Thursday, 20th July 2017

Recent News

2 hours ago

ತನ್ನ ರಕ್ತದಲ್ಲಿ ಪ್ರಧಾನಿಗೆ 2 ಪತ್ರ ಬರೆದ ಯುವಕ

ರಾಯಚೂರು: ರೈತರು ಎದುರಿಸುತ್ತಿರುವ ಕಷ್ಟಗಳನ್ನ ಪ್ರಧಾನಿ ಮಂತ್ರಿ ಅವರಿಗೆ ಮನವರಿಕೆ ಮಾಡಲು ಜಿಲ್ಲೆಯ ಯುವಕರೊಬ್ಬರು ತನ್ನ ರಕ್ತದಲ್ಲಿ ಎರಡು ಪತ್ರಗಳನ್ನ ಬರೆದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದಾರೆ. ಸಿಂಧನೂರು ತಾಲೂಕಿನ ಮಲ್ಲದಗುಡ್ಡ ಗ್ರಾಮದ ವೀರಭದ್ರಪ್ಪ ಅನ್ನೋ ರೈತನ ಮಗನಾದ ರವಿ ಗೌಡ ತುಂಗಭದ್ರ ಎಡದಂಡೆ ಕಾಲುವೆ ನೀರು ರೈತರಿಗೆ ಸಮರ್ಪಕವಾಗಿ ತಲುಪದ ಹಿನ್ನೆಲೆಯಲ್ಲಿ ರೈತರು ಹೇಗೆ ಕಷ್ಟ ಅನುಭವಿಸುತ್ತಿದ್ದಾರೆ ಅಂತ ಮೂರು ಪುಟದ ಒಂದು ಪತ್ರ ಬರೆದಿದ್ದಾರೆ. ಜೊತೆಗೆ ಪ್ರಾಥಮಿಕ ಪ್ರೌಢ ಶಾಲಾ ಪಠ್ಯಕ್ರಮದಲ್ಲಿ ಇತರೆ […]

1 day ago

ರಾಜ್ಯದಲ್ಲಿ ಮಳೆಯ ಸಿಂಚನ-ರೈತರ ಮೊಗದಲ್ಲಿ ಮಂದಹಾಸ

ಬೆಂಗಳೂರು: ರಾಜ್ಯದಲ್ಲಿ ಮಳೆಯ ಸಿಂಚನ ಆರಂಭವಾಗಿದ್ದು, ಮಳೆಗೆ ಕಾಯುತ್ತಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಮೋಡ ಕವಿದ ವಾತವಾರಣವಿದ್ದು ಮಳೆ ಆರಂಭವಾಗಿದೆ. ಬೆಳಗಾವಿ, ಬೀದರ್, ಹಾಸನ, ಕೊಡಗು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಿಗೆ ವರುಣದೇವ ಕೃಪೆ ತೋರಿದ್ದಾನೆ. ಬಿತ್ತನೆ ಮಾಡಿಕೊಂಡಿದ್ದ ರೈತರು ಮುಂಗಾರು ಆರಂಭವಾದ್ರೂ ಮಳೆಯ ಬರದೇ ಇದ್ದಿದ್ದರಿಂದ ಆತಂಕಗೊಂಡಿದ್ದರು....

ತೋಟಕ್ಕೆ ನೀರು ಹಾಯಿಸಲು ಹೋಗಿದ್ದಾಗ ಕಾಡಾನೆ ದಾಳಿ- ರೈತ ಸಾವು

1 week ago

ರಾಮನಗರ: ರೇಷ್ಮೆ ತೋಟಕ್ಕೆ ನೀರು ಹಾಯಿಸಲು ಹೋಗಿದ್ದ ರೈತನ ಮೇಲೆ ಕಾಡಾನೆವೊಂದು ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಕನಕಪುರ ತಾಲೂಕಿನ ಹೊರಳಗಲ್ಲು ಗ್ರಾಮದ ಹೊರವಲಯದಲ್ಲಿ ನಡೆದಿದೆ. ಹೊರಳಗಲ್ಲು ಗ್ರಾಮದ ನಿವಾಸಿ ಕರೀಗೌಡ ಎಂಬವರೇ ಆನೆ ದಾಳಿಯಿಂದ ಸಾವನ್ನಪ್ಪಿದ ರೈತ. ಕಳೆದ...

ಉಳುಮೆ ಮಾಡಲು ಬಂದಿದ್ದ ರೈತನ ಮೇಲೆ ಅರಣ್ಯಾಧಿಕಾರಿಗಳಿಂದ ಹಲ್ಲೆ!

2 weeks ago

ದಾವಣಗೆರೆ: ಬಡ ರೈತರೊಬ್ಬರ ಮೇಲೆ ಅರಣ್ಯ ಇಲಾಖೆಯ ಅಧಿಕಾರಗಳು ದೌರ್ಜನ್ಯ ನಡೆಸಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ. ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಕಂಚಕಾರಕ್ಕಿ ಕಟ್ಟಿಯಲ್ಲಿ ಈ ಘಟನೆ ನಡೆದಿದ್ದು, ಬಗರ್ ಹುಕುಂ ಜಮೀನಿನಲ್ಲಿ ಜಯ್ಯಪ್ಪ ಎಂಬ ರೈತರ ಮೇಲೆ ಹಲ್ಲೆ ನಡೆದಿದೆ....

ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಸಿಲುಕಿ ರೈತ ಸಾವು

2 weeks ago

ವಿಜಯಪುರ: ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ರೈತರೊಬ್ಬರು ಕೊಚ್ಚಿ ಹೋಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಕರವಿನಾಳ ಗ್ರಾಮದಲ್ಲಿ ನಡೆದಿದೆ. ಸಾಯಬಣ್ಣ ನಾಯ್ಕೋಡಿ (65) ಮೃತ ರೈತ. ಗುರುವಾರ ಸಂಜೆ ಭಾರೀ ಮಳೆಯಾಗಿತ್ತು. ಇದ್ರಿಂದಾಗಿ ಗ್ರಾಮದ ಹಳ್ಳ ತುಂಬಿ ಹರಿತ್ತಿತ್ತು. ಗುರುವಾರ...

ಜಮೀನಿನಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

3 weeks ago

ಹುಬ್ಬಳ್ಳಿ: ಸಾಲಬಾಧೆಯಿಂದ ಬೇಸತ್ತು ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಗೋಳ ತಾಲೂಕಿನ ನೆಲಗುಡ್ಡ ಗ್ರಾಮದಲ್ಲಿ ನಡೆದಿದೆ. ರಾಯನಗೌಡ ಪಾಟೀಲ್(45) ಎಂಬುವರು ಆರು ಏಕರೆ ಜಮೀನು ಹೊಂದಿದ್ದರು. ಹಾಗಾಗಿ ವಿವಿಧ ಬ್ಯಾಂಕ್‍ಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು. ಅಲ್ಲದೆ...

ಪೆಟ್ರೋಲ್ ಬೆಲೆ ಇಳಿಕೆಯಾಗುತ್ತಿದ್ದರೂ ಪ್ರತಿದಿನ ಒಂದೇ ಬೆಲೆಯಲ್ಲಿ ಮಾರಾಟ: ಬಂಕ್ ವಿರುದ್ಧ ರೈತರ ಆಕ್ರೋಶ

3 weeks ago

ದಾವಣಗೆರೆ: ದಿನ ನಿತ್ಯದ ಬೆಲೆ ಪರಿಷ್ಕರಣೆ ಮಾಡದೆ ಒಂದೇ ಬೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಹಾಕಲಾಗುತ್ತಿರುವ ಬಂಕ್ ವಿರುದ್ಧ ರೈತರು ಅಕ್ರೋಶ ವ್ಯಕ್ತಪಡಿಸಿದ ಘಟನೆ ದಾವಣಗೆರೆ ತಾಲೂಕಿನ ಅಣಜಿ ಕ್ರಾಸ್‍ನಲ್ಲಿ ನಡೆದಿದೆ. ಕೇಂದ್ರ ಸರ್ಕಾರ ಜೂನ್ 1ರಿಂದ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು...

ಸೆಲ್ಫೀಗಾಗಿ ಬರೋರಿಂದ ಸೂರ್ಯಕಾಂತಿ ಬೆಳೆ ಹಾನಿ- ರೈತ ಮಾಡಿದ ಉಪಾಯದಿಂದ ಈಗ ಪ್ರತಿದಿನ ಸಾವಿರಾರು ರೂ. ಸಂಪಾದನೆ

3 weeks ago

ಚಾಮರಾಜನಗರ: ಸೂರ್ಯಕಾಂತಿ ಹೂ ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ? ಆದರಲ್ಲೂ ಈ ಸೆಲ್ಫೀ ಯುಗದಲ್ಲಿ ಇಂತಹ ಆಕರ್ಷಣೆಯ ಹೂ ಕಂಡ್ರೆ ಮುಗಿದೇ ಹೋಯಿತು. ಯುವಕ ಯುವತಿಯರು ಹುಚ್ಚೆದ್ದು ಹೂವಿನ ಮುಂದೆ ಸೆಲ್ಫಿಗಳ ಸುರಿಮಳೆಯನ್ನೆ ಸುರಿಸಿ ಬಿಡುತ್ತಾರೆ. ಯುವ ಜನಾಂಗದ ಈ ಸೆಲ್ಫೀ...