Sunday, 19th November 2017

Recent News

3 weeks ago

ರಸ್ತೆ ಡಾಂಬರೀಕರಣದಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿರ್ಧಾರ

ಬೆಂಗಳೂರು: ಇನ್ಮುಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳುವ ರಸ್ತೆ ಡಾಂಬರೀಕರಣದಲ್ಲಿ ಪ್ಲಾಸ್ಟಿಕ್ ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಆಯಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ, ಬಿಬಿಎಂಪಿ ಮತ್ತು ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ನಗರದಲ್ಲಿ ಪ್ಲಾಸ್ಟಿಕ್ ನಿಷೇಧಿಸಲಾಗಿದ್ದರೂ, ಪ್ಲಾಸ್ಟಿಕ್ ಹಾವಳಿ ಕಡಿಮೆಯಾಗಿಲ್ಲ. ಇದರಿಂದ ಕಸ ವಿಲೇವಾರಿಗೂ ಸಮಸ್ಯೆಯಾಗುತ್ತಿದೆ. ಆದುದರಿಂದ ಇನ್ನು ಮುಂದೆ ಪ್ಲಾಸ್ಟಿಕ್ ಅನ್ನು ಡಾಂಬರೀಕರಣಕ್ಕೆ ಬಳಸಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. […]

3 weeks ago

ಬಿಬಿಎಂಪಿ ಸ್ಥಾಯಿಸಮಿತಿ ಚುನಾವಣೆ ರದ್ದು – 3 ಲಕ್ಷ ರೂ. ಭರ್ಜರಿ ಊಟ ವೇಸ್ಟ್

ಬೆಂಗಳೂರು: ನಿಗಧಿಯಾಗಿದ್ದ ಬಿಬಿಎಂಪಿ ಸ್ಥಾಯಿ ಸಮಿತಿ ಚುನಾವಣೆ ರದ್ದಾಗಿದ್ದು, ಚುನಾವಣೆಗಾಗಿ ಮಾಡಿಸಿದ್ದ 3 ಲಕ್ಷ ರೂ. ಊಟ ವೇಸ್ಟ್ ಆಗಿದೆ. ಬಿಜೆಪಿ ಸದಸ್ಯರು ಚುನಾವಣೆಗೆ ಹಾಜರಾಗಿಲ್ಲ ಅನ್ನೋ ಕಾರಣ ನೀಡಿ ಚುನಾವಣೆ ಕ್ಯಾನ್ಸಲ್ ಮಾಡಲಾಗಿದೆ. ಹೀಗಾಗಿ ಊಟ ಮಾಡೋಕೆ ಯಾರೂ ಇಲ್ಲದೆ ಊಟ ವೇಸ್ಟ್ ಆಗಿದೆ. ವಾಸ್ತವವಾಗಿ ಸ್ಥಾಯಿಸಮಿತಿ ಅಧ್ಯಕ್ಷರ ಆಯ್ಕೆ ವಿಚಾರವಾಗಿ ಕಾಂಗ್ರೆಸ್ ಇನ್ನೂ...

ಬೆಂಗಳೂರು ಜಾನ್ಸನ್ ಮಾರುಕಟ್ಟೆ ಮಸೀದಿ ಕಾಂಪೌಂಡ್ ವಿವಾದಕ್ಕೆ ಸಿಕ್ತು ಪರಿಹಾರ

4 weeks ago

ಬೆಂಗಳೂರು: ನಗರದ ಪ್ರಮುಖ ಕೇಂದ್ರವಾಗಿರುವ ಜಾನ್ಸನ್ ಮಾರುಕಟ್ಟೆ ಬಳಿಯ ಮಸೀದಿ ವಿವಾದಕ್ಕೆ ಶಾಂತಿಯುತ ಪರಿಹಾರ ಸಿಕ್ಕದೆ. ಪ್ರಮುಖವಾಗಿ ಹೊಸೂರು ರಸ್ತೆ ಅಗಲೀಕರಣ ಕಾಮಗಾರಿಯನ್ನು ಆರಂಭಿಸಿದ್ದ ಸರ್ಕಾರ ರಸ್ತೆ ನಿರ್ಮಾಣಕ್ಕೆ ಅಡ್ಡವಾಗಿ ನಿರ್ಮಿಸಿದ್ದ ಮಸೀದಿಯ ಕಾಂಪೌಂಡ್ ತೆರವುಗೊಳಿಸಲು ಮುಂದಾಗಿತ್ತು. ಆದರೆ ಈ ಕ್ರಮಕ್ಕೆ...

ಬಿಬಿಎಂಪಿ ವಾಟರ್ ಟ್ಯಾಂಕರ್‍ಗೆ 14 ವರ್ಷದ ಬಾಲಕ ಬಲಿ

1 month ago

ಬೆಂಗಳೂರು: ಮನೆ ಮುಂದಿನ ರಸ್ತೆಯಲ್ಲಿ ಆಟವಾಡುತ್ತಿದ್ದ 14 ವರ್ಷದ ಬಾಲಕನಿಗೆ ಬಿಬಿಎಂಪಿ ವಾಟರ್ ಟ್ಯಾಂಕ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಬೆಂಗಳೂರಿನ ಅಂದ್ರಾಳ್ಳಿಯ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ರಮೇಶ ಮತ್ತು ಜಯಮ್ಮ ದಂಪತಿಯ 14 ಮಗ ವರ್ಷದ...

ಯಶೋಧೆಯ ಬದುಕು ಕಸಿದುಕೊಂಡ `ಮಂತ್ರಿ ಮಾಲ್’

2 months ago

ಬೆಂಗಳೂರು: ಸಿಲಿಕಾನ್ ಸಿಟಿಯ ಪ್ರತಿಷ್ಠಿತ ಮಂತ್ರಿಮಾಲ್ ಗೋಡೆ ಕುಸಿದು ಕೆಲ ಸಮಯ ಬಾಗಿಲು ಮುಚ್ಚಿದ್ದು ನಿಮ್ಗೆಲ್ಲ ಗೊತ್ತೇ ಇದೆ. ಬಿಬಿಎಂಪಿಯಿಂದ ಕೆಲವೇ ದಿನಗಳಲ್ಲಿ ಕ್ಲೀನ್ ಚಿಟ್ ಪಡೆದ ಮಂತ್ರಿ ಮಾಲ್ ರೀ ಓಪನ್ ಆಯ್ತು. ಆದರೆ ಗೋಡೆ ಕುಸಿದ ಪರಿಣಾಮ ತನ್ನ...

ಮೇಯರ್ ಆಗಿ ಸಂಪತ್‍ರಾಜ್ ಅವಿರೋಧ ಆಯ್ಕೆ – ಪದ್ಮಾವತಿ ಉಪಮೇಯರ್

2 months ago

ಬೆಂಗಳೂರು: ಬಿಬಿಎಂಪಿಯ 51 ನೇ ಮೇಯರ್ ಆಗಿ ಡಿಜೆ ಹಳ್ಳಿ ವಾರ್ಡ್‍ನ ಕಾಂಗ್ರೆಸ್ ಕಾರ್ಪೋರೇಟರ್ ಆರ್.ಸಂಪತ್‍ರಾಜ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 50ನೇ ಉಪಮೇಯರ್ ಆಗಿ ರಾಜಗೋಪಾಲನಗರ ವಾರ್ಡ್‍ನ ಜೆಡಿಎಸ್ ಪಾಲಿಕೆ ಸದಸ್ಯೆ ಪದ್ಮಾವತಿ ನರಸಿಂಹಮೂರ್ತಿ ಅವರು ಆಯ್ಕೆಯಾಗಿದ್ದಾರೆ. ಚುನಾವಣೆಗೂ ಮೊದಲೇ ಬಿಜೆಪಿಯವರು ಸಭೆ...

ವಿಡಿಯೋ: ರಾಜಕಾಲುವೆ ಕಟ್ಟೋಕೆ ಹೋಗಿ ಮನೆಗಳಲ್ಲಿ ಬಿರುಕು- ಬಿಬಿಎಂಪಿ ಎಡವಟ್ಟಿಗೆ ಜನರ ಪರದಾಟ

2 months ago

ಬೆಂಗಳೂರು: ಮಧ್ಯರಾತ್ರಿ ಸಮಯ ಬೆಂಗಳೂರು ವಿಜಯನಗರದ ಟೆಲಿಕಾಂ ಲೇಔಟ್ ಜನ ಸವಿನಿದ್ದೆಯಲ್ಲಿದ್ರು. ಆದ್ರೆ ಇದ್ದಕ್ಕಿದ್ದ ಹಾಗೆ ಭೂಮಿ ಕಂಪಿಸಿದಂತೆ ಭಾಸವಾಗಿದೆ. ಮನೆಗಳು, ರಸ್ತೆ ಬಿರುಕು ಬಿಟ್ಟಂತೆ ಆಗಿದೆ. ಇದು ಬಿಬಿಎಂಪಿ ಸೃಷ್ಟಿಸಿದ ಕೃತಕ ಭೂಕಂಪನದ ಕಂಪನ. ಬಿರುಕು ಬಿಟ್ಟ ರಸ್ತೆ, ಇನ್ನೇನು...

ಅರ್ಧಕ್ಕೆ ಮುಕ್ತಾಯಗೊಳಿಸಿ ಕಾಟಾಚಾರಕ್ಕೆ ಬೆಂಗ್ಳೂರು ರೌಂಡ್ಸ್ ಹೊಡೆದ ಸಿಎಂ!

2 months ago

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಕೊನೆಗೂ ಎಚ್ಚೆತ್ತುಕೊಂಡು ಸತತ ಮಳೆಯಿಂದ ತತ್ತರಿಸಿದ್ದ ಬೆಂಗಳೂರಿನ ಹಲವೆಡೆ ಇವತ್ತು ಕಾಟಾಚಾರಕ್ಕೆ ಎಂಬಂತೆ ರೌಂಡ್ಸ್ ಹೊಡೆದಿದ್ದಾರೆ. ಕೊನೆಗೆ ಅರ್ಧದಲ್ಲೇ ಸಿಟಿ ರೌಂಡ್ಸ್ ಮುಗಿಸಿ ಬೇರೊಂದು ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಮಧ್ಯಾಹ್ನ 2.30ರ ವೇಳೆಗೆ ನಗರದ ಗೃಹ ಕಚೇರಿ ಕೃಷ್ಣಾದಿಂದ...