Sunday, 24th June 2018

Recent News

3 weeks ago

ಕಾರ್ ಎಂಜಿನ್ ನಿಂದ ಹೊರ ಬಂದ 12 ಅಡಿ ಉದ್ದದ ಹೆಬ್ಬಾವು – ವಿಡಿಯೋ ವೈರಲ್

ಬ್ಯಾಂಕಾಕ್: ಕಾರ್ ಎಂಜಿನ್ ನಲ್ಲಿ ಸುಮಾರು 12 ಅಡಿ ಉದ್ದದ ಹೆಬ್ಬಾವು ಪತ್ತೆಯಾಗಿರುವ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದೆ. ಕಾರಿನ ಚಾಲಕ ಟೀ ನಟ್ವಿಜಿತ್ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದರು. ಆದರೆ ಮಾರ್ಗ ಮಧ್ಯೆ ಕಾರು ನಿಂತು ಹೋಗಿದೆ. ಆಗ ಕಾರಿಗೆ ಏನು ಸಮಸ್ಯೆಯಾಗಿರಬಹುದು ಎಂದು ಯೋಚಿಸುತ್ತಿದ್ದರು. ಆಗ ಕಾರಿನ ಬಾನೆಟ್ ನಲ್ಲಿ ಬೃಹತ್ ಆಕಾರದ ಹೆಬ್ಬಾವಿನ ಬಾಲ ಕಂಡು ಬಂದಿದ್ದು, ಅದನ್ನು ಜನ ನೋಡಿದ್ದಾರೆ. ನಟ್ವಿಜಿತ್ ತನ್ನ ಕಾರಿನ ಮುಂಭಾಗದ ಬಾನೆಟ್ ತೆರೆದು ನೋಡಿದಾಗ ಅದರಲ್ಲಿ ಹೆಬ್ಬಾವು […]

3 months ago

ಇಂಜಿನ್ ಇಲ್ಲದೇ 12 ಕಿಮೀ ಚಲಿಸಿದ 22 ಬೋಗಿಯ ಅಹಮದಾಬಾದ್-ಪುರಿ ಎಕ್ಸ್‌ಪ್ರೆಸ್‌

ಭುವನೇಶ್ವರ್: ರೈಲ್ವೇ ನೌಕರರ ನಿರ್ಲಕ್ಷ್ಯದಿಂದಾಗಿ 22 ಬೋಗಿಯುಳ್ಳ ಅಹಮದಾಬಾದ್-ಪುರಿ ಎಕ್ಸ್ ಪ್ರೆಸ್ ರೈಲ್ವೆ ಇಂಜಿನ್ ಇಲ್ಲದೇ ಸುಮಾರು 12 ಕಿ.ಮೀ. ಚಲಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶನಿವಾರ ರಾತ್ರಿ 10.45 ನಿಮಿಷಕ್ಕೆ ಓರಿಸ್ಸಾ ರಾಜ್ಯದ ಟಿಟಲಗಢ ನಿಲ್ದಾಣಕ್ಕೆ ಅಹಮದಾಬಾದ್-ಪುರಿ ಎಕ್ಸ್‌ಪ್ರೆಸ್‌ ಬಂದು ನಿಂತಿದೆ. ಈ ವೇಳೆ ರೈಲ್ವೆಯ ಇಂಜಿನ್ ಬದಲಾವಣೆ ಮಾಡಲಾಗುತ್ತಿತ್ತು. ಇಂಜಿನ್ ರೈಲಿನಿಂದ...

ಕೆಎಸ್‍ಆರ್‍ಟಿಸಿ ಬಸ್ ಎಂಜಿನ್‍ನಲ್ಲಿ ಬೆಂಕಿ- ಪ್ರಯಾಣಿಕರು ಸೇಫ್

1 year ago

ಬೆಂಗಳೂರು: ಕೆಎಸ್‍ಆರ್‍ಟಿಸಿ ಬಸ್ ಎಂಜಿನ್‍ನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನೆಲಮಂಗಲ ಪಟ್ಟಣದ ಸೊಂಡೇಕುಪ್ಪ ಬೈಪಾಸ್ ಬಳಿ ನಡೆದಿದೆ. ಬೆಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಬಸ್‍ನಲ್ಲಿ ಈ ಬೆಂಕಿ ಅವಘಡ ನಡೆದಿದ್ದು, ಕೆಲಕಾಲ ಪ್ರಯಾಣಿಕರಲ್ಲಿ ಆತಂಕ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಈ ವೇಳೆ...