Sunday, 19th November 2017

Recent News

3 days ago

ಶೀಲ ರಕ್ಷಣೆಗಾಗಿ ಸೀಮೆಎಣ್ಣೆ ಸುರಿದುಕೊಂಡ ಮಹಿಳೆ- ಬೆಂಕಿ ಹಚ್ಚಿ ಕಾಮುಕ ಪರಾರಿ

ಬಾಗಲಕೋಟೆ: ತನ್ನ ಮೇಲಿನ ಅತ್ಯಾಚಾರವನ್ನು ತಡೆಯಲು ಮಹಿಳೆಯೊಬ್ಬರು ಸೀಮೆ ಎಣ್ಣೆ ಸುರಿದುಕೊಂಡು ಸಂಕಷ್ಟಕ್ಕೆ ಸಿಲುಕಿದ ಆಘಾತಕಾರಿ ಘಟನೆ ನಡೆದಿದೆ. ಈ ಘಟನೆ ಬಾದಾಮಿ ತಾಲೂಕಿನ ಕೆರೂರು ಪಟ್ಟಣದಲ್ಲಿ ನಡೆದಿದ್ದು, 33 ವರ್ಷದ  ಮಹಿಳೆ ಗಂಭೀರ ಗಾಯಗೊಂಡಿದ್ದಾರೆ. ಸದ್ಯ ಗಾಯಾಳು ಮಹಿಳೆ ಇದೀಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಏನಿದು ಪ್ರಕರಣ?: ಗಂಡನನ್ನು ಕಳೆದುಕೊಂಡ ಮಹಿಳೆ ತನ್ನ ಮೂರು ಮಕ್ಕಳೊಂದಿಗೆ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದರು. ಆದ್ರೆ ಸುರೇಶ ಭಜಂತ್ರಿ ಎಂಬಾತ ಮಹಿಳೆಯನ್ನು ಲೈಂಗಿಕವಾಗಿ ಪ್ರಚೋದಿಸುತ್ತಿದ್ದ. ಸುರೇಶ್ ಬುಧವಾರ ಅತ್ಯಾಚಾರಕ್ಕೆ ಯತ್ನಿಸಿದಾಗ […]

3 days ago

ವೈದ್ಯರ ನಿರ್ಲಕ್ಷ್ಯದಿಂದ ತಾಯಿಯ ಹೊಟ್ಟೆಯಲ್ಲೇ ಮಗು ಸಾವು!

ಬಾಗಲಕೋಟೆ: ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದ ತಾಯಿಯ ಹೊಟ್ಟೆಯಲ್ಲೇ ನವಜಾತ ಶಿಶು ಸಾವನ್ನಪ್ಪಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನ ಕೆರೂರು ಪಟ್ಟಣದ ನಿವಾಸಿಯಾಗಿರುವ ಲಕ್ಷ್ಮಿ ಪತ್ತಾರ ಎಂಬವರೇ ಬಾಣಂತಿ. ಕಳೆದ ಎರಡು ದಿನಗಳಿಂದ ಹೆರಿಗೆ ನೋವು ಅನುಭವಿಸಿ, ಕೆರೂರಿನ ಎರಡು ಖಾಸಗಿ ಆಸ್ಪತ್ರೆಗೆ ತೆರಳಿದ್ರು. ಆದ್ರೆ ಖಾಸಗಿ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ...

ಕೆರೆಯ ನೀರಿನ ಮಧ್ಯೆ ಮುಳ್ಳಿನ ಮೇಲೆ ಸ್ವಾಮೀಜಿ ಜಪ

3 weeks ago

ಬಾಗಲಕೋಟೆ: ಸ್ವಾಮೀಜಿಯೊಬ್ಬರು ಎರಡು ದಿನಗಳಿಂದ ನೀರಿನಲ್ಲಿಯೇ ಮುಳ್ಳಿನ ಮೇಲೆ ಕುಳಿತು ಧ್ಯಾನ ಮಾಡಿರೋ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಜಂಬಗಿ ಗ್ರಾಮದ ಮಹಾ ಸಿದ್ದೇಶ್ವರ ಮಠದ ಪೀಠಾಧಿಪತಿ ಸುರೇಶ ಸ್ವಾಮೀಜಿ...

ಪ್ರೀತಿಸಿ ಮದುವೆಯಾದ ಜೋಡಿಗೆ ‘ಎಎಸ್‍ಐ’ ಅಡ್ಡಿ!

4 weeks ago

ಬಾಗಲಕೋಟೆ: ಇಬ್ಬರು ಪರಸ್ಪರ ಪ್ರೀತಿಸಿದ್ದು, ಇವರಿಗೆ ಜಾತಿ ಅಡ್ಡ ಬಂದಿಲ್ಲ ಮೇಲು ಕೀಳೆಂಬ ಅಂತಸ್ತು ಅಡ್ಡ ಬಂದಿಲ್ಲ. ಆದರೆ ಇವರ ಪ್ರೀತಿಗೆ ಓರ್ವ ಎಎಸ್‍ಐ ಅಡ್ಡ ಬಂದಿದ್ದಾನೆ. ಕೊರಳಲ್ಲಿ ತಾಳಿ, ಮುಖದಲ್ಲಿ ಮಂದಹಾಸ, ಕೈಯಲ್ಲೊಂದು ಮನವಿ ಪತ್ರ. ನನಗೆ ನೀನು, ನಿನಗೆ...

ಕಣ್ಮನ ಸೆಳೆಯುತ್ತಿದೆ ದಮ್ಮೂರು ಫಾಲ್ಸ್- ಹಲವು ರೋಗಗಳಿಗೆ ರಾಮಬಾಣ ಈ ನೀರು

1 month ago

ಬಾಗಲಕೋಟೆ: ವರುಣನ ಅಬ್ಬರಕ್ಕೆ ರಾಜ್ಯದ ಬಹುತೇಕ ಜಿಲ್ಲೆಗಳ ಹಳ್ಳ-ಕೊಳ್ಳ, ನದಿ-ತೊರೆಗಳು ಮೈದುಂಬಿಕೊಂಡಿವೆ. ಅದೇ ರೀತಿ ಬಾಗಲಕೋಟೆಯ ದಮ್ಮೂರು ಗ್ರಾಮದ ಜಲಪಾತದಲ್ಲಿ ಜನ ಮಿಂದೇಳ್ತಿದ್ದಾರೆ. ಈ ನೀರಿನಲ್ಲಿ ಸ್ನಾನ ಮಾಡಿದ್ರೆ ರೋಗಗಳು ಗುಣಮುಖವಾಗ್ತವೆ ಅನ್ನೋ ನಂಬಿಕೆ ಇದೆ. ಮೇಲಿಂದ ಧುಮ್ಮಿಕ್ಕುತ್ತಿರೋ ಈ ನೀರಿನ...

ಜನರ ಒತ್ತಾಯದ ಮೇರೆಗೆ ಶಿಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ: ಬಿಎಸ್‍ವೈ

1 month ago

ಬಾಗಲಕೋಟೆ: ಜನರ ಒತ್ತಾಯದ ಮೇರೆಗೆ ಶಿಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧಿಸೋದು ನೂರಕ್ಕೆ ನೂರಷ್ಟು ಸತ್ಯ. ತೇರದಾಳ ಕ್ಷೇತ್ರದಿಂದ ಸ್ಪರ್ಧಿಸಲ್ಲ. ಈ ಬಗ್ಗೆ ಹೈಕಮಾಂಡ್‍ಗೆ ಮನವೊಲಿಸುತ್ತೇನೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೇರದಾಳ ಕ್ಷೇತ್ರದ ಹಿಂದಿನ...

ದಾವಣಗೆರೆಯಲ್ಲಿ ಅಗ್ನಿಶಾಮಕದಳ ಕಚೇರಿಗೆ ನೀರು – 500ಕ್ಕೂ ಹೆಚ್ಚು ಮನೆಗಳು ಕುಸಿತ

2 months ago

– ಬಾಗಲಕೋಟೆಯಲ್ಲಿ ಸೇತುವೆ ಜಲಾವೃತ ದಾವಣಗೆರೆ: ನಗರದಲ್ಲಿ ಕಳೆದ ರಾತ್ರಿಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ. ಕೆಲ ಪ್ರದೇಶಗಳಲ್ಲಿ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ರಾತ್ರಿ 9 ಗಂಟೆಯಿಂದ ಸುರಿದ ಮಳೆಗೆ ಸಾವಿರಾರು ಮನೆಗಳಿಗೆ ನೀರು ನುಗ್ಗಿದ್ದು, ಹಲವು ಮನೆಗಳ...

ನಾಡಿಮಿಡಿತ ನೋಡಿಯೇ ಬಿಪಿ, ಶುಗರ್ ಗೆ ಚಿಕಿತ್ಸೆ ನೀಡುತ್ತಿದ್ದ ಫೇಕ್ ಡಾಕ್ಟರ್ ಬಲೆಗೆ!

2 months ago

ಬಾಗಲಕೋಟೆ: ನಾಡಿ ಮಿಡಿತ ನೋಡಿಯೇ ಚಿಕಿತ್ಸೆ ಕೊಡುತ್ತಿದ್ದ ನಕಲಿ ವೈದ್ಯನೊಬ್ಬ ಇದೀಗ ಜಿಲ್ಲೆಯ ವೈದ್ಯಾಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. ಬಳ್ಳಾರಿ ಜಿಲ್ಲೆ ಹೋಸಪೇಟೆ ಮೂಲದ ಜನಾರ್ದನ್ ಸಿಕ್ಕಿಬಿದ್ದ ನಕಲಿ ವೈದ್ಯ. ಈತನಿಗೆ ವೈದ್ಯಕೀಯ ವೃತ್ತಿಯ ಎಬಿಸಿಡಿ ಗೊತ್ತಿಲ್ಲ. ಆದ್ರೆ ಜನರನ್ನು ಮರಳು ಮಾಡಿ...