Saturday, 23rd June 2018

Recent News

15 hours ago

ಬ್ಯಾರಿಕೇಡ್ ಗೆ ಡಿಕ್ಕಿಯಾಗಿ ಸರ್ವಿಸ್ ರಸ್ತೆಯಿಂದ ಹೊರಹೋಗಿ ಕಾರ್ ಪಲ್ಟಿ – ಇಬ್ಬರ ದುರ್ಮರಣ

ಬೆಂಗಳೂರು: ಬೆಳ್ಳಂಬೆಳಗ್ಗೆ ಜವರಾಯನ ಅಟ್ಟಹಾಸಕ್ಕೆ ಇಬ್ಬರು ಬಲಿಯಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯ ಬ್ಯಾರಿಕೇಡ್ ಗೆ ಡಿಕ್ಕಿ ಹೊಡೆದ ಕಾರ್ ಸರ್ವಿಸ್ ರಸ್ತೆಯಿಂದ ಹೊರಹೋಗಿ ಪಲ್ಟಿಯಾದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಕ್ಯಾಬ್ ಚಾಲಕ ಶ್ರೀಧರ್ ಮತ್ತು ಪುನೀತ್ ಮೃತ ದುರ್ದೈವಿಗಳು. ಮೃತರು ಹಾಸನ ಹೊಳೆನರಸಿಪುರ ತಾಲೂಕಿನ ಗೊಂದಮಲೇನಹಳ್ಳಿಯವರು ಎಂದು ತಿಳಿದುಬಂದಿದೆ. ಇನ್ನೂ ಅಪಘಾತದ ತೀವ್ರತೆಗೆ ಮೃತರಿಬ್ಬರ ಮೆದಳು […]

1 day ago

ಲಾರಿ ಹಿಂಬದಿಗೆ ಟ್ಯಾಂಕರ್ ಡಿಕ್ಕಿ – ಚಾಲಕನನ್ನು ಹೊರ ತೆಗೆಯಲು ಹರಸಾಹಸ ಪಟ್ಟು ಸ್ಥಳೀಯರು

ಉಡುಪಿ: ಲಾರಿಯ ಹಿಂಬದಿಗೆ ಡಿಕ್ಕಿಯಾದ ಹೊಡೆದ ಪರಿಣಾಮ ಟ್ಯಾಂಕರ್ ಚಾಲಕ ಟ್ಯಾಂಕರ್ ಒಳಗಡೆ ಸಿಕ್ಕಿಹಾಕಿಕೊಂಡ ಘಟನೆ ಜಿಲ್ಲೆಯ ಕಾಪು ತಾಲೂಕಿನ ಪಾಂಗಳದಲ್ಲಿ ನಡೆದಿದೆ. ತಮಿಳುನಾಡು ಮೂಲದ ಟ್ಯಾಂಕರ್ ಚಾಲಕ ಗಂಭೀರ ಗಾಯಗೊಂಡಿದ್ದು ಸ್ಥಳಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಡೆದಿದ್ದು ಏನು? ಲಾರಿಯನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಟ್ಯಾಂಕರ್ ಬಲಕ್ಕೆ ತಿರುಗಿದ ವೇಳೆ...

ರಸ್ತೆಬದಿಯಲ್ಲಿದ್ದವರ ಮೇಲೆಯೇ ನುಗ್ಗಿದ ಕಾರು!

2 days ago

ಮುಂಬೈ: ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ರಸ್ತೆಬದಿಯ ಪಾದಚಾರಿಗಳ ಮೇಲೆಯೇ ಹರಿದ ಘಟನೆ ಮಹಾರಾಷ್ಟದ ರಾಜಧಾನಿಯ ಧಾರವಿ ಸಮೀಪ ನಡೆದಿದೆ. ಧಾರವಿ ಸಮೀಪದ ಸಿಗ್ನಲ್ ಬಳಿ ವೇಗವಾಗಿ ಬಂದ ಕಾರೊಂದು ನಿಯಂತ್ರಣ ತಪ್ಪಿ ರಸ್ತೆ ಬದಿ ಹೋಗುತ್ತಿದ್ದ ಪಾದಚಾರಿಗಳ ಮೇಲೆಯೇ...

ಖಾಸಗಿ ಬಸ್‍ಗಳ ಮುಖಾಮುಖಿ ಡಿಕ್ಕಿ: ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರು!

2 days ago

ಕೋಲಾರ: ಖಾಸಗಿ ಬಸ್‍ಗಳು ಮುಖಾಮುಖಿ ಡಿಕ್ಕಿಯಾಗಿ 15ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ತಾಲೂಕಿನ ನರಸಾಪುರ ಗ್ರಾಮದ ಬಳಿ ನಡೆದಿದೆ. ನರಸಾಪುರ ಗ್ರಾಮದ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಇಂದು ಖಾಸಗಿ ಬಸ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದ...

ಬೆಂಗ್ಳೂರಿನಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣಕ್ಕೆ ಬಿಗ್ ಟಿಸ್ಟ್

2 days ago

ಬೆಂಗಳೂರು: ಜೂನ್ 18 ರಂದು ಎಂ.ಜಿ ರಸ್ತೆಯ ಮಿತ್ತಲ್ ಟವರ್ ಬಳಿ ನಡೆದಿದ್ದ ಸೈಯದ್ ಇಮ್ರಾನ್ ಕೊಲೆ ಪ್ರಕರಣಕ್ಕೆ ಈಗ ಬೀಗ್ ಟ್ವಿಸ್ಟ್ ಸಿಕ್ಕಿದೆ. ತನ್ನ ಮಗನನ್ನು ಕೊಲೆ ಮಾಡಲಾಗಿದೆ ಎಂದು ಇಮ್ರಾನ್ ತಂದೆ ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು....

ಆಟೋಗಳ ಮಧ್ಯೆ ಮುಖಾಮುಖಿ ಡಿಕ್ಕಿ: ಮಹಿಳೆ ದುರ್ಮರಣ, ಮೂವರು ಗಂಭೀರ

3 days ago

ಚಿತ್ರದುರ್ಗ: ಎರಡು ಆಟೋಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮಹಿಳೆ ಮೃತಪಟ್ಟ ದುರ್ಘಟನೆ ಚಿತ್ರದುರ್ಗ ತಾಲೂಕಿನ ಬಿಳಿಚೋಡು ಗ್ರಾಮದ ಸಮೀಪದಲ್ಲಿ ನಡೆದಿದೆ. ಕಾಕಬಾಳು ಗ್ರಾಮದ ಶಾರದಮ್ಮ (55) ಮೃತ ಮಹಿಳೆ. ಬೆಳಗ್ಗೆ ತರಕಾರಿ ಸಾಗಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು,...

ಕಾರಿನಲ್ಲಿ ತೋಟಕ್ಕೆ ಹೊಗುತ್ತಿದ್ದಾಗ ಅಪಘಾತ: ಪತ್ನಿ ಸಾವು, ಪತಿ-ಮಗಳು ಬಚಾವ್

3 days ago

ತುಮಕೂರು: ಕಾರು ಅಪಘಾತದಲ್ಲಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರಿನ ಗೂಳೂರು ಬಳಿಯ ಪೋದಾರ್ ಶಾಲೆ ಬಳಿ ನಡೆದಿದೆ. ವಿನೂತಾ (28) ಮೃತಪಟ್ಟ ಮಹಿಳೆಯಾಗಿದ್ದಾರೆ. ಕಾರಿನಲ್ಲಿದ್ದ ವಿನೂತಾ ಅವರ ಪತಿ ರಾಘವೇಂದ್ರ ಹಾಗೂ 4 ವರ್ಷದ ಮಗಳು ಶ್ರಾವ್ಯ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ....

ಒಬ್ಬ ಬಾಲಕನನ್ನು ರಕ್ಷಿಸಲು ಹೋಗಿ ಕೊಳಕ್ಕೆ ಬಿದ್ದ ಕಾರು – ಆರು ಮಕ್ಕಳು ಜಲಸಮಾಧಿ

4 days ago

ಪಾಟ್ನಾ: ಕಾರೊಂದು ರಸ್ತೆ ಪಕ್ಕದ ಕೊಳಕ್ಕೆ ಬಿದ್ದ ಪರಿಣಾಮ ಆರು ಮಂದಿ ಬಾಲಕರು ಮೃತಪಟ್ಟಿರುವ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಬೆಳ್ಳಂಬೆಳ್ಳಗೆ ಸಂಭವಿಸಿದೆ. ಮೃತರನ್ನು ಉನೀತ್ ಕುಮಾರ್, ನಯನಾ ಕುಮಾರಿ, ಕರಣ್ ಕುಮಾರ್, ಮಿಥುನ್ ಕುಮಾರ್, ಅಜಯ್ ಕುಮಾರ್ ಹಾಗೂ ನಿತೇಷ್...