Monday, 25th September 2017

Recent News

50 mins ago

ಇಂದು ರೌಡಿ ನಾಗ, ಮಕ್ಕಳಿಗೆ ಬಿಡುಗಡೆ ಸಾಧ್ಯತೆ

ಬೆಂಗಳೂರು: ಕೋಟ್ಯಾಂತರ ರೂಪಾಯಿ ಹಳೇ ನೋಟು ಬದಲಾವಣೆ ದಂಧೆ ಪ್ರಕರಣದಲ್ಲಿ ಸಿಲುಕಿಕೊಂಡು ಪೊಲೀಸರ ಅತಿಥಿಯಾಗಿದ್ದ ರೌಡಿ ನಾಗ ಇಂದು ಬಿಡುಗಡೆಯಾಗುವ ಸಾಧ್ಯತೆಗಳಿವೆ. ನಾಲ್ಕು ದಿನಗಳ ಹಿಂದೆ ಹೈಕೋರ್ಟ್ ನಲ್ಲಿ ಜಾಮೀನು ಪಡೆದಿರೋ ನಾಗ ಇಂದು ಸಂಜೆ 6 ಗಂಟೆ ಬಳಿಕ ಬಿಡುಗಡೆಯಾಗುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಕಾನೂನು ಪ್ರಕ್ರಿಯೆಗಳು ಮುಗಿಯದ ಹಿನ್ನೆಲೆಯಲ್ಲಿ ಇಷ್ಟು ದಿನ ಬಿಡುಗಡೆಯಾಗಿರಲಿಲ್ಲ. ಇಂದು ಪ್ರಕ್ರಿಯೆಗಳು ಮುಗಿಯೋ ಸಾಧ್ಯತೆಗಳಿದ್ದು, ರೌಡಿ ನಾಗ ಮತ್ತು ಮಕ್ಕಳಾದ ಗಾಂಧಿ, ಶಾಸ್ತ್ರಿ ಬಿಡುಗಡೆಯಾಗಲಿದ್ದಾರೆ ಎನ್ನಲಾಗಿದೆ. ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದ […]

3 hours ago

NCC ಕ್ಯಾಂಪ್‍ ಗೆ ತೆರಳಿದ್ದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವು

ಬೆಂಗಳೂರು: ಎನ್‍ಸಿಸಿ ಕ್ಯಾಂಪ್‍ಗೆ ತೆರಳಿದ್ದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕನಕಪುರದ ರಾವಗೊಂಡ್ಲು ಬೆಟ್ಟದ ಹತ್ತಿರ ನಡೆದಿದೆ. ವಿಶ್ವಾಸ್ (17) ಸಾವನ್ನಪ್ಪಿರುವ ವಿದ್ಯಾರ್ಥಿ. ವಿಶ್ವಾಸ್ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಭಾನುವಾರದಂದು ಕಾಲೇಜಿನಿಂದ 25 ವಿದ್ಯಾರ್ಥಿಗಳನ್ನ ಎನ್‍ಸಿಸಿ ಕ್ಯಾಂಪ್‍ಗೆ ಕನಕಪುರದ ರಾವಗೊಂಡ್ಲು ಬೆಟ್ಟಕ್ಕೆ ಕರೆದೊಯ್ಯಲಾಗಿತ್ತು. ಈ ವೇಳೆ 10 ಅಡಿಯ...

ಗುಜರಾತ್‍ನ ಡಾಟಾ ಆಪರೇಟರ್ ರಾಜ್ಯಪಾಲರ ಪಿಎ- 2 ವರ್ಷ ಕೆಲಸ ಮಾಡ್ದಿದ್ರೂ ಬಿಟ್ಟಿ ಸಂಬಳ

4 hours ago

ಬೆಂಗಳೂರು: ರಾಜ್ಯಪಾಲ ವಿ.ಆರ್. ವಾಲಾ ಸಾಹೇಬ್ರು ತಮ್ಮ ಪ್ರೈವೇಟ್ ಸೆಕ್ರೆಟರಿಯನ್ನಾಗಿ ನೇಮಕ ಮಾಡಿಕೊಡಿರೋದು ಯಾರನ್ನು ಗೊತ್ತೆ? ಕೇಳಿದ್ರೆ ನಿಮಗೆ ಆಶ್ಚರ್ಯ ಆಗುತ್ತೆ. ರಾಜ್ಯಪಾಲರ ಪಿಎ ಆಗಿರೋದು ಗುಜರಾತ್‍ನ ಮಾರಿಟೈಮ್ ಬೋರ್ಡ್‍ನಲ್ಲಿ ಡಾಟಾ ಎಂಟ್ರಿ ಅಪರೇಟರ್ ಆಗಿದ್ದ ತೇಜಸ್ ಭಟ್ಟಿ. ರಾಜ್ಯಪಾಲರ ಪ್ರಪೋಸಲ್...

ಆಂಧ್ರ ಬಸ್ ಡಿಕ್ಕಿಯಾಗಿ ಮಗುಚಿ ಬಿದ್ದ ಓಮ್ನಿ: ಓರ್ವನ ಕಾಲು ಮುರಿತ

5 hours ago

ಬೆಂಗಳೂರು: ನಗರದ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ಬಸ್ ಮತ್ತು ಒಮ್ನಿ ನಡುವೆ ಅಪಘಾತ ಸಂಭವಿಸಿದೆ. ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಮಾರ್ಕೆಟ್ ಕಡೆಯಿಂದ ರಾಮಮೂರ್ತಿನಗರಕ್ಕೆ ಹೊಗುತ್ತಿದ್ದ ಓಮ್ನಿ ಕಾರಿಗೆ ಆಂಧ್ರ ಸಾರಿಗೆ ಸಂಸ್ಥೆಯ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ....

ಸಡನ್ ಬ್ರೇಕ್ ಹಾಕಿದ BMTC ಬಸ್, ಬಸ್ ಗೆ ಗುದ್ದಿದ ಬೊಲೆರೊ, ಬೊಲೆರೋಗೆ ಡಿಕ್ಕಿ ಹೊಡೆದ ಲಾರಿ

1 day ago

ಬೆಂಗಳೂರು: ಶನಿವಾರ ರಾತ್ರಿ ಬೆಂಗಳೂರಿನ ಅಂತಾರರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿ ಸರಣಿ ಅಪಘಾತವಾಗಿದೆ. ಬಿಎಂಟಿಸಿ ಬಸ್, ಬೊಲೆರೊ ಗೂಡ್ಸ್ ಗಾಡಿ ಮತ್ತು ಲಾರಿಯ ನಡುವೆ ಅಪಘಾತವಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಬಿಎಂಟಿಸಿ ಬಸ್ ಸಡನ್ ಆಗಿ ಬ್ರೇಕ್ ಹಾಕಿದ ಕಾರಣ ಬಸ್ ಹಿಂದೆ...

ವಿಡಿಯೋ: ರಾಜಕಾಲುವೆ ಕಟ್ಟೋಕೆ ಹೋಗಿ ಮನೆಗಳಲ್ಲಿ ಬಿರುಕು- ಬಿಬಿಎಂಪಿ ಎಡವಟ್ಟಿಗೆ ಜನರ ಪರದಾಟ

2 days ago

ಬೆಂಗಳೂರು: ಮಧ್ಯರಾತ್ರಿ ಸಮಯ ಬೆಂಗಳೂರು ವಿಜಯನಗರದ ಟೆಲಿಕಾಂ ಲೇಔಟ್ ಜನ ಸವಿನಿದ್ದೆಯಲ್ಲಿದ್ರು. ಆದ್ರೆ ಇದ್ದಕ್ಕಿದ್ದ ಹಾಗೆ ಭೂಮಿ ಕಂಪಿಸಿದಂತೆ ಭಾಸವಾಗಿದೆ. ಮನೆಗಳು, ರಸ್ತೆ ಬಿರುಕು ಬಿಟ್ಟಂತೆ ಆಗಿದೆ. ಇದು ಬಿಬಿಎಂಪಿ ಸೃಷ್ಟಿಸಿದ ಕೃತಕ ಭೂಕಂಪನದ ಕಂಪನ. ಬಿರುಕು ಬಿಟ್ಟ ರಸ್ತೆ, ಇನ್ನೇನು...

ಹೆಚ್‍ಡಿಕೆಗೆ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿ-ಐಸಿಯು ನಲ್ಲಿ ಚಿಕಿತ್ಸೆ ಮುಂದುವರಿಕೆ

2 days ago

ಬೆಂಗಳೂರು: ಬನ್ನೇರುಘಟ್ಟದಲ್ಲಿರೋ ಅಪೋಲೋ ಆಸ್ಪತ್ರೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಗೆ ನಡೆದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಹತ್ತು ವರ್ಷದ ಹಿಂದೆ ಹೃದಯನಾಳಕ್ಕೆ ಆಳವಡಿಸಿದ್ದ ಟಿಶ್ಯೂ ವಾಲ್ವ್ ಬದಲಾವಣೆ ಮಾಡಲಾಗಿದೆ. 45 ನಿಮಿಷಗಳ ಕಾಲ ನಡೆದ ಆಪರೇಷನ್ ಪೂರ್ಣ ಪ್ರಮಾಣದಲ್ಲಿ ಮುಗಿದಿದ್ದು, ಕುಮಾರಸ್ವಾಮಿ...

ಇಂದು ಮಾಜಿ ಸಿಎಂ ಹೃದಯಕ್ಕೆ ಶಸ್ತ್ರ ಚಿಕಿತ್ಸೆ- ಜ್ಯೋತಿಷಿ ಮಾತು ನಂಬಿ ಸಮಯ ನಿಗದಿ

2 days ago

ಬೆಂಗಳೂರು: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಾಜಿ ಸಿಎಂ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್‍ಡಿ ಕುಮಾರಸ್ವಾಮಿಗೆ ಇಂದು ಶಸ್ತ್ರಚಿಕಿತ್ಸೆ ನಡೆಯಲಿದೆ. ಆಪರೇಷನ್‍ಗೆ ದಿನಾಂಕ ಅಂತಿಮಗೊಳಿಸಿದ್ದು ವೈದ್ಯರಲ್ಲ ಬದಲಿಗೆ ಜ್ಯೋತಿಷಿಗಳಂತೆ. ದೇವರು, ಜ್ಯೋತಿಷ್ಯವನ್ನು ಅತಿಯಾಗಿ ನಂಬುವ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಹೆಚ್‍ಡಿಕೆ...