Thursday, 21st September 2017

1 week ago

ಸಿದ್ದಗಂಗಾ ಶ್ರೀಗಳ ಜ್ಞಾಪಕ ಶಕ್ತಿ ಕೆಲವರಿಂದ ದುರುಪಯೋಗ: ಮಾತೆ ಮಹಾದೇವಿ

ಬಾಗಲಕೋಟೆ: ಸಿದ್ದಗಂಗಾ ಶ್ರೀಗಳಿಗೆ ವಯೋಮಾನದ ದೃಷ್ಟಿಯಿಂದ ನೆನಪಿನ ಶಕ್ತಿ ಉಳಿದಿಲ್ಲ ಎಂದು ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿಕೆ ನೀಡಿದ್ದಾರೆ. ಸ್ವಾಮೀಜಿಗಳ ಜ್ಞಾಪಕ ಶಕ್ತಿಯನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸಿದ್ದಗಂಗಾ ಶ್ರೀಗಳ ಪಕ್ಕ ಇರುವ ವೀರಶೈವ ಮಹಾಸಭಾದವರು ಒತ್ತಡ ತಂದಿದ್ದಾರೆ. ಪೂಜ್ಯ ಶ್ರೀಗಳ ಸಹಿಮಾತ್ರ ಪಡೆದು ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಹಾಗೊಂದು ವೇಳೆ ಶ್ರೀಗಳೇ ಈ ರೀತಿ ಹೇಳಿಕೆ ನೀಡಿದ್ದರೆ ಅದನ್ನು ನಾವು ಒಪ್ಪುವುದಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡಿಸುತ್ತೇವೆ. ಹೀಗಾಗಿ ವೀರಶೈವ […]

1 week ago

ಏನ್ ಕೇಳಿಸ್ಕೊಂಡ್ಯೋ ಪಾಟೀಲ್, ಇದ್ರಿಂದ ನಿಂಗೂ, ನಮಗೂ ಡ್ಯಾಮೇಜ್: ಸಿಎಂ ಕ್ಲಾಸ್

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ತುಮಕೂರಿನ ಸಿದ್ಧಗಂಗಾ ಶ್ರೀಗಳು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ತಂದಿಟ್ಟ ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್ ಅವರನ್ನು ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಸಂಪುಟ ಸಭೆಯಲ್ಲಿ ಇಂದು ಸಿದ್ದರಾಮಯ್ಯ, ಶ್ರೀಗಳ ಜತೆ ಮಾತನಾಡಿದ್ದನ್ನ ಅವಸರದಲ್ಲಿ ಮಾಧ್ಯಮಗಳ ಮುಂದೆ ಹೋಗಿದ್ದು ಯಾಕೆ ಎಂದು ಪಾಟೀಲ್ ಅವರನ್ನು ಪ್ರಶ್ನಿಸಿದ್ದಾರೆ....

ಲಿಂಗಾಯತವೇ ಪ್ರತ್ಯೇಕ ಧರ್ಮಕ್ಕೆ ಯೋಗ್ಯ.. ವೀರಶೈವ ಅಲ್ಲ: ಸಭೆಯ ಪಂಚ ನಿರ್ಣಯಗಳು ಇಲ್ಲಿದೆ

1 month ago

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮಕ್ಕೇ ಮಾನ್ಯತೆ ನೀಡಬೇಕು ಎಂದು ಗುರುವಾರ ನಡೆದ ಲಿಂಗಾಯತ ಮುಖಂಡರು ಮತ್ತು ಮಠಾಧೀಶರ ಮಹತ್ವದ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವೀರಶೈವ ಮಹಾಸಭಾ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸಿರುವ ಲಿಂಗಾಯತ ಮಠಾಧೀಶರು ವೀರಶೈವ...

ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ-ಇಂದು ಮಠಾಧೀಶರು, ಮುಖಂಡರ ಸಭೆ

1 month ago

ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಬಗ್ಗೆ ಒಮ್ಮತ ಮೂಡಿಸುವ ಸಲುವಾಗಿ ಇವತ್ತು ಲಿಂಗಾಯತ ಸ್ವಾಮೀಜಿಗಳು ಹಾಗೂ ಮುಖಂಡರ ಸಭೆ ನಡೆಯಲಿದೆ. ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಳಿಗ್ಗೆ 11 ಗಂಟೆಗೆ ಸಭೆ ಆರಂಭವಾಗಲಿದೆ. ಮೊದಲು ವೀರಶೈವ ಮತ್ತು ಲಿಂಗಾಯತ ಎರಡು ಬೇರೆ...

ಧರ್ಮದ ಹೆಸರಲ್ಲಿ ಬೆಂಕಿ ಹಚ್ಚಿ ಸಿದ್ದರಾಮಯ್ಯ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ: ಎಚ್.ವಿಶ್ವನಾಥ್

2 months ago

ರಾಯಚೂರು: ವೀರಶೈವ ಮತ್ತು ಲಿಂಗಾಯತ ಸಮಾಜದವರ ನಡುವೆ ಬೆಂಕಿ ಹಚ್ಚಿ ಅವರ ಜಗಳದಲ್ಲಿ ಸಿಎಂ ಸಿದ್ದರಾಮಯ್ಯ ಚಳಿ ಕಾಯಿಸಿಕೊಳ್ಳುತ್ತಿದ್ದಾರೆ ಅಂತ ಮಾಜಿ ಸಂಸದ ಎಚ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ಸಿಂಧನೂರಿನಲ್ಲಿ ಮಾತನಾಡಿದ ವಿಶ್ವನಾಥ್ ಇತ್ತೀಚಿನ ಶತಮಾನದಲ್ಲಿ ಯಾವ ಹೊಸ ಧರ್ಮಗಳು...

ವೀರಶೈವ, ಲಿಂಗಾಯತ ಧರ್ಮದ ಪರವಿರೋಧ ಮಾತನಾಡುವುದು ಶೋಭೆಯಲ್ಲ: ತನ್ವೀರ್ ಸೇಠ್

2 months ago

ರಾಯಚೂರು: ಲಿಂಗಾಯತ ಮತ್ತು ವೀರಶೈವ ಧರ್ಮದ ಬಗ್ಗೆ ಪರವಿರೋಧ ಮಾತನಾಡುವುದು ಯಾರಿಗೂ ಶೋಭೆ ತರುವುದಿಲ್ಲ ಅಂತ ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ. ರಾಯಚೂರಿನಲ್ಲಿ ಮಾತನಾಡಿದ ತನ್ವೀರ್ ಸೇಠ್ ಧರ್ಮಗಳ ವಿಚಾರದಲ್ಲಿ ಸಂವಿಧಾನ ಸ್ಪಷ್ಟವಾಗಿದೆ. ಅದೇ ಸಂವಿಧಾನದಲ್ಲಿ ಇನ್ನೊಂದು...

ಲಿಂಗಾಯತ-ಹಿಂದೂ ಧರ್ಮದ ಮಧ್ಯೆ ಸಾಕಷ್ಟು ಅಂತರವಿದೆ: ಎಸ್.ಆರ್.ಪಾಟೀಲ್

2 months ago

ಬಾಗಲಕೋಟೆ: ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಬೇಕೆನ್ನುವವರಲ್ಲಿ ನಾನು ಮೊದಲಿಗ. ಲಿಂಗಾಯತ ಹಾಗೂ ಹಿಂದೂ ಧರ್ಮದ ಮಧ್ಯೆ ಸಾಕಷ್ಟು ಅಂತರವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್. ಪಾಟೀಲ್ ಹೇಳಿದ್ದಾರೆ. ಲಿಂಗಾಯತ ಧರ್ಮವನ್ನ ವಿಶ್ವಗುರು ಬಸವಣ್ಣ ಸ್ಥಾಪನೆ ಮಾಡಿದ್ದಾರೆ. ಆದ್ರೆ ಹಿಂದೂ ಧರ್ಮವನ್ನ ಯಾರು...

2013ರಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಬೇಕೆಂದಿದ್ದ ಬಿಎಸ್‍ವೈ ಈಗ ಸೈಲೆಂಟ್!

2 months ago

ಬೆಂಗಳೂರು: ವೀರಶೈವ-ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಧರ್ಮದ ಮಾನ್ಯತೆ ನೀಡಬೇಕೆನ್ನುವ ವಿಚಾರದಲ್ಲಿ ಈಗ ತಟಸ್ಥರಾಗಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಈ ಹಿಂದೆ ಪ್ರತ್ಯೇಕ ಧರ್ಮಕ್ಕಾಗಿ ಒತ್ತಾಯಿಸಿದ ಸ್ಫೋಟಕ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಎಬ್ಬಿಸಿರುವ ‘ಪ್ರತ್ಯೇಕ ಧರ್ಮ’ದ...