Wednesday, 20th September 2017

6 days ago

ಊರಿಗೇ ಊರೇ ಹಾವಿನ ಕಾಟದಿಂದ ಹೈರಾಣ- ರಾತ್ರಿ ಮಲಗೋಕಾಗಲ್ಲ, ಬೆಳಗಾದ್ರೆ ಸಾವಿನ ಸುದ್ದಿ ತಪ್ಪಲ್ಲ

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹೊಸಕೋಟೆ ಗ್ರಾಮದ ಜನ ಹಾವಿನ ಕಾಟದಿಂದ ಹೈರಾಣವಾಗಿದ್ದಾರೆ. ಗ್ರಾಮದ ಪಶ್ಚಿಮ ದಿಕ್ಕಿನಲ್ಲಿ ಬೆಟ್ಟವಿದ್ದು ಸರಿ ಸುಮಾರು ಐದು ಸಾವಿರ ಜನ ಇಲ್ಲಿ ವಾಸ ಮಾಡ್ತಿದ್ದಾರೆ. ಆದ್ರೆ 3 ತಿಂಗಳಿನಿಂದ ಈ ಗ್ರಾಮದ ಜನ ಸರಿಯಾಗಿ ನಿದ್ದೆ ಮಾಡಿಲ್ಲ. ಬೆಳಗಾಗ್ತಿದ್ದಂತೆ ಗ್ರಾಮದಲ್ಲಿ ಒಬ್ಬರಲ್ಲ ಒಬ್ಬರಿಗೆ ಹಾವು ಕಚ್ಚಿದೆ ಅನ್ನೋ ಸುದ್ದಿ ಕಿವಿಗೆ ಬೀಳುತ್ತೆ. ಕೆಲವರಂತೂ ರಾತ್ರಿಯಿಡೀ ಕೈಯಲ್ಲಿ ಕೋಲು ಹಿಡ್ಕೊಂಡು ಹಾವನ್ನ ಕಾಯೋ ಕೆಲಸ ಮಾಡಿಕೊಂಡಿದ್ದಾರೆ. ಕರಿನಾಗರ ಹಾವು ಕಚ್ಚಿ ಈಗಾಗಲೇ ಐವರು […]

3 weeks ago

ಹಾವು ಮತ್ತೊಂದು ಹಾವನ್ನ ನುಂಗುವ ವಿಡಿಯೋ ನೋಡಿ

ಬೆಂಗಳೂರು: ಸಾಮಾನ್ಯವಾಗಿ ಹಾವುಗಳು ಕಪ್ಪೆ ಇಲ್ಲವೆ ಸಣ್ಣ ಹುಳಗಳನ್ನು ನುಂಗುವುದನ್ನು ನೋಡಿದ್ದೇವೆ. ಆದರೆ ಕಳೆದ ರಾತ್ರಿ ಸುರಿದ ತುಂತುರು ಮಳೆಯಲ್ಲಿ ಬಿಲದಿಂದ ಹೊರಬಂದ ಹಾವೊಂದು ಮತ್ತೊಂದು ಹಾವನ್ನ ನುಂಗುತ್ತಿದ್ದ ದೃಶ್ಯ ಮೊಬೈಲ್‍ನಲ್ಲಿ ಸೆರೆಯಾಗಿದೆ. ಬೆಂಗಳೂರು ಹೊರವಲಯದ ನೆಲಮಂಗಲ ಸಮೀಪದ ಸಿಡೇದಹಳ್ಳಿಯಲ್ಲಿ ಈ ದೃಶ್ಯ ಕಂಡುಬಂದಿದೆ. ಸಾರ್ವಜನಿಕರು ಇದನ್ನು ಮೊಬೈಲ್‍ಗಳಲ್ಲಿ ಸೆರೆಹಿಡಿದಿದ್ದಾರೆ. ಕಟಕಲು ಜಾತಿಗೆ ಸೇರಿದ ಈ...

ಎಲೆಕೋಸಿನ ಜೊತೆ ಹಾವು ಬೇಯಿಸಿ ತಿಂದ್ರು- ಅಮ್ಮ ಮಗಳು ಆಸ್ಪತ್ರೆಗೆ ದಾಖಲು

2 months ago

ಇಂದೋರ್: ಆಕಸ್ಮಿಕವಾಗಿ ಗುರುವಾರ ರಾತ್ರಿ ಎಲೆಕೋಸಿನ ಜೊತೆ ಪುಟಾಣಿ ಹಾವೊಂದನ್ನ ಬೇಯಿಸಿ ತಿಂದು 35 ವರ್ಷದ ಮಹಿಳೆ ಹಾಗೂ ಅವರ ಮಗಳು ಆಸ್ಪತ್ರೆಗೆ ದಾಖಲಾಗಿರೋ ಘಟನೆ ಇಂದೋರ್‍ನಲ್ಲಿ ನಡೆದಿದೆ. ಅಫ್ಜಾನ್ ಇಮಾಮ್ ಹಾಗೂ ಅವರ 15 ವರ್ಷದ ಮಗಳು ಆಮ್ನಾ ಸದ್ಯ...

ಕೈಯಲ್ಲಿ ಹಾವು ಹಿಡಿದು ನೂರಾರು ಜನರ ಮೆರವಣಿಗೆ- ವಿಡಿಯೋ ಹಿಂದಿನ ನಿಜವಾದ ಸ್ಟೋರಿ ಏನು?

2 months ago

ಪಾಟ್ನಾ: ನೂರಾರು ಜನ ಯಾವುದೇ ಭಯವಿಲ್ಲದೆ ಕೈಯಲ್ಲಿ ಹಾವುಗಳನ್ನ ಹಿಡಿದುಕೊಂಡು ಮೆರವಣಿಗೆ ಸಾಗುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಅದರಲ್ಲೂ ಈ ವಿಡಿಯೋದ ಬಗ್ಗೆ ಕೆಲವು ಯೂಟ್ಯೂಬ್ ಚಾನೆಲ್‍ಗಳು ಮತ್ತೊಂದು ಬಗೆಯದ್ದೇ ವಿವರಣೆ ನೀಡಿವೆ. ಬಿಹಾರದ ರತ್ನಪುರಿ ಗ್ರಾಮದಲ್ಲಿ...

ಈ ಊರಲ್ಲಿ ನಾಗರ ಪಂಚಮಿ ಹಬ್ಬಕ್ಕೆ ರಕ್ತಾಭಿಷೇಕ!

2 months ago

ಗದಗ: ಪಂಚಮಿ ಹಬ್ಬದಲ್ಲಿ ನಾಗದೇವರಿಗೆ ಹಾಲೆರೆಯೋದು ಸಂಪ್ರದಾಯ. ಆದರೆ ಈ ಊರಲ್ಲಿ ಹಾಲಿನ ಬದಲು ರಕ್ತದ ಅಭಿಷೇಕ ಮಾಡ್ತಾರೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಅನೇಕ ಕುಂಚಿಕೊರಮ ಬುಡಕಟ್ಟು ಜನಾಂಗದವರಿದ್ದಾರೆ. ಇವರು ಕಾಡನ್ನೇ ನಂಬಿದ ಜನ. ಬಿದಿರು ಕಡಿಯುವುದು...

ಹಾವಿನ ವಿಷ ಮಾರಾಟ: ಶಿರಸಿಯ ವ್ಯಕ್ತಿ ಅರೆಸ್ಟ್

2 months ago

ಕಾರವಾರ: ಅಕ್ರಮವಾಗಿ ಮನೆಯಲ್ಲಿ ಹಾವುಗಳನ್ನು ಸಂಗ್ರಹಿಸಿ ಇಟ್ಟಿದ್ದ ಆರೋಪಿಯನ್ನ ಶಿರಸಿ ಅರಣ್ಯ ಸಂಚಾರಿದಳ ದಾಳಿ ನಡೆಸಿ ಬಂಧಿಸಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ನಿವಾಸಿಯಾದ ಮನೋಹರ್ ನಾಯರ್ ಬಂಧಿತ ಆರೋಪಿ. ಈತ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಐದು ಹಾವುಗಳ ವಶಪಡಿಸಿಕೊಂಡಿದ್ದಾರೆ. ಹಾವಿನ...

ಟಾಯ್ಲೆಟ್ ಸೀಟ್‍ನಲ್ಲಿ ಮಹಿಳೆಯ ಹಿಂಭಾಗ ಕಚ್ಚಿದ ಹೆಬ್ಬಾವು!

2 months ago

ಬ್ಯಾಂಕಾಕ್: ಹೆಬ್ಬಾವೊಂದು ಟಾಯ್ಲೆಟ್ ಸೀಟ್‍ನಿಂದ ಹೊರಬಂದು ಮಹಿಳೆಯ ಹಿಂಭಾಗ ಕಚ್ಚಿದ ಘಟನೆ ಥೈಲ್ಯಾಂಡ್‍ನಲ್ಲಿ ನಡೆದಿದೆ. ಬ್ಯಾಂಕಾಕ್‍ನ ತಾಲಿಂಗ್ ಚನ್ ಪ್ರದೇಶದ ನಿವಾಸಿಯಾಗಿರೋ 42 ವರ್ಷದ ಮಮ್ ಫನಾರತ್ ಚೈಬೂನ್‍ಗೆ ಹಾವು ಕಚ್ಚಿದೆ. ಗಾಬರಿಯಿಂದ ಮಹಿಳೆ ತಿರುಗಿ ನೋಡಿದ್ರೆ ಟಾಯ್ಲೆಟ್ ಕಮೋಡ್‍ನಲ್ಲಿ ಹಾವಿನ ತಲೆ...

ಮೈಸೂರು: ಆಸ್ಪತ್ರೆಯ ಔಷಧಿ ಇಡುವ ಕಬೋರ್ಡ್ ನಲ್ಲಿ ನಾಗರಹಾವು ಪ್ರತ್ಯಕ್ಷ

2 months ago

ಮೈಸೂರು: ನರರದ ಸ್ಯಾನಿಟೋರಿಯಂ ಆಸ್ಪತ್ರೆಯಲ್ಲಿ ಇದ್ದಕ್ಕಿದ್ದ ಹಾಗೆ ನಾಗರ ಹಾವೊಂದು ಪ್ರತ್ಯಕ್ಷವಾಗಿದೆ. ಕೆ.ಆರ್.ಎಸ್ ರಸ್ತೆಯಲ್ಲಿರುವ ಸ್ಯಾನಿಟೋರಿಯಂ ಆಸ್ಪತ್ರೆಯ 60 ಮಂದಿ ರೋಗಿಗಳು ದಾಖಲಾಗಿದ್ದ ಕೋಣೆಯಲ್ಲಿ ನಾಗರ ಹಾವು ಕಾಣಿಸಿಕೊಂಡಿದೆ. ರೋಗಿಯೋಬ್ಬರ ಔಷಧಿ ಇಡುವ ಕಬೋರ್ಡ್ ಒಳಗೆ ಹಾವು ಸೇರಿಕೊಂಡಿತ್ತು. ಸುಮಾರು 5...