Sunday, 19th November 2017

Recent News

2 days ago

ದೇವಯ್ಯ ಪಾರ್ಕ್ ಬಳಿ ಫ್ಲೈಓವರ್ ಮೇಲೆ ಕಾರುಗಳ ಡಿಕ್ಕಿ- ಕೆಳಗೆ ಬೀಳಬೇಕಿದ್ದ ಕಾರು ಜಸ್ಟ್ ಮಿಸ್

ಬೆಂಗಳೂರು: ಮಲ್ಲೇಶ್ವರಂ ನ ದೇವಯ್ಯ ಪಾರ್ಕ್ ಬಳಿಯ ಫ್ಲೈಓವರ್ ಮೇಲೆ ಎರಡು ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಫ್ಲೈಓವರ್ ಕೆಳಗೆ ಬೀಳಬೇಕಿದ್ದ ಕಾರು ಸ್ವಲ್ಪದರಲ್ಲೇ ಪಾರಾಗಿದೆ. ಫ್ಲೈಓವರ್ ಮೇಲೆ ಬರುತ್ತಿದ್ದ ಫೋರ್ಡ್ ಫಿಗೊ ಕಾರಿಗೆ ಹಿಂಬದಿಯಿಂದ ಸ್ವಿಫ್ಟ್ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಿಂದ ಕೆಳಗಿಳಿದು ಚಾಲಕ ಹೊರಗೆ ಓಡಿ ಬಂದಿದ್ದಾರೆ. ಇದರಿಂದ ಬಾರಿ ಅನಾಹುತ ತಪ್ಪಿದೆ. ಕಾರು ಫ್ಲೈಓವರ್ ಕೆಳಗೆ ಬೀಳದೆ ತಡೆಗೋಡೆಯ ಮೇಲೆ ಸಿಲುಕಿಕೊಂಡಿದೆ. ಘಟನೆ ನಡೆದ ಸ್ಥಳಕ್ಕೆ ಮಲ್ಲೇಶ್ವರಂ ಸಂಚಾರಿ ಪೊಲೀಸರು […]

2 days ago

ವ್ಯಕ್ತಿ ಸಿಗಲಿಲ್ಲ ಎಂದು ಕಾರಿನ ಮೇಲೆ ಆಕ್ರೋಶವನ್ನು ತೀರಿಸಿಕೊಂಡ ಬಂಡೀಪುರದ ಆನೆ

ಮೈಸೂರು: ಕಾಡಾನೆಯೊಂದು ದಾಳಿಗೆ ಮುಂದಾಗಿದ್ದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ತಪ್ಪಿಸಿಕೊಂಡಿದ್ದಾರೆ. ಆದರೆ ಅಲ್ಲೇ ಸ್ಥಳದಲ್ಲಿದ್ದ ಅವರ ಕಾರನ್ನು ಜಖಂಗೊಳಿಸಿರುವ ಘಟನೆ ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ನಡೆದಿದೆ. ಮೂಲತಃ ಕೊಡಗಿನ ವಿರಾಜಪೇಟೆಯ ನಿವಾಸಿಯಾದ ಶುಂಠಿ ಬೆಳೆಗಾರ ತಂಗಚನ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರು ಮುಳ್ಳೂರು ಗ್ರಾಮದಲ್ಲಿ ಮೂರು ಎಕರೆ ಜಮೀನಿನಲ್ಲಿ ಶುಂಠಿ ಬೆಳೆದಿದ್ದರು. ಅದನ್ನು...

ಮಂಡ್ಯ: ಪಂಚಾಯ್ತಿ ಅಧ್ಯಕ್ಷರ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಜಖಂಗೊಳಿಸಿದ್ರು

5 days ago

ಮಂಡ್ಯ: ರಾಜಕೀಯ ದ್ವೇಷಕ್ಕೆ ಜಿಲ್ಲೆಯ ನಾಗಮಂಗಲ ತಾಲೂಕು ಪಂಚಾಯ್ತಿ ಅಧ್ಯಕ್ಷರ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ, ಕಾರನ್ನು ಸಂಪೂರ್ಣ ಜಖಂಗೊಳಿಸಿರುವ ಘಟನೆ ನಡೆದಿದೆ. ಶಾಸಕ ಚಲುವರಾಯಸ್ವಾಮಿ ಬೆಂಬಲಿಗರಾದ ಅಧ್ಯಕ್ಷ ನವೀನ್, ನನ್ನ ಕಾರಿನ ಮೇಲೆ ಮಾಜಿ ಶಾಸಕ ಸುರೇಶ್ ಗೌಡ...

ಅತೀ ವೇಗದ ಕಾರ್ ಚಾಲನೆಯಿಂದ 8 ತಿಂಗಳ ಗರ್ಭಿಣಿ ದಾರುಣ ಸಾವು!

6 days ago

ನೊಯ್ಡಾ: ವ್ಯಕ್ತಿಯೊಬ್ಬ ತನ್ನ ಕಾರನ್ನು ವೇಗವಾಗಿ ಚಲಾಯಿಸಿದ್ದರಿಂದ 8 ತಿಂಗಳ ಗರ್ಭಿಣಿ ಹಾಗೂ ಆಕೆಯ ಪತಿಗೆ ಗುದ್ದಿದ ಘಟನೆ ನಡೆದಿರುವುದಾಗಿ ಬೆಳಕಿಗೆ ಬಂದಿದೆ. ಈ ಘಟನೆ ನೊಯ್ಡಾದಲ್ಲಿ ಭಾನುವಾರ ರಾತ್ರಿ ನಡೆದಿದೆ. ಘಟನೆಯಿಂದ ಗರ್ಭಿಣಿ ಗಂಭೀರ ಗಾಯಗೊಂಡಿದ್ದು, ಕೂಡಲೇ ಮಹಿಳೆಯನ್ನು ಸ್ಥಳೀಯ...

ಕಾಲುವೆಗೆ ಉರುಳಿ ಬಿದ್ದ ಸ್ವಿಫ್ಟ್ ಕಾರು- ತಂದೆ, ಮಗ ಪಾರು

2 weeks ago

ರಾಯಚೂರು: ಮಾನ್ವಿ ತಾಲೂಕಿನ ಸಿರವಾರ ಬಳಿ ಮಂಗಳವಾರ ರಾತ್ರಿ ಸ್ವಿಫ್ಟ್ ಕಾರು ಕಾಲುವೆಗೆ ಉರುಳಿ ಬಿದ್ದಿದ್ದು ಅದೃಷ್ಟವಶಾತ್ ಕಾರಿನಲ್ಲಿದ್ದ ತಂದೆ, ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದು ದೇವದುರ್ಗ ತಾಲೂಕಿನ ಅರಕೇರಾದ ರಾಮಚಂದ್ರ ಎಂಬವರಿಗೆ ಸೇರಿದ ಕಾರು ಅಂತ ಗುರುತಿಸಲಾಗಿದೆ. ರಾಮಚಂದ್ರ ಹಾಗೂ...

ಹೆಂಡ್ತಿಗೆ ಪತ್ರ ಬರೆದಿಟ್ಟು ಕಾರಿನೊಳಗೇ ಶೂಟೌಟ್ ಮಾಡ್ಕೊಂಡ..!

2 weeks ago

ಥಾಣೆ: ಪತ್ನಿಗೆ ಪತ್ರ ಬರೆದಿಟ್ಟು 36 ವರ್ಷದ ವ್ಯಕ್ತಿಯೊಬ್ಬರು ತನ್ನ ಕಾರೊಳಗೆಯೇ ಶೂಟೌಟ್ ಮಾಡ್ಕೊಂಡ ಆಘಾತಕಾರಿ ಘಟನೆಯೊಂದು ಥಾಣೆಯಲ್ಲಿ ನಡೆದಿದೆ. ಈ ಘಟನೆ ಭಾನುವಾರ ಸಂಜೆ ನಡೆದಿದೆ. ಶೂಟೌಟ್ ಮಾಡ್ಕೊಂಡ ವ್ಯಕ್ತಿಯನ್ನು ಸಂಕೇತ್ ಹನುಮಂತ್ ಜಾಧವ್ ಎಂದು ಗುರುತಿಸಲಾಗಿದ್ದು, ಇವರು ಗುತ್ತಿಗೆದಾರನಾಗಿ...

ರಣಜಿ ವೇಳೆ ಕ್ರಿಕೆಟ್ ಮೈದಾನಕ್ಕೆ ದಿಢೀರ್ ಎಂಟ್ರಿ ಕೊಟ್ಟ ವ್ಯಾಗನ್ ಆರ್ ಕಾರು

2 weeks ago

ನವದೆಹಲಿ: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ರಣಜಿ ಪಂದ್ಯ ನಡೆಯುವ ವೇಳೆ ಮೈದಾನದಲ್ಲಿ ಕಾರು ಚಾಲನೆ ಮಾಡಿರುವ ಘಟನೆ ದೆಹಲಿಯ ಏರ್ ಫೋರ್ಸ್ ಕ್ರೀಡಾಂಗಣದಲ್ಲಿ ನಡೆದಿದೆ. ದೆಹಲಿ ಹಾಗೂ ಉತ್ತರ ಪ್ರದೇಶದ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದ ಮೂರನೇ ದಿನದಾಟದ ವೇಳೆ...

ಕಸದ ರಾಶಿಗೆ ಬೆಂಕಿ- ಧಗಧಗನೆ ಹೊತ್ತಿ ಉರಿದ ಟಾಟಾ ಏಸ್, 2 ಕಾರುಗಳು

2 weeks ago

ಬೆಳಗಾವಿ: ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ 1 ಟಾಟಾ ಏಸ್, 2 ಕಾರುಗಳು ಧಗಧಗನೆ ಹೊತ್ತಿ ಉರಿದು ಸುಟ್ಟು ಕರಕಲಾದ ಘಟನೆ ಜಿಲ್ಲೆಯ ಗಾಂಧಿನಗರದಲ್ಲಿ ಬೆಳ್ಳಂಬೆಳಿಗ್ಗೆ ನಡೆದಿದೆ. ಹಳೇ ಗಾಂಧಿನಗರದ ರಸ್ತೆ ಪಕ್ಕದಲ್ಲಿ ಒಂದು ಟಾಟಾ ಏಸ್ ಮತ್ತು ಎರಡು ಕಾರುಗಳು ನಿಂತಿದ್ದವು....