Tuesday, 24th April 2018

Recent News

10 hours ago

ಅಬ್ಬರಿಸಿದ ಮಳೆಗೆ ತತ್ತರಿಸಿದ ಸಿಲಿಕಾನ್ ಸಿಟಿ – ನೆಲಕ್ಕುರುಳಿದ ಮರಗಳು, ನೀರು ತುಂಬಿದ ಬಸ್ ಸ್ಟ್ಯಾಂಡ್

ಬೆಂಗಳೂರು: ಬೆಂಗಳೂರಿನ ಹಲವೆಡೆ ಮಂಗಳವಾರ ಮಧ್ಯಾಹ್ನ ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಜನರು ಪರದಾಡಿದ್ದಾರೆ. ರಾಜಾಜಿನಗರ, ಮಲ್ಲೇಶ್ವರಂ, ಶೇಷಾದ್ರಿಪುರಂ, ಯಶವಂತಪುರ, ಗೊರಗುಂಟೆಪಾಳ್ಯ, ಜಾಲಹಳ್ಳಿ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಮಳೆಯಿಂದಾಗಿ ಸರ್ಕಲ್ ಮಾರಮ್ಮ ಮತ್ತು ಟಾಟಾ ಇನ್ಸ್ ಸ್ಟಿಟ್ಯೂಟ್ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆದ ಪರಿಣಾಮ ವಾಹನ ಸವಾರರು ಪರದಾಡಿದ್ದಾರೆ. ಅಷ್ಟೇ ಅಲ್ಲದೇ ರಾಮಯ್ಯ ಕಾಲೇಜು ಮುಂಭಾಗ ಕಾರಿನ ಮೇಲೆ ಮರ ಬಿದ್ದಿದೆ. ಮರ ಬಿದ್ದ ಪರಿಣಾಮ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. […]

17 hours ago

ಇಂದು ನಟ ಸಾರ್ವಭೌಮ ರಾಜ್‍ಕುಮಾರ್ ಜಯಂತಿ – ರಾಜ್ ಪುತ್ಥಳಿ ಬಳಿ ಅಭಿಮಾನಿಯ ಮದುವೆ

-ಪಬ್ಲಿಕ್ ಮ್ಯೂಸಿಕ್‍ನಲ್ಲಿ ದಿನವಿಡೀ ರಾಜ್ ಹಬ್ಬ ಬೆಂಗಳೂರು: ಇಂದು ಕನ್ನಡದ ಕಣ್ಮಣಿ, ನಟ ಸಾರ್ವಭೌಮ ಮತ್ತು ವರನಟ ಡಾ. ರಾಜ್‍ಕುಮಾರ್ ಅವರ 89ನೇ ಜಯಂತಿ. ಡಾ. ರಾಜ್ ಕುಮಾರ್ ಅವರು ಗಾಜನೂರಲ್ಲಿ 1929ರ ಏಪ್ರಿಲ್ 24ರಂದು ಜನಿಸಿದ್ದರು. ರಾಜಣ್ಣ, ಬೇಡರ ಕಣ್ಣಪ್ಪನಾಗಿ, ಗಂಧದ ಗುಡಿಯಲ್ಲಿ ಅವತರಿಸಿ ಶಬ್ಧವೇದಿವರೆಗೂ 206 ಸಿನಿಮಾಗಳಲ್ಲಿ ಒಂದಕ್ಕಿಂತ ಒಂದು ಅಪರೂಪದ ಪಾತ್ರಗಳಲ್ಲಿ...

ಶಿವಣ್ಣ ಹೇಳಿದ್ದಕ್ಕೆ `I Love Your Eyes’ ಎಂದು ನಟಿಗೆ ಮೆಸೇಜ್ ಕಳುಹಿಸಿದ ನಟ ಶ್ರೀಮುರಳಿ

2 days ago

ಬೆಂಗಳೂರು: ನಟ ಶ್ರೀಮುರಳಿ `ಮಫ್ತಿ’ ಸಿನಿಮಾದ ಯಶಸ್ವಿಯ ಖುಷಿಯಲ್ಲಿದ್ದು, ಇತ್ತೀಚೆಗೆ ಕಾರ್ಯಕ್ರಯವೊಂದರಲ್ಲಿ ಶಿವಣ್ಣ ಹೇಳಿದ್ದಕ್ಕೆ ಸ್ಯಾಂಡಲ್ ವುಡ್ ನಟಿಯೊಬ್ಬರಿಗೆ ನಿಮ್ಮ ಕಣ್ಣುಗಳೆಂದರೆ ನನಗೆ ಇಷ್ಟ ಎಂದು ಮೆಸೇಜ್ ಕಳುಹಿಸಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ನಂ.1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ ಭಾನುವಾರ...

ಅಭಿಮಾನಿಗಳಿಗೆ ಲೈವ್ ಬಂದು Important Message ಹೇಳಿದ ಭರ್ಜರಿ ಗಂಡು

2 days ago

ಬೆಂಗಳೂರು: `ಭರ್ಜರಿ’ ಸಿನಿಮಾ ಯಶಸ್ಸಿನ ನಂತರ ನಟ ಧ್ರುವ ಸರ್ಜಾ ಇತ್ತೀಚೆಗೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಸದ್ಯಕ್ಕೆ ಅವರು ತಮ್ಮ ಮುಂದಿನ `ಪೊಗರು’ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ನಟ ಧ್ರುವ `ಪೊಗರು’ ಸಿನಿಮಾಗಾಗಿ ಹೊಸ ಲುಕ್ ಟ್ರೈ ಮಾಡುತ್ತಿದ್ದಾರೆ. ಆದ್ದರಿಂದ ಅವರ...

ಎಸ್‍ಐಟಿಗೆ ಶಾಕ್ ನೀಡಿದ ಗೌರಿ ಲಂಕೇಶ್ ಹತ್ಯೆಯ ಶಂಕಿತ ಆರೋಪಿ ಹೊಟ್ಟೆ ಮಂಜ

2 days ago

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಕೇಸ್‍ನ ಶಂಕಿತ ಆರೋಪಿಯಾಗಿರುವ ನವೀನ್ ಅಲಿಯಾಸ್ ಹೊಟ್ಟೆ ಮಂಜ, ಕೊನೆ ಕ್ಷಣದಲ್ಲಿ ಉಲ್ಟಾ ಹೊಡೆದಿದ್ದಾನೆ. ಹಾಗಾಗಿ ಅಹಮದಬಾದ್‍ಗೆ ಹೋಗಿದ್ದ ಪೊಲೀಸರು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ವಾಪಸ್ ಆಗಿದ್ದಾರೆ. ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ...

ಕರ್ನಾಟಕದ ಹೆಮ್ಮೆ ಕಾಂಗ್ರೆಸ್ ಮತ್ತೊಮ್ಮೆ – `ಮುಖ್ಯಮಂತ್ರಿ ಮಾತು ಆ್ಯಪ್’ ಬಿಡುಗಡೆ

3 days ago

ಬೆಂಗಳೂರು: ಕಾಂಗ್ರೆಸ್ ನಾಯಕರು `ಮುಖ್ಯಮಂತ್ರಿ ಮಾತು ಆ್ಯಪ್’ ಅನ್ನು ಬಿಡುಗಡೆ ಮಾಡಿದ್ದಾರೆ. ನಗರದ ಖಾಸಗಿ ಹೋಟೆಲ್ ನಲ್ಲಿ ಈ ಆ್ಯಪ್ ಬಿಡುಗಡೆ ಮಾಡಿದ್ದು, ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಚುನಾವಣೆ ಉಸ್ತುವಾರಿ ವೇಣುಗೋಪಾಲ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವರಾದ ಡಿಕೆಶಿವಕುಮಾರ್, ಜಾರ್ಜ್...

ಪುನೀತ್ ಬದಲಿಗೆ ಕೋಟ್ಯಾಧಿಪತಿ ಶೋಗೆ ಎಂಟ್ರಿಕೊಡಲಿದ್ದಾರೆ ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟ

3 days ago

ಬೆಂಗಳೂರು: ಕನ್ನಡದ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ `ಕನ್ನಡದ ಕೋಟ್ಯಾಧಿಪತಿ’ ಕಾರ್ಯಕ್ರಮವು ಬರೀ ಸ್ಯಾಂಡಲ್‍ವುಡ್ ಗೆ ಸೀಮಿತವಾಗಿರದೆ ಬಾಲಿವುಡ್ ನಲ್ಲೂ ಜನಪ್ರಿಯವಾಗಿದೆ. ಈಗಾಗಲೇ ಕೋಟ್ಯಾಧಿಪತಿ ಕಾರ್ಯಕ್ರಮದ ಎರಡು ಸೀಸನ್ ಗಳು ಮುಗಿದಿದ್ದು, ಮೂರನೇ ಸೀಸನ್ ಶುರು ಮಾಡಲು ಖಾಸಗಿ ವಾಹಿನಿ ಸಿದ್ಧತೆ...

ಶಾಲೆ ಪಾಠ ಬಿಟ್ಟು ಫೋನಿನಲ್ಲಿ ಕಾಮ ಪಾಠ ಮಾಡಿದ ಶಿಕ್ಷಕ!

4 days ago

ಬೆಂಗಳೂರು: ಶಿಕ್ಷಕನೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಖಾಸಗಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕನಾಗಿ ಕೆಲಸ ಮಾಡುವ ಆರೋಪಿ ಮಂಜೇಶ್ ಅದೇ ಶಾಲೆಯಲ್ಲಿ ಆರನೇ ತರಗತಿ ಓದುವ ವಿದ್ಯಾರ್ಥಿನಿಯ ಜೊತೆಯಲ್ಲಿ ಅಸಭ್ಯವಾಗಿ ವರ್ತಿಸಿದ್ದಾನೆ. ಆಕೆಗೆ ಫೋನ್ ಮಾಡಿ...