Friday, 19th January 2018

Recent News

6 days ago

ಅಧಿಕಾರಕ್ಕೆ ಬಂದ ಕೂಡಲೇ ಸಿದ್ದರಾಮಯ್ಯ ಸರ್ಕಾರದ ಹಗರಣ ಬಯಲಿಗೆ: ಯಡಿಯೂರಪ್ಪ ಶಪಥ

ಕೋಲಾರ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಸಿದ್ದರಾಮಯ್ಯ ವಿರುದ್ಧದ ಹಗರಣಗಳನ್ನು ಬಯಲಿಗೆಳೆಯದಿದ್ದರೆ ನನ್ನ ಹೆಸರು ಯಡಿಯೂರಪ್ಪನೆ ಅಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ. ಜಿಲ್ಲೆಯ ಬಂಗಾರಪೇಟೆ ಕ್ಷೇತ್ರದಲ್ಲಿ ಆಯೋಜನೆ ಮಾಡಲಾಗಿದ್ದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಬಿಎಸ್‍ವೈ, ಸಿಎಂ ಸಿದ್ದರಾಮಯ್ಯ ಅವರ ವಿರುದ್ದ ಚಾರ್ಜ್ ಶೀಟ್ ಸಿದ್ಧಮಾಡುತ್ತಿದ್ದೇವೆ, ನಾವು ಅಧಿಕಾರಕ್ಕೆ ಬಂದ ತಕ್ಷಣ ಅವರ ಹಗರಣಗಳನ್ನ ಬಯಲಿಗೆಳೆಯುತ್ತೇವೆ ಎಂದು ಶಪಥ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಹೋದ ಕಡೆಯೆಲ್ಲಾ ಯಡಿಯೂರಪ್ಪ ಜೈಲಿಗೆ ಹೋಗಿ […]

6 days ago

ಎಲೆಕ್ಷನ್ ಹೊತ್ತಲ್ಲೇ ಶಿವಭಕ್ತರಾದ ಸಿಎಂ- ಮಹದೇಶ್ವರನಿಗೆ ಬೆಳ್ಳಿ ಉಡುಗೊರೆಗಳ ಕಾಣಿಕೆ, ತಿರುಪತಿಗಿಂತಲೂ ಅದ್ಭುತವಾದ ಚಿನ್ನದ ರಥ ನಿರ್ಮಿಸಲು ಸೂಚನೆ

ಚಾಮರಾಜನಗರ: ವಿಧಾನಸಭಾ ಚುನಾವಣೆ ಸಮಯ ಸಮೀಪಿಸುತ್ತಿದ್ದ ಹಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೇವರ ಮೇಲೆ ಭಕ್ತಿ ಹೆಚ್ಚಾದಂತೆ ಕಾಣುತ್ತಿದೆ. ಇದಕ್ಕೊಂದು ತಾಜ ಉದಾಹರಣೆಗೆ ಎಂಬಂತೆ ಗುರುವಾರ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಅಧಿಕಾರಿಗಳ ಸಭೆ ನಡೆಸಿದ್ರು. ಈ ವೇಳೆ ಸಿಎಂ ಅವರಿಗೆ ಅವರ ಅಭಿಮಾನಿಗಳು ಪ್ರೀತಿಯಿಂದ ನೀಡಿರುವ ಬೆಳ್ಳಿ ಉಡುಗೊರೆಗಳನ್ನು...

ಬಿಜೆಪಿಯವರು ಉಗ್ರರು ಹೇಳಿಕೆಗೆ ಖಂಡನೆ- ಕೇಸರಿ ಪಡೆಯಿಂದ ಇಂದು ಜೈಲ್ ಭರೋ ಚಳವಳಿ

1 week ago

ಬೆಂಗಳೂರು: ಬಿಜೆಪಿ, ಆರ್ ಎಸ್‍ಎಸ್‍ನವರು ಉಗ್ರಗಾಮಿಗಳು ಎಂದಿರೋ ಸಿಎಂ ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ ಇವತ್ತು ಜೈಲ್ ಭರೋ ಕೈಗೊಂಡಿದೆ. ನಾನೂ ಉಗ್ರ, ನನ್ನನ್ನು ಬಂಧಿಸಿ ಘೋಷಣೆಯಡಿ ಬಿಜೆಪಿ ಕಾರ್ಯಕರ್ತರು ಜೈಲಿಗೆ ಮುತ್ತಿಗೆ ಹಾಕಲಿದ್ದಾರೆ. ಮಾಜಿ ಡಿಸಿಎಂ ಆರ್ ಅಶೋಕ್ ನೇತೃತ್ವದಲ್ಲಿ...

ಬಿಜೆಪಿಯವರು ಉಗ್ರರು ಎಂದು ಹೇಳಿಕೆ ನೀಡಿ ಉಲ್ಟಾ ಹೊಡೆದ ಸಿಎಂ ಸಿದ್ದರಾಮಯ್ಯ

1 week ago

ಬೆಂಗಳೂರು: ಎಸಿಬಿ-ಕೇಸ್ ಪಾಲಿಟಿಕ್ಸ್, ಫೋನ್ ಟ್ಯಾಪಿಂಗ್ ಪಾಲಿಟಿಕ್ಸ್, ಮರ್ಡರ್ ಪಾಲಿಟಿಕ್ಸ್, ಹಿಂದೂ ಪಾಲಿಟಿಕ್ಸ್ ಎಲ್ಲಾ ಆಯ್ತು. ಈಗ ಟೆರರ್ ಪಾಲಿಟಿಕ್ಸ್ ಆರಂಭವಾಗಿದೆ. ಬಿಜೆಪಿ – ಆರ್ ಎಸ್ ಎಸ್ ನವರು ಉಗ್ರಗಾಮಿಗಳು ಎಂದು ಬುಧವಾರ ಚಾಮರಾಜನಗರದ ನಾಗವಳ್ಳಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು...

ಸಿಎಂ, ಗುಂಡೂರಾವ್ ಕ್ಷಮೆ ಕೇಳದೇ ಇದ್ರೆ ನಾಳೆಯಿಂದ ಜೈಲ್ ಭರೋ: ಶೋಭಾ ಕರಂದ್ಲಾಜೆ

1 week ago

ಬೆಂಗಳೂರು: ದೇಶದಲ್ಲಿ ಉಗ್ರರನ್ನು ಬೆಳೆಸಿದ್ದು ರಾಷ್ಟ್ರೀಯ ಕಾಂಗ್ರೆಸ್. ಈಗ ಕರ್ನಾಟಕದಲ್ಲಿಯೂ ಅಶಾಂತಿ ವಾತಾವರಣವನ್ನು ಸೃಷ್ಟಿಸಲು ದೇಶದ್ರೋಹಿ ಸಂಘಟನೆಗಳ ಜೊತೆ ಸೇರಿ ಉಗ್ರವಾದವನ್ನು ಬೆಳೆಸುತ್ತಿದೆ ಎಂದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ. ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು,...

ಜೆಡಿಎಸ್ ಮುಖಂಡ ಎಂಸಿ ನಾಣಯ್ಯ ಕಾಂಗ್ರೆಸ್ ಸೇರ್ತಾರಾ? – ಸಿಎಂ ಭೇಟಿ ವೇಳೆ ಆಗಿದ್ದೇನು?

1 week ago

ಮಡಿಕೇರಿ: ಜೆಡಿಎಸ್ ಮುಖಂಡ, ಮಾಜಿ ಸಚಿವ ಎಂಸಿ ನಾಣಯ್ಯ ಕಾಂಗ್ರೆಸ್ ಪಕ್ಷ ಸೇರ್ತಾರಾ…? ಸಿದ್ದರಾಮಯ್ಯ ಅವರು ಕೊಡಗು ಜಿಲ್ಲಾ ಪ್ರವಾಸಕ್ಕೆ ಬರುತ್ತಾರೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಅವರು ನಾಣಯ್ಯ ಅವರನ್ನು ಭೇಟಿಯಾಗುತ್ತಾರೆ ಎಂಬ ಸುದ್ದಿಯಿತ್ತು. ಆದರೆ ಇಂದು ಸಿಎಂ ಸಿದ್ದರಾಮಯ್ಯ...

ಸಿಎಂ ಶಂಕುಸ್ಥಾಪನೆ ಮಾಡಿದ 6ನೇ ದಿನಕ್ಕೆ ಅನಾಥವಾಯ್ತು ನಾಮಫಲಕಗಳು!

1 week ago

ರಾಮನಗರ: ಸಿಎಂ ಸಿದ್ದರಾಮಯ್ಯ ನವರು ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದ್ದ ನಾಮಫಲಕದ ಕಲ್ಲುಗಳು ಅನಾಥವಾಗಿ ಬಿದ್ದಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆದಿದೆ. ಕಳೆದ ಜನವರಿ 3 ರಂದು ಸಿಎಂ ಸಿದ್ದರಾಮಯ್ಯ ನವರು ಸಾಧನಾ ಸಮಾವೇಶದಲ್ಲಿ...

ಸಿದ್ದರಾಮಯ್ಯ ತಲೆತಿರುಕ, ಹುಚ್ಚನಂತೆ ಮಾತನಾಡ್ತಾನೆ: ಬಿಎಸ್‍ವೈ

1 week ago

ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ತಲೆತಿರುಕ ಬಾಯಿಗೆ ಬಂದಂತೆ ಹುಚ್ಚನಂತೆ ಮಾತನಾಡುತ್ತಾನೆ, ಯೋಗಿ ಆದಿತ್ಯನಾಥ್ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಕೋಟೆನಾಡು ನಡೆಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು,...