Saturday, 23rd September 2017

Recent News

5 months ago

ಮಳೆಗಾಗಿ ಹೂತಿಟ್ಟ ಶವ ತೆಗೆದು ಸುಡ್ತಾರೆ ಈ ಗ್ರಾಮದ ಜನ!

ಚಿಕ್ಕಮಗಳೂರು: ವರುಣ ದೇವ ಮುನಿಸಿಕೊಂಡ್ರೆ ಕಪ್ಪೆ, ಕತ್ತೆಗಳ ಮದುವೆ ಮಾಡೋದು ಎಲ್ಲಾ ಕಡೆ ನಡೆಯುತ್ತದೆ. ಆದರೆ ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಪಿಳ್ಳೇನಹಳ್ಳಿ ಜನ ಹೂತಿಟ್ಟ ಶವವನ್ನು ಹೊರಗೆ ತೆಗೆದು ಸುಡುವ ವಿಶಿಷ್ಟ ಆಚರಣೆ ನಡೆಸುತ್ತಾರೆ. ಈ ಗ್ರಾಮದ ಜನ ಮಳೆಗಾಗಿ ನಾಲ್ಕು ಹಳ್ಳಿಯ ವ್ಯಾಪ್ತಿಯಲ್ಲಿ ಕಳೆದ ಒಂದೆರೆಡು ತಿಂಗಳಲ್ಲಿ ಹೂತು ಹಾಕಿದ್ದ ಮೃತದೇಹಗಳ ತಲೆಯನ್ನ ತೆಗೆದು ಹಲ್ಲು ಹಾಗೂ ಕೂದಲಿನ ಭಾಗವನ್ನ ಕಿತ್ತು ಮೃತದೇಹದ ತಲೆಯೊಂದಿಗೆ ಕಿತ್ತ ಭಾಗವನ್ನೆಲ್ಲಾ ಬೆಂಕಿ ಹಾಕಿ ಸುಡ್ತಾರೆ. ಹೀಗೆ […]

6 months ago

ಒಂದೇ ಸೂರಿನಡಿ ದಸರಾ, ಕೃಷ್ಣಜನ್ಮಾಷ್ಟಮಿ, ಕೋಲ, ಹುತ್ತರಿ- ಇದು ಕಾಫಿನಾಡಿನ ವಿದ್ಯಾರ್ಥಿನಿಯರ ಕಾಲೇಜ್ ಡೇ

ಚಿಕ್ಕಮಗಳೂರು: ನಗರದ ಎಸ್‍ಟಿಜೆ ಮಹಿಳಾ ಪದವಿ ಕಾಲೇಜು ಆವರಣದಲ್ಲಿ ಸೋಮವಾರ ವಾರ್ಷಿಕೋತ್ಸವದ ಅಂಗವಾಗಿ ಸಾಂಸ್ಕೃತಿಕ ಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿಯರು ದಸರಾ ಹಬ್ಬದ ಆಚರಣೆಯಲ್ಲಿ ತೊಡಗಿದ್ದರೆ, ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರು ಕೃಷ್ಣ ಜನ್ಮಾಷ್ಟಮಿ, ಹುತ್ತರಿ ಹಬ್ಬಗಳ ಸಂಭ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ವೀರಗಾಸೆ, ಜನಪದ ಕಲಾ ತಂಡಗಳ ನೇತೃತ್ವದಲ್ಲಿ ನವದುರ್ಗಿಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ,...