Friday, 23rd February 2018

Recent News

1 week ago

ಬೆಂಗಳೂರಿನಲ್ಲಿ ಮ್ಯಾನ್ ಹೋಲ್ ದುರಂತ: ರಾಯಚೂರು ಮೂಲದ ಇಬ್ಬರು ಕೂಲಿ ಕಾರ್ಮಿಕರು ಬಲಿ

ಆನೇಕಲ್: ಕಳೆದ ಕೆಲ ದಿನಗಳ ಹಿಂದಯಷ್ಟೇ ಬೆಂಗಳೂರಿನ ಸೋಮಸಂದ್ರ ಪಾಳ್ಯದಲ್ಲಿ ನಡೆದಿದ್ದ ಮ್ಯಾನ್ ಹೋಲ್ ದುರಂತ ಮಾಸುವ ಮುನ್ನವೇ ಮಂಗಳವಾರ ಚರಂಡಿ ನೀರನ್ನು ಶುಚಿಗೊಳಿಸಲು ಹೋಗಿ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ನಡೆದಿದೆ. ಬೆಂಗಳೂರಿನ ಎಚ್‍ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಎಇಸಿಎಸ್ ಬಡಾವಣೆಯ ವಾಣಿಜ್ಯ ಕಟ್ಟಡದಲ್ಲಿ ಘಟನೆ ಸಂಭವಿಸಿದ್ದು, ರಾಯಚೂರು ಮೂಲದ ರಾಮು(35) ಹಾಗೂ ರವಿ(28)ಮೃತ ದುರ್ದೈವಿಗಳಾಗಿದ್ದಾರೆ. ಇಂದು ಮಧ್ಯಾಹ್ನ ಯಮ್ ಲೋಕ್ ಹೋಟೆಲ್ ನ ಚರಂಡಿ ನೀರನ್ನು ಕ್ಲೀನ್ ಮಾಡಲು ವೇಳೆ ರಾಮು ಮ್ಯಾನ್ ಹೋಲ್ […]

3 weeks ago

ಅಪಾರ್ಟ್ಮೆಂಟ್ ನೆಲಮಹಡಿಯಲ್ಲಿ ಹೊತ್ತಿ ಉರಿದ ಕಾರು- ತಾಯಿ, 4 ವರ್ಷದ ಮಗು ಸಜೀವ ದಹನ

ಬೆಂಗಳೂರು: ಬೆಂಕಿ ತಗುಲಿ ತಾಯಿ ಹಾಗೂ 4 ವರ್ಷದ ಮಗು ಕಾರಿನಲ್ಲೇ ಸಜೀವವಾಗಿ ದಹನವಾಗಿರುವ ಘಟನೆ ನಗರದ ವೈಟ್ ಫೀಲ್ಡ್ ಸಮೀಪದ ನಲ್ಲೂರಹಳ್ಳಿಯ ಬೋರ್ವೆಲ್ ರಸ್ತೆಯ ಸುಮಧುರ ಆನಂದಮ್ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ. ಅಪಾರ್ಟ್ಮೆಂಟ್ ವಾಸಿಯಾದ ನೇಹಾವರ್ಮ(30) ಹಾಗೂ ಮಗ ಪರಮ್(4) ಮೃತ ಪಟ್ಟ ದುರ್ದೈವಿಗಳಾಗಿದ್ದಾರೆ. ಎಂದಿನಂತೆ ಸಂಜೆ ತಮ್ಮ ಮಗನನ್ನು ಶಾಲೆಯಿಂದ ಮನೆಗೆ ಕರೆದುಕೊಂಡು...

50 ಆಡಿ ಆಳದ ಗುಂಡಿಗೆ ಬಿದ್ದ ಆನೆ ಮರಿಯ ಕಣ್ಣಿಗೆ ಬಟ್ಟೆ ಕಟ್ಟಿ ಮೇಲೇತ್ತಿದ ಅರಣ್ಯ ಸಿಬ್ಬಂದಿ

1 month ago

ಬೆಂಗಳೂರು: 50 ಅಡಿ ಗುಂಡಿಗೆ ಬಿದ್ದು ಮೇಲೆ ಬಾರಲಾಗದ ಸ್ಥಿತಿಯಲ್ಲಿರುವ ಮರಿ ಆನೆಯನ್ನು ಅರಣ್ಯ ಸಿಬ್ಬಂದಿ ಸಾರ್ವಜನಿಕರ ಸಹಾಯದಿಂದ ರಕ್ಷಣೆ ಮಾಡಿದ್ದಾರೆ. ಆನೇಕಲ್ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಪಾವಡಪಟ್ಟಿ ಹಳ್ಳಿಯಲ್ಲಿ ಆನೆ ಮರಿ ಗುಂಡಿಗೆ ಬಿದ್ದಿತ್ತು. ಪ್ರತಿ ವರ್ಷ ಸುಗ್ಗಿ ಕಾಲದಲ್ಲಿ...

ರುಂಡ-ಮುಂಡ ಬೇರ್ಪಟ್ಟ ರೀತಿಯಲ್ಲಿ ಕಿಡ್ನಾಪ್ ಆಗಿದ್ದ ರೌಡಿಶೀಟರ್ ಶವ ಪತ್ತೆ!

1 month ago

ಬೆಂಗಳೂರು: ರೌಡಿಶೀಟರ್ ಒಬ್ಬನನ್ನು ರುಂಡ-ಮುಂಡ ಬೇರ್ಪಡಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಹೊಸೂರಿನಲ್ಲಿ ನಡೆದಿದೆ. ಹೊಸೂರಿನ ಬಾಗಲೂರು ರಸ್ತೆಯ ನಿವಾಸಿ ಚೇತು(36) ಭೀಕರವಾಗಿ ಕೊಲೆಯಾದ ರೌಡಿಶೀಟರ್. ಚೇತುವನ್ನು 2 ದಿನಗಳ ಹಿಂದೆ ಮನೆ ಬಳಿಯಿಂದ ಅಪಹರಿಸಲಾಗಿತ್ತು. ಈ...

ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ- ಅರ್ಧ ಕೆಜಿಗೂ ಹೆಚ್ಚಿನ ಚಿನ್ನಾಭರಣ ವಶ

2 months ago

ಬೆಂಗಳೂರು: ಮನೆಗಳ್ಳತನ ಹಾಗೂ ಸುಲಿಗೆ ಮಾಡುತ್ತಿದ್ದ ಐವರು ಕಳ್ಳರನ್ನು ಬಂಧಿಸಿ, ಅರ್ಧ ಕೆಜಿ ಗೂ ಹೆಚ್ಚಿನ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಗರದ ಹೊರವಲಯ ಆನೇಕಲ್ ತಾಲೂಕಿನ ಹೆಬ್ಬಗೋಡಿಯಲ್ಲಿ ನಡೆದಿದ್ದ ಸುಮಾರು ಮೂವತ್ತು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದ ಸಿ.ವಿ. ವಿಶ್ವಾಸ್, ಗೌರೀಶ್, ಕುಮಾರ್,...

10 ವರ್ಷಗಳಿಂದ ಜೀತದಾಳುಗಳಾಗಿ ದುಡಿಯುತ್ತಿದ್ದ ಕುಟುಂಬವನ್ನ ರಕ್ಷಣೆ ಮಾಡಿದ ಪೊಲೀಸರು

2 months ago

ಬೆಂಗಳೂರು: ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ದೇಶದಲ್ಲಿ ಇನ್ನೂ ಜೀತಪದ್ಧತಿ ಅಂತ್ಯವಾಗಿಲ್ಲ ಎಂಬುದಕ್ಕೆ ಬೆಂಗಳೂರು ಹೊರವಲಯ ಅನೇಕಲ್ ಮಾತಲಿಂಗಾಪುರ ಸಮೀಪದ ಕಲ್ಲು ಕ್ವಾರಿಯಲ್ಲಿ ಜೀವಂತ ಸಾಕ್ಷಿ ಲಭಿಸಿದೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕುಗ್ರಾಮದಿಂದ ಬಂದ ರಾಜಪ್ಪ ಮತ್ತು ಮುನಿಲಕ್ಷ್ಮಮ್ಮ ಕುಟುಂಬ...

ದಾವಣಗೆರೆಯಲ್ಲಿ ಹಸು ಮೇಲೆ ಆನೆ ದಾಳಿ – ಆನೇಕಲ್ ಗಡಿಯಲ್ಲಿ ಬೀಡುಬಿಟ್ಟ 30ಕ್ಕೂ ಹೆಚ್ಚು ಆನೆಗಳು

2 months ago

ದಾವಣಗೆರೆ/ಬೆಂಗಳೂರು: ಜಿಲ್ಲೆಯಲ್ಲಿ ಮತ್ತೆ ಕಾಡಾನೆಗಳ ದಾಳಿ ಮುಂದುವರೆದಿದೆ. ಹೊನ್ನಾಳಿ ತಾಲೂಕು ವ್ಯಾಪ್ತಿಯಲ್ಲಿ ಬೆಳಗಿನ ಜಾವದಿಂದ ಕಾಡಾನೆಗಳು ದಾಂಧಲೆ ನಡೆಸಿದ್ದು, ಹೊನ್ನಾಳಿ ಸಮೀಪ ಹಸುಗಳನ್ನ ತಿವಿದು ಗಾಯಗೊಳಿಸಿವೆ. ದೇವರಹೊನ್ನಾಳಿಯಲ್ಲಿ ಗ್ರಾಮದಲ್ಲಿ ಕಾಡಾನೆಗಳು ಎರಡು ಹಸುಗಳಿಗೆ ತೀವ್ರವಾಗಿ ಇರಿದಿವೆ. ಇದರಿಂದ ಹಸುವಿನ ಕರುಳು ಹೊರಬಂದಿದ್ದು,...

ಸನ್ನಡತೆ ಆಧಾರದಲ್ಲಿ ರಾಜ್ಯಾದ್ಯಂತ 108 ಜೈಲು ಹಕ್ಕಿಗಳಿಗೆ ಬಿಡುಗಡೆ ಭಾಗ್ಯ

2 months ago

ಬೆಂಗಳೂರು: ತಮಗೆ ಅರಿತೊ ಅರಿಯದೆ ಮಾಡಿದ ತಪ್ಪಿನಿಂದಾಗಿ ಜೈಲು ಸೇರಿದ್ದ ಜೈಲು ಹಕ್ಕಿಗಳಿಗೆ ಬುಧವಾರ ಬಿಡುಗಡೆ ಭಾಗ್ಯ ಲಭಿಸಿದೆ. ರಾಜ್ಯಾದ್ಯಂತ 12 ವರ್ಷಗಳ ಮೇಲ್ಪಟ್ಟು ಸೆರೆವಾಸ ಅನುಭವಿಸಿದ್ದ 108 ಸಜಾ ಬಂಧಿಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದ್ದು, ಬೆಂಗಳೂರಿನ ಪರಪ್ಪನ ಅಗ್ರಹಾರ...