Monday, 18th June 2018

Recent News

2 weeks ago

14 ನಿಮಿಷ ಸಂಪರ್ಕ ಕಳೆದುಕೊಂಡ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಮಾನ

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರಯಾಣಿಸುತ್ತಿದ್ದ ವಿಮಾನ 14 ನಿಮಿಷ ರಾಡಾರ್ ಸಂಪರ್ಕ ಕಳೆದುಕೊಂಡಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ. ಶನಿವಾರ ಮಧ್ಯಾಹ್ನ 2.08ಕ್ಕೆ ಸುಷ್ಮಾ ಸ್ವರಾಜ್ ಭಾರತೀಯ ವಾಯುಪಡೆಯ ಎಂಬ್ರೆಯರ್ 135 ವಿಮಾನದಲ್ಲಿ ಪ್ರಯಾಣ ಆರಂಭಿಸಿದ್ದರು. ತಿರುವನಂತಪುರದಿಂದ ಪ್ರಯಾಣ ಆರಂಭಿಸಿದ ಸುಷ್ಮಾ ಅವರು ಮಾರಿಷಸ್‍ಗೆ ತರಳುತ್ತಿತ್ತು. ವಿಮಾನ ಸಂಜೆ 4.44ಕ್ಕೆ ಮಾಲೆಯ ಎಟಿಸಿ(ವಿಮಾನ ಸಂಚಾರ ನಿಯಂತ್ರಣ)ಯೊಂದಿಗೆ ಸಂಪರ್ಕ ಪಡೆದುಕೊಂಡಿತ್ತು. ನಂತರ ಮಾಲೆ ಎಟಿಸಿಯನ್ನು ಮಾರಿಷಸ್‍ಗೆ […]

2 weeks ago

ವಾಹನ, ವಿಮಾನ, ವಸತಿ, ಬೆಂಗಾವಲು ಪಡೆಗೆ ಸಿಎಂ ಬ್ರೇಕ್

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಸರ್ಕಾರದ ಮುಂದೆ ಸಾಲು ಸಾಲು ಸವಾಲುಗಳಿವೆ. ಪ್ರಮುಖವಾಗಿ ರೈತರ ಸಾಲ ಮನ್ನಾ ಮಾಡಬೇಕಿದೆ. ಹೀಗಾಗಿ ಆರ್ಥಿಕ ಶಿಸ್ತು ಮೈಗೂಡಿಸಿಕೊಳ್ಳಲು ಕುಮಾರಸ್ವಾಮಿ ಮುಂದಾಗಿದ್ದಾರೆ. ರಾಜ್ಯ ಸರ್ಕಾರದಲ್ಲಿ ಅನಗತ್ಯ ವೆಚ್ಚಗಳನ್ನು ತಗ್ಗಿಸಿ ಆರ್ಥಿಕ ಭದ್ರತೆಯನ್ನು ಕಾಯ್ದುಕೊಳ್ಳಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ತುರ್ತು ಸಂದರ್ಭ ಹೊರತುಪಡಿಸಿ ವಿಶೇಷ ವಿಮಾನ ಪ್ರಯಾಣಕ್ಕೆ ಸ್ವತಃ ಬ್ರೇಕ್ ಹಾಕಿಕೊಂಡಿರುವ ಸಿಎಂ...

ವಿಮಾನದ ಶೌಚಾಲಯದಲ್ಲಿ 2 ಕೆ.ಜಿ 116 ಗ್ರಾಂ ಚಿನ್ನ ಪತ್ತೆ

1 month ago

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2 ಕೆ.ಜಿ 116 ಗ್ರಾಂ ಚಿನ್ನ ಪತ್ತೆಯಾಗಿದೆ. ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ವೇಳೆ ವಿಮಾನದಲ್ಲಿ 2 ಕೆ.ಜಿ 116 ಗ್ರಾಂ ತೂಕದ 66.67 ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆಯಾಗಿದೆ....

ಅತಿಯಾದ ಧೂಳು ಮಿಶ್ರಿತ ಗಾಳಿ, ಮಳೆಯಿಂದ ತತ್ತರಿಸಿದ ದೆಹಲಿ

1 month ago

ನವದೆಹಲಿ: ಭಾನುವಾರ ಸಂಜೆ ಬೀಸಿದ ಧೂಳು ಮಿಶ್ರಿತ ಬಿರುಗಾಳಿ ಜೊತೆಗೆ ಮಳೆಯಿಂದ ದೆಹಲಿ ತತ್ತರಿಸಿದೆ. ಹಠಾತ್ ಹವಾಮಾನ ಬದಲಾವಣೆಯಿಂದಾಗಿ ಸಂಜೆ 4:30 ನಂತರ ಮೋಡ ಕವಿದು ಮಳೆ ಸುರಿದಿದೆ. ಇದರಿಂದ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯವಾಗಿದೆ. ಶ್ರೀನಗರದಿಂದ...

ಚುನಾವಣಾ ಅಧಿಕಾರಿಗಳಿಂದ ಅಮಿತ್ ಶಾ ವಿಮಾನ ಪರಿಶೀಲನೆ

3 months ago

ಹುಬ್ಬಳ್ಳಿ: ರಾಜ್ಯ ವಿಧಾನಸಭೆಯ ಬಿಸಿ ದಿನದಿಂದಕ್ಕೆ ಹೆಚ್ಚಾಗುತ್ತಿದ್ದು, ರಾಜಕೀಯ ಪಕ್ಷಗಳು ತಮ್ಮ ಪ್ರಚಾರವನ್ನು ತೀವ್ರಗೊಳಿಸಿವೆ. ಇದರ ಬೆನ್ನಲ್ಲೇ ಶಿಸ್ತಿನ ಚುನಾವಣೆ ನಡೆಸಲು ಚುನಾವಣಾ ಅಧಿಕಾರಿಗಳು ಮುಂದಾಗಿದ್ದಾರೆ. ಇದರ ಭಾಗವಾಗಿ ನೀತಿ ಸಂಹಿತೆಯನ್ನು ಜಾರಿ ಮಾಡಲಾಗಿದ್ದು, ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಬಿಜೆಪಿ...

ಶೀಘ್ರವೇ ಭಾರತಕ್ಕೂ ಲಗ್ಗೆಯಿಡಲಿವೆ ಬಿಕಿನಿ ಏರ್ ಲೈನ್ಸ್!

3 months ago

ನವದೆಹಲಿ: ಬಿಕಿನಿ ಏರ್ ಲೈನ್ ಅಂತಾನೇ ಇದು ಫೇಮಸ್ ಆಗಿರೋ ವಿಯೆಟ್ನಾಂನ ವಿಯೆಟ್ಜೆಟ್ ಸದ್ಯದಲ್ಲೇ ಭಾರತಕ್ಕೂ ಬರಲಿದೆ ಎಂದು ವಿಮಾನಯಾನ ಸಂಸ್ಥೆ ಫೋಷಿಸಿದೆ. ಈ ವಿಮಾನ ನವದೆಹಲಿಯಿಂದ ಹೊ ಚಿ ಮಿನ್ಹ್ ನಗರಕ್ಕೆಪ್ರಯಾಣ ಆರಂಭಿಸುವುದಾಗಿ ಘೋಷಿಸಿದೆ. ವಾರದಲ್ಲಿ ನಾಲ್ಕು ದಿನಗಳ ಕಾಲ...

ಎಂಜಿನ್‍ನಲ್ಲಿ ದೋಷ: ಇಂಡಿಗೋದ 47 ವಿಮಾನಗಳ ಹಾರಾಟ ರದ್ದು

3 months ago

ನವದೆಹಲಿ: ಎಂಜಿನ್ ನಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಇಂಡಿಗೋ ಸಂಸ್ಥೆ  ತನ್ನ 47 ವಿಮಾನಗಳ ಹಾರಾಟವನ್ನು ರದ್ದು ಪಡಿಸಿದೆ. ಕಳೆದ ಒಂದು ತಿಂಗಳಿನಲ್ಲಿ ಅಮೆರಿಕದ ಪ್ರ್ಯಾಟ್ ಮತ್ತು ವಿಟ್ನೆ ಕಂಪನಿಯ ಎಂಜಿನ್‍ಗಳನ್ನು ಹೊಂದಿದ್ದ ಮೂರು ವಿಮಾನಗಳು ವೈಫಲ್ಯಗೊಂಡ ಹಿನ್ನೆಲೆಯಲ್ಲಿ ನಾಗರಿಕ...

ಎಲ್ಲಾ ಬಟ್ಟೆ ಕಳಚಿ, ಗಗನಸಖಿಯನ್ನ ತಬ್ಬಿಕೊಳ್ಳಲು ಯತ್ನಿಸಿದ ಪ್ರಯಾಣಿಕ ಅರೆಸ್ಟ್

3 months ago

ಢಾಕಾ: ಬಾಂಗ್ಲಾದೇಶ ಮೂಲದ ಪ್ರಯಾಣಿಕನೊಬ್ಬ ವಿಮಾನದಲ್ಲಿ ವಿವಸ್ತ್ರಗೊಂಡಿದ್ದಲ್ಲದೇ ಗಗನಸಖಿಯನ್ನೇ ತಬ್ಬಿಕೊಳ್ಳಲು ಯತ್ನಿಸಿ ಅಸಭ್ಯ ವರ್ತನೆ ತೋರಿದ್ದಾನೆ. ಶನಿವಾರದಂದು ಮಲೇಷ್ಯಾದ ಕೌಲಾಲಾಂಪುರ್ ನಿಂದ ಢಾಕಾಗೆ ಹೊರಟಿದ್ದ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನ ಹೊರಟ ಬಳಿಕ 20 ವರ್ಷದ ವ್ಯಕ್ತಿ ತನ್ನ ಬಟ್ಟೆಗಳನ್ನೆಲ್ಲಾ...