Monday, 23rd April 2018

Recent News

6 days ago

ಈ ಬಾರಿ ಸಾಧಾರಣ ಮುಂಗಾರು ಮಳೆ: ಹವಾಮಾನ ಇಲಾಖೆ

ನವದೆಹಲಿ: ಈ ವರ್ಷ ಸಾಧಾರಣ ಮುಂಗಾರು ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ಮುನ್ಸೂಚನೆ ನೀಡಿದೆ. ಜೂನ್ ನಿಂದ ಸೆಪ್ಟೆಂಬರ್ ವರೆಗೆ ಸಾಧಾರಣ ಮುಂಗಾರು ಮಳೆಯಾಗುವ ನಿರೀಕ್ಷೆ ಇದೆ ಎಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಕೆಜಿ ರಮೇಶ್ ಹೇಳಿದ್ದಾರೆ. ಈ ಬಾರಿ ದೀರ್ಘಾವಧಿಯಲ್ಲಿ ಶೇ. 97ರಷ್ಟು ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಮೇ ಕೊನೆಯ ಅಥವಾ ಜೂನ್ ಮೊದಲ ವಾರದಲ್ಲಿ ಮುಂಗಾರು ಕೇರಳ ಪ್ರವೇಶಿಸುವ ಸಾಧ್ಯತೆಗಳಿವೆ. ಮೇ ತಿಂಗಳ ಮಧ್ಯದಲ್ಲಿ ಮುಂಗಾರು […]

8 months ago

ಉಡುಪಿಯಲ್ಲಿ 70 ಮಿಲಿ ಮೀಟರ್ ಮಳೆ ದಾಖಲು

ಉಡುಪಿ: ಜಿಲ್ಲೆಯಾದ್ಯಂತ ಇಂದು ಬಿರುಸಿನ ಮಳೆಯಾಗುತ್ತಿದೆ. ಮಧ್ಯಾಹ್ನ ಆರಂಭವಾದ ಮಳೆ ಸಂಜೆಯವರೆಗೂ ಸುರಿಯುತ್ತಿದೆ. ಕುಂದಾಪುರ ಮತ್ತು ಬೈಂದೂರಿನಲ್ಲಿ ವಿಪರೀತ ಗಾಳಿ ಮಳೆ ಶುರುವಾಗಿದೆ. ಜನರಿಗೆ ಸಂತಸ ಮೂಡಿಸಿದೆ. ಪಶ್ಚಿಮ ಘಟ್ಟದ ತಪ್ಪಲು ಪ್ರದೇಶವಾಗಿರುವ ಕಾರ್ಕಳ ತಾಲೂಕು ಹೆಬ್ರಿ ಅಜೆಕಾರು ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ ಪ್ರಕಾರ ಕಳೆದ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ 70...

ಮೇ 30ರ ಒಳಗಡೆ ರಾಜ್ಯಕ್ಕೆ ಮುಂಗಾರು ಪ್ರವೇಶ

11 months ago

ಬೆಂಗಳೂರು: ಮೇ ಅಂತ್ಯಕ್ಕೆ ದೇಶಕ್ಕೆ ಮುಂಗಾರು ಮಳೆ ಪ್ರವೇಶವಾಗಲಿದ್ದು, ರಾಜ್ಯಕ್ಕೆ ಮೇ 30ರೊಳಗೆ ಮುಂಗಾರು ಪ್ರವೇಶ ಮಾಡಲಿದೆ. ಮೇ 28 ರಿಂದ 30 ರೊಳಗೆ ಕೇರಳ ಮೂಲಕ ದೇಶಕ್ಕೆ ಮುಂಗಾರು ಪ್ರವೇಶ ಮಾಡಲಿದೆ. ಕೇರಳ ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡುತ್ತಿದ್ದ ಹಾಗೇ...

ರೈತಾಪಿ ವರ್ಗಕ್ಕೆ ಸಂತಸ ವಾರ್ತೆ: ಅವಧಿಗೂ ಮುನ್ನ ಮುಂಗಾರು ಎಂಟ್ರಿ

11 months ago

ಬೆಂಗಳೂರು: ರಣಭೀಕರ ಬರದಿಂದ ತತ್ತರಿಸಿ ಹೋಗಿರುವ ರೈತ ಸಮುದಾಯಕ್ಕೆ ಸಂತಸದ ಸುದ್ದಿ. ಈ ಬಾರಿಯ ಮುಂಗಾರು ನಿಗದಿತ ಅವಧಿಗೂ ಮುನ್ನವೇ ರಾಜ್ಯ ಪ್ರವೇಶಿಸುವ ಎಲ್ಲಾ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂಗಾರು ಮಾರುತಗಳು ಸೋಮವಾರದಂದು ಬಂಗಾಳಕೊಲ್ಲಿಯ ಅಂಡಮಾನ್ ದ್ವೀಪ ಪ್ರವೇಶಿಸಲಿದೆ....

ಕರ್ನಾಟಕದ ಈ ಭಾಗದಲ್ಲಿ ಇಂದು ಸಂಜೆ ಗುಡುಗು ಮಿಂಚು ಸಹಿತ ಭಾರೀ ಮಳೆ ಬೀಳುತ್ತೆ

12 months ago

ಬೆಂಗಳೂರು: ಇಂದು ರಾಜ್ಯದ ಹಲವಡೆ ಮಳೆಯಾಗಲಿದೆ ಜನತೆಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಂಜೆಯ ವೇಳೆಗೆ ಗುಡುಗು ಸಹಿತ ಮಳೆಯಾಗಲಿದ್ದು, ಗಾಳಿ, ಗುಡುಗು ಮಿಂಚಿನ ತೀವ್ರತೆ ಹೆಚ್ಚಾಗಿರುವ ಸಾಧ್ಯತೆಗಳಿವೆ. ಬೆಂಗಳೂರು, ಕೋಲಾರ, ರಾಮನಗರದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ...

ಕರಾವಳಿಗೂ ಬಂತು ಬಿರುಬಿಸಿಲ ಕಾಲ! – ಬಿಸಿಲಿನ ಝಳದಲ್ಲಿ ದಾಖಲೆ

1 year ago

ಮಂಗಳೂರು: ಕರಾವಳಿಯ ಮಂಗಳೂರು ಅಕ್ಷರಶಃ ಈಗ ಕಾದ ಕಾವಲಿಯಾಗಿದೆ. ಬಿರುಬಿಸಿಲಿನಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಸಾಮಾನ್ಯವಾಗಿ ಸಮೃದ್ಧವಾಗಿ ಮಳೆಯಾಗುವ ನಾಡು ಕರಾವಳಿ, ಪಶ್ಚಿಮ ಘಟ್ಟದ ತಪ್ಪಲಿನಿಂದ ಸಮುದ್ರ ತೀರದ ತನಕ ಧಾರಾಕಾರ ಮಳೆಯಾಗುತ್ತದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆ ಈ ವರ್ಷ ಬರದ...