Saturday, 24th February 2018

Recent News

1 month ago

55 ಮೀಟರ್ ದೂರದಿಂದ ಗೋಲು: ಗೋಲ್‍ಕೀಪರ್ ಹೊಡೆದ ಗೋಲಿನ ವೈರಲ್ ವಿಡಿಯೋ ನೋಡಿ

ಮ್ಯಾಡ್ರಿಡ್: ಫುಟ್‍ಬಾಲ್‍ನಲ್ಲಿ ಸಾಮಾನ್ಯವಾಗಿ ಫಾರ್ವಡ್ ಆಟಗಾರರು ಗೋಲು ದಾಖಲಿಸುತ್ತಾರೆ. ಕೆಲವೊಮ್ಮೆ ರಕ್ಷಣಾ ವಿಭಾಗದವರು ಗೋಲು ಹೊಡೆದದ್ದೂ ಇದೆ. ಆದರೆ ಬೆಂಕಿಯಂತೆ ಬರುವ ಚೆಂಡನ್ನು ತಡೆಯಲೆಂದೇ ಇರುವ ಗೋಲ್ ಕೀಪರ್ ಸ್ವತಃ ಗೋಲು ಹೊಡೆದ್ದು ನೋಡಿದ್ದೀರಾ..? ಹೌದು, ಸ್ಪಾನಿಶ್ ಸೆಗುಂಡ ಡಿವಿಜನ್‍ನಲ್ಲಿ ಭಾನುವಾರ ನಡೆದ ಸ್ಪೋರ್ಟಿಂಗ್ ಜೆಜೋನ್ ವಿರುದ್ಧದ ಪಂದ್ಯದಲ್ಲಿ ಲುಗೋ ತಂಡದ ಗೋಲ್ ಕೀಪರ್ ಜುವಾನ್ ಕಾರ್ಲೋಸ್ ಬಾರಿಸಿದ ಅತ್ಯದ್ಭುತ ಗೋಲು ಇದೀಗ ಫುಟ್‍ಬಾಲ್ ಲೋಕದಲ್ಲೇ ಅಚ್ಚರಿಯ ಅಲೆಯೆಬ್ಬಿಸಿದೆ. ಪಂದ್ಯ ಮುಗಿಯಲು 10 ನಿಮಿಷ ಬಾಕಿ ಇರುವಾಗ […]

3 months ago

ವಿಶ್ವಕಪ್‍ನಿಂದ ಇಟಲಿ ಔಟ್: ಅಂತಾರಾಷ್ಟ್ರೀಯ ಫುಟ್‍ಬಾಲ್‍ಗೆ ಬಫನ್ ಕಣ್ಣೀರ ವಿದಾಯ

ಮಿಲಾನ್: ನಾಲ್ಕು ಬಾರಿಯ ವಿಶ್ವಕಪ್ ಚಾಂಪಿಯನ್ ಇಟಲಿ, 2018ರಲ್ಲಿ ರಷ್ಯಾದಲ್ಲಿ ನಡೆಯಲಿರುವ ಫುಟ್‍ಬಾಲ್ ವಿಶ್ವಕಪ್ ಟೂರ್ನಿಗೆ ಅರ್ಹತೆ ಗಳಿಸಲು ವಿಫಲವಾಗಿದೆ. ಸ್ಯಾನ್ ಸಿರೋ ಸ್ಟೇಡಿಯಂನಲ್ಲಿ ಕಿಕ್ಕಿರಿದು ಸೇರಿದ್ದ 70 ಸಾವಿರಕ್ಕೂ ಅಧಿಕ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಎರಡನೇ ಹಂತದ ಪ್ಲೇ ಆಫ್ ಪಂದ್ಯದಲ್ಲಿ ಇಟಲಿ, ಸ್ವೀಡನ್ ವಿರುದ್ಧ ಗೋಲು ರಹಿತ ಫಲಿತಾಂಶಕ್ಕೆ ತೃಪ್ತಿಪಟ್ಟುಕೊಂಡಿತು. ಮೂರು ದಿನಗಳ...

ಊರೂರು ತಿರುಗಿ ಚಂದಾ ಎತ್ತಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ರು ಈ ಪಿ ಟಿ ಮೇಷ್ಟ್ರು

1 year ago

ಮಡಿಕೇರಿ: ನಮ್ಮ ಅಕ್ಕಪಕ್ಕದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಜನತೆಗೆ ಪರಿಚಯಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಅದರಲ್ಲೂ ಸರ್ಕಾರ ಹಾಗೂ ಜನಪ್ರತಿನಿಧಿಗಳ ಪಾಲು ದೊಡ್ಡದಾಗಿರಬೇಕು. ಆದರೆ ಜನನಾಯಕರು ಹಾಗೂ ಸರ್ಕಾರಿ ಬಾಬುಗಳೇ ಮರೆತಾಗ ಪ್ರತಿಭೆಗಳನ್ನೇ ಅರಳುವ ಮುನ್ನ ಚಿವುಟಿದಂತಾಗುತ್ತದೆ. ಆದರೆ ಇಂಥ ಪ್ರತಿಭೆಗಳನ್ನು ಗುರುತಿಸಿ ದೇಶದ...