Monday, 22nd January 2018

Recent News

3 weeks ago

ಸದ್ದಿಲ್ಲದೇ ದೀಪಕ್ ಮೃತದೇಹ ಸಾಗಿಸಿದ ಪೊಲೀಸರು- ಆಂಬುಲೆನ್ಸ್ ನಿಂದ ಶವ ಇಳಿಸದಂತೆ ಆಕ್ರೋಶ

ಮಂಗಳೂರು: ಹತ್ಯೆಯಾದ ಭಜರಂಗದಳ ಕಾರ್ಯಕರ್ತ ದೀಪಕ್ ರಾವ್ ಶವವನ್ನು ಪೊಲೀಸರು ಸದ್ದಿಲ್ಲದೇ ಆಸ್ಪತ್ರೆಯಿಂದ ಸಾಗಿಸಿದ್ದು ಕುಟುಂಬಸ್ಥರು ಹಾಗೂ ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಕುಟುಂಬ ಸದಸ್ಯರಿಗೂ ಸಣ್ಣ ಮಾಹಿತಿ ನೀಡದೇ ದೀಪಕ್ ಶವವನ್ನು ಸಾಗಿಸಲಾಗಿದೆ. ಸುರತ್ಕಲ್‍ನಲ್ಲಿರುವ ದೀಪಕ್ ಮನೆಗೆ ಸದ್ದಿಲ್ಲದೇ ಮೃತದೇಹ ರವಾನೆ ಆಗಿದೆ. ಆಂಬುಲೆನ್ಸ್ ನಲ್ಲಿ ರೋಗಿಯನ್ನು ಸಾಗಿಸುವಂತೆ ದೀಪಕ್ ಶವವನ್ನು ಪೊಲೀಸರು ಸಾಗಿಸಿದ್ದು, ಗಣೇಶಕಟ್ಟೆಯಲ್ಲಿ ದೀಪಕ್ ರಾವ್ ಅಂತಿಮ ದರ್ಶನಕ್ಕೆ ಅವಕಾಶ ಮಾಡಲು ಮುಂದಾಗಿದ್ದರು. ಆದ್ರೆ ಪೊಲೀಸರ ಸೈಲೆಂಟ್ ಆಪರೇಷನ್‍ಗೆ ಹಿಂದೂ ಸಂಘಟನೆಗಳು ತೀವ್ರ […]

3 weeks ago

ಅಂತ್ಯಕ್ರಿಯೆಗೆ ಹಣವಿಲ್ಲದೆ 3 ದಿನ ನಾಲ್ಕು ಮೃತದೇಹಗಳ ಪಕ್ಕದಲ್ಲೇ ಮಲಗಿದ ಕುಟುಂಬ

ಜಲಂಧರ್: ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೆ ಕುಟುಂಬಸ್ಥರು ಮೃತದೇಹದ ಪಕ್ಕದಲ್ಲೇ 3 ದಿನಗಳ ಕಾಲ ಮಲಗಿದ್ದ ಹೃದಯ ವಿದ್ರಾವಕ ಘಟನೆ ಪಂಜಾಬ್‍ನಲ್ಲಿ ನಡೆದಿದೆ. ಮಹಿಳೆಯೊಬ್ಬರು ಗಂಡನ ಶವದ ಪಕ್ಕದಲ್ಲೇ ಮಲಗಿಕೊಂಡು ಮೂರು ದಿನ ಕಳೆದಿದ್ದಾರೆ. ಡಿಸೆಂಬರ್ 31ರಂದು ಜಲಂಧರ್‍ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದಲಿಪ್ ಸಿಂಗ್(40) ಸಾವನ್ನಪ್ಪಿದ್ದರು. ಜೊತೆಗೆ ಮೂರು ತಿಂಗಳ ಮಗಳಾದ ಅಂಜಲಿ ಕೂಡ ಸಾವನ್ನಪ್ಪಿದ್ದು, ಅವರ...

ಎಳ್ಳಮಾವಾಸ್ಯೆ ಆಚರಿಸಲು ಹೋಗಿದ್ದಾಗ ತೆಪ್ಪ ಮುಳುಗಿ ನಾಲ್ವರ ಸಾವು

1 month ago

ಬೀದರ್: ಎಳ್ಳಮಾವಾಸ್ಯೆ ಆಚರಿಸಲು ಹೋಗುವಾಗ ತೆಪ್ಪ ಮುಳುಗಿ ನಾಲ್ವರು ಬಾಲಕಿಯರು ಹಾಗೂ ಒಬ್ಬ ಬಾಲಕ ಸಾವನ್ನಪ್ಪಿದ ಘಟನೆ ಸೋಮವಾರ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಕೊಹಿನೂರ ಬಳಿಯ ಕೆರೆಯಲ್ಲಿ ನಡೆದಿದೆ. ಎನ್‍ಡಿಆರ್‍ಎಫ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಯಶಸ್ವಿ ಕಾರ್ಯಚರಣೆ ನಡೆಸಿ...

ಪತ್ನಿ ಶವವನ್ನು 10 ಕಿ.ಮೀ ಹೊತ್ತೊಯ್ದಿದ್ದ ವ್ಯಕ್ತಿ ಈಗ ಹೇಗಿದ್ದಾರೆ ಗೊತ್ತಾ?

2 months ago

ಭುವನೇಶ್ವರ: ಕಳೆದ ವರ್ಷ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ವ್ಯವಸ್ಥೆ ಸಿಗದೇ ಸುಮಾರು 10 ಕಿ.ಮೀ ದೂರದವರೆಗೆ ತನ್ನ ಹೆಗಲ ಮೇಲೆ ಪತ್ನಿಯ ಶವ ಸಾಗಿಸಿ ಸುದ್ದಿಯಾಗಿದ್ದ ಒಡಿಶಾದ ದಾನಾ ಮಾಝಿ ಜೀವನ ಇದೀಗ ಪೂರ್ತಿ ಬದಲಾಗಿದೆ. ಹೌದು. ಹೊಸ ಮನೆ ಕಟ್ಟುತ್ತಿರೋ ಮಾಝಿ,...

ಹುಟ್ಟುಹಬ್ಬ ಆಚರಿಸಿಕೊಳ್ಳಬೇಕಿದ್ದ 7 ವರ್ಷದ ಬಾಲಕಿ ಶವವಾಗಿ ಪತ್ತೆ

2 months ago

ಹೈದರಾಬಾದ್: ಸೋಮವಾರದಂದು ತೆಲಂಗಾಣದ ಜಯಶಂಕರ್ ಭೂಪಲಪಲ್ಲಿ ಜಿಲ್ಲೆಯ ಗೋರಿ ಕೋತಪಲ್ಲಿ ಗ್ರಾಮದಿಂದ ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. 7 ವರ್ಷದ ರೇಷ್ಮಾ ಮೃತ ಬಾಲಕಿ. ಸೋಮವಾರದಂದು ರೇಷ್ಮಾಳ ಹುಟ್ಟುಹಬ್ಬವಿತ್ತು. ಹೀಗಾಗಿ ಕೇಕ್ ಹಾಗೂ ಹೊಸ ಬಟ್ಟೆ ಖರೀದಿಸಲು ತಂದೆ ರಾಜು ಹಾಗೂ...

ಅಪಘಾತಕ್ಕೀಡಾಗಿ ಮೃತಪಟ್ಟಂತೆ ರಸ್ತೆಯಲ್ಲಿ ದಂಪತಿ ಶವ ಪತ್ತೆ- ಕೊಲೆ ಶಂಕೆ

2 months ago

ಬಾಗಲಕೋಟೆ: ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ-ಐಹೊಳೆ ಮಧ್ಯದ ರಸ್ತೆಯಲ್ಲಿ ದಂಪತಿ ಅನುಮಾನಸ್ಪದವಾಗಿ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಸಂಗಮೇಶ (28) ಮತ್ತು ಆತನ ಪತ್ನಿ ಹನಮವ್ವ ಸರೂರ್ ಎಂದು ಗುರುತಿಸಲಾಗಿದೆ. ಬೈಕ್ ಅಪಘಾತದಲ್ಲಿ ಮೃತಪಟ್ಟ ರೀತಿಯಲ್ಲಿ ಶವ ಪತ್ತೆಯಾಗಿದೆ. ಮೃತರು...

ಯಾರದ್ದೋ ಶವವನ್ನು ಇನ್ಯಾರಿಗೋ ಕೊಟ್ಟ ಜಿಲ್ಲಾಸ್ಪತ್ರೆ ಸಿಬ್ಬಂದಿ- ಯುವತಿ ಶವವೆಂದು 60ರ ಮಹಿಳೆಯ ಶವ ಅಂತ್ಯಕ್ರಿಯೆ

2 months ago

ದಾವಣಗೆರೆ: ನಗರದ ಜಿಲ್ಲಾಸ್ಪತ್ರೆಯಲ್ಲಿ ಯಾರದ್ದೋ ಶವವನ್ನು ಬೇರೆಯವರಿಗೆ ನೀಡಿ ಸಿಬ್ಬಂದಿ ಎಡವಟ್ಟು ಮಾಡಿಕೊಂಡಿದ್ದಾರೆ. ದಾವಣಗೆರೆ ತಾಲೂಕಿನ ಬೂದಾಳ್ ಗ್ರಾಮದ ಕೆಂಚಮ್ಮ(60) ಬುಧವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೆಂಚಮ್ಮರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ ನಂತರ ಸಾವನ್ನಪ್ಪಿದ್ದರು. ಬುಧವಾರ ಕೆಂಚಮ್ಮ ಅವರ ಶವಪರೀಕ್ಷೆ ಮಾಡಿ...

ಕಾಣೆಯಾಗಿದ್ದ 2 ವರ್ಷದ ಕಂದಮ್ಮ ನೀರಿನ ಟ್ಯಾಂಕ್‍ ನಲ್ಲಿ ಶವವಾಗಿ ಪತ್ತೆ

2 months ago

ನವದೆಹಲಿ: ಮನೆಯ ಹೊರಗಡೆ ಆಟವಾಡುತ್ತಿದ್ದ 2 ವರ್ಷದ ಕಂದಮ್ಮ ಏಕಾಏಕಿ ಕಾಣೆಯಾಗಿ, ಬಳಿಕ ನೀರಿನ ಟ್ಯಾಂಕಿನಲ್ಲಿ ಶವವಾಗಿ ಪತ್ತೆಯಾಗಿರೋ ಘಟನೆ ಚರೋಲಿಯ ದಿಘಿಯಲ್ಲಿ ನಡೆದಿದೆ. ಮೃತ ದುರ್ದೈವಿ ಬಾಲಕನನ್ನು ಸುಭಾಷ್ ಗೌರವ್ ತಿವಾರಿ ಎಂದು ಗುರುತಿಸಲಾಗಿದೆ. ಮೃತ ಮಗುವಿನ ತಂದೆ ಗೌರವ್...