Wednesday, 23rd August 2017

Recent News

7 days ago

 ಕಂಡಕ್ಟರ್-ಪೊಲೀಸರ ನಡುವೆ ಕೆಎಸ್‍ಆರ್‍ಟಿಸಿ ಬಸ್‍ನಲ್ಲೇ ಕಿತ್ತಾಟ

ಹಾಸನ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ನಲ್ಲಿ ಟಿಕೆಟ್ ವಿಚಾರವಾಗಿ ಪೊಲೀಸರು ಮತ್ತು ನಿರ್ವಾಹಕನ ನಡುವೆ ಜಗಳವಾಗಿ, ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬರಾಳು ಗ್ರಾಮದ ಬಳಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಭಾನುವಾರ ಶ್ರವಣಬೆಳಗೊಳ ಚನ್ನರಾಯಪಟ್ಟಣ ನಡುವೆ ಸಂಚರಿಸುವ ಬಸ್ ನಲ್ಲಿ ಈ ಜಗಳ ನಡೆದಿದೆ. ನಿರ್ವಾಹಕ ಸೋಮಶೇಖರ್ ಟಿಕೆಟ್ ಕೇಳಿದ್ದಕ್ಕೆ ನಾಲ್ವರು ಪೊಲೀಸರು ಅವಾಚ್ಯ ಪದ ಬಳಸಿದ್ದು, ಈ ದೃಶ್ಯವನ್ನು ಪ್ರಯಾಣಿಕರೊಬ್ಬರು […]

1 week ago

ನಾನು ಯುದ್ಧಕ್ಕೆ ನಿಲ್ಲೋ ಕಾಲ ಬಂದಿದೆ: ಹೆಚ್.ಡಿ.ದೇವೇಗೌಡ

ಹಾಸನ: ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಈಗಿನಿಂದಲೇ ಚುನಾವಣಾ ರಣತಂತ್ರ ರೂಪಿಸುತ್ತಿರುವುದರಿಂದ ನಾನು ಯುದ್ಧಕ್ಕೆ ಇಳಿಯುವ ಕಾಲ ಸನ್ನಿಹಿತವಾಗಿದೆ ಎಂದು ಜೆಡಿಎಸ್ ವರಿಷ್ಠ ನಾಯಕ ಹೆಚ್.ಡಿ.ದೇವೇಗೌಡರು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಹಾಸನ ಜಿಲ್ಲೆಯ ಬೂಕನಬೆಟ್ಟದಲ್ಲಿ ಮಾತನಾಡಿದ ಅವರು, ನಾನು ಮೊನ್ನೆ ಮಾವಿನಕೆರೆ ರಂಗನಾಥ ಸ್ವಾಮಿ, ಇಂದು ನನ್ನ ಕುಲದೇವರು ಈಶ್ವರನನ್ನು ಪೂಜೆ ಮಾಡಿದ್ದೇನೆ. ಅವರಿಬ್ಬರ...

ಕಾಫಿ ತೋಟದಲ್ಲಿ ನೇಣು ಬಿಗಿದುಕೊಂಡು ಅಪ್ರಾಪ್ತ ಪ್ರೇಮಿಗಳು ಆತ್ಮಹತ್ಯೆ

3 weeks ago

ಹಾಸನ: ಅಪ್ರಾಪ್ತ ಪ್ರೇಮಿಗಳಿಬ್ಬರು ಕಾಫಿ ಗಿಡಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದಲ್ಲಿ ನಡೆದಿದೆ. ಹಾರ್ಲೆ ಗ್ರಾಮದ ಸಹನಾ(16) ಮತ್ತು ಕುಂಬರಡಿ ಗ್ರಾಮದ ಅರುಣ್(17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಗಳು. ಬಾಲ್ಯದಿಂದ ಇಬ್ಬರು ಪರಿಚಯಸ್ಥರಾಗಿದ್ದು ಇಬ್ಬರೂ...

ವಿಡಿಯೋ: ನಿರ್ಭಯವಾಗಿ ಗ್ರಾಮದ ತುಂಬೆಲ್ಲಾ ಓಡಾಡಿದ ಗಜರಾಜ- ಗ್ರಾಮಸ್ಥರಲ್ಲಿ ಆತಂಕ

3 weeks ago

ಹಾಸನ: ಜಿಲ್ಲೆಯ ಸಕಲೇಶಪುರ ಮತ್ತು ಆಲೂರು ತಾಲೂಕಿನ ಗ್ರಾಮಗಳಲ್ಲಿ ಒಂಟಿ ಸಲಗವೊಂದು ಕಾಣಿಸಿಕೊಂಡಿದೆ. ಶನಿವಾರ ಸಂಜೆ ಹೊಂಕರವಳ್ಳಿ, ಕುನಿಗನಹಳ್ಳಿ, ಗ್ರಾಮಗಳ ವ್ಯಾಪ್ತಿಯಲ್ಲಿ ಕಾಣಿಸಿಕೊಂಡಿದ್ದ ಒಂಟಿಸಲಗವೊಂದು ಇಂದೂ ಕೂಡ ಬ್ಯಾಗಡಹಳ್ಳಿಯಲ್ಲಿ ಕಾಣಿಸಿಕೊಂಡಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಹೊಂಕರವಳ್ಳಿ ಸರ್ಕಲ್ ನಲ್ಲಿ ಶನಿವಾರ ರಾಜಾರೋಷವಾಗಿ...

ನವಿಲು ಕಚ್ಚಿ ಗಾಯಗೊಂಡಿದ್ದ ಅನಾಥ ನವಜಾತ ಶಿಶುವಿಗೆ ಮರುಜೀವ ನೀಡಿದ ಕೂಲಿ ಕಾರ್ಮಿಕ ಮಹಿಳೆ

4 weeks ago

ಹಾಸನ: ಮಂಡ್ಯದಲ್ಲಿ ನವಜಾತ ಹೆಣ್ಣು ಶಿಶುವೊಂದು ತನ್ನದಲ್ಲದ ತಪ್ಪಿಗೆ ನಾಯಿದಾಳಿಗೆ ಸಿಕ್ಕಿ ಅನಾಥ ಶವವಾಗಿದ್ದರೆ, ಹಾಸನದಲ್ಲಿ ಸ್ಥಳೀಯರು ಮತ್ತು ಜಿಲ್ಲಾಸ್ಪತ್ರೆ ವೈದ್ಯರ ಸಮಯ ಪ್ರಜ್ಞೆಯಿಂದಾಗಿ ನವಜಾತ ಹೆಣ್ಣು ಶಿಶುವೊಂದು ಮರುಹುಟ್ಟು ಪಡೆದಿದೆ. ಹೊಳೆನರಸೀಪುರ ತಾಲೂಕು ಶ್ರೀರಾಮದೇವರ ಕಟ್ಟೆ ರಸ್ತೆಯ ಪೊದೆಯೊಂದರಲ್ಲಿ ಕಳೆದ...

ಕಾರ್ ಡಿಕ್ಕಿಯಾಗಿ ಬೈಕ್ ಸವಾರ ಸಾವು- ಸ್ಥಳೀಯರಿಂದ ರಸ್ತೆ ತಡೆದು ಪ್ರತಿಭಟನೆ

4 weeks ago

ಹಾಸನ: ಬೈಕ್ ಸವಾರನಿಗೆ ಹಿಂಬದಿಯಿಂದ ಕಾರ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಯೇ ಮೃತಪಟ್ಟು, ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಹಾಸನದಲ್ಲಿ ನಡೆದಿದೆ. 25 ವರ್ಷದ ಮಹೇಶ್ ಮೃತ ಬೈಕ್ ಸವಾರ. ಚನ್ನರಾಯಪಟ್ಟಣ ಹೊರವಲಯ ಬೆಲಸಿಂದ ಗ್ರಾಮದ ಬಳಿ ರಾಷ್ಟ್ರೀಯ...

ಕಾಂಗ್ರೆಸ್‍ನಲ್ಲಿ ಬಸ್ ಓಡಿಸಲು ಡ್ರೈವರಿಲ್ಲ- ಜಮೀರ್‍ಗೆ ರೇವಣ್ಣ ಟಾಂಗ್

4 weeks ago

ಹಾಸನ: ಬಂಡಾಯ ಶಾಸಕ ಜಮೀರ್ ಅಹಮ್ಮದ್ ಸೇರಿದಂತೆ ಏಳು ಮಂದಿ ಬಂಡಾಯ ಶಾಸಕರ ವಿರುದ್ಧ ಜೆಡಿಎಸ್ ಮುಖಂಡ ಹೆಚ್ ಡಿ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಿ ಬಸ್ ಓಡಿಸಲು ಡ್ರೈವರ್ ಇಲ್ಲ ಅಂತ...