Sunday, 24th June 2018

Recent News

7 hours ago

ಲೋನ್ ಬೇಕಾದ್ರೆ ನನ್ನ ಜೊತೆ ಸೆಕ್ಸ್ ಗೆ ಬಾ – ಬ್ಯಾಂಕ್ ಮ್ಯಾನೇಜರ್ ನಿಂದ ರೈತನ ಪತ್ನಿಗೆ ಡಿಮ್ಯಾಂಡ್

ಮುಂಬೈ: ರೈತರು ಸಾಲ ಕೇಳುವ ಸಂದರ್ಭದಲ್ಲಿ ಬ್ಯಾಂಕ್ ಮ್ಯಾನೇಜರ್ ಹಲವಾರು ದಾಖಲೆಗಳನ್ನು ಕೇಳುತ್ತಾರೆ. ಆದರೆ ಮಹಾರಾಷ್ಟ್ರದಲ್ಲಿ ಸಾಲ ಕೇಳಲು ಬಂದ ರೈತನ ಪತ್ನಿಯನ್ನು ಕಾಮುಕ ಬ್ಯಾಂಕ್ ಮ್ಯಾನೇಜರ್ ಒಬ್ಬ ಸೆಕ್ಸ್ ಗೆ ಬಾ ಎಂದು ಆಹ್ವಾನಿಸಿದ್ದಾನೆ. ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ ರಾಜೇಶ್ ವಿರುದ್ಧ ಕೇಸ್ ದಾಖಲಾಗಿದೆ. ದತ್ತಾಲಾ ಗ್ರಾಮದ ಮಹಿಳೆಯೊಬ್ಬರು ಬೆಳೆ ಸಾಲಕ್ಕಾಗಿ ಅರ್ಜಿ ಸಲ್ಲಿಸಲು ತನ್ನ ಪತಿಯ ಜೊತೆಗೆ ಬ್ಯಾಂಕಿಗೆ ಹೋಗಿದ್ದರು. ಅಲ್ಲಿನ ಶಾಖಾ ಮ್ಯಾನೇಜರ್ […]

2 months ago

ಪ್ರೀತಿಸಿ ಮದ್ವೆಯಾಗಿ ಸಾಲಕ್ಕಾಗಿ ಸ್ನೇಹಿತನಿಗೆ ಪತ್ನಿಯನ್ನೇ ನೀಡಿದ

ಜೈಪುರ: ಮದ್ಯವ್ಯಸನಿ ಪತಿಯೊಬ್ಬ ಸಾಲ ತೀರಿಸಲು ಪತ್ನಿಯನ್ನೇ ಸ್ನೇಹಿತರಿಗೆ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಘಟನೆ ರಾಜಸ್ಥಾನದ ಸಿಖರ್ ನಗರದಲ್ಲಿ ನಡೆದಿದೆ. ಈಗ ಸಂತ್ರಸ್ತೆ ಪತಿ ಹಾಗೂ ಕುಟುಂಬಸ್ಥರ ವಿರುದ್ಧ ಹಲ್ಲೆ ಮತ್ತು ಅತ್ಯಾಚಾರದ ಪ್ರಕರಣಗಳನ್ನು ದಾಖಲಿಸಿದ್ದಾರೆ. 2010ರಲ್ಲಿ ಜೈಪುರ ಯುವಕನ ಜೊತೆ ಮಹಿಳೆಗೆ ಮದುವೆಯಾಗಿತ್ತು. ಮದುವೆ ಸಂದರ್ಭದಲ್ಲಿ ಸುಮಾರು ಐದು ಲಕ್ಷ...

80ಲಕ್ಷ ರೂ. ಸಾಲ ಮಾಡಿ ಯುವತಿ ಜೊತೆ ಸುತ್ತಾಡಿ ರೇಪ್ ಮಾಡ್ದ ಟೆಕ್ಕಿ..!

7 months ago

ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ 80 ಲಕ್ಷ ರೂ. ಸಾಲ ಮಾಡಿ ಯುವತಿ ಜೊತೆ ಸುತ್ತಾಡಿ ಬಳಿಕ ಅತ್ಯಾಚಾರವೆಸಗಿದ ಸಾಪ್ಟ್ ವೇರ್ ಎಂಜಿನಿಯರ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಬಂಧಿತ ಟೆಕ್ಕಿಯನ್ನು ಅಜಯ್ ಎಂದು ಗುರುತಿಸಲಾಗಿದ್ದು, ಈತ ಮೂಲತಃ ಬೆಂಗಳೂರಿನ ವಿಜಯನಗರದ ನಿವಾಸಿ. ಬಂಧಿತ...

ಹಸು ಸಾವಿನಿಂದ ಮನನೊಂದು ಮಂಡ್ಯದಲ್ಲಿ ರೈತ ಆತ್ಮಹತ್ಯೆ

8 months ago

ಮಂಡ್ಯ: ಮೊದಲೇ ಸಾಲಬಾಧೆಯಿಂದ ಕಂಗಾಲಾಗಿದ್ದ ರೈತ ಜೀವನಾಧಾರವಾಗಿದ್ದ ಹಸು ಸಾವಿನಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಆಬಲವಾಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ 55 ವರ್ಷದ ರೈತ ವೆಂಕಟಾಚಲ ಆತ್ಮಹತ್ಯೆಗೆ ಶರಣಾದವರು. ವೆಂಕಟಾಚಲ ಅವರಿಗೆ 15 ಗುಂಟೆ...

ತಂದೆ ಮಾಡಿದ್ದ ಸಾಲಕ್ಕೆ ಹೆದರಿ ಮಗ ಆತ್ಮಹತ್ಯೆ

9 months ago

ಬೆಳಗಾವಿ: ತಂದೆ ಮಾಡಿದ ಸಾಲಕ್ಕೆ ಹೆದರಿ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಕಡಬಿ ಗ್ರಾಮದಲ್ಲಿ ನಡೆದಿದೆ. ಮಾರುತಿ ಅಜ್ಜನಕಟ್ಟಿ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೃತನ ತಂದೆ ವಿವಿಧ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಸುಮಾರು 10...

ಜಮೀನಿನಲ್ಲೇ ಮರಕ್ಕೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

12 months ago

ಹುಬ್ಬಳ್ಳಿ: ಸಾಲಬಾಧೆಯಿಂದ ಬೇಸತ್ತು ರೈತರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಗೋಳ ತಾಲೂಕಿನ ನೆಲಗುಡ್ಡ ಗ್ರಾಮದಲ್ಲಿ ನಡೆದಿದೆ. ರಾಯನಗೌಡ ಪಾಟೀಲ್(45) ಎಂಬುವರು ಆರು ಏಕರೆ ಜಮೀನು ಹೊಂದಿದ್ದರು. ಹಾಗಾಗಿ ವಿವಿಧ ಬ್ಯಾಂಕ್‍ಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು. ಅಲ್ಲದೆ...

ಸಾಲ ಹಿಂದಿರುಗಿಸದ್ದಕ್ಕೆ ಹೆಂಡ್ತಿ, ಮಕ್ಕಳನ್ನ ಹೊತ್ತೊಯ್ದರು- ಮನನೊಂದು ಪತಿ ಆತ್ಮಹತ್ಯೆ

1 year ago

ಹಾವೇರಿ: ಸಾಲದ ಹಣ ಹಿಂದಿರುಗಿಸದ ಹಿನ್ನಲೆಯಲ್ಲಿ ಪತ್ನಿ ಮತ್ತು ಮಕ್ಕಳನ್ನು ಹೊತ್ತುಕೊಂಡು ಹೋಗಿದ್ದಕ್ಕೆ ಮನನೊಂದು ಪತಿ ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ಹಾವೇರಿ ತಾಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನ 38 ವರ್ಷ ವಯಸ್ಸಿನ ಉದಯ ಸಣ್ಣತಂಗಿ ಎಂದು ಗುರುತಿಸಲಾಗಿದೆ....

ಹೆಚ್‍ಡಿ ಕುಮಾರಸ್ವಾಮಿಗೆ ಡೆತ್‍ನೋಟ್ ಬರೆದಿಟ್ಟು ಮಂಡ್ಯದಲ್ಲಿ ರೈತ ಆತ್ಮಹತ್ಯೆ

1 year ago

ಮಂಡ್ಯ: ನಾನು ಸತ್ತ ಮೇಲೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರು ನನ್ನ ಮುಖ ನೋಡಲು ಬರಬೇಕು ಎಂದು ಪತ್ರ ಬರೆದಿಟ್ಟು ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯದ ಬಿ.ಹೊಸೂರು ಗ್ರಾಮದಲ್ಲಿ ನಡೆದಿದೆ. ಸಾಲಬಾಧೆಯಿಂದ ಬೇಸತ್ತಿದ್ದ ರೈತ ಶಿವಣ್ಣ ಇಂದು ತಮ್ಮ ಜಮೀನಿನ...