Tuesday, 26th September 2017

1 day ago

ಆಸೀಸ್ ಸೋಲಿಸಿ ಏಕದಿನದಲ್ಲಿ ನಂಬರ್ ಒನ್ ಸ್ಥಾನಕ್ಕೆ ಜಿಗಿದ ಟೀಂ ಇಂಡಿಯಾ

ದುಬೈ: ಇಂದೋರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು 5 ವಿಕೆಟ್ ಗಳೊಂದಿಗೆ ಗೆಲ್ಲುವ ಮೂಲಕ ಟೀಂ ಇಂಡಿಯಾ ಈಗ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನಕ್ಕೆ ಏರಿದೆ. ಸೆಪ್ಟೆಂಬರ್ 24ಕ್ಕೆ ಅಂತ್ಯಗೊಂಡ ಹೊಸ ಶ್ರೇಯಾಂಕ ಪಟ್ಟಿಯ ಪ್ರಕಾರ ಒಟ್ಟು 48 ಪಂದ್ಯಗಳಿಂದ 5,764 ಅಂಕಗಳೊಂದಿಗೆ 120 ರೇಟಿಂಗ್ ಸಂಪಾದಿಸಿದ ಭಾರತ ಮೊದಲ ಸ್ಥಾನವನ್ನು ಪಡೆದಿದೆ. 50 ಪಂದ್ಯಗಳಿಂದ 5,957 ಅಂಗಳೊಂದಿಗೆ ದಕ್ಷಿಣ ಆಫ್ರಿಕಾ 119 ರೇಟಿಂಗ್ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದರೆ, […]

1 day ago

ಇಂದೋರ್ ಭಾರತದ ಪಾಲಿಗೆ ಅದೃಷ್ಟದ ತಾಣ ಅನ್ನೋದು ಮತ್ತೆ ಸಾಬೀತಾಯ್ತು!

ಇಂದೋರ್: ಆಸ್ಟ್ರೇಲಿಯಾವನ್ನು 5 ವಿಕೆಟ್ ಗಳಿಂದ ಬಗ್ಗು ಪಡೆಯುವ ಮೂಲಕ ಹೋಳ್ಕರ್ ಕ್ರಿಕೆಟ್ ಸ್ಟೇಡಿಯಂ ಭಾರತದ ಪಾಲಿಗೆ ಅದೃಷ್ಟದ ತಾಣ ಎನ್ನುವುದು ಮತ್ತೆ ಸಾಬೀತಾಗಿದೆ. ಈ ಮೂಲಕ ಒಂದೇ ಕ್ರೀಡಾಂಗಣದಲ್ಲಿ ಸತತ 5 ಪಂದ್ಯವನ್ನು ಗೆದ್ದ ದಾಖಲೆಗೆ ಭಾರತ ಪಾತ್ರವಾಗಿದೆ. ಇದುವರೆಗೆ ಭಾರತ ಯಾವುದೇ ಕ್ರೀಡಾಂಗಣದಲ್ಲಿ ಸತತ 5 ಪಂದ್ಯವನ್ನು ಗೆದ್ದಿರುವ ದಾಖಲೆಗಳಿಲ್ಲ. ಶಾರ್ಜಾ, ಮೀರ್...

ಹಾರ್ದಿಕ್ ಪಾಂಡ್ಯ ರನೌಟ್ ಆದ್ರೂ ನಾಟೌಟ್ ಆಗಿದ್ದು ಹೇಗೆ?

4 days ago

ಕೊಲ್ಕತ್ತಾ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ತಂಡದ ಸ್ಟಾರ್ ಆಟಗಾರ ಹಾರ್ಧಿಕ್ ಪಾಂಡ್ಯ ನಾಟೌಟ್ ತೀರ್ಪು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಪಂದ್ಯದ 45ನೇ ಓವರ್‍ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಕೇನ್ ರಿಚರ್ಡ್ ಸನ್ ಫುಲ್ಟಾಸ್ ಬಾಲ್...

ಕೊಹ್ಲಿ ಬ್ಯಾಟಿಂಗ್, ಕುಲದೀಪ್ ಬೌಲಿಂಗ್ ಕಮಾಲ್: ಕೋಲ್ಕತ್ತಾದಲ್ಲೂ ಮಲಗಿದ ಆಸೀಸ್

4 days ago

ಕೋಲ್ಕತ್ತಾ: ಎರಡನೇ ಏಕದಿನ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನದಿಂದ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 50 ರನ್‍ಗಳಿಂದ ಜಯಗಳಿಸಿದೆ. ಈ ಮೂಲಕ ಐದು ಏಕದಿನ ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ವಿರಾಟ್ ಕೊಹ್ಲಿ ಆಕರ್ಷಕ ಅರ್ಧಶತಕದಿಂದಾಗಿ ಭಾರತ 50 ಓವರ್ ಗಳಲ್ಲಿ...

ಹ್ಯಾಟ್ರಿಕ್ ವಿಕೆಟ್ ಕಿತ್ತ ಕುಲದೀಪ್ ಯಾದವ್

4 days ago

ಕೋಲ್ಕತ್ತಾ: ಆಸ್ಟ್ರೇಲಿಯಾದ ವಿರುದ್ಧದ ಎರಡನೇ ಏಕದಿನದ ಪಂದ್ಯದಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಹ್ಯಾಟ್ರಿಕ್ ವಿಕೆಟ್ ಕಿತ್ತಿದ್ದಾರೆ. 33ನೇ ಓವರ್ ನಲ್ಲಿ ಮ್ಯಾಥ್ಯು ವೇಡ್, ಆಸ್ಟಿನ್ ಅಗರ್, ಪ್ಯಾಟ್ ಕಮಿನ್ಸ್ ಅವರು ಔಟ್ ಮಾಡುವ ಮೂಲಕ ಹ್ಯಾಟ್ರಿಕ್ ಸಂಪಾದಿಸಿದರು. ವೇಡ್ 2 ರನ್...

ಪದ್ಮಭೂಷಣ ಪ್ರಶಸ್ತಿಗೆ ಧೋನಿ ಹೆಸರು ಶಿಫಾರಸು

6 days ago

ನವದೆಹಲಿ: ಭಾರತ ತಂಡದ ಮಾಜಿ ನಾಯಕ, ವಿಕೆಟ್ ಕೀಪರ್ ಆಗಿರುವ ಎಂಎಸ್ ಧೋನಿ ಹೆಸರನ್ನು ಪ್ರತಿಷ್ಟಿತ ಪದ್ಮಭೂಷಣ ಪ್ರಶಸ್ತಿಗೆ ಬಿಬಿಸಿಐ ಶಿಫಾರಸು ಮಾಡಿದೆ. ಪ್ರಸ್ತುತ ವರ್ಷದ ಪದ್ಮಭೂಷಣ ಪ್ರಶಸ್ತಿಗೆ ಬಿಸಿಸಿಐನಿಂದ ಧೋನಿ ಹೆಸರನ್ನು ಮಾತ್ರ ಶಿಫಾರಸು ಮಾಡಲಾಗಿದ್ದು, ಈ ನಿರ್ಧಾರವನ್ನು ಒಮ್ಮತದಿಂದ...

ಪಾಂಡ್ಯಾ ಬ್ಯಾಟಿಂಗ್, ಬೌಲಿಂಗ್‍ಗೆ ಮಕಾಡೆ ಮಲಗಿದ ಆಸೀಸ್

1 week ago

ಚೆನ್ನೈ: ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 26 ರನ್ ಗಳ ಗೆಲುವು ಸಾಧಿಸಿದೆ. ಈ ಮೂಲಕ 5 ಏಕದಿನ ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಟಾಸ್...

11ಕ್ಕೆ 3, 87ಕ್ಕೆ 5 ಕೊನೆಗೆ 7 ವಿಕೆಟ್ ನಷ್ಟಕ್ಕೆ 281 ರನ್: ಇದು ಧೋನಿ, ಪಾಂಡ್ಯಾ, ಭುವಿ ಬ್ಯಾಟಿಂಗ್ ಕರಾಮತ್ತು

1 week ago

ಚೆನ್ನೈ: 11 ರನ್ ಗಳಿಗೆ 3 ವಿಕೆಟ್ ಪತನಗೊಂಡು 87 ರನ್ ಗಳಿಗೆ 5 ಮಂದಿ ಟಾಪ್ ಬ್ಯಾಟ್ಸ್ ಮನ್ ಗಳು ಔಟಾದಾಗ ಭಾರತ ಶೀಘ್ರವೇ ಆಲೌಟ್ ಆಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಮಧ್ಯಮ ಕ್ರಮಾಂಕದಲ್ಲಿ ಧೋನಿ, ಪಾಂಡ್ಯಾ, ಕೊನೆಯಲ್ಲಿ ಬೌಲರ್...