Sunday, 24th June 2018

Recent News

1 month ago

ಟೆಂಪೋವನ್ನು ಓವರ್ ಟೇಕ್ ಮಾಡಲು ಹೋಗಿ ನಿಯಂತ್ರಣ ತಪ್ಪಿ ಫುಟ್ ಪಾತ್ ಗೆ ನುಗ್ಗಿತು ಬಿಎಂಟಿಸಿ ಬಸ್!

ಬೆಂಗಳೂರು: ಟೆಂಪೋ ಒಂದನ್ನು ಓವರ್ ಟೇಕ್ ಮಾಡುವಾಗ ನಿಯಂತ್ರಣ ತಪ್ಪಿ ಬಿಎಂಟಿಸಿ ಬಸ್ಸೊಂದು ಫುಟ್‍ ಪಾತ್‍ಗೆ ನುಗ್ಗಿದ ಘಟನೆ ಕನಕಪುರ ರಸ್ತೆಯ ಜರಗನಹಳ್ಳಿ ಸ್ಮಶಾನದ ಬಳಿ ನಡೆದಿದೆ. ಬಸ್ ಬನಶಂಕರಿಯಿಂದ ಹಾರೋಹಳ್ಳಿಗೆ ತೆರಳುತ್ತಿದ್ದ ವೇಳೆ ಟೆಂಪೋವನ್ನು ಓವರ್ ಟೇಕ್ ಮಾಡುವಾಗ ಈ ಘಟನೆ ಸಂಭವಿಸಿದೆ. ಬಸ್ಸಿನಲ್ಲಿ 25ಕ್ಕೂ ಹೆಚ್ಚು ಪ್ರಯಾಣಿಕರಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಘಟನೆಯಲ್ಲಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ ಚಾಲಕನ ಅತಿಯಾದ ವೇಗವೇ ಘಟನೆಗೆ ಕಾರಣ ಎಂದು ಪ್ರಯಾಣಿಕರು ಆರೋಪಿಸುತ್ತಿದ್ದಾರೆ. ಸದ್ಯ ಈ […]

3 months ago

ಬಿಎಂಟಿಸಿ ಬಸ್‍ನಲ್ಲಿ ಜಿಪ್ ತೆಗೆದ ಕಾಮುಕ ಅಜ್ಜ – ಪಕ್ಕದಲ್ಲೇ ಕೂತಿದ್ದ ಯುವತಿಗೆ ಕಿರುಕುಳ

ಬೆಂಗಳೂರು: ನಗರದ ಬಿಎಂಟಿಸಿ ಬಸ್ಸಿನಲ್ಲಿ ಕಾಮುಕ ಮುದುಕನೊಬ್ಬ ಯುವತಿಯ ಮುಂದೆ ತನ್ನ ವಿಕೃತಿ ಮರೆದ ಘಟನೆ ನಡೆದಿದೆ. ಈ ಘಟನೆ ಕೋರಮಂಗಲದ 100 ಫೀಟ್ ರಸ್ತೆಯ ಈಝೋನ್ ಬಳಿ ಮಾರ್ಚ್ 13ರ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಏನಿದು ಘಟನೆ?: ಮಂಗಳವಾರ ಸಂತ್ರಸ್ತ ಯುವತಿ ಕೆಎ57 ಎಫ್ 2654 ನಂಬರಿನ...

KSRTC, BMTC ಬಸ್‍ಗಳ ಓಡಾಟ ಶುರು – ಸಹಜ ಸ್ಥಿತಿಯತ್ತ ಕರ್ನಾಟಕ

5 months ago

ಬೆಂಗಳೂರು: ಕರ್ನಾಟಕ ಬಂದ್ ಬಹುತೇಕ ಅಂತ್ಯಗೊಂಡಿದೆ. ಬಂದ್‍ನ ಪರಿಣಾಮ ನಿನ್ನೆ ರಾತ್ರಿಯಿಂದ ನಿಂತಿದ್ದ ಬಸ್ಸುಗಳ ಸಂಚಾರ ಪ್ರಾರಂಭವಾಗಿದೆ. ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳ ಓಡಾಟ ಶುರುವಾಗಿರೋ ಹಿನ್ನೆಲೆಯಲ್ಲಿ ಕರ್ನಾಟಕ ಸಹಜ ಸ್ಥಿತಿಯತ್ತ ತೆರಳುತ್ತಿದೆ. ಬೆಳಗ್ಗೆ 6 ಗಂಟೆಯಿಂದ ಸ್ಥಗಿತಗೊಂಡಿದ್ದ ಬಸ್‍ಗಳ ಸಂಚಾರ ಇದೀಗ...

ಮಹದಾಯಿಗಾಗಿ ಕರ್ನಾಟಕ ಬಂದ್- ರಸ್ತೆಗಿಳಿಯದ BMTC, KSRTC ಬಸ್

5 months ago

ಬೆಂಗಳೂರು: ಕನ್ನಡ ಪರ ಹೋರಾಟಗಾರರು ನಡೆಸುತ್ತಿರುವ ಬಂದ್ ಬಿಸಿ ಜನ ಸಾಮನ್ಯರಿಗೆ ತಟ್ಟಿದೆ. ಬೆಂಗಳೂರಿನ ಜೀವನಾಡಿ ಬಿಎಂಟಿಸಿ ಕೂಡ ತನ್ನ ಸಂಚಾರವನ್ನು ರದ್ದುಗೊಳಿಸಿದೆ. ಬೇರೆ ಊರುಗಳಿಂದ ಬೆಂಗಳೂರು ನಗರಕ್ಕೆ ಬಂದ ಜನರು ಬಸ್ ಗಳಿಲ್ಲದೆ ಪರದಾಡುತ್ತಿರುವ ದೃಶ್ಯಗಳು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ...

ಗುರುವಾರ ಕರ್ನಾಟಕ ಬಂದ್: ಏನಿರುತ್ತೆ? ಏನಿರಲ್ಲ? – ಇಲ್ಲಿದೆ ಸಂಪೂರ್ಣ ಮಾಹಿತಿ

5 months ago

ಬೆಂಗಳೂರು: ಗುರುವಾರ ಬಂದ್ ನಡೆಯುತ್ತದೆ. ಇದರಲ್ಲಿ ಯಾವುದೇ ರಾಜಕೀಯ, ಗೊಂದಲಗಳು ಇಲ್ಲ ಎಂದು ಕನ್ನಡ ಪರ ಸಂಘಟನೆಗಳು ಹೇಳಿವೆ. ಮಹದಾಯಿಗಾಗಿ ಕರೆಯಲಾದ ಬಂದ್ ವಿಚಾರವಾಗಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ನಾಯಕರು ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ...

ಕರ್ನಾಟಕದ ಜನರೇ ಮತ್ತೊಂದು ಬಂದ್‍ಗೆ ರೆಡಿಯಾಗಿ

5 months ago

ಬೆಂಗಳೂರು: ಮಹದಾಯಿ ವಿವಾದ ಬಗೆ ಹರಿಸಲು ಜನವರಿ 25ರಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ನಡೆಸಲು ಕರೆ ನೀಡಿದರೆ ಜ.30 ರಂದು ಸಾರಿಗೆ ಬಂದ್ ಆಗುವ ಸಾಧ್ಯತೆಯಿದೆ. ಈ ಹಿಂದೆ ನಡೆಸಿದ ಸಾರಿಗೆ ಮುಷ್ಕರದ ವೇಳೆ ನೀಡಿದ್ದ ನಮ್ಮ ಬೇಡಿಕೆಗಳನ್ನು...

ಕುಡಿದ ಮತ್ತಲ್ಲಿ ರಾಂಗ್ ರೂಟಲ್ಲಿ ಬಂದಿದ್ದನ್ನು ಪ್ರಶ್ನಿಸಿದ ಬಸ್ ಚಾಲಕನ ಮೇಲೆ ಹಲ್ಲೆ- ಬಿಜೆಪಿ ಮುಖಂಡನ ಸಂಬಂಧಿ ಎಂದು ಅವಾಜ್

6 months ago

ಬೆಂಗಳೂರು: ಕುಡಿದು ರಾಂಗ್ ರೂಟ್ ನಲ್ಲಿ ವಾಹನ ಚಲಾಯಿಸಿಕೊಂಡು ಬರುತ್ತಿದ್ದುದನ್ನು ಪ್ರಶ್ನಿಸಿದ ಬಿಎಂಟಿಸಿ ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಗೊಟ್ಟಿಗೆರೆ ಯಲ್ಲಿ ಕಳೆದ ರಾತ್ರಿ ನಡೆದಿದೆ. ಬಿಎಂಟಿಸಿ ಚಾಲಕನಿಗೆ ಥಳಿಸಿದ ವ್ಯಕ್ತಿಯನ್ನು ನೀನು ಯಾರಪ್ಪ...

ಹೊಸ ವರ್ಷಕ್ಕೆ BMTC ವೋಲ್ವೋ ಬಸ್ ಪ್ರಯಾಣಿಕರಿಗೊಂದು ಸಿಹಿಸುದ್ದಿ

6 months ago

ಬೆಂಗಳೂರು: ಈ ಬಾರಿ ಹೊಸ ವರ್ಷಕ್ಕೆ ಬಿಎಂಟಿಸಿ ತನ್ನ ವೋಲ್ವೋ ಬಸ್ ಪ್ರಯಾಣಿಕರಿಗೆ ಸಿಹಿ ಸುದ್ದಿಯನ್ನು ನೀಡಿದೆ. ವೋಲ್ವೋ ಬಸ್ ಪ್ರಯಾಣ ದರವನ್ನ ಶೇ.37 ರಷ್ಟು ಇಳಿಕೆ ಮಾಡಿದೆ. ಹೊಸ ವರ್ಷದ ಮೊದಲ ದಿನದಿಂದಲೇ ಹೊಸ ದರಗಳು ಜಾರಿಗೆ ಬರಲಿದೆ. ಪ್ರಾಯೋಗಿಕವಾಗಿ...