Wednesday, 23rd May 2018

Recent News

2 months ago

ಅಂಧನಾದ್ರೂ ಸ್ವಾಭಿಮಾನದ ಜೀವನ ನಡೆಸುತ್ತಿರೋ ಯುವಕನ ನೇತ್ರ ಚಿಕಿತ್ಸೆಗೆ ಬೇಕಿದೆ ಸಹಾಯ

ಬಾಗಲಕೋಟೆ: ಅಂಧನಾದ್ರೂ ಸ್ವಾಭಿಮಾನ ಜೀವನ ನಡೆಸುತ್ತಿರುವ ಜಿಲ್ಲೆಯ ಬೀಳಗಿ ತಾಲೂಕಿನ ಕದಾಂಪುರ ಗ್ರಾಮದ ಬಸವರಾಜ್ ನೇತ್ರ ಚಿಕಿತ್ಸೆಗೆ ಸಹಾಯ ಕೇಳಿಕೊಂಡು ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ. ಬಸವರಾಜ್ ಹುಟ್ಟು ಅಂಧರೇನಲ್ಲ, 15 ವರ್ಷಗಳ ಹಿಂದೆ ನರ ದೌರ್ಬಲ್ಯಕ್ಕೆ ತುತ್ತಾಗಿ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಕಣ್ಣುಗಳು ಹೋದರೂ ಧೃತಿಗೆಡದ ಬಸವರಾಜ್ ಗ್ರಾಮದಿಂದ ಗ್ರಾಮಗಳಿಗೆ ತಿರುಗಿ ಪುಸ್ತಕ, ಪೆನ್ನು ಮಾರಿಕೊಂಡು ಜೀವನ ನಡೆಸುತ್ತಿದ್ದಾರೆ. ಬಡ ಕುಟುಂಬದಲ್ಲಿ ಹುಟ್ಟಿರುವ ಬಸವರಾಜ್ ತಂದೆ-ತಾಯಿಯ ನಾಲ್ಕನೇ ಮಗ. ದಿನ ನಿತ್ಯದ ಚಟುವಟಿಕೆಗಾಗಿ ಪೋಷಕರನ್ನು ಅವಲಂಬಿಸಿರುವ ಬಸವರಾಜ್ ಮುಂದಿನ […]

3 months ago

ಸಹಾಯ ಕೇಳಿ ಬಂದ ಅಂಧನನ್ನೇ ಹೊರದಬ್ಬಿದ ಸಚಿವರು- ಶಕ್ತಿ ಕೇಂದ್ರದಲ್ಲಿ ನಡೀತು ಅಮಾನವೀಯ ಘಟನೆ

ಬೆಂಗಳೂರು: ಸಹಾಯ ಕೇಳಿ ಬಂದ ದಿವ್ಯಾಂಗನ ಮೇಲೆ ತೋಟಗಾರಿಕಾ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಅವರು ದೌರ್ಜನ್ಯವೆಸಗಿದ ಅಮಾನವೀಯ ಘಟನೆಯೊಂದು ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಈ ಘಟನೆ ವಿಧಾನಸೌಧ ಮೂರನೇ ಮಹಡಿ ಲಿಫ್ಟ್ ಬಳಿ ಶನಿವಾರ ರಾತ್ರಿ ನಡೆದಿದೆ. ಬೀದರ್ ಮೂಲದ ದಿವ್ಯಾಂಗ ಮಂಜುನಾಥ ಎಂಬವರೇ ದೌರ್ಜನ್ಯಕ್ಕೊಳಗಾದ ವ್ಯಕ್ತಿ. ಸಚಿವ ಸಂಪುಟ ಸಭೆಯ ಬಳಿಕ...

ವಿಜಯಪುರದ ಅಂಧನ ಬಾಳಿಗೆ ಬೆಳಕಾದ ಪ್ರಧಾನಿ ಮೋದಿ!

10 months ago

ವಿಜಯಪುರ: ಪ್ರಧಾನಿ ನರೇಂದ್ರ ಮೋದಿಯವರು ಸೂರಿಲ್ಲದೇ ಗೋಳಾಡುತ್ತಿದ್ದ ಜಿಲ್ಲೆಯ ಅಂಧರೊಬ್ಬರಿಗೆ ಸೂರು ಕಲ್ಪಿಸಿಕೊಡೋ ಮೂಲಕ ಅವರ ಬಾಳಿಗೆ ಬೆಳಕಾಗಿದ್ದಾರೆ. ಇಂಡಿ ತಾಲೂಕಿನ ಇಂಚಗೇರಿ ಗ್ರಾಮದ ಅಂಧ ಕಾಶಿನಾಥ್ ಸೂರಿಲ್ಲದೆ 20 ವರ್ಷಗಳಿಂದ ಗೋಳಾಡುತ್ತಿದ್ದರು. ಸೂರಿಗಾಗಿ ಅನೇಕ ಬಾರಿ ಕಾಶಿನಾಥ್ ಇಂಚಗೇರಿ ಗ್ರಾಮದ...

ಅನಾಥನಾದ್ರೂ ಇವರು ನೂರಾರು ಹೆಣ್ಣುಮಕ್ಕಳಿಗೆ ಅಣ್ಣ

10 months ago

ಚಿತ್ರದುರ್ಗ: ಹೆಣ್ಣು ಮಕ್ಕಳನ್ನ ಕೆಟ್ಟ ದೃಷ್ಠಿಯಿಂದ ನೋಡೋ ವಿಕೃತ ಮನಸ್ಸಿನ ವ್ಯಕ್ತಿಗಳಿಗೆ ಇವರು ಮಾದರಿ. ಹುಟ್ಟುತ್ತಾ ಅನಾಥನಾದರೂ ನೂರಾರು ಹೆಣ್ಣು ಮಕ್ಕಳಿಗೆ ಅಣ್ಣ. ಇಂತಹ ಅಪರೂಪದ ಅಣ್ಣ ಜಿಲ್ಲೆಯಲ್ಲಿದ್ದಾರೆ. ಪ್ರತಿ ವರ್ಷ ರಕ್ಷಾ ಬಂಧನ ಸಮಯದಲ್ಲಿ ನೂರಾರು ಹೆಂಗಳೆಯರು ರಾಖಿ ಕಟ್ಟಿ...

ಅಂಧರಾದ್ರೂ ಅನ್ಯರ ಬಾಳಿನ ಆಶಾಕಿರಣ-ಕಣ್ಣಿಲ್ಲದವರಿಗೆ ಸ್ವಾವಲಂಬಿ ಪಾಠ

11 months ago

ತುಮಕೂರು: ದೇಹದ ಎಲ್ಲಾ ಭಾಗಗಳು ಸರಿಯಿದ್ದರೂ ನಾವುಗಳು ಬೇರೆಯವರಿಗೆ ಸಹಾಯ ಮಾಡಲು ಯೋಚನೆ ಮಾಡುತ್ತವೆ, ಆದ್ರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಅಂಧರಾದ್ರೂ ಇತರರಿಗೆ ಮಾದರಿಯಾಗಿದ್ದಾರೆ. ತುಮಕೂರು ನಿವಾಸಿ ಶಿವಕುಮಾರ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಅಂಧ ಮಕ್ಕಳು ಹೆತ್ತವರಿಗೆ ಹೊರೆಯಾಗಬಾರದು,...

ಹಾವೇರಿ: ಅಂಧ ಯುವಕನ ಬಾಳಿಗೆ ಬೆಳಕಾದ ನಂದಾ!

11 months ago

ಹಾವೇರಿ: ಆತ ಎರಡೂ ಕಣ್ಣುಗಳು ಕಾಣದಿರೋ ಅಂಧ. ಬೆಳಕನ್ನೇ ಕಾಣದ ಇಂಥವರಿಗೆ ಮದುವೆ ಅನ್ನೋದು ಕನಸಿನ ಮಾತು. ಇಂಥಾ ಅಂಧ ಯುವಕನನ್ನ ಕೈ ಹಿಡಿಯೋ ಮೂಲಕ ಯುವತಿಯೊಬ್ಬಳು ಆತನ ಬೆಳಕಾಗಿದ್ದಾಳೆ. ಎಸ್‍ಎಸ್‍ಎಲ್‍ಸಿವರೆಗೆ ಓದಿಕೊಂಡಿದ್ದ ಯುವತಿ ಅಂಧ ಯುವಕನನ್ನ ಕೈ ಹಿಡಿಯೋ ಮೂಲಕ ಅಪರೂಪದ...