Saturday, 23rd June 2018

Recent News

3 weeks ago

60 ಲಕ್ಷ ನಕಲಿ ಮತದಾರರ ತನಿಖೆಗೆ ಆಯೋಗದಿಂದ ತಂಡ ರಚನೆ

ನವದೆಹಲಿ:ಮಧ್ಯಪ್ರದೇಶದಲ್ಲಿ 60 ಲಕ್ಷ ನಕಲಿ ಮತದಾರರ ನೋಂದಣಿಯಾಗಿದೆ ಎನ್ನುವ ಆರೋಪದ ಮೇಲೆ ಚುನಾವಣಾ ಆಯೋಗ ತನಿಖೆ ಶುರುಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಚುನಾವಣಾ ಆಯೋಗ ನಾಲ್ಕು ತಂಡವನ್ನು ರಚಿಸಿದೆ. ಪ್ರತಿ ತಂಡದಲ್ಲಿ ಇಬ್ಬರು ಸದಸ್ಯರು ಇದ್ದು ಜೂನ್ 7 ರ ಒಳಗೆ ವರದಿಯನ್ನು ಸಲ್ಲಿಸುವಂತೆ ಆದೇಶಿಸಿದೆ. ನಕಲಿ ಮತದಾರರು ನೋಂದಣಿಯಾದಲ್ಲಿ ಹೇಗೆ ನೋಂದಣಿಯಾದರು? ಯಾರು ಮಾಡಿದ್ದರು ಎಂದು ವರದಿಯಲ್ಲಿ ಖಚಿತಗೊಳ್ಳಲಿದೆ. 60 ಲಕ್ಷ ನಕಲಿ ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪ ಮಾಡಿತ್ತು ಎಂದು ಆಯೋಗ […]

1 month ago

ಸ್ಪೀಕರ್ ಚುನಾವಣೆ: ಬಿಜೆಪಿಯಿಂದ ಸುರೇಶ್ ಕುಮಾರ್ ಕಣಕ್ಕೆ

ಬೆಂಗಳೂರು: ವಿಧಾನಸಭಾ ಸ್ಪೀಕರ್ ಚುನಾವಣೆಗೆ ಕಾಂಗ್ರೆಸ್ ನಿಂದ ರಮೇಶ್ ಕುಮಾರ್ ಕಣದಲ್ಲಿದ್ದರೆ, ಬಿಜೆಪಿ ಸುರೇಶ್ ಕುಮಾರ್ ಅವರನ್ನು ನಿಲ್ಲಿಸಿದೆ. ಜೆಡಿಎಸ್ ಕಾಂಗ್ರೆಸ್ ಮೈತ್ರಿ ಸರ್ಕಾರ ರಚನೆಗೊಂಡ ಹಿನ್ನೆಲೆಯಲ್ಲಿ ಸಂಖ್ಯಾಬಲ ಇರುವ ಕಾರಣ ರಮೇಶ್ ಕುಮಾರ್ ಅವಿರೋಧವಾಗಿ ಆಯ್ಕೆ ಆಗಬಹುದು. ಬಿಜೆಪಿ ಸದನದಲ್ಲಿ ಬಹುಮತ ಸಾಬೀತು ಪಡಿಸದ ಕಾರಣ ಸ್ಪೀಕರ್ ಹುದ್ದೆಗೆ ಸ್ಪರ್ಧಿಸುತ್ತಿಲ್ಲ ಎನ್ನುವ ಮಾತು ಕೇಳಿ...

ಸ್ಟ್ರಾಂಗ್‍ ರೂಮ್‍ನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ- ಯಾವ ಕಾಲೇಜಿನಲ್ಲಿ ಯಾವ ಯಾವ ಕ್ಷೇತ್ರದ ಮತ ಎಣಿಕೆಯಾಗುತ್ತೆ?

1 month ago

ಬೆಂಗಳೂರು: 2019ರ ಲೋಕಸಭಾ ಚುನಾವಣೆಗೆ ಸೆಮಿಫೈನಲ್ ಎಂದೇ ಕರೆಯಲಾಗಿದ್ದ ಕರ್ನಾಟಕ ಎಲೆಕ್ಷನ್ ಮುಗಿದಿದ್ದು, 2,622 ಅಭ್ಯರ್ಥಿಗಳ ಭವಿಷ್ಯ ಸ್ಟ್ರಾಂಗ್ ರೂಂನಲ್ಲಿ ಭದ್ರವಾಗಿದೆ. ಮೇ 15 ಮಂಗಳವಾರದಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಇದೆಲ್ಲದರ ನಡುವೆ ಚುನಾವಣಾ ವೇಳೆ ದೇಶದಲ್ಲೇ ಅತೀಹೆಚ್ಚು ಹಣ, ಮದ್ಯ...

111ರ ಇಳಿವಯಸ್ಸಿನಲ್ಲೂ ಲವಲವಿಕೆಯಿಂದಲೇ ಮತಹಾಕಿದ್ರು ಸಿದ್ದಗಂಗಾ ಶ್ರೀ!

1 month ago

ತುಮಕೂರು: ಇಂದು ರಾಜ್ಯದೆಲ್ಲೆಡೆ ಮತದಾನ ನಡೆಯುತ್ತಿದ್ದು, ತುಮಕೂರಿನಲ್ಲಿ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಮಠದ ಆವರಣದಲ್ಲಿರುವ ಮತಗಟ್ಟೆ ಸಂಖ್ಯೆ 133 ರಲ್ಲಿ ಶ್ರೀಗಳು ಮತದಾನ ಮಾಡಿದ್ದಾರೆ. 111 ರ ಇಳಿವಯಸ್ಸಿನಲ್ಲೂ ಅತ್ಯಂತ ಲವಲವಿಕೆಯಿಂದಲೇ ಶ್ರೀಗಳು ವೋಟ್...

ಚಾಮರಾಜನಗರದಲ್ಲಿ ಅಭ್ಯರ್ಥಿಗಳ ವೋಟು ಅಭ್ಯರ್ಥಿಗಳಿಗೇ ಇಲ್ಲ!

1 month ago

ಚಾಮರಾಜನಗರ: ರಾಜ್ಯಾದ್ಯಂತ ಬಿರುಸಿನ ಮತದಾನ ನಡೆಯುತ್ತಿದ್ದು, ಚಾಮರಾಜನಗರದ ಅಭ್ಯರ್ಥಿಗಳ ವೋಟು ಅಭ್ಯರ್ಥಿಗಳಿಗೇ ಇಲ್ಲ. ಹೌದು. ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಮೂವರು ಅಭ್ಯರ್ಥಿಗಳಿಗೆ ತಮ್ಮ ವೋಟು ತಮಗೆ ಹಾಕಿಕೊಳ್ಳುವ ಭಾಗ್ಯವಿಲ್ಲದಿರುವುದು ವಿಪರ್ಯಾಸವಾಗಿದೆ. ಕಾಂಗ್ರೆಸ್ ನ ಸಿ.ಪುಟ್ಟರಂಗಶೆಟ್ಟಿ, ಬಿಜೆಪಿಯ ಪ್ರೊ.ಮಲ್ಲಿಕಾರ್ಜುನಪ್ಪ, ವಾಟಾಳ್ ಪಕ್ಷದ ವಾಟಾಳ್...

ಕಾಂಗ್ರೆಸ್ ಅಭ್ಯರ್ಥಿ ಮೋಟಮ್ಮ ಸಾವು- ಫೇಸ್ ಬುಕ್ ನಲ್ಲಿ ಫೇಕ್ ಸುದ್ದಿ ಶೇರ್

2 months ago

ಚಿಕ್ಕಮಗಳೂರು: ಚುನಾವಣೆ ಹೊಸ್ತಿಲಲ್ಲಿ ಮಾಜಿ ಸಚಿವೆ ಹಾಗೂ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಟಮ್ಮ ಹೃದಯಾಘಾತದಿಂದ ಸಾವು ಎಂದು ಫೇಸ್‍ಬುಕ್‍ನಲ್ಲಿ ಶೇರ್ ಮಾಡಿದ್ದಾರೆ. ವೀರೇಂದ್ರ ಭಗತ್ ಎಂಬ ವ್ಯಕ್ತಿಯ ಹೆಸರಿನಿಂದ ಈ ಸಂದೇಶ ಶೇರ್ ಆಗಿದ್ದು, ಈ...

ವಾಲ್ಮಿಕಿ ಸಮುದಾಯದ ಮತ ಸೆಳೆಯಲು ಕಿಚ್ಚನನ್ನು ಅಸ್ತ್ರವಾಗಿಸಲು ಸಿಎಂ ಪ್ಲಾನ್!

2 months ago

ಬಾಗಲಕೋಟೆ: ಹೈ-ವೊಲ್ಟೇಜ್ ಕಣ ಬದಾಮಿಯಲ್ಲಿ ಜಾತಿಗಣಿತದ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ. ಕೈ ತಪ್ಪಿ ಹೋಗಲಿರುವ ವಾಲ್ಮಿಕಿ ಸಮುದಾಯದ ಮತಗಳ ಧೃವೀಕರಣಕ್ಕೆ ಸಿಎಂ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಬದಾಮಿಯಲ್ಲಿ ನಟ ಕಿಚ್ಚ ಸುದೀಪ್ ಅವರನ್ನು ಸಿಎಂ ಪರ ಪ್ರಚಾರ ಮಾಡಿಸುವ ಮೂಲಕ...

ಕೃಷ್ಣ ಮಠಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿಲ್ಲ ಯಾಕೆ: ಬಿಜೆಪಿ ನಾಯಕರಿಂದ ಭಿನ್ನ ಹೇಳಿಕೆ

2 months ago

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು ಬುಧವಾರ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಾರೆ ಎಂದು ಆರಂಭದಲ್ಲಿ ಕೇಳಿ ಬಂದಿತ್ತು. ಆದರೆ ಮೋದಿ ಕೃಷ್ಣ ಮಠಕ್ಕೆ ಭೇಟಿ ನೀಡದೇ ಹೋಗಿದ್ದು ಯಾಕೆ ಎನ್ನುವ ಚರ್ಚೆ ಈಗ ಆರಂಭವಾಗಿದ್ದು...