Monday, 18th June 2018

Recent News

2 months ago

1993ರ ಮುಂಬೈ ಸ್ಫೋಟದ ಅಪರಾಧಿ ತಾಹೀರ್ ಮರ್ಚಂಟ್ ಸಾವು

ಮುಂಬೈ: 1993 ರ ಮುಂಬೈ ಸ್ಫೋಟದ ಅಪರಾಧಿ 56 ವರ್ಷದ ತಾಹೀರ್ ಮರ್ಚಂಟ್ ಇಂದು ಮುಂಜಾನೆ ಮೃತಪಟ್ಟಿದ್ದಾನೆ. ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಮರ್ಚಂಟ್ ನನ್ನು ಸಾಸೂನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ತಾಹೀರ್ 3.45ರ ಸುಮಾರಿಗೆ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ. ತಾಹೀರ್ ಪುಣೆಯ ಯೆರವಾಡ ಜೈಲಿನಲ್ಲಿದ್ದನು. ಈ ಮೊದಲು ಅಂದ್ರೆ ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗುವ ಮುನ್ನ ಸಹಕೈದಿಯಾಗಿದ್ದ ಮುಸ್ತಾಫ ದೊಸಾ ಎಂಬಾತ ಮುಂಬೈನಲ್ಲಿ ಮೃತಪಟ್ಟಿದ್ದನು. […]

5 months ago

ತಲೆ ಮೇಲೆ ಸಿಡಿಯಿತು ಪಟಾಕಿ – ಮೆದುಳು ಹೊರಬಂದು ಬಾಲಕ ಸ್ಥಳದಲ್ಲೇ ಸಾವು

ಬೆಂಗಳೂರು: ಪಟಾಕಿ ಸ್ಫೋಟಕ್ಕೆ 12 ವರ್ಷದ ಬಾಲಕ ಬಲಿಯಾಗಿರುವ ಘಟನೆ ನಗರದ ಹಲಸೂರಿನ ಕೇಂಬ್ರಿಡ್ಜ್ ಲೇಔಟ್‍ನಲ್ಲಿ ನಡೆದಿದೆ. ಧನುಷ್ ಸಾವನ್ನಪ್ಪಿದ ಬಾಲಕ. ಭಾನುವಾರ ರಾತ್ರಿ ಸುಮಾರು 9 ಗಂಟೆಗೆ ಕೇಂಬ್ರಿಡ್ಜ್ ಲೇಔಟ್ ನಲ್ಲಿರುವ ಲೂರ್ದ್ ಚರ್ಚಿನ ಆವರಣದಲ್ಲಿ ಪಟಾಕಿ ಸಿಡಿಸುವ ವೇಳೆ ಬಾಲಕ ಮೃತಪಟ್ಟಿದ್ದಾನೆ. ಪ್ರತಿ ಹೊಸ ವರ್ಷದ ಎರಡನೇ ಭಾನುವಾರ ಚರ್ಚ್ ನಲ್ಲಿ ಪಟಾಕಿ...

ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಪುಟ್ಟ ಕಂದಮ್ಮ ದುರ್ಮರಣ!

8 months ago

ಮಂಗಳೂರು: ಗಂಟಲಲ್ಲಿ ಚಕ್ಕುಲಿ ಸಿಕ್ಕಿ ಒಂದು ವರ್ಷದ ಪುಟ್ಟ ಕಂದಮ್ಮವೊಂದು ಮೃತಪಟ್ಟ ಆಘಾತಕಾರಿ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಮೃತ ದುರ್ದೈವಿ ಗಂಡು ಮಗುವನ್ನು ಅರುಷ್ ಎಂದು ಗುರುತಿಸಲಾಗಿದ್ದು, ಈತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ನಿವಾಸಿ...

ಆರ್ಮರ್ ಟ್ಯಾಂಕ್ ಅಪಘಾತದಲ್ಲಿ ಚಿಕ್ಕೋಡಿ ಯೋಧ ಮೃತ- ಸ್ವಗ್ರಾಮದಲ್ಲಿ ಅಂತಿಮ ದರ್ಶನ

10 months ago

ಚಿಕ್ಕೋಡಿ: ರಾಜಸ್ಥಾನದ ಮಿಲಿಟರಿ ನೆಲೆಯ 422ನೇ ಎಂಜಿನಿಯರ್ ಇಂಡಿಪೆಂಡೆಂಟ್ ಸ್ಕಾಡ್ ನ ಆರ್ಮರ್ ಟ್ಯಾಂಕ್ ಅಪಘಾತದಲ್ಲಿ ಯೋಧರೊಬ್ಬರು ಆಗಸ್ಟ್ 7ರಂದು ಮೃತಪಟ್ಟಿದ್ದರು. ಚಿಕ್ಕೋಡಿ ತಾಲೂಕು ಕರೋಶಿ ಗ್ರಾಮದ ಯೋಧ ಬಸವರಾಜ ಗುರುಸಿದ್ದ ಉಪಾಸೆ ಅವರ ಪಾರ್ಥಿವ ಶರೀರ ಇಂದು ಬೆಳಗಿನ ಜಾವ...

ಡೆಂಘೀಗೆ ಬಾಗಲಕೋಟೆಯ ಯೋಧ ಬಲಿ

11 months ago

ಬಾಗಲಕೋಟೆ: ಜಮ್ಮು ಕಾಶ್ಮೀರದಲ್ಲಿ ಸೇವೆಯಲ್ಲಿದ್ದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಮ್ಮಡ ಗ್ರಾಮದ ಸಿಆರ್‍ಪಿಎಫ್ ಯೋಧರೊಬ್ಬರು ಡೆಂಘೀ ಜ್ವರದಿಂದ ಮೃತಪಟ್ಟಿದ್ದಾರೆ. ಮಂಜುನಾಥ್ ಮೇತ್ರಿ(30) ಮೃತಪಟ್ಟ ಯೋಧ. ಅನಾರೋಗ್ಯದ ಹಿನ್ನೆಲೆಯಲ್ಲಿ ದೆಹಲಿಯ ಶಾಂತಿ ಮುಕಂದ್ ಆಸ್ಪತ್ರೆಗೆ ದಾಖಲಾಗಿದ್ದ ಮಂಜುನಾಥ್ ಅವರಿಗೆ ಡೆಂಘೀ ಕಾಣಿಸಿಕೊಂಡು...

ಯಾದಗಿರಿಯಲ್ಲಿ ಜವರಾಯನ ಅಟ್ಟಹಾಸ – 2 ಎರಡು ಲಾರಿಗಳ ಮುಖಾಮುಖಿಗೆ 9 ಬಲಿ

1 year ago

ಯಾದಗಿರಿ: ಎರಡು ಲಾರಿಗಳು ಮುಖಾಮುಖಿಯಾಗಿ ಡಿಕ್ಕಿಯಾದ ಪರಿಣಾಮ 9 ಮಂದಿ ಮೃತಪಟ್ಟ ಘೋರ ದುರಂತ ಯಾದಗಿರಿ ತಾಲೂಕಿನ ರಾಮಸಮುದ್ರದ ಬಳಿ ನಡೆದಿದೆ. ಮೃತರನ್ನು ಯಾದಗಿರಿ ತಾಲೂಕಿನ ಗಣಪೂರ ನಿವಾಸಿಗಳಾದ ಸಾಬಣ್ಣ ಮಣಿಗೇರಿ(55), ವಿಷ್ಣು ಮಣಿಗೇರಿ(15), ಲಕ್ಷ್ಮೀ ಮಣಿಗೇರಿ(12), ಸಿಂಚನಾ(12), ಆಫ್ರೀನಾ(15), ತಿಪ್ಪಣ್ಣ(60),...