Saturday, 23rd September 2017

Recent News

4 days ago

ಹೆಂಡ್ತಿಗೆ ಎಂಬಿಬಿಎಸ್ ಸೀಟ್ ಸಿಗ್ಲಿಲ್ಲವೆಂದು ಬೆಂಕಿ ಹಚ್ಚಿ ಕೊಂದ್ನಾ ಟೆಕ್ಕಿ?

ಹೈದರಾಬಾದ್: ಎಂಬಿಬಿಎಸ್ ವ್ಯಾಸಂಗಕ್ಕೆ ಪ್ರವೇಶಾತಿ ಪಡೆಯಲು ವಿಫಲಳಾದ ಹೆಂಡತಿಯನ್ನು ಸಾಫ್ಟ್ ವೇರ್ ಎಂಜಿನಿಯರ್ ಪತಿಯೊಬ್ಬ ಬೆಂಕಿ ಹಚ್ಚಿ ಕೊಲೆ ಮಾಡಿರುವುದಾಗಿ ಹೈದರಾಬಾದ್ ಪೊಲೀಸರು ಶಂಕಿಸಿದ್ದಾರೆ. ಮೃತ ಮಹಿಳೆಯ ಪತಿ ಹಾಗೂ ಆತನ ಪೋಷಕರನ್ನು ಪೊಲೀಸರು ಬಂಧಿಸಿದ್ದಾರೆ. 25 ವರ್ಷದ ಹಾರಿಕಾ ಕುಮರ್ ಮೃತ ದುರ್ದೈವಿ. ಹೈದರಾಬಾದ್‍ನ ಎಲ್‍ಬಿ ನಗರದ ರಾಕ್ ಟೌನ್ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಹಾರಿಕಾ ಪೋಷಕರು ಮಗಳನ್ನ ಕೊಲೆ ಮಾಡಲಾಗಿದೆ ಎಂದು ಆರೋಪಿಸಿದ್ದು, ವರದಕ್ಷಿಣೆ ಕಿರುಕುಳದ ಬಗ್ಗೆಯೂ ಪ್ರಕರಣ ದಾಖಲಿಸಿದ್ದಾರೆ. ಹಾರಿಕಾ ಪತಿ […]

5 days ago

ಮಹಿಳೆಯರ ಸುರಕ್ಷತೆಗೆ 18ರ ಯುವಕ ತಯಾರಿಸಿದ್ದಾನೆ `ಎಲೆಕ್ಟ್ರೋಶೂ’!

ಹೈದರಾಬಾದ್: ದೆಹಲಿಯಲ್ಲಿ ನಿರ್ಭಯಾ ಮೇಲೆ ಗ್ಯಾಂಗ್ ರೇಪ್ ನಡೆದ ಬಳಿಕ ಇದೀಗ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇರುತ್ತವೆ. ಹೀಗಾಗಿ ಹೈದರಾಬಾದ್ ಮೂಲದ ಯುವಕನೊಬ್ಬ ಮಹಿಳೆಯರ ರಕ್ಷಣೆಗೆಂದು ವಿನೂತನವಾದ ಚಪ್ಪಲಿಯೊಂದನ್ನು ತಯಾರಿಸಿದ್ದಾನೆ. ಹೈದರಾಬಾದ್ ನ ಸಿದ್ದಾರ್ಥ್ ಮಂಡಲ ಈ ವಿಶೇಷ ಚಪ್ಪಲಿಯನ್ನು ತಯಾರಿಸಿದ ವ್ಯಕ್ತಿ. ಹೈದರಾಬಾದ್‍ನ ಹಿಮಾಯತ್ ನಗರದ ನಿವಾಸಿಯೋಗಿರೋ ಸಿದ್ದಾರ್ಥ್, ಉದ್ಯಮಿ ಶ್ರೀರಾಮ್ ಮಂಡಲ ಹಾಗೂ...

ಶಾಲಾ ಸಮವಸ್ತ್ರ ಧರಿಸಿ ಬರದಿದ್ದಕ್ಕೆ ಬಾಲಕಿಗೆ ಏನು ಶಿಕ್ಷೆ ಕೊಟ್ರು ಗೊತ್ತಾ?

2 weeks ago

ಹೈದರಾಬಾದ್: ಶಾಲಾ ಸಮವಸ್ತ್ರ ಧರಿಸಿ ಬರಲಿಲ್ಲವೆಂಬ ಕಾರಣಕ್ಕೆ ಶಿಕ್ಷೆಯಾಗಿ ಹುಡುಗರ ಟಾಯ್ಲೆಟ್‍ಗೆ ನನ್ನನ್ನು ಕಳಿಸಿದ್ರು ಎಂದು ಹೈದರಾಬಾದ್‍ನ ಖಾಸಗಿ ಶಲೆಯ 11 ವರ್ಷದ ಬಾಲಕಿಯೊಬ್ಬಳು ಹೇಳಿದ್ದಾಳೆ. ಬಾಲಕಿಯ ತಂದೆ ವಿಡಿಯೋ ಮಾಡಿದ್ದು, ಇದರಲ್ಲಿ 5ನೇ ತರಗತಿಯ ಬಾಲಕಿ ತನಗೆ ನೀಡಿದ ಶಿಕ್ಷೆಯ...

ಮಿಸ್ ಇಂಡಿಯಾ ಕಿರೀಟ ತನ್ನದಾಗಿಸಿಕೊಂಡ ಕೋಲಾರದ ಬೆಡಗಿ

4 weeks ago

ಕೋಲಾರ: ಹೈದರಾಬಾದ್ ನಲ್ಲಿ ನಡೆದ ಪ್ರತಿಷ್ಠಿತ ರಿಲಯನ್ಸ್ ಜ್ಯುವೆಲ್-2017 ನ ಮಿಸ್ ಇಂಡಿಯಾ ಕಿರೀಟವನ್ನ ಕೋಲಾರದ ರಮ್ಯಾ ಸರಣ್ ತನ್ನದಾಗಿಸಿಕೊಂಡಿದ್ದಾರೆ. ಈ ಸ್ಪರ್ಧೆಯಲ್ಲಿ ದೇಶ-ವಿದೇಶಗಳಿಂದ ಬಂದಿದ್ದ 80 ಮಂದಿ ಮಾಡೆಲ್‍ಗಳನ್ನು ಹಿಂದಿಕ್ಕಿ 5 ದಿನಗಳ ಕಾಲ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತಳಾಗುವ...

ಥಿಯೇಟರ್ ನಲ್ಲಿ ರಾಷ್ಟ್ರಗೀತೆ ವೇಳೆ ಎದ್ದು ನಿಲ್ಲದ 3 ಎಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ!

1 month ago

ಹೈದರಾಬಾದ್: ಥಿಯೇಟರ್ ನಲ್ಲಿ ಸಿನಿಮಾಗೂ ಮುಂಚೆ ಪ್ರಸಾರ ಮಾಡಲಾದ ರಾಷ್ಟ್ರಗೀತೆಯ ಸಂದರ್ಭದಲ್ಲಿ ಎದ್ದು ನಿಲ್ಲದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ರಾಜೇಂದ್ರ ನಗರ ಪೊಲೀಸರು ಬಂಧಿಸಿದ್ದಾರೆ. ಜಮ್ಮು-ಕಾಶ್ಮೀರದ ಬಾರಮುಲ್ಲಾ ನಿವಾಸಿಗಳಾದ ಜಮೀಲ್ ಗುಲ್, ಓಮರ್ ಫೈಜ್ ಲುನೀ ಮತ್ತು ಮುದಾಸಿರ್ ಶಬ್ಬೀರ್ ಬಂಧಿತ...

3ನೇ ತರಗತಿ ಬಾಲಕ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ!

1 month ago

ಹೈದರಾಬಾದ್: ತೆಲುಗು ಪದ್ಯ ಕಲಿತುಕೊಂಡು ಬಂದಿಲ್ಲವೆಂದು ಶಾಲೆಯಲ್ಲಿ ಟೀಚರ್ ಹೊಡೆದಿದ್ದರಿಂದ ಮನನೊಂದ 9 ವರ್ಷದ ವಿದ್ಯಾರ್ಥಿಯೊಬ್ಬ ಸೀಮೆ ಎಣ್ಣೆ ಸುರಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಘಟನೆ ವನಾಪರ್ತಿ ಜಿಲ್ಲೆಯಲ್ಲಿ ನಡೆದಿದೆ. ಆನಂದ್ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿಯಾಗಿದ್ದು, ಈತ...

ಅಬಾರ್ಷನ್‍ನಿಂದಾಗಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು

2 months ago

ಹೈದರಾಬಾದ್: ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಗರ್ಭಪಾತ ಮಾಡಲು ಯತ್ನಿಸಿದ ನಂತರ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ. ಕೋರ್ಟ್ ಅನುಮತಿ ಇಲ್ಲದ ಹೊರತು 20 ವಾರಗಳಿಗಿಂತ ಹೆಚ್ಚಿನ ಅವಧಿಯ ಭ್ರೂಣವನ್ನು ಗರ್ಭಪಾತ ಮಾಡಿಸುವಂತಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಅನುಶಾ ಮೆಟರ್ನಿಟಿ...

ಕ್ಲಾಸ್‍ನಲ್ಲಿ ನಿದ್ದೆ ಮಾಡ್ತಿದ್ದ ಟೀಚರ್ ಫೋಟೋ ತೆಗೆದು ಶಿಕ್ಷಣ ಇಲಾಖೆಗೆ ಕಳಿಸ್ದ- ಮುಂದೇನಾಯ್ತು ಅನ್ನೋದು ಶಾಕಿಂಗ್

2 months ago

ಹೈದರಾಬಾದ್: 10ನೇ ತರಗತಿ ವಿದ್ಯಾರ್ಥಿಯೊಬ್ಬ ತರಗತಿಯಲ್ಲಿ ನಿದ್ದೆ ಮಾಡ್ತಿದ್ದ ಶಿಕ್ಷಕರ ಫೋಟೋ ತೆಗೆದು ಶಿಕ್ಷಣ ಇಲಾಖೆಗೆ ಕಳಿಸಿದ್ದ. ಆದ್ರೆ ಆತ ಮಾಡಿದ ಈ ಕೆಲಸಕ್ಕೆ ಕಂಬಕ್ಕೆ ಕಟ್ಟಿ ಪೊಲೀಸರು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇಲ್ಲಿನ ಮಹಬೂಬ್‍ನಗರದಲ್ಲಿ ಶನಿವಾರದಂದು ಈ ಘಟನೆ ನಡೆದಿದೆ....