Monday, 18th June 2018

Recent News

2 days ago

ಶಿಥಿಲಾವಸ್ಥೆಯಲ್ಲಿದೆ ಹೊರನಾಡಿಗೆ ಸಂಪರ್ಕ ಕಲ್ಪಿಸೋ ಹೆಬ್ಬಾಳೆ ಸೇತುವೆ!

ಚಿಕ್ಕಮಗಳೂರು: ಭದ್ರಾ ನದಿಯ ನೀರಿನ ರಭಸಕ್ಕೆ ಹೊರನಾಡು ಅನ್ನಪೂಣೇಶ್ವರಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಶಿಥಿಲಾವಸ್ಥೆಯಲ್ಲಿರುವ ಹೆಬ್ಬಾಳೆ ಸೇತುವೆ ಇಕ್ಕೆಲಗಳಲ್ಲಿದ್ದ ತಡೆಗೋಡೆಯ ಕಂಬಗಳು ಮುರಿದು ಬಿದ್ದಿದೆ. ಸೇತುವೆಯೂ ಪಾಳು ಬಿಟ್ಟು, ಸೇತುವೆಯೇ ಮಧ್ಯದಲ್ಲೇ ರಂಧ್ರಗಳಾಗಿವೆ. ಮಳೆ ನಿಂತ ಮೇಲೆ ಭದ್ರೆಯ ರಭಸ ಕಡಿಮೆಯಾದ ಮೇಲೆ ನೀರಿನಲ್ಲಿ ತೇಲಿ ಬಂದಿದ್ದ ದೊಡ್ಡ ಮರದ ದಿಣ್ಣೆಗಳನ್ನ ಜೆಸಿಬಿ ಮೂಲಕ ಸ್ವಚ್ಛ ಮಾಡಲಾಗಿದೆ. ಸೇತುವೆಯ ಮಧ್ಯದಲ್ಲೇ ಬಿರುಕು ಬಿಟ್ಟಿದೆ. ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೆ ಹೋಗುವ ಬಹುತೇಕ ವಾಹನಗಳು ಈ ಸೇತುವೆಯ ಮೂಲಕವೇ ಸಂಚರಿಸುತ್ತದೆ. […]

3 days ago

ಶಾಂತನಾದ ವರುಣ – ಚಾರ್ಮಾಡಿ, ಕಳಸ, ಕುದುರೆಮುಖ ರಸ್ತೆಯಲ್ಲಿ ವಾಹನ ಸಂಚಾರ

ಚಿಕ್ಕಮಗಳೂರು/ರಾಮನಗರ: ಕಳೆದೊಂದು ವಾರದಿಂದ ಸುರಿಯುತ್ತಿದ್ದ ಧಾರಾಕಾರ ಮಳೆಗೆ ಚಿಕ್ಕಮಗಳೂರಿನ ಮಲೆನಾಡು ಭಾಗ ಅಕ್ಷರಶಃ ತತ್ತರಿಸಿಹೋಗಿತ್ತು. ಆದರೆ ಶುಕ್ರವಾರದಿಂದ ಮಳೆಯ ಪ್ರಮಾಣ ತಗ್ಗಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ತುಂಗಾ-ಭದ್ರಾ ನದಿಗಳು ಶಾಂತವಾಗಿವೆ. ಭಾರೀ ಮಳೆಯಿಂದ ಬಂದ್ ಆಗಿದ್ದ ಚಾರ್ಮಾಡಿ, ಕಳಸ, ಕುದುರೆಮುಖ ರಸ್ತೆ, ಕಳಸ ಹೊರನಾಡು ರಸ್ತೆ, ಶೃಂಗೇರಿ, ಮಂಗಳೂರು ರಸ್ತೆಯಲ್ಲಿಯೂ ಯಾವುದೇ ತೊಂದರೆ ಇಲ್ಲದೆ...

ಮುಂದುವರೆದ ವರುಣನ ಆರ್ಭಟ – ಸೇತುವೆ ಕುಸಿತ, ಉಕ್ಕಿ ಹರಿದ ನದಿಗಳು, ಮುಳುಗಿದ ಭತ್ತದ ಗದ್ದೆ

7 days ago

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಮಳೆ ಇಂದು ಕೂಂಚ ಬಿಡುವು ನೀಡಿದೆ. ಆದರೆ ವಿರಾಜಪೇಟೆ ತಾಲೂಕಿನಲ್ಲಿ ಮಳೆಯಿಂದ ಗ್ರಾಮಾಂತರ ಪ್ರದೇಶದ ತೋಡುಗಳು ಹಾಗೂ ಕದನೂರು ಉಪ ನದಿ ಉಕ್ಕಿ ಹರಿದು ಭತ್ತದ ಗದ್ದೆಗಳು ಜಲಾವೃತವಾಗಿವೆ. ರಸ್ತೆ ಸಂಚಾರಕ್ಕೆ ಸದ್ಯಕ್ಕೆ...

ಸೇತುವೆ ದಾಟಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಕ್ರೂಸರ್ ವಾಹನ

1 week ago

ಬೀದರ್: ಜಿಲ್ಲೆಯಲ್ಲಿ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಜಮಖಂಡಿ ಬಳಿ ಕ್ರೂಸರ್ ವಾಹನ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಮಹಾರಾಷ್ಟ್ರದ – ಲಾತೂರ್ – ಬೀದರ್ ಸಂಪರ್ಕ ಕಡಿತಗೊಂಡಿದ್ದು, ಭಾಲ್ಕಿ ತಾಲೂಕಿನ ಜಮಖಂಡಿ ಬಳಿ ಸೇತುವೆ ದಾಟಲು ಯತ್ನಿಸಿದ್ದ ವೇಳೆ ಕ್ರೂಸರ್...

ಮಳೆಯಿಂದಾಗಿ ಮಡಿಕೇರಿ ಶಾಲಾ ಕಾಲೇಜುಗಳಿಗೆ ರಜೆ – ಮುನ್ನೆಚ್ಚರಿಕೆಯಾಗಿ ತಲಕಾವೇರಿಗೆ ನಿರ್ಬಂಧ

1 week ago

ಮಡಿಕೇರಿ: ಕೊಡಗಿನಲ್ಲಿ ಕಳೆದ 4 ದಿನಗಳಿಂದ ಮುಂಗಾರು ಮಳೆಯ ತೀವ್ರತೆ ಹೆಚ್ಚಾಗಿದ್ದು, ಇಂದು ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜೀವನದಿ ಕಾವೇರಿ, ಲಕ್ಷ್ಮಣತೀರ್ಥ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಮಳೆಯ ಪ್ರಮಾಣ ಇದೇ ರೀತಿ ಮುಂದುವರಿದರೆ ಪ್ರವಾಹ ಏರ್ಪಡುವ ಸಾಧ್ಯತೆಗಳಿದೆ. ಇನ್ನು...

ಜನರ ಸೆಲ್ಫಿ ಕ್ರೇಜ್ – ಬೆಳೆಯ ನಷ್ಟ ಭರಿಸಲು ರೈತರಿಂದ ಮಾಸ್ಟರ್ ಪ್ಲಾನ್

2 weeks ago

ಚಾಮರಾಜನಗರ: ಜನರ ಸೆಲ್ಫಿ ಕ್ರೇಜ್‍ನಿಂದ ಹಾನಿಯಾಗುತ್ತಿದ್ದ ಬೆಳೆಯ ನಷ್ಟವನ್ನು ಭರಿಸಲು ರೈತರು ಮಾಸ್ಟರ್ ಪ್ಲಾನೊಂದನ್ನು ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಬೆಳೆದಿರುವ ಸೂರ್ಯಕಾಂತಿ ಬೆಳೆ ಜನರ ಸೆಲ್ಫಿ ಕ್ರೇಜ್ ಗೆ ತುತ್ತಾಗುತ್ತಿತ್ತು. ಇದೀಗ ಇಲ್ಲಿನ ರೈತರು ಸೆಲ್ಫಿ ತೆಗೆದುಕೊಳ್ಳುವವರ...

ಮಂಗಳೂರಿನ ರಣಭೀಕರ ಮಳೆಗೆ ಬರೋಬ್ಬರಿ 20 ಕೋಟಿ ನಷ್ಟ

3 weeks ago

ಮಂಗಳೂರು: ಮಹಾ ಮಳೆಯಿಂದ ತತ್ತರಿಸಿದ್ದ ಮಂಗಳೂರು ಮತ್ತೆ ಸಹಜ ಸ್ಥಿತಿಗೆ ಮರಳಿದೆ. ಚಂಡಮಾರುತ ಪರಿಣಾಮದಿಂದ ಕೆಲವು ದಿನಗಳಿಂದ ದಿನಪೂರ್ತಿ ಸುರಿದ ಮಳೆರಾಯ ತನ್ನ ಪ್ರತಾಪ ನಿಲ್ಲಿಸಿದ್ದಾನೆ. ಆದರೆ ಈ ಮಳೆಗೆ ಮಂಗಳೂರಿನಲ್ಲಿ ಬರೋಬ್ಬರಿ ಸುಮಾರು 20 ಕೋಟಿ ರೂ.ಗಿಂತ ಅಧಿಕ ನಷ್ಟವಾಗಿದೆ...

ಮೆಕುನು ಚಂಡಮಾರುತಕ್ಕೆ ಕರಾವಳಿ ತತ್ತರ – ನದಿಯಂತಾದ ರಸ್ತೆ, ಕಾರುಗಳು ಮುಳುಗಡೆ, ಎರಡು ದಿನ ಮಳೆ

3 weeks ago

ಮಂಗಳೂರು: ಮೆಕುನು ಚಂಡಮಾರುತ ಪರಿಣಾಮದಿಂದಾಗಿ ಕರಾವಳಿಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಮಂಗಳೂರಿನಲ್ಲಿ ನೆರೆಯ ಭೀತಿ ಆವರಿಸಿದೆ. ಮಂಗಳೂರು ನಗರದ ಹಲವೆಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದ್ದು, ರಸ್ತೆಯಿಡೀ ನೀರಿನಿಂದ ಆವೃತವಾಗಿದೆ. ತಗ್ಗು ಪ್ರದೇಶದ ಅಂಗಡಿ, ವ್ಯಾಪಾರ ಕೇಂದ್ರಗಳಿಗೆ ನೀರು ನುಗ್ಗಿದೆ. ಹಲವು ಮನೆಗಳಿಗೂ...