Wednesday, 22nd November 2017

Recent News

1 day ago

ಪಿಕಪ್ ಟಯರ್ ನಿಂದ ಚಿಮ್ಮಿದ ಕಲ್ಲು ಬಡಿದು 1 ವರ್ಷದ ಕಂದಮ್ಮ ಸಾವು

ಕಾರವಾರ: ಚಲಿಸುತ್ತಿದ್ದ ಪಿಕಪ್ ವಾಹನದ ಟಯರ್ ನಿಂದ ಚಿಮ್ಮಿದ ಕಲ್ಲೊಂದು ಕಾರ್ಮಿಕ ದಂಪತಿಯ ಮಗುವನ್ನು ಬಲಿ ತೆಗೆದುಕೊಂಡಿರುವ ಘಟನೆ ಯಲ್ಲಾಪುರ ತಾಲೂಕಿನ ಸಾತೊಡ್ಡಿ ಬಳಿ ನಡೆದಿದೆ. ಜಿಲ್ಲೆಯ ಶಿರಹಟ್ಟಿಯ ಅರ್ಪಿತಾ ಸಣ್ಣಪ್ಪ ಹರಿಜನ(1) ಮೃತ ಮಗುವಾಗಿದ್ದು, ಸಾತೊಡ್ಡಿ ಬಳಿ ರಸ್ತೆ ನಿರ್ಮಾಣ ಕೆಲಸಕ್ಕೆ ಬಂದ ಮಂಜುಳಾ ಹರಿಜನ ಎಂಬವರು ತಮ್ಮ ಮಗುವನ್ನು ರಸ್ತೆ ಪಕ್ಕ ಮಲಗಿಸಿ ಕೆಲಸ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ. ನೀರು ತುಂಬಿಕೊಂಡು ಬಂದ ಪಿಕಪ್ ವಾಹನದ ಟಯರ್ ನಿಂದ ಕಲ್ಲೊಂದು ಚಿಮ್ಮಿ ರಸ್ತೆ ಪಕ್ಕ […]

2 days ago

ಪಲ್ಟಿಯಾಗಿದ್ರಿಂದ ಲಾರಿಯ ಹಿಂಬದಿ ಕಲ್ಲುಚಪ್ಪಡಿ ಮೇಲೆ ಕುಳಿತಿದ್ದ ವ್ಯಕ್ತಿ ದುರ್ಮರಣ

ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಕಲ್ಲುಚಪ್ಪಡಿಗಳನ್ನ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆ ಚಿಕ್ಕಬಳ್ಳಾಪುರ ನಗರದ ಹೊರವಲಯದ ಮಂಚನಬಲೆ ಸೇತುವೆ ಬಳಿ ನಡೆದಿದೆ. ಕುರ್ಲಹಳ್ಳಿ ಗ್ರಾಮದ ಅನಿಲ್ ಕುಮಾರ್ (35) ಮೃತ ವ್ಯಕ್ತಿ. ಅಪಘಾತದಲ್ಲಿ ಗಾಯಗೊಂಡಿರುವ ಮತ್ತೋರ್ವ ವ್ಯಕ್ತಿಯನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿಲಾಗಿದೆ. ಹೆದ್ದಾರಿಯಲ್ಲಿ ಎದುರಗಡೆಯಿಂದ ಬಂದ ವಾಹನವನ್ನು...

ಅನುಮಾನಾಸ್ಪದವಾಗಿ ಒಂದೇ ಕುಟುಂಬದ ಮೂವರ ಸಾವು- ರೈಲು ಹಳಿಯಲ್ಲಿ ಶವ ಪತ್ತೆ

4 days ago

ಕೋಲಾರ: ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಅವರ ಶವಗಳು ರೈಲು ಹಳಿಯಲ್ಲಿ ಪತ್ತೆಯಾಗಿರುವ ಘಟನೆ ಕೋಲಾರದ ಗಡಿ ಆಂಧ್ರಪ್ರದೇಶದ ಕುಪ್ಪಂ ಮಾಲನೂರು ಬಳಿ ನಡೆದಿದೆ. ಮೃತರು ಚಿತ್ತೂರು ಜಿಲ್ಲೆಯ ಕುಪ್ಪಂ ಮಂಡಲದ ಕೋಟಲೂರು ಗ್ರಾಮದ ನಿವಾಸಿಗಳಾಗಿದ್ದು, ಅನಬಲಗನ್ (35), ಪತ್ನಿ...

ಕೋಲಾರದಲ್ಲಿ ಅಕಾಲಿಕ ಮಳೆ – ಬೈಕ್ ಸಮೇತ ಕೊಚ್ಚಿಹೋದ ಯುವಕ

4 days ago

ಕೋಲಾರ: ಕಳೆದ ರಾತ್ರಿ ಸುರಿದ ಮಳೆಯ ನೀರಿನಲ್ಲಿ ಯುವಕ ಕೊಚ್ಚಿಹೋಗಿ ಸಾವನ್ನಪ್ಪಿದ್ದು, ಮತ್ತೊಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬಲಮಂದೆ ಗ್ರಾಮದಲ್ಲಿ ನಡೆದಿದೆ. ಕಾಮಸಮುದ್ರ ಗ್ರಾಮದ ನಿವಾಸಿ 22 ವರ್ಷದ ಸುರೇಶ್ ಮೃತಪಟ್ಟಿರುವ ಯುವಕ. ಸುರೇಶ್ ಹಾಗೂ ಮಸ್ತಾನ್...

ಸಾವಿನಲ್ಲೂ ಒಂದಾದ ದಂಪತಿ- 4 ಗಂಟೆಗೆ ಪತಿ, 8 ಗಂಟೆ ಹೊತ್ತಿಗೆ ಪತ್ನಿ ಸಾವು

4 days ago

ಕೊಪ್ಪಳ: ಜಿಲ್ಲೆಯ ಗಂಗಾವತಿಯ ಜಯನಗರದಲ್ಲಿ ಗಂಡ-ಹೆಂಡತಿ ಸಾವಿನಲ್ಲೂ ಒಂದಾಗಿರೋ ಘಟನೆ ನಡೆದಿದೆ. ಇಂದು ಬೆಳಗ್ಗಿನ ಜಾವ 4 ಗಂಟೆಗೆ ವಯೋಸಹಜವಾಗಿ 65 ವರ್ಷದ ದುರ್ಗಪ್ಪ ನಾಯಕ ಮೃತಪಟ್ಟಿದ್ದಾರೆ. ಪತಿಯ ಸಾವಿನ ಬಳಿಕ ಅಂದರೆ ಬೆಳಗ್ಗೆ 8 ಗಂಟೆ ಸುಮಾರಿಗೆ ಪತ್ನಿ ಹುಲಿಗೆಮ್ಮ(55)...

ತನ್ನ ಚಿತೆಗೆ ತಾನೇ ಬೆಂಕಿ ಹಾಕಿಕೊಂಡು ಸಾವಿಗೆ ಶರಣಾದ 90ರ ವೃದ್ಧೆ!

5 days ago

ಮುಂಬೈ: 90 ವರ್ಷದ ವೃದ್ಧೆಯೊಬ್ಬರು ತಮ್ಮ ಚಿತೆಗೆ ತಾನೇ ಬೆಂಕಿ ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಬಾಮನಿ ಗ್ರಾಮದಲ್ಲಿ ನಡೆದಿದೆ. ಕಲ್ಲವ್ವ ದಾಡು ಕಾಂಬ್ಳೆ ಸಾವಿಗೆ ಶರಣಾದ ವೃದ್ಧೆ. ಇವರು ನವೆಂಬರ್ 13 ರಂದು ರಾತ್ರಿ ತಮ್ಮ...

KSRTC ಬಸ್‍ನಲ್ಲಿ ಕುಳಿತ ಸ್ಥಿತಿಯಲ್ಲೇ ಪ್ರಾಣ ಬಿಟ್ಟ ಮಹಿಳೆ

5 days ago

ಬಳ್ಳಾರಿ: ಪ್ರಯಾಣದ ಸಂದರ್ಭದಲ್ಲಿ ಮಾರ್ಗಮಧ್ಯೆ ವೃದ್ಧ ಮಹಿಳೆಯೊಬ್ಬರು ಕೆಎಸ್‍ಆರ್‍ಟಿಸಿ ಬಸ್‍ನಲ್ಲಿಯೇ ಜೀವ ಬಿಟ್ಟಿರುವ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಂಪ್ಲಿಯಲ್ಲಿ ನಡೆದಿದೆ. ಮೂಲತಃ ಕುರುಗೋಡಿನ ಇಂದಿರಾನಗರದ ನಿವಾಸಿಯಾದ ದೊಡ್ಡ ಬಸಪ್ಪ ಎಂಬುವರ ಪತ್ನಿ ನೀಲಮ್ಮ (61) ಮೃತಪಟ್ಟಿರುವ ವೃದ್ಧ ಮಹಿಳೆ. ಇವರು...

ಕರ್ತವ್ಯ ನಿರತ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವು

5 days ago

ಕೊಪ್ಪಳ: ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರಿಗೆ ಹೃದಯಾಘಾತವಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕೊಪ್ಪಳದ ಡಿ.ಆರ್ ಪೊಲೀಸ್ ಪೇದೆಯಾಗಿದ್ದ 40 ವರ್ಷದ ಧರ್ಮಣ್ಣ ಪೂಜಾರ್ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಂದು ಎಂದಿನಂತೆ ಬೆಳಗಿನ ಜಾವ ಕರ್ತವ್ಯದಲ್ಲಿದ್ದಾಗ ಧರ್ಮಣ್ಣ ಅವರಿಗೆ...