Thursday, 20th July 2017

4 months ago

ಪ್ರಶಾಂತ್ ಕಿಶೋರ್ ಹುಡುಕಿಕೊಟ್ಟವರಿಗೆ 5 ಲಕ್ಷ ರೂ. ಬಹುಮಾನ!

– ಕಟೌಟ್ ಹಾಕಿಸಿದ ಕೈ ನಾಯಕ ಅಮಾನತು ಲಕ್ನೋ: ರಾಜಕೀಯ ತಂತ್ರಗಾರ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗೆಲ್ಲಲು ಯೋಜನೆ ರೂಪಿಸಿದ್ದ ಪ್ರಶಾಂತ್ ಕಿಶೋರ್ ಅವರನ್ನು ಹುಡುಕಿಕೊಟ್ಟರೆ 5 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಪೋಸ್ಟರ್ ಪ್ರಕಟಿಸಿದ್ದಕ್ಕೆ ಉತ್ತರ ಪ್ರದೇಶ ಕಾಂಗ್ರೆಸ್ ನಾಯಕರೊಬ್ಬರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನ ಕಾಣಲು ಪ್ರಶಾಂತ್ ಕಿಶೋರ್ ಅವರ ತಂತ್ರಗಾರಿಕೆಯೇ ಕಾರಣ. ಫಲಿತಾಂಶ ಬಳಿಕ ಅವರು ನಾಪತ್ತೆಯಾಗಿದ್ದು ಅವರನ್ನು ಹುಡುಕಿಕೊಟ್ಟವರಿಗೆ ಐದು ಲಕ್ಷ ರೂ. ಬಹುಮಾನವನ್ನು […]

4 months ago

ಮೊದಲ ಬಾರಿಗೆ ಕಾಂಗ್ರೆಸ್ ಅವನತಿಯನ್ನು ಒಪ್ಪಿಕೊಂಡ ರಾಹುಲ್ ಗಾಂಧಿ

ನವದೆಹಲಿ: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶ, ಅದರಲ್ಲೂ ಉತ್ತರಪ್ರದೇಶದಲ್ಲಿನ ಸೋಲು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ತೊಡಕಾಗಿ ಪರಿಣಮಿಸಿದೆ. ಉತ್ತರಪ್ರದೇಶದಲ್ಲಿ ತಮ್ಮ ಲೆಕ್ಕಾಚಾರ ತಪ್ಪಾಗಿದ್ದನ್ನು ಒಪ್ಪಿಕೊಂಡ ರಾಹುಲ್, ಕಾಂಗ್ರೆಸ್‍ನಲ್ಲಿ ಕೆಲವು ಬದಲಾವಣೆಗಳನ್ನ ಮಾಡೋ ಅವಶ್ಯಕತೆ ಇದೆ ಅಂದ್ರು. ನಾವು ವಿರೋಧಪಕ್ಷದಲ್ಲಿದ್ದೇವೆ, ಏಳು ಬೀಳು ಇದ್ದೇ ಇರುತ್ತದೆ. ಉತ್ತರಪ್ರದೇಶದಲ್ಲಿ ಸ್ವಲ್ಪ ಕೆಳಗೆ ಇಳಿದಿದ್ದೇವೆ. ಅದನ್ನು ಒಪ್ಪಿಕೊಳ್ಳುತ್ತೇವೆ ಅಂತ ರಾಹುಲ್...

ಮಣಿಪುರದಲ್ಲಿ ಇರೋಮ್ ಶರ್ಮಿಳಾಗೆ ಸೋಲು

4 months ago

ಇಂಫಾಲ: ಮಣಿಪುರದಲ್ಲಿ ಸೇನಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯ ವಿರುದ್ಧ ಹೋರಾಡಿದ್ದ ಇರೋಮ್ ಶರ್ಮಿಳಾ ತೌಬಾಲ್ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದಾರೆ. ಮುಖ್ಯಮಂತ್ರಿ ಅಭ್ಯರ್ಥಿ ಓಕ್ರಮ್ ಇಬೋಬಿ ಸಿಂಗ್ ವಿರುದ್ಧ ಸ್ಪರ್ಧಿಸಿದ್ದ ಶರ್ಮಿಳಾ ಅವರಿಗೆ ಕೇವಲ 100 ಮತಗಳು ಬಿದ್ದಿವೆ...

ಈಗ ಕರ್ನಾಟಕದಲ್ಲಿ ಚುನಾವಣೆ ನಡೆದ್ರೆ ಯಾರಿಗೆ ಎಷ್ಟು ಸ್ಥಾನ: ಪಬ್ಲಿಕ್ ಟಿವಿ ಮೆಗಾ ಸರ್ವೇ

5 months ago

ಬೆಂಗಳೂರು: 2013ರಲ್ಲಿ ಜನಾದೇಶ ಪಡೆದು ಅಧಿಕಾರದ ಗದ್ದುಗೆ ಏರಿದ ಸಿದ್ದರಾಮಯ್ಯ ಸಾರಥ್ಯದ ಕಾಂಗ್ರೆಸ್ ಸರ್ಕಾರ ನಾಲ್ಕನೇ ವರ್ಷದ ಅಂತಿಮ ಚರಣದಲ್ಲಿದೆ . ಇನ್ನು ಮೂರು ತಿಂಗಳು ಅಂದರೇ , ಮೇ 13ಕ್ಕೆ ಭರ್ತಿ ನಾಲ್ಕು ವರ್ಷ ಪೂರೈಸಿ , ಐದಕ್ಕೆ ಕಾಲಿಡುತ್ತದೆ....

ಉತ್ತರಾಖಂಡ್ ಬಿಜೆಪಿಯಲ್ಲಿ ಬಿಕ್ಕಟ್ಟು – 33 ಮುಖಂಡರ ಅಮಾನತು

5 months ago

ಡೆಹ್ರಾಡೂನ್: ಪಂಚರಾಜ್ಯ ಚುನಾವಣೆಯಲ್ಲಿ ಉತ್ತರಾಖಂಡ್‍ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅಂತ ಸಮೀಕ್ಷೆಗಳು ಹೇಳಿತ್ತು. ಆದರೆ ಮತದಾನಕ್ಕೆ ಇನ್ನು ಕೇವಲ 10 ದಿನಗಳು ಬಾಕಿಯಿರುವಾಗ ಉತ್ತರಾಖಂಡ್ ಕಮಲ ಪಾಳಯದಲ್ಲಿ ಕಂಪನ ಉಂಟಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿರೋ ಆರೋಪದಲ್ಲಿ ಉತ್ತರಾಖಂಡ್ ಬಿಜೆಪಿಯ 33...

ಉತ್ತರಾಖಂಡ್ ಚುನಾವಣೆ: ಬಾಹುಬಲಿ ಅವತಾರದಲ್ಲಿ ಹರೀಶ್ ರಾವತ್- ವೀಡಿಯೋ ವೈರಲ್

6 months ago

ಡೆಹ್ರಾಡೂನ್: 5 ರಾಜ್ಯಗಳ ವಿಧಾನಸಭೆ ಚುನಾವಣೆಗೆ ಭರದ ಸಿದ್ಧತೆ ನಡೆಯುತ್ತಿದೆ. ಇದರ ಮಧ್ಯೆ ಉತ್ತರಾಖಂಡ್ ಮುಖ್ಯಮಂತ್ರಿ ಹರೀಶ್ ರಾವತ್‍ರನ್ನು ಬಾಹುಬಲಿಗೆ ಹೋಲಿಸಲಾದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಬಾಹುಬಲಿ ಸಿನಿಮಾದಲ್ಲಿ ನಾಯಕ ಪ್ರಭಾಸ್ ಶಿವಲಿಂಗವನ್ನು ಹೊತ್ತು ಸಾಗ್ತಾರೆ. ಆದ್ರೆ...