Thursday, 23rd November 2017

Recent News

3 days ago

ರಾಗಿ ಕಟಾವು ಮಾಡುತ್ತಿದ್ದ ರೈತನ ಮೇಲೆ ಆನೆ ದಾಳಿ- ಗಂಭೀರ ಗಾಯ

ಮಂಡ್ಯ: ರಾಗಿ ಕಟಾವು ಮಾಡುತ್ತಿದ್ದ ರೈತನ ಮೇಲೆ ಒಂಟಿ ಸಲಗವೊಂದು ದಾಳಿ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತ ನಾಗೇಗೌಡ ಎಂಬವರೇ ಆನೆ ದಾಳಿಗೊಳಗಾಗಿ ಗಾಯಗೊಂಡಿರುವ ರೈತ. ತನ್ನ ಜಮೀನಿನಲ್ಲಿ ರಾಗಿ ಕಟಾವು ಮಾಡುತ್ತಿದ್ದ ವೇಳೆ ಏಕಾಏಕಿ ದಾಳಿ ಮಾಡಿದ ಆನೆ ನಾಗೇಗೌಡರನ್ನ ಜೋರಾಗಿ ಗುದ್ದಿ ಬೀಳಿಸಿದೆ. ಆನೆ ದಾಳಿಗೆ ಒಳಗಾದ ರೈತ ಭಯದಿಂದ ಜೋರಾಗಿ ಕೂಗಿಗೊಂಡಿದ್ದಾರೆ. ಇದನ್ನು ನೋಡಿ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಜೋರಾಗಿ ಸದ್ದು […]

6 days ago

ವ್ಯಕ್ತಿ ಸಿಗಲಿಲ್ಲ ಎಂದು ಕಾರಿನ ಮೇಲೆ ಆಕ್ರೋಶವನ್ನು ತೀರಿಸಿಕೊಂಡ ಬಂಡೀಪುರದ ಆನೆ

ಮೈಸೂರು: ಕಾಡಾನೆಯೊಂದು ದಾಳಿಗೆ ಮುಂದಾಗಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ತಪ್ಪಿಸಿಕೊಂಡಿದ್ದಾರೆ. ಆದರೆ ಅಲ್ಲೇ ಸ್ಥಳದಲ್ಲಿದ್ದ ಅವರ ಕಾರನ್ನು ಜಖಂಗೊಳಿಸಿರುವ ಘಟನೆ ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಮೂಲತಃ ಕೊಡಗಿನ ವಿರಾಜಪೇಟೆಯ ನಿವಾಸಿಯಾದ ಶುಂಠಿ ಬೆಳೆಗಾರ ತಂಗಚನ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರು ಮುಳ್ಳೂರು ಗ್ರಾಮದಲ್ಲಿ ಮೂರು ಎಕರೆ ಜಮೀನಿನಲ್ಲಿ ಶುಂಠಿ ಬೆಳೆದಿದ್ದರು. ಅದನ್ನು...

ಎಚ್‍ಡಿ ಕೋಟೆಯಲ್ಲಿ ಕಬ್ಬಿನ ಗದ್ದೆಗೆ ನುಗ್ಗಿ ಕಾಡಾನೆಗಳಿಂದ ದಾಂಧಲೆ-ಬೆಳೆ ನಾಶ

1 month ago

ಮೈಸೂರು: ಕಾಡಿನಿಂದ ನಾಡಿಗೆ ಬಂದ ಆನೆಗಳು ಕಬ್ಬಿನ ಗದ್ದೆಗೆ ನುಗ್ಗಿ ದಾಂಧಲೆ ನಡೆಸಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಬಸಾಪುರದಲ್ಲಿ ನಡೆದಿದೆ. 5 ಆನೆಗಳ ಹಿಂಡು ಬಸಾಪುರ ಗ್ರಾಮ ಹೊಲಕ್ಕೆ ನುಗ್ಗಿ 5 ಎಕರೆ ಕಬ್ಬು, 2 ಎಕರೆ...

ರೈಲಿಗೆ ಸಿಲುಕಿ ಬ್ರಿಡ್ಜ್ ಮೇಲಿಂದ ಬಿದ್ದು ಆನೆಮರಿ ಸಾವು

2 months ago

ಬೆಳಗಾವಿ: ರೈಲ್ವೇ ಹಳಿ ದಾಟುವಾಗ, ರೈಲಿಗೆ ಸಿಲುಕಿ ಬ್ರಿಡ್ಜ್ ಮೇಲಿಂದ ಕೆಳಗೆ ಬಿದ್ದು ಆನೆ ಮರಿಯೊಂದು ಮೃತಪಟ್ಟ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಖಾನಾಪುರ ತಾಲೂಕಿನ ಗೋಲಿಹಳ್ಳಿ ವಲಯ ಅರಣ್ಯ ಪ್ರದೇಶದ ತಾವರಗಟ್ಟಿ ಹಾಗೂ ಬಿಷ್ಟೆನಟ್ಟಿ ಗ್ರಾಮಗಳ ನಡುವೆ ಇಂದು ಬೆಳಗ್ಗಿನ...

ಹಾಸನದಲ್ಲಿ ಕಾಡಾನೆಗಳ ಹಾವಳಿ: ಆರ್‍ಎಫ್‍ಓ ಕಚೇರಿಗೆ ಮುತ್ತಿಗೆ ಹಾಕಿ ಗ್ರಾಮಸ್ಥರ ಪ್ರತಿಭಟನೆ

2 months ago

ಹಾಸನ: ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ವಿಪರೀತ ಹೆಚ್ಚಾಗಿದೆ. ಹಾವಳಿ ತಡೆಯೋಕೆ ಅರಣ್ಯಾಧಿಕಾರಿಗಳಿಗೂ ಆಗುತ್ತಿಲ್ಲ. ಹೀಗಾಗಿ ಆನೆಗಳಿಂದ ತೊಂದರೆಗೊಳಗಾದ ಗ್ರಾಮಸ್ಥರು ಆರ್‍ಎಫ್‍ಓ ಹಾಗೂ ಸಿಬ್ಬಂದಿಗೆ ಅಹೋರಾತ್ರಿ ದಿಗ್ಬಂಧನ ಹಾಕಿ ಪ್ರತಿಭಟಿಸಿದ್ದಾರೆ. ಹಾಸನ ಜಿಲ್ಲೆಯ ಹಲವೆಡೆ ಮತ್ತೆ ಕಾಡಾನೆಗಳ ಕಾಟ ಮುಂದುವರೆದಿದೆ. ಆಲೂರು ತಾಲೂಕು...

ನನಗೂ ಸ್ಲಿಪ್ಪರ್ ಬೇಕೆಂದು ಹಠ ಹಿಡಿದ ಆನೆ ಮರಿ-ವಿಡಿಯೋ ನೋಡಿ

2 months ago

ಥೈಲ್ಯಾಂಡ್: ಆನೆ ಮರಿಯೊಂದು ತನ್ನ ಮಾವುತನ ಕಾಲಿನಲ್ಲಿರುವ ಚಪ್ಪಲಿ ತನಗೆ ಬೇಕೆಂದು ಹಠ ಹಿಡಿದು ಕೊನೆಗೆ ಅದು ಹಾಕಿಕೊಳ್ಳುವ ಪ್ರಯತ್ನ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಥೈಲ್ಯಾಂಡ್ ನ ಎಲಿಫೆಂಟ್ ನೇಚರ್ ಪಾರ್ಕ್ ನಲ್ಲಿ `ಸೇವ್ ಎಲಿಫೆಂಟ್ ಫೌಂಡೇಶನ್’...

ಕೊಡಗಿನಲ್ಲಿ ಆನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಹೊಸ ಉಪಾಯ

2 months ago

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಕೃಷಿ ನಾಶ ಮಾಡುವ ಆನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಹೊಸ ಉಪಾಯ ಮಾಡಿದೆ. ಆನೆಗಳ ನಿಯಂತ್ರಣಕ್ಕೆ ಹೊಸದಾದ ಆ್ಯಂಟಿ ಪೋಚಿಂಗ್ ಕ್ಯಾಂಪ್ ಈಗಾಗಲೇ ಪ್ರಾರಂಭವಾಗಿದೆ. ನಿತ್ಯ ಆನೆಗಳು ಓಡಾಡುವ ಜಾಗದಲ್ಲಿ ಮರದ ಮೇಲೆ ದಿಮ್ಮಿ ಮತ್ತು...

ಮೈಸೂರಿನಲ್ಲಿ ದಸರಾಗೆ ತಯಾರಿ: ಇಂದಿನಿಂದ ಅರ್ಜುನನಿಗೆ ಮರದ ಅಂಬಾರಿ ಹೊರುವ ತಾಲೀಮು

2 months ago

ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂ ಸವಾರಿಗೆ ದಿನಗಣನೆ ಶುರುವಾಗಿರುವ ಹಿನ್ನೆಲೆಯಲ್ಲಿ ದಸರಾ ಗಜಪಡೆಯ ತಾಲೀಮು ಜೋರಿದೆ. ಇಷ್ಟು ದಿನ ಮಣ್ಣಿನ ಮೂಟೆಗಳನ್ನು ಬೆನ್ನ ಮೇಲೆ ಹೊತ್ತು ತಾಲೀಮು ನಡೆಸುತ್ತಿದ್ದ ಅರ್ಜುನನಿಗೆ ಇವತ್ತಿನಿಂದ ಮರದ ಅಂಬಾರಿ ಕಟ್ಟಿ ತಾಲೀಮು ಆರಂಭಿಸಲಾಯಿತು. 750 ಕೆಜಿ...