Saturday, 23rd June 2018

Recent News

2 days ago

ಸಂತಾನಹರಣ ಚಿಕಿತ್ಸೆಗಾಗಿ ಬಂದು ರಾತ್ರೋರಾತ್ರಿ ಮಗು ಬಿಟ್ಟು ಪರಾರಿ- ಅಮ್ಮನ ಕಾಣದೇ ಕಂದಮ್ಮ ಕಣ್ಣೀರು!

ಚಾಮರಾಜನಗರ: ಮೂರು ತಿಂಗಳ ಹಸುಗೂಸನ್ನು ಬಿಟ್ಟು ತಾಯಿ ನಾಪತ್ತೆಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ. ಜ್ಯೋತಿ ಎಂಬಾಕೆ ಮೂರು ತಿಂಗಳ ಮಗುವನ್ನು ಬಿಟ್ಟು ಪರಾರಿಯಾದ ಮಹಿಳೆ. ಮೂಲತಃ ನಂಜನಗೂಡು ನಿವಾಸಿಯಾಗಿರೋ ಜ್ಯೋತಿ ಹಾಗೂ ಪತಿ ಸೇರಿದಂತೆ ಆಕೆಯ ತಾಯಿ ಬುಧವಾರ ರಾತ್ರಿ ಜಿಲ್ಲಾಸ್ಪತೆಗೆ ಆಗಮಿಸಿದ್ದರು. ಸಂತಾನಹರಣ ಶಸ್ತ್ರ ಚಿಕಿತ್ಸೆಗೆಂದು ಆಗಮಿಸಿದ್ದ ಜ್ಯೋತಿಯನ್ನು ಆಸ್ಪತೆಗೆ ದಾಖಲಿಸಿಕೊಳ್ಳಲಾಗಿತ್ತು. ಆದರೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಜ್ಯೋತಿ ಮಗುವನ್ನು ಆಸ್ಪತ್ರೆಯಲ್ಲೇ ಬಿಟ್ಟು ರಾತ್ರೋರಾತ್ರಿ ನಾಪತ್ತೆಯಾಗಿದ್ದಾಳೆ. ಇದೀಗ ಮಗು ತಾಯಿಯನ್ನು ಕಾಣದೆ ರೋಧಿಸತೊಡಗಿದ್ದು, […]

2 days ago

ಜಮೀನಿನಲ್ಲಿ ಪತ್ತೆಯಾದ ಭಾರೀ ಗಾತ್ರದ ಹೆಬ್ಬಾವಿನ ರಕ್ಷಣೆ!

ಚಾಮರಾಜನಗರ: ಜಮೀನೊಂದರಲ್ಲಿ ಪತ್ತೆಯಾದ ಭಾರೀ ಗಾತ್ರದ ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟ ಘಟನೆ ಜಿಲ್ಲೆಯ ಯಳಂದೂರು ತಾಲೂಕಿನ ದಾಸನಹುಂಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಪ್ರವೀಣ್ ಎಂಬವರ ಜಮೀನಿನಲ್ಲಿ ಸುಮಾರು 10 ಅಡಿ ಉದ್ದದ ಹೆಬ್ಬಾವು ಕಾಣಿಸಿಕೊಂಡಿದೆ. ಕೂಡಲೇ ಸ್ಥಳೀಯರು ಸಂತೇಮರಳ್ಳಿಯ ಸ್ನೇಕ್ ಮಹೇಶ್ ಹಾಗೂ ಅರಣ್ಯ ಸಿಬ್ಬಂದಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಮಹೇಶ್...

ವಿಚ್ಛೇದನ ನೀಡೋದಕ್ಕೆ ಮುನ್ನವೇ 2ನೇ ಮದ್ವೆಯಾದ ಪೊಲೀಸ್ ಪೇದೆ!

1 week ago

ಚಾಮರಾಜನಗರ: ಪೊಲೀಸ್ ಪೇದೆಯೊಬ್ಬ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡುವುದಕ್ಕೆ ಮುನ್ನವೇ ಎರಡನೇ ಮದುವೆಯಾಗಿ ಮಗು ಆಗಿದ್ದು, ಮೊದಲ ಪತ್ನಿ ನ್ಯಾಯಕ್ಕಾಗಿ ಪೊಲೀಸ್ ಮತ್ತು ನ್ಯಾಯಾಲಯಕ್ಕೆ ಅಲೆಯುತ್ತಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ವಿನೂತ ಪೊಲೀಸ್ ನ ಮೊದಲ ಪತ್ನಿ, ತನ್ನ 9...

6 ಲಕ್ಷ ಸಾಲ ಪಡೆದು ಸಾವಿರ ಮರಗಳನ್ನು ಬೆಳೆಸಿರುವ ವೆಂಕಟೇಶ್ ಇಂದಿನ ಪಬ್ಲಿಕ್ ಹೀರೋ

2 weeks ago

ಚಾಮರಾಜನಗರ: ವಿಶ್ವ ಪರಿಸರ ದಿನ ಎಲ್ಲರೂ ಪರಿಸರದ ಬಗ್ಗೆ ಮಾತನಾಡುತ್ತಾರೆ. ಆದರೆ ಚಾಮರಾಜನಗರದ ನಿವಾಸಿ ವೆಂಕಟೇಶ್ ಹಸಿರ ಕ್ರಾಂತಿಗೆ ಮುಂದಾಗಿದ್ದಾರೆ ಇವರೇ ನಮ್ಮ ಇವತ್ತಿನ ಪಬ್ಲಿಕ್ ಹೀರೋ. ಚಾಮರಾಜನಗರ ಜಿಲ್ಲೆ ಅಂದರೆ ದಟ್ಟನೆಯ ಕಾಡು ಕಣ್ಮುಂದೆ ಬರುತ್ತದೆ. ಆದರೆ ಪಟ್ಟಣದಲ್ಲಿ ಮಾತ್ರ...

ಜನರ ಸೆಲ್ಫಿ ಕ್ರೇಜ್ – ಬೆಳೆಯ ನಷ್ಟ ಭರಿಸಲು ರೈತರಿಂದ ಮಾಸ್ಟರ್ ಪ್ಲಾನ್

3 weeks ago

ಚಾಮರಾಜನಗರ: ಜನರ ಸೆಲ್ಫಿ ಕ್ರೇಜ್‍ನಿಂದ ಹಾನಿಯಾಗುತ್ತಿದ್ದ ಬೆಳೆಯ ನಷ್ಟವನ್ನು ಭರಿಸಲು ರೈತರು ಮಾಸ್ಟರ್ ಪ್ಲಾನೊಂದನ್ನು ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಬೆಳೆದಿರುವ ಸೂರ್ಯಕಾಂತಿ ಬೆಳೆ ಜನರ ಸೆಲ್ಫಿ ಕ್ರೇಜ್ ಗೆ ತುತ್ತಾಗುತ್ತಿತ್ತು. ಇದೀಗ ಇಲ್ಲಿನ ರೈತರು ಸೆಲ್ಫಿ ತೆಗೆದುಕೊಳ್ಳುವವರ...

ನಮ್ಮ ಕಾರ್ಯಕರ್ತರನ್ನು ಟಚ್ ಮಾಡಿದ್ರೆ ನಾವು ಸುಮ್ಮನೆ ಕೂರಲ್ಲ: ಪ್ರತಾಪ್ ಸಿಂಹ

3 weeks ago

ಚಾಮರಾಜನಗರ: ಮುಖ್ಯಮಂತ್ರಿ ಕುಮಾರಸ್ವಾಮಿ ಸರ್ಕಾರದಲ್ಲೂ ನಮ್ಮ ಕಾರ್ಯಕರ್ತನ್ನು ಟಚ್ ಮಾಡಿದರೆ ನಾವು ಸುಮ್ಮನೆ ಇರಲ್ಲ ಎಂದು ಮೈಸೂರಿನ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ ಕೊಟ್ಟಿದ್ದಾರೆ. ಈ ಹಿಂದೆ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುವ ಸಂದರ್ಭದಲ್ಲಿ...

40 ವರ್ಷಗಳ ಬಳಿಕ ಒಂದು ರಾತ್ರಿಯ ಮಳೆಗೆ ಇತಿಹಾಸ ಪ್ರಸಿದ್ಧ ಗಣಪತಿ ಕೊಳ ತುಂಬಿತು!

4 weeks ago

ಚಾಮರಾಜನಗರ: ಜಿಲ್ಲೆಯಲ್ಲಿ ಗುರುವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ 40 ವರ್ಷಗಳ ಬಳಿಕ ಇತಿಹಾಸ ಪ್ರಸಿದ್ಧವಾದ ಗಣಪತಿ ಕೊಳ ತುಂಬಿದೆ. ಮಳೆ ನೀರಿನಿಂದ ಈ ಕೊಳ ತುಂಬದ ಕಾರಣ ಜನರು ಕಳೆದ 40 ವರ್ಷಗಳಿಂದ ಬೋರ್ ಮೂಲಕ ಈ ಕೊಳಕ್ಕೆ ನೀರು...

ಚಾಮರಾಜನಗರದಲ್ಲಿ ಅಭ್ಯರ್ಥಿಗಳ ವೋಟು ಅಭ್ಯರ್ಥಿಗಳಿಗೇ ಇಲ್ಲ!

1 month ago

ಚಾಮರಾಜನಗರ: ರಾಜ್ಯಾದ್ಯಂತ ಬಿರುಸಿನ ಮತದಾನ ನಡೆಯುತ್ತಿದ್ದು, ಚಾಮರಾಜನಗರದ ಅಭ್ಯರ್ಥಿಗಳ ವೋಟು ಅಭ್ಯರ್ಥಿಗಳಿಗೇ ಇಲ್ಲ. ಹೌದು. ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಮೂವರು ಅಭ್ಯರ್ಥಿಗಳಿಗೆ ತಮ್ಮ ವೋಟು ತಮಗೆ ಹಾಕಿಕೊಳ್ಳುವ ಭಾಗ್ಯವಿಲ್ಲದಿರುವುದು ವಿಪರ್ಯಾಸವಾಗಿದೆ. ಕಾಂಗ್ರೆಸ್ ನ ಸಿ.ಪುಟ್ಟರಂಗಶೆಟ್ಟಿ, ಬಿಜೆಪಿಯ ಪ್ರೊ.ಮಲ್ಲಿಕಾರ್ಜುನಪ್ಪ, ವಾಟಾಳ್ ಪಕ್ಷದ ವಾಟಾಳ್...