ 5 ತರಗತಿಯವರೆಗೆ 30 ಮಕ್ಕಳು ಶಿಕ್ಷಣ ಪಡೆಯುತ್ತಿದ್ದು, ಜೀವ ಭಯದಲ್ಲೇ ಪಾಠ...

ಕಿತ್ತು ಹೋದ ಮೇಲ್ಛಾವಣಿ- ಶಾಲೆಯ ಹೊರಗಡೆ ಕುಳಿತು ಪಾಠ ಕೇಳ್ತಿದ್ದಾರೆ ವಿದ್ಯಾರ್ಥಿಗಳು

6 months ago

ರಾಮನಗರ: ಸರ್ಕಾರಿ ಶಾಲೆಯೊಂದರ ಕಟ್ಟಡ ಹಾಳಾಗಿದ್ದು, ಮಕ್ಕಳ ಜೀವಕ್ಕೆ ಕುತ್ತು ತರುವ ಸ್ಥಿತಿ ತಲುಪಿದೆ. ಇದಕ್ಕೆ ಸಾಕ್ಷಿಯಾಗಿರೋದು ಇಂಧನ ಸಚಿವರ ತವರು ಜಿಲ್ಲೆಯ ಸರ್ಕಾರಿ ಶಾಲೆ. ಹಾಳಾಗಿರೋ ಶಾಲಾ ಕಟ್ಟಡ. ಅಲ್ಲಲ್ಲಿ ಕಿತ್ತು ಹೋಗಿರೋ ಮೇಲ್ಛಾವಣಿ. ಹೊರಭಾಗದಲ್ಲಿಯೇ ಕುಳಿತು ಪಾಠ ಕೇಳುತ್ತಿರೋ...

ಶಿಕ್ಷಕರ ಪರಿಶ್ರಮದಿಂದಾಗಿ SSLC ಯಲ್ಲಿ ಅತ್ಯುತ್ತಮ ಫಲಿತಾಂಶ ದಾಖಲಿಸ್ತಿದೆ ದಾವಣಗೆರೆಯ ಈ ಶಾಲೆ!

8 months ago

ದಾವಣಗೆರೆ: ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗಲ್ಲ. ಹಾಗಾಗಿ ಫಲಿತಾಂಶ ಕಡಿಮೆ ಬರುತ್ತೆ ಅನ್ನೋ ಕೊಂಕಿದೆ. ಆದರೆ ಜಿಲ್ಲೆಯೆ ತುರ್ಚಘಟ್ಟ ಶಾಲೆಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹಲವು ವರ್ಷಗಳಿಂದ ಶೇ.97ರಷ್ಟು ಫಲಿತಾಂಶ ದಾಖಲಾಗುತ್ತಿದೆ. ಹೌದು, ಈ ವಿಶೇಷ ಸಾಧನೆಗೆ ಕಾರಣ ಶಾಲೆಯ ಶಿಕ್ಷಕ...

ಈ ಶಾಲೆಯ ಮಕ್ಕಳು 2 ವರ್ಷದಿಂದ ಬಿಸಿಯೂಟದ ರುಚಿಯನ್ನೇ ಕಂಡಿಲ್ಲ!

9 months ago

ಯಾದಗಿರಿ: ಶಾಲೆ ಪ್ರಾರಂಭವಾಗಿ ಎರಡು ವರ್ಷ ಕಳೆದ್ರೂ ಯಾದಗಿರಿ ತಾಲೂಕಿನ ಅಲ್ಲಿಪೂರ ವಾರಿ ತಾಂಡದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳೂ ಇದೂವರೆಗೂ ಬಿಸಿಯೂಟದ ರುಚಿಯನ್ನು ಮಾತ್ರ ಕಂಡಿಲ್ಲ. ಹೌದು. ಈ ಹಿಂದೆ ಶಿಕ್ಷಕರು ಇಲ್ಲವೆಂಬ ಕಾರಣ ನೀಡಿ ಅಲ್ಲಿಪೂರದ ಶಾಲೆಯನ್ನು...

ಬಿಸಿ ಊಟ ಸೇವಿಸಿ 40ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

9 months ago

ಗದಗ: ತಾಲೂಕಿನ ಅಂತೂರು ಬೆಂತೂರು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಿಸಿಯೂಟ ಸೇವಿಸಿ 40ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಆತಂಕಕಾರಿ ಘಟನೆ ಶನಿವಾರ ನಡೆದಿದೆ. ಉಪ್ಪಿಟ್ಟು ಸೇವಿಸಿದ ಬಳಿಕ ಮಕ್ಕಳು ಅಸ್ವಸ್ಥಗೊಂಡಿದ್ದಾರೆ. ಕೆಲವರಿಗೆ ವಾಂತಿಯಾಗಿದ್ದು, ಇನ್ನು ಕೆಲವರಿಗೆ ತಲೆ ಸುತ್ತು ಬಂದಿದೆ ಎಂದು...