Saturday, 21st April 2018

Recent News

1 month ago

ಎಂಜಿನ್‍ನಲ್ಲಿ ದೋಷ: ಇಂಡಿಗೋದ 47 ವಿಮಾನಗಳ ಹಾರಾಟ ರದ್ದು

ನವದೆಹಲಿ: ಎಂಜಿನ್ ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಇಂಡಿಗೋ ಸಂಸ್ಥೆ  ತನ್ನ 47 ವಿಮಾನಗಳ ಹಾರಾಟವನ್ನು ರದ್ದು ಪಡಿಸಿದೆ. ಕಳೆದ ಒಂದು ತಿಂಗಳಿನಲ್ಲಿ ಅಮೆರಿಕದ ಪ್ರ್ಯಾಟ್ ಮತ್ತು ವಿಟ್ನೆ ಕಂಪನಿಯ ಎಂಜಿನ್‍ಗಳನ್ನು ಹೊಂದಿದ್ದ ಮೂರು ವಿಮಾನಗಳು ವೈಫಲ್ಯಗೊಂಡ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಈ ಎಂಜಿನ್ ಗಳನ್ನು ಅಳವಡಿಸಿಕೊಂಡಿದ್ದ ಇಂಡಿಗೋ ಮತ್ತು ಗೋಏರ್ ವಿಮಾನಯಾನ ಸಂಸ್ಥೆಗಳ ವಿಮಾನಗಳ ಹಾರಾಟವನ್ನು ನಿರ್ಬಂಧಿಸಿದೆ. ಈ ಆದೇಶದ ಅನ್ವಯ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, […]

2 months ago

ವಿಮಾನದಲ್ಲಿದ್ದ ಲಗೇಜ್ ನಲ್ಲಿ ಕಾಣಿಸಿಕೊಂಡ ಬೆಂಕಿ ಆರಿಸಲು ನೀರು, ಜ್ಯೂಸ್ ಎರಚಿದ್ರು- ವಿಡಿಯೋ ವೈರಲ್

ಬೀಜಿಂಗ್: ವಿಮಾನದ ಮೇಲಿನ ಕಂಪಾರ್ಟ್‍ಮೆಂಟ್‍ನಲ್ಲಿ ಇಡಲಾಗಿದ್ದ ಲಗೇಜ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ವಿಮಾನ ಮೂರು ಗಂಟೆ ತಡವಾಗಿ ಹೊರಟ ಘಟನೆ ಚೀನಾದಲ್ಲಿ ನಡೆದಿದೆ. ಭಾನುವಾರದಂದು ಚೀನಾದ ಗುವಾಂಗ್‍ಝೌ ನಿಂದ ಶಾಂಘೈ ಗೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ಟೇಕ್ ಆಫ್ ಆಗುವುದಕ್ಕೆ ಸ್ವಲ್ಪ ಸಮಯ ಮುಂಚೆ ಪ್ರಯಾಣಿಕರು ವಿಮಾನವೇರುತ್ತಿದ್ದಾಗ ಲಗೇಜ್‍ವೊಂದರಲ್ಲಿದ್ದ ಪವರ್ ಬ್ಯಾಂಕಿನಲ್ಲಿ ಬೆಂಕಿ...

‘ಸಾಧನಾ ಸಂಭ್ರಮ’ ಹೆಸರಿನಲ್ಲಿ ಬೀದರ್ ನಲ್ಲಿ ಯಾತ್ರೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ ಸಿಎಂ

4 months ago

ಬೀದರ್: ಸಿಎಂ ಸಿದ್ದರಾಮಯ್ಯ ಅವರ ಜನಾಶಿರ್ವಾದ ಯಾತ್ರೆ ಇಂದಿನಿಂದ ಆರಂಭವಾಗಲಿದೆ. ಡಿಸೆಂಬರ್ 13 ರಿಂದ ಜನವರಿ 13 ರ ವರೆಗೆ ಒಟ್ಟು ಒಂದು ತಿಂಗಳ ಕಾಲ ಈ ಯಾತ್ರೆ ರಾಜ್ಯಾದ್ಯಂತ ಸಂಚರಿಸಲಿದೆ. ‘ಸಾಧನಾ ಸಂಭ್ರಮ’ ಹೆಸರಿನಲ್ಲಿ ಬೀದರ್ ಜಿಲ್ಲೆಯಲ್ಲಿ ಯಾತ್ರೆಗೆ ಅಧಿಕೃತವಾಗಿ...

ದೆಹಲಿಯ ವಿಮಾನದಲ್ಲಿ ದಂಗಲ್ ನಟಿ ಮೇಲೆ ಲೈಂಗಿಕ ಕಿರುಕುಳ

4 months ago

ನವದೆಹಲಿ: ದಂಗಲ್, ಸೀಕ್ರೆಟ್ ಸೂಪರ್ ಸ್ಟಾರ್ ಖ್ಯಾತಿಯ ಝೈರಾ ವಾಸಿಂ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ದೆಹಲಿಯಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸುವಾಗ ಕಿರಾತಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ. ತನ್ನ ಮೇಲೆ ಆದ ಈ ಕಿರುಕುಳದ ಬಗ್ಗೆ ನಟಿ ಜೈರಾ ವಾಸೀಮ್ ವಿಡಿಯೋ ಮೂಲಕ...

ಮಂಗಳೂರಿಗೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ

7 months ago

ಮಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಬೆಳಗ್ಗಿನ ಜಾವ ಮಂಗಳೂರಿಗೆ ಆಗಮಿಸಿದ್ದಾರೆ. ಕೇರಳದ ಕಣ್ಣೂರಿನಲ್ಲಿ ಇಂದು ನಡೆಯಲಿರುವ ಜನರಕ್ಷಾ ಯಾತ್ರೆಗೆ ಚಾಲನೆ ನೀಡುವ ನಿಟ್ಟಿನಲ್ಲಿ ಅಮಿತ್ ಶಾ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಸಂಜೆ 6 ಗಂಟೆಗೆ ವಿಶೇಷ...

ಮೈಸೂರು- ಚೆನ್ನೈ ನಡುವೆ ಹಾರಾಡಲಿವೆ ಹೊಸ ವಿಮಾನಗಳು

9 months ago

ಮೈಸೂರು: ನಾಡಹಬ್ಬ ದಸರೆಗೆ ಮುನ್ನ ಮೈಸೂರು ಮತ್ತು ಚೆನ್ನೈ ನಗರಗಳ ನಡುವೆ ವಿಶೇಷ ವಿಮಾನಗಳು ಹಾರಾಡಲಿವೆ. ಉಡೇ ದೇಶ್ ಕಾ ಆಮ್ ನಾಗರಿಕ್(ಉಡಾನ್) ಯೋಜನೆಯಡಿ ಮೈಸೂರು-ಚೆನ್ನೈ ನಡುವೆ ವಿಮಾನ ಸಂಪರ್ಕಕ್ಕೆ ನಿರ್ಧಾರ ಮಾಡಲಾಗಿದೆ. ಸೆಪ್ಟೆಂಬರ್ ಮೊದಲ ವಾರದಿಂದ ವಿಮಾನಗಳು ತಮ್ಮ ಹಾರಾಟ...

ಸ್ಪೈಸ್ ಜೆಟ್ ವಿಮಾನದ ಜೆಟ್ ಬ್ಲಾಸ್ಟ್ ನಿಂದ ಇಂಡಿಗೋ ವಿಮಾನದ ಕಿಟಕಿ ಒಡೆದು ಐವರಿಗೆ ಗಾಯ

10 months ago

ನವದೆಹಲಿ: ಸ್ಪೈಸ್ ಜೆಟ್ ವಿಮಾನದ ಜೆಟ್ ಬ್ಲಾಸ್ಟ್ ನಿಂದ ಇಂಡಿಗೋ ವಿಮಾನದ ಕಿಟಕಿ ಒಡೆದ ಪರಿಣಾಮ ಐವರು ಪ್ರಯಾಣಿಕರು ಗಾಯಗೊಂಡಿರೋ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ನಡೆದಿದೆ. ದೆಹಲಿಯಿಂದ ಮುಂಬೈಗೆ ಹೊರಟಿದ್ದ ಇಂಡಿಗೋ ವಿಮಾನ ಟೇಕ್ ಆಫ್ ಆಗಲು...

ದೆಹಲಿ, ಮುಂಬೈನಿಂದ ಟೆಲ್ ಅವೀವ್‍ಗೆ ನೇರವಿಮಾನ- ಇಸ್ರೇಲ್‍ನಲ್ಲಿರೋ ಭಾರತೀಯರಿಗೆ ಮೋದಿ ಭರ್ಜರಿ ಗಿಫ್ಟ್

10 months ago

ನವದೆಹಲಿ: ಇಸ್ರೇಲ್ ಪ್ರವಾಸದಲ್ಲಿರೋ ಪ್ರಧಾನಿ ಮೋದಿ ಅಲ್ಲಿನ ಭಾರತೀಯರಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಇಸ್ರೇಲ್‍ನಲ್ಲಿರೋ ಭಾರತೀಯರಿಗೆ ಓಐಸಿ ಕಾರ್ಡ್ ಪಡೆಯಲು ನಿಯಮಗಳನ್ನ ಸಡಿಲಿಸಿದ್ದು, ಮುಂಬೈ ಹಾಗೂ ದೆಹಲಿಯಿಂದ ಟೆಲ್ ಅವೀವ್‍ಗೆ ನೇರ ವಿಮಾನ ಸಂಚಾರ ಆರಂಭಿಸೋದಾಗಿ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ...