Tuesday, 23rd January 2018

Recent News

3 months ago

ನೀರು ತರಲು ಹೋಗಿದ್ದ ಇಬ್ಬರು ಬಾಲಕಿಯರು ಕೆರೆಯಲ್ಲಿ ಮುಳುಗಿ ಸಾವು

ಚಿಕ್ಕಬಳ್ಳಾಪುರ: ನೀರು ತರಲು ಹೋಗಿದ್ದ ಇಬ್ಬರು ಬಾಲಕಿಯರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಐಬಸಾಪುರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿಗಳಾದ ಮಾನಸಾ(12), ಲಕ್ಷ್ಮೀ(13) ಮತ್ತು ಶಶಾಂಕ್ ನೀರು ತರಲು ಕೆರೆಗೆ ಹೋಗಿದ್ದರು. ಜೋಳದ ಬೆಳೆಗೆ ನೀರು ಹಾಕಲು ಕೆರೆಯಿಂದ ಬಿಂದಿಗೆಯಲ್ಲಿ ನೀರು ತುಂಬಿಕೊಂಡು ಹೋಗುತ್ತಿದ್ದಾಗ ಕಾಲು ಜಾರಿ ಮೂವರು ನೀರಿಗೆ ಬಿದ್ದಿದ್ದಾರೆ. ಬಾಲಕ ಶಶಾಂಕ್ ಕೂಡ ನೀರಿನಲ್ಲಿ ಮುಳುಗಿದ್ದು, ಸ್ಥಳದಲ್ಲೇ ಇದ್ದ ವಾಟರ್ ಮ್ಯಾನ್ ರಾಜಣ್ಣ ಎಂಬವರು ಬಾಲಕ ಶಶಾಂಕ್ […]

3 months ago

ಕಂಪನಿಗಳಿಂದ ನಕಲಿ ಬೀಜ ವಿತರಣೆ- ಹತಾಶೆಯ ತಂದೆಗೆ ಧೈರ್ಯ ತುಂಬಿದ ಪುತ್ರಿ – ಮನ ಮುಟ್ಟಿದ ಬಾಲಕಿ ಸಂದೇಶ

ಮಂಡ್ಯ: ಅಪ್ಪ ನೀನು ಆತ್ಮಹತ್ಯೆ ಮಾಡಿಕೊಂಡು ಸತ್ತರೆ ನಾನೂ ಸಾಯುತ್ತೇನೆ. ನಿಮಗೆ ಬೀಜ ಕಂಪನಿಯಿಂದ ಆಗಿರುವ ಅನ್ಯಾಯವನ್ನು ನಾನು ಚೆನ್ನಾಗಿ ಓದಿ ಐಎಎಸ್ ಆಫೀಸರ್ ಆಗಿ ಸರಿಪಡಿಸುತ್ತೇನೆ ಎಂದು ರೈತನ ಮಗಳು ತಂದೆಯನ್ನು ಸಮಾಧಾನಿಸಿದ ಮನಕಲಕುವ ಘಟನೆ ಮಂಡ್ಯದಲ್ಲಿ ನಡೆದಿದೆ. ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ, ಚಿನ್ನೇನಹಳ್ಳಿ ಗ್ರಾಮದ ರೈತರಾದ ಶ್ರೀನಿವಾಸ್, ಚನ್ನೇಗೌಡ, ಶಿವರಾಮು, ಲೋಕೇಶ್ ಎಂಬವರು...

ಕೆರೆಗಳಿಗೆ ಹರಿದ ಜೀವನದಿ ಕಾವೇರಿ ನೀರು-ರೈತರು ಕಬ್ಬು, ಭತ್ತ ಬೆಳೆಯದಂತೆ ಫರ್ಮಾನು!

6 months ago

ಮಂಡ್ಯ: ಇಂದಿನಿಂದ ಕಾವೇರಿಕೊಳ್ಳದಲ್ಲಿರುವ ಕೆರೆಗಳಿಗೆ ಕಾವೇರಿ ನೀರು ಹರಿಯಲಿದೆ. ಅಂದರೆ ಕೆಆರ್‍ಎಸ್, ಕಬಿನಿ, ಹೇಮಾವತಿ ಮತ್ತು ಹಾರಂಗಿ ಡ್ಯಾಂನಲ್ಲಿರುವ ನೀರನ್ನು ಹರಿಸಿ ಕೆರೆಗಳನ್ನು ಭರ್ತಿ ಮಾಡಲಾಗುತ್ತದೆ. ಬುಧವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮಂಡ್ಯ ಭಾಗದ ಶಾಸಕರು, ಸಂಸದರು, ಜನಪ್ರತಿನಿಧಿಗಳ ಸಭೆಯಲ್ಲಿ...

ಅಂದು ತೆಗಳಿಕೆ, ಇಂದು ಹೊಗಳಿಕೆ- ಸಾಫ್ಟ್ ವೇರ್ ಉದ್ಯೋಗ ಬಿಟ್ಟು ಕೃಷಿಕನಾದ ಬಳ್ಳಾರಿ ಹೈದ

6 months ago

ಬಳ್ಳಾರಿ: ಕಂಪೆನಿಯಲ್ಲಿ ಲಕ್ಷ ಲಕ್ಷ ಸಂಬಳ ಸಿಗ್ತಿದ್ರೂ ಕೆಲಸ ಬಿಟ್ಟು ಕೃಷಿಕರಾದವರು ನಮ್ಮ ಪಬ್ಲಿಕ್ ಹೀರೋ. ಕೃಷಿ ಅಂದಾಗ ತೆಗಳಿದ್ದ ಸ್ನೇಹಿತರು ಸಂಬಂಧಿಕರು, ಈಗ ಹೊಗಳ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಶ್ರೀನಗರ ಕ್ಯಾಂಪ್‍ನ ನಿವಾಸಿ ನವೀನ್ ಇವತ್ತಿನ ನಮ್ಮ ಪಬ್ಲಿಕ್...

ತೋಟದಲ್ಲಿ ಕಾಲು ಜಾರಿ ಬಾವಿಗೆ ಬಿದ್ದು ರೈತ ಸಾವು

6 months ago

ಕಾರವಾರ: ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತರೊಬ್ಬರು ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆರೆಕೋಣದಲ್ಲಿ ನೆಡೆದಿದೆ. ಕೆರೆಕೋಣ ನಿವಾಸಿ ಗಣಪತಿ ಪರಮೇಶ್ವರ ಭಟ್ಟ ಉಂಚುಟ್ಟೆ (55) ಮೃತ ರೈತ. ತಮ್ಮ ತೋಟದಲ್ಲಿ...

ರಾಜ್ಯದ ಹಲವೆಡೆ ಮಳೆರಾಯನ ರುದ್ರನರ್ತನ- ಈ ಮಾರ್ಗದ ರಸ್ತೆಗಳು ಬಂದ್

6 months ago

ಬೆಂಗಳೂರು: ಮಳೆ ಬಂದ್ರೂ ಕಷ್ಟ, ಬರದಿದ್ರೂ ಕಷ್ಟ. ಮುಂಗಾರು ಮಳೆ ಕೈಕೊಡ್ತಲ್ಲಪ್ಪ ಅನ್ನೋ ಹೊತ್ತಲ್ಲಿ ಕರ್ನಾಟಕದ ಹಲವೆಡೆ ಮಳೆರಾಯ ಅಬ್ಬರಿಸಿದ್ದಾನೆ. ಚಿಕ್ಕಮಗಳೂರಲ್ಲಿ ಮಳೆಯ ಆರ್ಭಟ ನಿಲ್ತಿಲ್ಲ. ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈಗಾಗಲೇ ಕಳಸ ಸಮೀಪದ ಹೆಬ್ಬಾಳೆ ಸೇತುವೆ...

ಮುಂಗಾರು ಆರಂಭವಾದ್ರೂ ಬಾರದ ಮಳೆ- ಕೃಷಿಗೆ ಹರಿಸದೆ ಕುಡಿಯಲು ನೀರು ಕೊಟ್ಟ ಧಾರವಾಡದ ಬಿಸೇರೊಟ್ಟಿ ಸಹೋದರರು

7 months ago

ಧಾರವಾಡ: ಮುಂಗಾರು ಮಳೆ ಈಗಾಗಲೇ ಆರಂಭವಾಗಿದೆ. ರಾಜ್ಯದ ಅಲ್ಲಲ್ಲಿ ವರ್ಷಧಾರೆಯಾಗ್ತಿದೆ. ಆದ್ರೆ ಧಾರವಾಡದ ಕುಂದಗೋಳ ತಾಲೂಕಿನಲ್ಲಿ ಕಳೆದ 6 ವರ್ಷಗಳಿಂದ ಬರ ಆವರಿಸಿದೆ. ಹಿರೇಗುಂಜಾಳ ಗ್ರಾಮದ ಇವತ್ತಿನ ಪಬ್ಲಿಕ್ ಹೀರೋ ಬಿಸೇರೊಟ್ಟಿ ಸಹೋದರರು ಇಂತಹ ಸ್ಥಿತಿಯಲ್ಲೂ ಗ್ರಾಮಕ್ಕೆ ಉಚಿತವಾಗಿ ಕುಡಿಯುವ ನೀರು...

ವಿದ್ಯುತ್ ಸ್ಪರ್ಶದಿಂದ ಜಮೀನಿನಲ್ಲೇ ಎತ್ತುಗಳ ಸಾವು

8 months ago

ಯಾದಗಿರಿ: ಮುಂಗಾರು ಮಳೆ ಪ್ರಾರಂಭದಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆ ಚುರಾಕಾಗಿ ಪ್ರಾರಂಭಿಸುವ ಮುನ್ನವೇ ವಿದ್ಯುತ್ ಸ್ಪರ್ಶದಿಂದ ಎರಡು ಎತ್ತುಗಳು ಸಾವನ್ನಪ್ಪಿದ ಘಟನೆ ಯಾದಗಿರಿ ತಾಲೂಕಿನ ಗಣಾಪುರ ಗ್ರಾಮದಲ್ಲಿ ನಡೆದಿದೆ. ಗೂಡಸಾಬ್ ತನ್ನ ಜಮೀನಿನಲ್ಲಿ ಎತ್ತುಗಳ ನೇಗಿಲಿನಿಂದ ಭೂಮಿ ಹದ ಮಾಡುತ್ತಿದ್ದರು....