Friday, 19th January 2018

3 weeks ago

ಈಗ ಫೇಸ್‍ಬುಕ್ ಖಾತೆ ತೆರೆಯಲು ಬಂತು ಆಧಾರ್!

ಬೆಂಗಳೂರು: ಸಿಮ್ ಕಾರ್ಡ್, ಪಾನ್ ಕಾರ್ಡ್ ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯ ಆಗಿದ್ದು ಈಗ ಫೇಸ್ ಬುಕ್ ನಲ್ಲೂ ಆಧಾರ್ ಬಂದಿದೆ. ಹೌದು. ಭಾರತದಲ್ಲಿ ಹೊಸದಾಗಿ ಖಾತೆ ತೆರೆಯುವ ಬಳಕೆದಾರರಿಗೆ ಆಧಾರ್ ನಲ್ಲಿ ನೀವು ಯಾವ ಹೆಸರು ನೀಡಿದ್ದಿರೋ ಆ ಹೆಸರನ್ನೇ ಖಾತೆಗೆ ನೀಡಿ ಎಂದು ಫೇಸ್‍ಬುಕ್ ಹೇಳುತ್ತಿದೆ. ಹಾಗೆಂದ ಮಾತ್ರಕ್ಕೆ ಆಧಾರ್ ನಲ್ಲಿ ಏನು ಹೆಸರು ನಮೂದಿಸಿದ್ದೀರೋ ಅದೇ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಫೇಸ್‍ಬುಕ್ ಹೇಳಿಲ್ಲ. ಆಧಾರ್ ನಲ್ಲಿರುವ ಹೆಸರನ್ನು ನಮೂದಿಸಿದರೆ ನಿಮ್ಮ ಸ್ನೇಹಿತರಿಗೆ […]

1 month ago

ಜನವರಿ 1 ರಿಂದ OTP ಮೂಲಕವೇ ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡಿ

ನವದೆಹಲಿ: ಮೊಬೈಲ್ ನಂಬರ್ ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡದೆ ಇರುವವರು ಜನವರಿ 1 ನಂತರ ತಮ್ಮ ಮೊಬೈಲ್ ನಲ್ಲಿ ಒನ್ ಟೈಮ್ ಪಾಸವಾರ್ಡ್ (OTP) ವಿಧಾನ ಮೂಲಕ ಆಧಾರ್ ಲಿಂಕ್ ಮಾಡುವ ಹೊಸ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ವಾಯ್ಸ್-ಗೈಡೆನ್ಸ್ ಮೂಲಕ ಆಧಾರ್ ಲಿಂಕ್ ಮಾಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದ್ದು, ಈ ವ್ಯವಸ್ಥೆಯನ್ನು ಒಂದು ತಿಂಗಳ ಹಿಂದೆಯೇ ಗ್ರಾಹಕರ...

ಆಧಾರ್ ಕಡ್ಡಾಯದಿಂದ ದೇಶದ ಭದ್ರತೆಗೆ ಅಪಾಯ: ಸುಬ್ರಮಣಿಯನ್ ಸ್ವಾಮಿ

3 months ago

ನವದೆಹಲಿ: ಎಲ್ಲದಕ್ಕೂ ಆಧಾರ್ ಕಡ್ಡಾಯಗೊಳಿಸಿರುವುದರಿಂದ ರಾಷ್ಟ್ರೀಯ ಭದ್ರತೆಗೆ ಅಪಾಯವಾಗುತ್ತದೆ ಎಂದು ರಾಜ್ಯಸಭಾ ಬಿಜೆಪಿ ಸಂಸದ  ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. ಆಧಾರ್ ಕಡ್ಡಾಯಗೊಳಿಸಿರುವುದರಿಂದ ದೇಶದ ಭದ್ರತೆಗೆ ಯಾವ ರೀತಿಯಾಗಿ ಅಪಾಯವಿದೆ ಎಂದು ವಿವರಿಸಿ ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ...

ಆಧಾರ್ ಕಡ್ಡಾಯ: ಮಮತಾ ಸರ್ಕಾರಕ್ಕೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್

3 months ago

ನವದೆಹಲಿ: ಸರ್ಕಾರಿ ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದ್ದು, ಸಂಸತ್‍ನಲ್ಲಿ ಅಂಗೀಕರಿಸಿದ ಕಾಯ್ದೆಯನ್ನು ರಾಜ್ಯ ಸರ್ಕಾರಗಳು ಪ್ರಶ್ನಿಸುವಂತಿಲ್ಲ ಎಂದು ಹೇಳಿದೆ. ಇಂದಿನ ವಿಚಾರಣೆ ವೇಳೆ ಸಂಸತ್ ನಲ್ಲಿ ಅಂಗೀಕರಿಸಿರುವ ಕಾಯ್ದೆಯನ್ನು...

ಗ್ರಾಮದ 800 ಜನರ ಆಧಾರ್ ಕಾರ್ಡ್‍ನಲ್ಲೂ ಒಂದೇ ಜನ್ಮ ದಿನಾಂಕ

3 months ago

ನವದೆಹಲಿ: ಗ್ರಾಮದ 800 ಜನರ ಆಧಾರ್ ಕಾರ್ಡ್‍ನಲ್ಲೂ ಒಂದೇ ಜನ್ಮ ದಿನಾಂಕ ಮುದ್ರಿಸಿರುವ ಸಂಗತಿ ಹರಿದ್ವಾರದ ಗೈಂದಿ ಖಾತಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಸುಮಾರು 800 ಗ್ರಾಮಸ್ಥರ ಆಧಾರ್ ಕಾರ್ಡ್‍ನಲ್ಲೂ ಜನ್ಮ ದಿನಾಂಕವನ್ನ ಜನವರಿ 1 ಎಂದು ನಮೂದಿಸಲಾಗಿದೆ. ಯುನೀಕ್...

ನನ್ನ ಮೊಬೈಲ್ ನಂಬರ್ ರದ್ದುಗೊಳಿಸಿದ್ರೂ ಆಧಾರ್ ಲಿಂಕ್ ಮಾಡಲ್ಲ: ಮಮತಾ ಬ್ಯಾನರ್ಜಿ

3 months ago

ಕೊಲ್ಕತ್ತಾ: ನನ್ನ ಮೊಬೈಲ್ ನಂಬರ್ ರದ್ದುಗೊಳಿಸಿದರೂ, ನಾನು ಆಧಾರ್ ಸಂಖ್ಯೆಯನ್ನು ಮೊಬೈಲ್ ನಂಬರ್‍ಗೆ ಲಿಂಕ್ ಮಾಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಮೊಬೈಲ್ ನಂಬರ್‍ಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವ ಉದ್ದೇಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಟೆಲಿಕಾಂ...

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ-ಆರ್‍ಬಿಐ ಸ್ಪಷ್ಟನೆ

3 months ago

ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ನಿಯಮಗಳ ಅಡಿಯಲ್ಲಿ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ಎಂದು ರಿಸರ್ವ ಬ್ಯಾಂಕ್ ಸ್ಪಷ್ಟಪಡಿಸಿದ್ದು, ಆಧಾರ್ ಲಿಂಕ್ ಕುರಿತು ಜನತೆಯಲ್ಲಿ ಮೂಡಿದ್ದ ಗೊಂದಲಗಳಿಗೆ ಈಗ ಆರ್‍ಬಿಐ ತೆರೆ ಎಳೆದಿದೆ. ಈ ಹಿಂದೆ ಕೇಂದ್ರ...

ಆಧಾರ್ ಕಾರ್ಡ್ ಲಿಂಕ್ ಮಾಡಿಸದ್ದಕ್ಕೆ ರೇಷನ್ ಕ್ಯಾನ್ಸಲ್- ಹಸಿವಿನಿಂದ ಬಾಲಕಿ ಸಾವು!

3 months ago

ಜಾರ್ಖಂಡ್: ರೇಷನ್ ಕಾರ್ಡ್‍ಗೆ ಆಧಾರ್ ನಂಬರ್ ಲಿಂಕ್ ಮಾಡಿಸಿಲ್ಲ ಎಂದು ರೇಷನ್ ಕೊಡದ ಹಿನ್ನೆಲೆಯಲ್ಲಿ ಹಸಿವಿನಿಂದ 11 ವರ್ಷದ ಬಾಲಕಿ ಮೃತಪಟ್ಟಿರುವಂತಹ ಮನಕಲಕುವಂತಹ ಘಟನೆ ಜಾರ್ಖಂಡ್‍ನ ಕರಿಮತಿ ಗ್ರಾಮದಲ್ಲಿ ನಡೆದಿದೆ. 5 ದಿನಗಳವರೆಗೆ ಊಟ ಇಲ್ಲದೇ ಹಸಿವಿನಿಂದ ನರಳಾಡಿ ಸೆಪ್ಟಂಬರ್ 28...