Tuesday, 19th June 2018

Recent News

6 days ago

ಚಾರ್ಮಾಡಿ ಘಾಟ್ ನಲ್ಲಿ ಮತ್ತೆ ಭೂಕುಸಿತ-ಸಂಚಾರ ಅಸ್ತವ್ಯಸ್ತ

ಮಂಗಳೂರು: ಜಿಲ್ಲೆಯ ಚಾರ್ಮಾಡಿ ಘಾಟ್ ನಲ್ಲಿ ಮತ್ತೆ ಭೂ ಕುಸಿತ ಸಂಭವಿಸಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಾರ್ಮಾಡಿಘಾಟ್ ನಲ್ಲಿ ಮತ್ತೆ ಭೂಮಿ ಕುಸಿದಿದೆ. ಘಾಟ್ ನ 6ನೇ ತಿರುವಿನಲ್ಲಿರುವ ತಡೆಗೋಡೆ ಕುಸಿದ ಪರಿಣಾಮ ಸಂಚಾರ ಸಂಪೂರ್ಣ ಸ್ಥಬ್ಧಗೊಂಡಿದೆ. ಮಳೆ ನಿರಂತರವಾಗಿ ಸುರಿದಿದ್ದು ಮರಗಿಡಗಳು ಕುಸಿಯುವ ಹಂತದಲ್ಲಿವೆ. ಸ್ಥಳಕ್ಕೆ ಜಿಲ್ಲಾಡಳಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಚಾರ್ಮಾಡಿ ಘಾಟ್ ಮಾರ್ಗವನ್ನು ಬಂದ್ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಇಂದು, ನಾಳೆ ಹಾಗೂ ನಾಡಿದ್ದು ಘಾಟ್‍ನಲ್ಲಿ […]

1 month ago

ಮಹಿಳಾ ಸ್ನೇಹಿ ಪಿಂಕ್ ಬೂತ್ – ಮುಕ್ತ ಮತದಾನಕ್ಕೆ ಪೂರ್ವ ಸಿದ್ಧತೆ ಪೂರ್ಣ

ಕಲಬುರಗಿ/ಬಳ್ಳಾರಿ: ರಾಜ್ಯ ವಿಧಾನಸಭೆ ಚುನಾವಣೆ ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿಯಿದ್ದು, ಚುನಾವಣಾ ಆಯೋಗ ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಈ ಬಾರಿಯ ಚುನಾವಣೆಯ ವಿಶೇಷವಾಗಿ ಆಯೋಗ ಸಂಪೂರ್ಣ ಮಹಿಳೆಯರಿಂದ ನಿರ್ವಹಣೆ ಮಾಡುವ ಪಿಂಕ್ ಬೂತ್ ಮತಕೇಂದ್ರಗಳನ್ನು ಸ್ಥಾಪಿಸಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಪಿಂಕ್ ಬೂತ್ ಸ್ಥಾಪನೆಯಾಗುತ್ತಿರುವುದು ಈ ಚುನಾವಣೆಯ ವಿಶೇಷ. ರಾಜ್ಯದ 224 ಮತ ಕ್ಷೇತ್ರದಲ್ಲೂ...

60 ಸಾವಿರ ಚದರಡಿಯಲ್ಲಿ ಮೂಡಿತು ಮಾನವ ಸರಪಳಿ ಭಾರತ ನಕಾಶೆ

5 months ago

ಕೊಪ್ಪಳ: ವಿಧಾನಸಭೆ ಚುನಾವಣೆಗೆ ಮೂರು ತಿಂಗಳು ಬಾಕಿ ಇರುವಾಗಲೇ, ರಾಜ್ಯದ ಪ್ರಮುಖ ಮೂರು ಪಕ್ಷಗಳು ಈಗಾಗಲೇ ಚುನಾವಣಾ ರಣಕಹಳೆ ಮೊಳಗಿಸಿವೆ. ಮೂರು ಪಕ್ಷದ ನಾಯಕರು ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಇದನ್ನೆಲ್ಲ ನೋಡಿದ ಕೊಪ್ಪಳದ ಜಿಲ್ಲಾ ಪಂಚಾಯತ್ ಸಿಇಒ ಮತ್ತು...

ಬಡತನದಲ್ಲೇ ಓದಿ ದೆಹಲಿ ಐಐಟಿ ಯಲ್ಲಿ ಪ್ರವೇಶ ಪಡೆದ ಆದಿವಾಸಿ ವಿದ್ಯಾರ್ಥಿಗಳು

5 months ago

ರಾಯ್‍ಪುರ್: ಸಾಧಿಸುವ ಛಲವಿರುವವರಿಗೆ ಬಡತನ ಅಡ್ಡಿ ಬರಲ್ಲ ಎಂಬುದನ್ನ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ. ಛತ್ತೀಸ್‍ಗಡದ ಆದಿವಾಸಿ ಜನಾಂಗದ ಇಬ್ಬರು ವಿದ್ಯಾರ್ಥಿಗಳು ದೆಹಲಿಯ ಐಐಟಿಯಲ್ಲಿ ಪ್ರವೇಶಾತಿ ಪಡೆಯುವ ಮೂಲಕ ಇದನ್ನ ಸಾಬೀತುಪಡಿಸಿದ್ದಾರೆ. ಛತ್ತೀಸ್‍ಗಢದ ಜಸ್ಪುರ್ ಜಿಲ್ಲೆಯ ಕುದೆಕೆಲಾ ಹಾಗೂ ಜಾಗ್ರಮ್ ಗ್ರಾಮದ ಅದಿವಾಸಿ ಜನಾಂಗಕ್ಕೆ...

ಕಪ್ಪತ್ತಗುಡ್ಡ ಚಿನ್ನದ ಗುಹೆಗಳನ್ನು ಮುಚ್ಚಲು ಮುಂದಾದ ಜಿಲ್ಲಾಡಳಿತ – ಅಧಿಕಾರಿಗಳಿಗೆ ಗ್ರಾಮಸ್ಥರ ಮುತ್ತಿಗೆ

5 months ago

ಗದಗ: ಗದಗ ಜಿಲ್ಲಾಡಳಿತ ಏಕಾಏಕಿ ಕಪ್ಪತ್ತಗುಡ್ಡದ ಗುಹೆಗಳನ್ನು ಮುಚ್ಚಲು ಮುಂದಾಗಿದ್ದು, ಈ ವೇಳೆ ಜಿಲ್ಲಾಡಳಿತದ ಕ್ರಮದ ವಿರುದ್ಧ ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹೊಸೂರ ಭಾಗದ ಕಪ್ಪತ್ತಗುಡ್ಡ ಕಣಿವೆಯಲ್ಲಿ ಅಕ್ರಮವಾಗಿ ಅದಿರು ತೆಗೆಯುವ ಕೆಲಸವನ್ನು ಇಲ್ಲಿನ ಜನರು ಜೀವದ ಹಂಗು ತೊರೆದು...

ಮಕ್ಕಳ ಶಾಲೆಗಾಗಿ 15 ಕಿ.ಮೀ ಬೆಟ್ಟವನ್ನೇ ಕಡಿದು ರಸ್ತೆ ಮಾಡಿದ ತಂದೆ

5 months ago

ಭುವನೇಶ್ವರ್: ಮಕ್ಕಳು ಶಾಲೆಗೆ ಹೋಗಲು ಅನುಕೂಲವಾಗುವಂತೆ ತಂದೆಯೊಬ್ಬರು ಬೆಟ್ಟವನ್ನೇ ಕಡಿದು ಸುಮಾರು 15 ಕಿ.ಮೀ ರಸ್ತೆ ನಿರ್ಮಿಸುತ್ತಿರುವ ಘಟನೆ ಒಡಿಶಾದ ಗುಮ್ಸಾಹಿ ಗ್ರಾಮದಲ್ಲಿ ನಡೆದಿದೆ. ಜಲಂಧರ್ ನಾಯಕ್, ತಮ್ಮ ಗ್ರಾಮವಾದ ಗುಮ್ಸಾಹಿಯಿಂದ ಕಂಧಾಮಾಲ್ ಜಿಲ್ಲೆಯ ಫುಲ್ಬಾನಿ ಪಟ್ಟಣದ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸಲು...

ಶಾಲಾ ಆವರಣದಲ್ಲೇ ಡೇಂಜರ್ ಟ್ಯಾಂಕರ್-ಅಂತಕದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸದ ಪೋಷಕರು

7 months ago

ಮಂಡ್ಯ: ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲೇ ಯಮಸ್ವರೂಪಿ ಟ್ಯಾಂಕರ್ ಒಂದು ಮಕ್ಕಳನ್ನು ಬಲಿಪಡೆಯಲು ಕಾಯುತ್ತಿದೆ. ಯಾವುದೇ ಕ್ಷಣದಲ್ಲಿ ಉರುಳಿ ಬೀಳುವ ಸಂಭವವಿದ್ದು, ಆತಂಕದಲ್ಲಿರುವ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದೆ ಇರಲು ನಿರ್ಧರಿಸಿದ್ದಾರೆ. ಜಿಲ್ಲೆಯ ಚೀರನಹಳ್ಳಿ ಗ್ರಾಮದ ಸರ್ಕಾರಿ ಪ್ರಥಾಮಿಕ ಶಾಲೆಯ ಆವರಣದಲ್ಲಿ...

ಬಹು ವರ್ಷಗಳ ನಂತರ ತುಂಬಿದ ಕೋಲಾರ ಕೆರೆಗಳು-ಜನತೆಯಲ್ಲಿ ಹೊಸ ಆತಂಕ

8 months ago

ಕೋಲಾರ: ಬಹುವರ್ಷಗಳ ನಂತರ ಬಯಲು ಸೀಮೆ ಪ್ರದೇಶದ ಬಹುತೇಕ ಕೆರೆಗಳು ತುಂಬಿ ಕೋಡಿ ಹರಿದಿವೆ. ಆದರೆ ತುಂಬಿದ ಕೆರೆಗಳಲ್ಲಿನ ನೀರು ಹಸಿರು ಬಣ್ಣ ಪಡೆದಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ಸುಮಾರು 15 ವರ್ಷಗಳ ನಂತರ ಕೆರೆ ತುಂಬಿದ್ದು ಗ್ರಾಮಸ್ಥರಲ್ಲಿ ಮುಗುಳುನಗೆಯನ್ನು...